• Home
  • »
  • News
  • »
  • state
  • »
  • Murugha Mutt: ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿದ ರಾಜ್ಯ ಸರ್ಕಾರ

Murugha Mutt: ಚಿತ್ರದುರ್ಗದ ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿದ ರಾಜ್ಯ ಸರ್ಕಾರ

ಮುರುಘಾ ಮಠ

ಮುರುಘಾ ಮಠ

ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ್‌ ಅವರನ್ನು ಚಿತ್ರದುರ್ಗದ ಮುರುಘಾಮಠದ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

  • News18 Kannada
  • 4-MIN READ
  • Last Updated :
  • Karnataka, India
  • Share this:

ಬೆಂಗಳೂರು (ಡಿ.13) : ಚಿತ್ರದುರ್ಗದ ಮುರುಘಾ ಸ್ವಾಮಿ (Murugha swamy) ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದ್ದು, ಶಿವಮೂರ್ತಿ ಮುರುಘಾ ಶರಣರು (Shivamurthy Murugha Sharanaru) ಕಳೆದ 3 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ (Judicial Custody) ಹಿನ್ನೆಲೆ  ಚಿತ್ರದುರ್ಗದ (Chitradurga) ಮುರುಘಾ ಮಠದ ಟ್ರಸ್ಟ್‌ ಮತ್ತು ಶಿಕ್ಷಣ ಸಂಸ್ಥೆಗೆ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ್‌ (IAS Officer PS Vastrad) ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯ


ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿರುವ ಹಿನ್ನೆಲೆ  ಶಿವಮೂರ್ತಿ ಸ್ವಾಮಿಯನ್ನು ನ್ಯಾಯಂಗ ಬಂಧನದಲ್ಲಿ ಇರಿಸಲಾಗಿದೆ. ಹೀಗಾಗಿ ಟ್ರಸ್ಟ್‌ ಮತ್ತು ಶಿಕ್ಷಣ ಸಂಸ್ಥೆಗೆ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಒತ್ತಾಯ ಕೇಳಿ ಬಂದಿತ್ತು.


ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ್‌


ಆಡಳಿತಾಧಿಕಾರಿ ನೇಮಿಸಬಹುದು ಎಂದು ಅಭಿಪ್ರಾಯ


ಈ ಸಂಬಂಧ ರಾಜ್ಯ ಸರ್ಕಾರ ಅಡ್ವೊಕೇಟ್‌ ಜನರಲ್‌ ಅವರ ಅಭಿಪ್ರಾಯ ಕೇಳಿತ್ತು. ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಟ್ರಸ್ಟಿನ ಸ್ವತ್ತು ರಕ್ಷಿಸುವ ಉದ್ದೇಶದಿಂದ ಸಂವಿಧಾನದ ಅನುಚ್ಛೇದ 162 ರ ಅನ್ವಯ ಸರ್ಕಾರ ಆಡಳಿತಾಧಿಕಾರಿ ನೇಮಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ನಿವೃತ್ತ ಐಎಎಸ್‌ ಅಧಿಕಾರಿ ಪಿ.ಎಸ್‌.ವಸ್ತ್ರದ್‌ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.


694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ


ಮುರುಘಾ ಮಠ (Murugha Mutt)  ಸ್ವಾಮೀಜಿಗಳ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ (POCSO Act) ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಒಟ್ಟು 694 ಪುಟಗಳ ಚಾರ್ಜ್ ಶೀಟ್​ನಲ್ಲಿ ಮಠದಲ್ಲಿ ನಡೆಯುತ್ತಿರುವ ಹಲವು ಆಘಾತಕಾರಿ ಸಂಗತಿಗಳನ್ನು ಬೆಳಕಿಗೆ ತಂದಿದೆ. ಸಂತ್ರಸ್ತ ಬಾಲಕಿಯರ ಗಂಭೀರ ಆರೋಪಗಳೂ ಇಲ್ಲಿ ದಾಖಲಾಗಿವೆ. ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ (DySP Anil) ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್‌ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು.


ಬಾಲಕಿಯರು ಹೇಳಿದ್ದೇನು?


ಚಾರ್ಜ್ ಶೀಟ್​ನಲ್ಲಿ 16ವರ್ಷದ ಸಂತ್ರಸ್ತ ಬಾಲಕಿಯ ಹೇಳಿಕೆಯಲ್ಲೂ ಗಂಭೀರ ಆರೋಪಗಳು ಕೇಳಿ ಬಂದಿವೆ. ಇದರಲ್ಲಿ ಸಂತ್ರಸ್ತ ಬಾಲಕಿ ನಾನು 7ನೇ ತರಗತಿಯಲ್ಲಿದ್ದಾಗ ಹುಷಾರಿರಲಿಲ್ಲ. ಆಗ ವಾರ್ಡನ್ ರಶ್ಮಿ ಶರಣರ ಬಳಿಗೆ ಹೋಗಲು ಸೂಚಿಸಿದರು. ಹಣ್ಣು ಕೊಡುತ್ತಾರೆಂದು ಶರಣರ ರೂಮಿಗೆ ಕರೆದೊಯ್ದರು. ಹಿಂದಿನ ಬಾಗಿಲಿನಿಂದ ಕರೆದುಕೊಂಡು ಹೋಗಿ ರೂಮಿಗೆ ಕಳಿಸಿದರು. ಶರಣರು ಕುಡಿಯುತ್ತ ಕುಳಿತಿದ್ದರು, ಹಣ್ಣು ಕೊಟ್ಟರು. ಹಣ್ಣು ತಿಂದ ನಂತರ ತಲೆ ಸುತ್ತು ಬಂದಂತಾಯಿತು. ಎಚ್ಚರ ಆದಾಗ ನನ್ನ ಮೈಮೇಲೆ ಬಟ್ಟೆ ಇರಲಿಲ್ಲ. ಬಟ್ಟೆ ಹಾಕಿಕೊಂಡು ನಾನು ಹಾಸ್ಟೆಲ್ ಗೆ ಬಂದೆ ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: H Vishwanath: ಬಿಜೆಪಿ ವಿರುದ್ಧವೇ ವಿಶ್ವನಾಥ್ ಕೆಂಡಾಮಂಡಲ​; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಹಳ್ಳಿ ಹಕ್ಕಿ


3 ತಿಂಗಳ ಬಳಿಕ ಮತ್ತೆ ಕರೆದ ಸ್ವಾಮೀಜಿ


3 ತಿಂಗಳ ಬಳಿಕ ಸ್ವಾಮೀಜಿ ಕರೆಯುತ್ತಿದ್ದಾರೆಂದು ರಶ್ಮಿ ಮತ್ತೆ ಕರೆದೊಯ್ದರು. ರೂಮಿಗೆ ಹೋದಾಕ್ಷಣ ನೀನು ಯಾರಿಗಾದರು ಹೇಳಿದ್ದೀಯಾ ಎಂದು ಕೇಳಿದರು‌. ನಂತರ ಸ್ನಾನಕ್ಕೆ ಹೋಗಿ ಬೆನ್ನು ಉಜ್ಜಲು ಕರೆದರು. ನನಗೂ ಬಟ್ಟೆ ಬಿಚ್ಚಲು ಹೇಳಿದರು, ಬೇಡವೆಂದು ಕಾಲು ಹಿಡಿದೆ. ಸ್ವಾಮೀಜಿ ಆಗ ನನಗೆ ಚಾಕು ತೋರಿಸಿ ಬೆದರಿಸಿದರು. ನಾನು 9ನೇ ತರಗತಿಯಲ್ಲಿದ್ದಾಗ ಮತ್ತೆ ಶರಣರ ರೂಂಗೆ ಹೋಗಲು ರಶ್ಮಿ ಹೇಳಿದರು. ರೂಮಿಗೆ ಹೋದಾಗ ಬಲವಂತದಿಂದ ಚಾಕೋಲೇಟ್ ನೀಡಿದರು. ಚಾಕೊಲೇಟ್ ತಿಂದ ಬಳಿಕ ತಲೆ‌ಸುತ್ತು ಬಂತು, ನಂತರ‌ ಏನಾಯಿತು ಗೊತ್ತಿಲ್ಲ ಎಂದಿದ್ದಾಳೆ.

Published by:ಪಾವನ ಎಚ್ ಎಸ್
First published: