Mid Day Meal Menu: ವಿರೋಧದ ನಡುವೆಯೂ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ಮುಂದುವರಿಸುವ ಚಿಂತನೆಯಲ್ಲಿ ಸರ್ಕಾರ

ಕರ್ನಾಟಕದಲ್ಲಿ ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 1-8ನೇ ತರಗತಿಯ ಸುಮಾರು 14.4 ಲಕ್ಷ ವಿದ್ಯಾರ್ಥಿಗಳು ಪ್ರಾಯೋಗಿಕ ಯೋಜನೆಯ ಪ್ರಯೋಜನ ಪಡೆದಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೆಲ ಸಮುದಾಯ (Community) ಮತ್ತು ಮಠಾಧೀಶರ (Mutt Seer) ವಿರೋಧದ ನಡುವೆಯೂ ಈ ಶೈಕ್ಷಣಿಕ ವರ್ಷ ಮಕ್ಕಳ ಮಧ್ಯಾಹ್ನದ ಬಿಸಿಯೂಟ(Mid Day Meal)ದಲ್ಲಿ ಮೊಟ್ಟೆ (Egg) ನೀಡುವ ವ್ಯವಸ್ಥೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ರಾಜ್ಯ ಸರ್ಕಾರ ಡಿಸೆಂಬರ್ 2021 ರಿಂದ ಮಾರ್ಚ್ 2022ರವರಗೆ ಉತ್ತರ ಕರ್ನಾಟಕದ (Karnataka) ಏಳು ಜಿಲ್ಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಸರ್ಕಾರ ಮುಂದಾಗಿತ್ತು. ಮೊಟ್ಟೆ ಸೇವಿಸದ ಮಕ್ಕಳಿಗೆ (Children) ಬಾಳೆಹಣ್ಣು (Banana) ತೆಗೆದುಕೊಳ್ಳುವ ಆಯ್ಕೆಯನ್ನು ಸಹ ನೀಡಲಾಗಿತ್ತು. ಆದ್ರೆ ಈ ಮಹತ್ವಕಾಂಕ್ಷೆ ಯೋಜನೆಗೆ ಆರಂಭದಲ್ಲಿಯೇ ಅಪಸ್ವರ ಕೇಳಿ ಬಂದಿತ್ತು. ಕೆಲ ಸಮುದಾಯ ಮತ್ತು ಧಾರ್ಮಿಕ ಗುಂಪುಗಳು ಮೊಟ್ಟೆ ವಿತರಣೆಯನ್ನು ವಿರೋಧಿಸಿದ್ದವು. ವಿರೋಧ ವ್ಯಕ್ತವಾದ ಹಿನ್ನೆಲೆ ಸರ್ಕಾರ ಸಹ ಈ ಬಗ್ಗೆ ಸಮೀಕ್ಷೆಯನ್ನು ಸಹ ನಡೆಸಿತ್ತು. ಸಮೀಕ್ಷೆಯಲ್ಲಿ ಬಹುತೇಕ ಮಕ್ಕಳು ಮೊಟ್ಟೆ ನೀಡುವ ಯೋಜನೆಯನ್ನು  ಸ್ವಾಗತಿಸಿದ್ದರು.

ಇದೀಗ ಮೊಟ್ಟೆ ವಿತರಣೆಯನ್ನು ಮುಂದುವರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮೊಟ್ಟೆ ಸೇವಿಸದ ಮಕ್ಕಳಿಗೆ ಪರ್ಯಾಯ ಆಹಾರ ನೀಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ. ಲಿಂಗಾಯತ ಮತ್ತು ಜೈನ ಸಮುದಾಯಗಳ ವಿರೋಧದ ನಡುವೆಯೂ ಬಹುತೇಕ ಮಕ್ಕಳು ಮತ್ತು ಪೋಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆ ಸರ್ಕಾರ ಯೋಜನೆಯನ್ನು ಮುಂದುವರಿಸಲು ಉತ್ಸುಕವಾಗಿದೆ ಎಂದು ವರದಿಯಾಗಿದೆ.

ಮೊಟ್ಟೆ  ನೀಡುವ ಪ್ರಸ್ತಾವನೆ ಸಲ್ಲಿಕೆಗೆ ಸಿದ್ಧತೆ

ಮೊಟ್ಟೆ ವಿತರಣೆಯ ಪ್ರಸ್ತಾವನೆ ಅಂತಿಮಗೊಳಿಸಿದ ಬಳಿಕ ಸಚಿವ ಸಂಪುಟದಲ್ಲಿ ಅಂಗೀಕರಿಸುವ  ಸಾಧ್ಯತೆಗಳಿವೆ. ಪ್ರತಿ ಮೊಟ್ಟೆಗೆ ಸರ್ಕಾರ ಸುಮಾರು 6.50 ರೂ. ಗಳ ವೆಚ್ಚವನ್ನು ಭರಿಸಲಿದೆ. ಈಗಾಗಲೇ ಈ ವಿಷಯವನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯದ ಹಣಕಾಸು ಸಚಿವಾಲಯದ ಮುಂದೆ ಇರಿಸಲಾಗಿದೆ ಎಂದು ವರದಿಯಾಗಿದೆ. 2021-22ರ ಸಾಲಿನಲ್ಲಿ ವಾರಕ್ಕೆ ಒಂದು ಮೊಟ್ಟೆಯನ್ನು ನಿಗದಿ ಮಾಡಲಾಗಿತ್ತು.

ಮೊಟ್ಟೆ ನೀಡುವ ಕಾರ್ಯಕ್ರಮ ಕೇಂದ್ರ ಪ್ರಾಯೋಜಿತವಾಗಿದ್ದು, ಪಿಎಂ ಪೋಷಣ್ ಹೆಸರಿನಲ್ಲಿ ಆರಂಭಿಸಲಾಗಿತ್ತು. ಬಿಜೆಪಿ ಆಡಳಿತ ಇರೋ ಅಸ್ಸಾಂನಲ್ಲಿಯೂ ಈ ಮೊದಲು ಮೊಟ್ಟೆಗಳನ್ನು ವಿತರಿಸಲಾಗಿದೆ.

ಇದನ್ನೂ ಓದಿ:  Kodagu: ಬಸವೇಶ್ವರ ದೇವರಿಗೆ ಹಣ್ಣು ಕಾಯಿ ಅರ್ಪಿಸಿ ಭಾವೈಕ್ಯತೆ ಮೆರೆದ ಮುಸಲ್ಮಾನರು 

ಶಾಲಾ ದಿನದಂದು ಎರಡು ದಿನಕೊಮ್ಮೆ ಮಕ್ಕಳಿಗೆ ಮೊಟ್ಟೆ ವಿತರಿಸುವ ಪ್ರಸ್ತಾಪ ಇದಾಗಿದೆ. ಒಂದೇ ಬಾರಿಗೆ ರಾಜ್ಯಾದ್ಯಂತ ಮೊಟ್ಟೆ ವಿತರಿಸಲು ಸಾಧ್ಯವಾಗದೇ ಇದ್ದರೂ  ಹಂತ ಹಂತವಾಗಿ ಈ ಯೋಜನೆಯನ್ನು ಆರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈಗಾಗಲೇ ಪ್ರಾಯೋಗಿಕ ಮಟ್ಟದಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಇದರ ಜೊತೆಗೆ ಮಕ್ಕಳ ಪೌಷ್ಠಿಕಾಂಶದ ಮಟ್ಟದಲ್ಲಿ ಸುಧಾರಣೆ ಸಹ ಕಂಡು ಬಂದಿದೆ.

ಮೊಟ್ಟೆ ನೀಡುವ ಯೋಜನೆ ಬಗ್ಗೆ ಬಿ.ಸಿ.ನಾಗೇಶ್ ಹೇಳಿದ್ದೇನು?

ಇನ್ನೂ ಈ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮೊಟ್ಟೆ ಮತ್ತು ಅದಕ್ಕೆ ಪರ್ಯಾಯವಾಗಿ ನೀಡಬಹುದಾದ ಆಹಾರದ ಯೋಜನೆಯನ್ನು ಬೇರೆ ಜಿಲ್ಲೆಗಳಿಗೂ ವಿಸ್ತರಿಸಲು ಯೋಚಿಸುತ್ತಿದ್ದೇವೆ. ಇದು ಏಳು ಜಿಲ್ಲೆಗಳ ಮಕ್ಕಳ ಹಾಜರಾತಿ ದೃಷ್ಟಿಯಿಂದಲೂ ಉಪಯುಕ್ತವಾಗಿದೆ ಎಂದು ಹೇಳಿದ್ದಾರೆ.

ಪ್ರತಿ ಮಗುವಿಗೆ ಮೊಟ್ಟೆ ತಿನ್ನುವಂತೆ ಒತ್ತಾಯಿಸಲು ಸಾಧ್ಯವಿಲ್ಲ . ಆದ್ರೆ  ಮಕ್ಕಳಿಗೆ ಆಯ್ಕೆ ನೀಡಬೇಕೇಂದು ಎಂದು ಮೈಸೂರಿನ ಕೇಂದ್ರಿಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಗೆ ಮನವಿ ಮಾಡಲಾಗಿದೆ. ಪರ್ಯಾಯ ಆಹಾರವಾಗಿ ಕಡಲೆಬೀಜ, ಬೆಲ್ಲ, ಸೋಯಾ ನೀಡುವಂತೆ ಸಲಹೆಗಳು ಬಂದಿವೆ. ಇದು ಸಹ ಮಕ್ಕಳಿಗೆ ಪೌಷ್ಠಿಕಾಂಶ ನೀಡಲಿವೆ.

ಸದ್ಯ ರಾಜ್ಯದಲ್ಲಿ ಹಿಂದೂ ಸಂಘಟನೆಗಳು ತಮ್ಮ ಅಜೆಂಡಾ ಮುಂದಿಟ್ಟು ಹಲವು ಅಭಿಯಾನವನ್ನು ನಡೆಸುತ್ತಿವೆ. ಹಿಜಾಬ್, ಹಲಾಲ್ ಮಾಂಸದ ಬಹಿಷ್ಕಾರ ಅಂತಹ ಅಭಿಯಾನ ಆರಂಭಿಸಿವೆ. ಈ ನಡುವೆ ಸರ್ಕಾರ ಮೊಟ್ಟೆ ನೀಡುವ ಯೋಜನೆಗೆ ಪ್ರಾಮುಖ್ಯತೆ ನೀಡಿದ್ದು, ರಾಜ್ಯದ ದೊಡ್ಡ ಲಿಂಗಾಯತ ಸಮುದಾಯ ಇದನ್ನು ವಿರೋಧಿಸಿದೆ.

ಮಧ್ಯ ಪ್ರದೇಶದಲ್ಲಿ ಮೊಟ್ಟೆ ನೀಡುವ ಯೋಜನೆಯನ್ನ ಬಿಜೆಪಿ ವಿರೋಧ ಮಾಡಿತ್ತು

ಇನ್ನೂ ವಿಶೇಷ ಅಂದ್ರೆ ಬೇರೆ ರಾಜ್ಯಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮವನ್ನು ವಿರೋಧಿಸಿತ್ತು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಅಂದಿನ ಸಿಎಂ ಕಮಲ್ ನಾಥ್ ಅಂಗನವಾಡಿಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡಲು ಆರಂಭಿಸಿತ್ತು. ತದನಂತರ ಬಂದ ಬಿಜೆಪಿ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸಿತ್ತು. ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮೊಟ್ಟೆ ನೀಡುವ ಆದೇಶ ಹಿಂಪಡೆದುಕೊಂಡಿದ್ದರು.

ಯಾವ ರಾಜ್ಯಗಳಲ್ಲಿ ಮೊಟ್ಟೆ ವಿತರಣೆ?

ಪ್ರಸ್ತುತ, 13 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಮಧ್ಯಾಹ್ನದ ಊಟದ ಮೆನುಗಳಲ್ಲಿ ಮೊಟ್ಟೆಗಳನ್ನು ಹೊಂದಿವೆ: ತಮಿಳುನಾಡು (ಪ್ರತಿ ದಿನ), ಆಂಧ್ರ ಪ್ರದೇಶ (ವಾರಕ್ಕೆ ಐದು ದಿನಗಳು); ತೆಲಂಗಾಣ, ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ವಾರಕ್ಕೆ ಮೂರು ಬಾರಿ); ಜಾರ್ಖಂಡ್, ಒಡಿಶಾ, ತ್ರಿಪುರ, ಪುದುಚೇರಿ (ವಾರಕ್ಕೆ ಎರಡು ಬಾರಿ); ಬಿಹಾರ, ಕೇರಳ, ಮಿಜೋರಾಂ, ಉತ್ತರಾಖಂಡ, ಪಶ್ಚಿಮ ಬಂಗಾಳ, ಲಡಾಖ್, ಅಸ್ಸಾಂ (ವಾರಕ್ಕೊಮ್ಮೆ) ಮತ್ತು ಸಿಕ್ಕಿಂ (ತಿಂಗಳಿಗೊಮ್ಮೆ) ಮೊಟ್ಟೆ ನೀಡುತ್ತಿವೆ.

ಕರ್ನಾಟಕದಲ್ಲಿ ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ 1-8ನೇ ತರಗತಿಯ ಸುಮಾರು 14.4 ಲಕ್ಷ ವಿದ್ಯಾರ್ಥಿಗಳು ಪ್ರಾಯೋಗಿಕ ಯೋಜನೆಯ ಪ್ರಯೋಜನ ಪಡೆದಿದ್ದಾರೆ.

ಇದನ್ನೂ ಓದಿ:  Muzrai Department: ದೇವಸ್ಥಾನದ ಮಳಿಗೆಗಳಲ್ಲಿ ವ್ಯಾಪಾರ ನಡೆಸಲು ಮುಸ್ಲಿಮರಿಗೆ ಅವಕಾಶ ಇಲ್ಲ

ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಪೇಜಾವರ ಶ್ರೀಗಳು ಮತ್ತು ಲಿಂಗಾಯತ ಧರ್ಮ ಮಹಾಸಭಾದಂತಹ ಕೆಲ ಸಮುದಾಯಗಳು ವಿರೋಧದಿಂದಾಗಿ ಪ್ರಸ್ತಾವನೆಯನ್ನು ಜಾರಿಗೆ ತರಲು ವಿಫಲವಾಗಿತ್ತು.

60:40 ಅನುಪಾತದಲ್ಲಿ ವೆಚ್ಚ ಹಂಚಿಕೆ

ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ನೀಡಲಾಗುವ ಪರ್ಯಾಯ ಆಹಾರ ಪದಾರ್ಥಗಳಲ್ಲಿ ಋತುಮಾನದ ಹಣ್ಣುಗಳು, ಬಾಳೆಹಣ್ಣುಗಳು ಮತ್ತು ಚಿಕ್ಕಿ,ಇತರೆ ಆಹಾರ ಸೇರಿದೆ. ಹೆಚ್ಚುವರಿ ಆಹಾರ ಪದಾರ್ಥಗಳೆಂದು ಪರಿಗಣಿಸಲಾದ ಮೊಟ್ಟೆ ಮತ್ತು ಅದರ ಪರ್ಯಾಯ ಆಹಾರಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ  ಪ್ರದೇಶಗಳೇ ಸಂಪೂರ್ಣ ವೆಚ್ಚವನ್ನು ಭರಿಸುತ್ತವೆ. ಆದಾಗ್ಯೂ, ಕರ್ನಾಟಕದಲ್ಲಿ ಪ್ರಾಯೋಗಿಕ ಉಪಕ್ರಮದ ಹಣವನ್ನು ಕೇಂದ್ರ ಮತ್ತು ರಾಜ್ಯವು 60:40 ಅನುಪಾತದಲ್ಲಿ ವಿಭಜಿಸಿದೆ. ಇದೇ ಅನುಪಾತದಲ್ಲಿ ವೆಚ್ಚವನ್ನು ಪಾವತಿಸುತ್ತಿವೆ.

ಪಿಎಂ ಪೋಶನ್ ಅಡಿಯಲ್ಲಿ, ಕೇಂದ್ರವು ಆಹಾರ ಧಾನ್ಯಗಳು ಮತ್ತು ಅವುಗಳ ಸಾಗಣೆಯ ವೆಚ್ಚವನ್ನು ಭರಿಸುತ್ತದೆ ಆದರೆ ಅಡುಗೆ ವೆಚ್ಚ ಮತ್ತು ಅಡುಗೆಯವರು ಮತ್ತು ಕಾರ್ಮಿಕರಿಗೆ ಪಾವತಿಗಳನ್ನು ಕೇಂದ್ರವು ರಾಜ್ಯಗಳು ಮತ್ತು ಯುಟಿಗಳೊಂದಿಗೆ ಶಾಸಕಾಂಗಗಳೊಂದಿಗೆ 60:40 ಅನುಪಾತದಲ್ಲಿ ವಿಭಜಿಸುತ್ತದೆ.

2021-22 ರಲ್ಲಿ, ಪಿಎಂ-ಪೋಶನ್‌ಗಾಗಿ ಅದರ ಒಟ್ಟು ರೂ 10,233 ಕೋಟಿಗಳಲ್ಲಿ, ಶಿಕ್ಷಣ ಸಚಿವಾಲಯವು ಕೇವಲ ಅಡುಗೆ ವೆಚ್ಚಕ್ಕಾಗಿ ರೂ 7,412 ಕೋಟಿಗಳನ್ನು ಮೀಸಲಿಟ್ಟಿದೆ. ಪ್ರಸ್ತುತ, ಪ್ರಾಥಮಿಕ (1-5) ಮತ್ತು ಉನ್ನತ ಪ್ರಾಥಮಿಕ (6-8) ತರಗತಿಗಳಿಗೆ ಕ್ರಮವಾಗಿ ಪ್ರತಿ ಮಗುವಿಗೆ 4.97 ಮತ್ತು 7.45 ರೂ. ಎಂದು ಮೀಸಲಿರಿಸಿದೆ.
Published by:Mahmadrafik K
First published: