ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ಸುಗಳ ಮೇಲೆ ಕಲ್ಲು ತೂರಾಟ; ರಾಜ್ಯಕ್ಕೆ ಮರಳಿದ KSRTC ಬಸ್ಸುಗಳು

Belagavi issue: ಬೆಳಗಾವಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಕೆಎಸ್ಸಾರ್ಟಿಸಿ ಬಸ್ಸುಗಳ ಮೇಲೆ ಕಲ್ಲು ತೂರಾಟ ಘಟನೆಗಳು ನಡೆದಿವೆ. ಯಾದಗಿರಿ ಜಿಲ್ಲೆಯೂ ಸೇರಿ ರಾಜ್ಯದ ಬಸ್ಸುಗಳು ಮಹಾರಾಷ್ಟ್ರದಿಂದ ವಾಪಸ್ ಬಂದಿವೆ.

ಕೆಎಸ್​ಆರ್​ಟಿಸಿ ಬಸ್ಸು

ಕೆಎಸ್​ಆರ್​ಟಿಸಿ ಬಸ್ಸು

  • Share this:
ಯಾದಗಿರಿ: ರಾಜ್ಯದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿ ಕೂಡ ಎಂಇಎಸ್ ಕಾರ್ಯಕರ್ತರು (MES activists) ಬಸ್​ಗಳ ಮೇಲೆ ಕಲ್ಲು ತೂರಾಟ (Stone pelting) ನಡೆಸಿ ಪುಂಡಾಟ ಮೆರೆಯುತ್ತಿದ್ದಾರೆ. ಈ ಹಿನ್ನೆಲೆ ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳಿದ ಬಸ್​ಗಳು (KSRTC buses) ರಾಜ್ಯಕ್ಕೆ ಮರಳಿದ್ದಾವೆ. ಪ್ರಮುಖವಾಗಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಯಾದಗಿರಿ ಜಿಲ್ಲೆಯ ಗುರುಮಠಕಲ್, ಶಹಾಪುರ, ಸುರಪುರ, ಯಾದಗಿರಿ ವಿಭಾಗದ ಬಸ್ ಗಳನ್ನು ಮಹಾರಾಷ್ಟ್ರ ದಿಂದ ರಿಟರ್ನ್ ತರಲಾಗಿದೆ.

ನಿನ್ನೆ ತಾನೆ ಶಹಾಪುರ ಡಿಪೋದ ಬಸ್ ಮೇಲೆ ಪುಣೆಯ ಬಸ್ ನಿಲ್ದಾಣದಲ್ಲಿ ಎಂಇಎಸ್ ಕಾರ್ಯಕರ್ತರು ಬಸ್ ಮೇಲೆ ಕಲ್ಲು ತೂರಾಟ ನಡೆಸಿ ಬಸ್ ನ ಗ್ಲಾಸ್ ಗಳು ಜಖಂ ಮಾಡಿದ್ದರು. ಅದೇ ರೀತಿ ಚಾಲಕ ಹಾಗೂ ನಿರ್ವಾಹಕರಿಗೆ ಜೀವ ಬೇದರಿಕೆ ಹಾಕಿದ್ದರು. ಈ ಘಟನೆ ನಂತರ ಮಹಾರಾಷ್ಟ್ರಕ್ಕೆ ತೆರಳಿದ ಬಸ್ ಗಳು ರಾತ್ರೋ ರಾತ್ರಿ ಯಾದಗಿರಿ ಜಿಲ್ಲೆಗೆ ಮರಳಿ ತರಲಾಗಿದೆ. ಜಿಲ್ಲೆಯ 27 ಬಸ್ ಗಳು ರಿಟರ್ನ್ ಬಂದಿವೆ. ಎರಡು ಬಸ್ ಗಳು ಮಾತ್ರ ಇನ್ನೂ ಮಹಾರಾಷ್ಟ್ರದಲ್ಲಿದ್ದು ಇಂದು ರಾತ್ರಿ ರಿಟರ್ನ್ ಆಗುವ ನಿರೀಕ್ಷೆ ಇದೆ. ಎಂಇಎಸ್ ಪುಂಡಾಟ ಹಿನ್ನೆಲೆ ಬಸ್ ಗಳು ಮಹಾರಾಷ್ಟ್ರಕ್ಕೆ ಸಂಚಾರ ಮಾಡದೇ ಇರುವುದರಿಂದ 5 ಲಕ್ಷ ರೂ ನಷ್ಟು ಆದಾಯ ನಷ್ಟವಾಗಿದೆ ಎನ್ನಲಾಗಿದೆ.

ರಾಜ್ಯದ ಗಡಿಭಾಗಕ್ಕೆ ಮಾತ್ರ ಬಸ್ ಸಂಚಾರ:

ಮಹಾರಾಷ್ಟ್ರ ದಿಂದ 27 ಬಸ್ ಗಳು ರಿಟರ್ನ್ ಬಂದ ಹಿನ್ನೆಲೆ ರಾಜ್ಯದ ಗಡಿಭಾಗಕ್ಕೆ ಮಾತ್ರ ಬಸ್ ಗಳ ಸಂಚಾರ ಮಾಡಲಾಗುತ್ತಿದೆ. ರಾಜ್ಯದ ಬಸ್ ಗಳು ಮಹಾರಾಷ್ಟ್ರಕ್ಕೆ ತೆಗೆದುಕೊಂಡು ಹೋಗುತ್ತಿದ್ದರೆ ಎಂಇಎಸ್ ಪುಂಡಾಟ ಮಾಡುತ್ತಿರುವ ಹಿನ್ನೆಲೆ ಮುಂಜಾಗ್ರತೆ ವಹಿಸಿ ರಾಜ್ಯದ ಗಡಿಭಾಗಕ್ಕೆ ಮಾತ್ರ ಸಂಚಾರ ಮಾಡಲಾಗುತ್ತಿದೆ.

ಇದನ್ನೂ ಓದಿ: ಏ ಅಧ್ಯಕ್ಷ.. ಬಾರಯ್ಯ.. ನನ್ನ ಜಿಲ್ಲೆಯಲ್ಲಿ ನೀನು ಸಭೆ ಮಾಡಬೇಡ: ಡಿಕೆಶಿಗೆ ಸಿದ್ದರಾಮಯ್ಯ ತಾಕೀತು..!

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಯಾದಗಿರಿ ವಿಭಾಗೀಯ ನಿಯಂತ್ರಣಧಿಕಾರಿ ಶ್ರೀಹರಿಬಾಬು ಮಾತನಾಡಿ, ಮಹಾರಾಷ್ಟ್ರ ದಿಂದ 27 ಬಸ್ ಗಳು ರಿಟರ್ನ್ ಬಂದಿದ್ದು, ಎರಡು ಬಸ್ ಗಳು ಮಾತ್ರ ಮಹಾರಾಷ್ಟ್ರದಲ್ಲಿವೆ. ರಾಜ್ಯದ ಗಡಿಭಾಗಕ್ಕೆ ಮಾತ್ರ ಬಸ್ ಗಳು ಸಂಚಾರ ಮಾಡಲಾಗುತ್ತಿದೆ. ಎರಡು ದಿನಗಳಲ್ಲಿ 5 ಲಕ್ಷ ರೂ ಆದಾಯ ನಷ್ಟವಾಗಿದೆ ಎಂದಿದ್ದಾರೆ.

ಪ್ರಯಾಣಿಕರ ಪರದಾಟ:

ಮಹಾರಾಷ್ಟ್ರದಲ್ಲಿ ಮಹಾರಾಷ್ಟ್ರ ಸಾರಿಗೆ ನೌಕರರು ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಮಹಾರಾಷ್ಟ್ರ ದಿಂದ ರಾಜ್ಯಕ್ಕೆ ಪ್ರಯಾಣಿಕರು ಪರದಾಡುವಂತಾಗಿತ್ತು. ರಾಜ್ಯದ ಬಸ್ ಗಳು ಸಂಚಾರ ಮಾಡುತ್ತಿದ್ದ ಹಿನ್ನೆಲೆ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರಿಗೆ ಅನುಕೂಲವಾಗಿತ್ತು. ಆದರೆ, ಈಗ ರಾಜ್ಯದ ಬಸ್ ಗಳು ಸಂಚಾರ ಸ್ಥಗಿತ ಮಾಡಿದ ಹಿನ್ನೆಲೆ, ಮಹಾರಾಷ್ಟ್ರ ದಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರು ಪರದಾಡುವಂತಾಗಿದೆ.

ಇದನ್ನೂ ಓದಿ: Belagavi Dispute: ಕುಕೃತ್ಯಗಳ ಸರಮಾಲೆ: ಬೆಳಗಾವಿಯಲ್ಲಿ ಇಲ್ಲಿಯವರೆಗೆ ಆಗಿದ್ದೇನು? ಒಂದು ವರದಿ

ಮಹಾರಾಷ್ಟ್ರದ ಕಾರ್ಮಿಕರ ಸಂಕಷ್ಟ:

ಮಹಾರಾಷ್ಟ್ರ ದಿಂದ ಯಾದಗಿರಿ ಜಿಲ್ಲೆಗೆ ಭತ್ತ ನಾಟಿ ಮಾಡಲು ದಿ‌ನ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಬರುತ್ತಿದ್ದಾರೆ. ಆದರೆ, ಮಹಾರಾಷ್ಟ್ರದ ಸಾರಿಗೆ ಬಸ್ ಗಳು ಸ್ಥಗಿತವಾಗಿದ್ದು, ಅದೆ ರೀತಿ ರಾಜ್ಯದ ಬಸ್ ಗಳು ಮಹಾರಾಷ್ಟ್ರ ದಿಂದ ಬಸ್ ಸ್ಥಗಿತ ಮಾಡಿದ ಹಿನ್ನೆಲೆ, ಮಹಾರಾಷ್ಟ್ರದ ಕಾರ್ಮಿಕರು ರೈಲ್ವೆ ಗಾಡಿ ಇಲವೇ ಖಾಸಗಿ ವಾಹನಗಳ ಮೂಲಕ ಬರುತ್ತಿದ್ದಾರೆ. ದುಬಾರಿ ಹಣ ವೆಚ್ಚ ಮಾಡಿ ಯಾದಗಿರಿ ಜಿಲ್ಲೆಗೆ ಕೂಲಿ ಮಾಡಲು ಬರುತ್ತಿದ್ದಾರೆ.

ವರದಿ: ನಾಗಪ್ಪ ಮಾಲಿಪಾಟೀಲ
Published by:Vijayasarthy SN
First published: