• Home
  • »
  • News
  • »
  • state
  • »
  • Karnataka Government: ಮದ್ಯ ಖರೀದಿ ವಯಸ್ಸು ಇಳಿಕೆ ಪ್ರಸ್ತಾವನೆ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

Karnataka Government: ಮದ್ಯ ಖರೀದಿ ವಯಸ್ಸು ಇಳಿಕೆ ಪ್ರಸ್ತಾವನೆ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

ಕರ್ನಾಟಕ ಅಬಕಾರಿ ಕಾಯ್ದೆಯು 18 ವರ್ಷದೊಳಗಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ಮಾಡುವ ಯೋಜನೆಯನ್ನು ಕೈಬಿಡುತ್ತಿದೆ.

  • Share this:

ಬೆಂಗಳೂರು: ಮದ್ಯ ಖರೀದಿಸುವ ವಯಸ್ಸಿನ ನಿರ್ಬಂಧವನ್ನು ಸಡಿಲಿಸಲು ನಿರ್ಧರಿಸಿದ್ದ ರಾಜ್ಯ ಸರ್ಕಾರ ಯೋಜನೆಯನ್ನು ಕೈಬಿಟ್ಟಿದೆ. ಮದ್ಯ ಉದ್ಯಮದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವು ಮದ್ಯ ಖರೀದಿ ಮತ್ತು ಮಾರಾಟಕ್ಕೆ ನಿಗದಿಪಡಿಸಿದ್ದ ಕನಿಷ್ಠ ವಯಸ್ಸಿನ ಮಿತಿಯನ್ನು 21 ರಿಂದ 18 ಕ್ಕೆ ಇಳಿಸಲು ಮುಂದಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ವಿವಿಧ ವಲಯಗಳಿಂದ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ ಪ್ರಸ್ತಾಪವನ್ನು ಹಿಂಪಡೆಯಲು ನಿರ್ಧರಿಸಿದೆ.


ರಾಜ್ಯದಾದ್ಯಂತ ಸರ್ಕಾರದ ಕ್ರಮಕ್ಕೆ ಆಕ್ರೋಶ
ಜನವರಿ 9 ರಂದು, 'ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತು) ನಿಯಮಗಳು-1967' ಕ್ಕೆ ತಿದ್ದುಪಡಿ ತರಲು ಅಬಕಾರಿ ಇಲಾಖೆಯು ಕರಡು ಪ್ರಸ್ತಾವನೆಯನ್ನು ಪ್ರಕಟಿಸಿತ್ತು.


ಜೊತೆಗೆ ಈ ಬಗ್ಗೆ ಸಾರ್ವಜನಿಕರಿಗೆ ಆಕ್ಷೇಪ/ಸಲಹೆ ನೀಡಲು 30 ದಿನಗಳ ಕಾಲಾವಕಾಶವನ್ನು ನೀಡಿತ್ತು. ಆದರೆ ರಾಜ್ಯದಾದ್ಯಂತ ಸರ್ಕಾರದ ಕ್ರಮಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ಸಾರ್ವಜನಿಕರ ಅಹವಾಲು ಮೇರೆಗೆ ರಾಜ್ಯ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.


21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ನಿಷೇಧ
ಕರ್ನಾಟಕ ಅಬಕಾರಿ ಕಾಯ್ದೆಯು 18 ವರ್ಷದೊಳಗಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ಮಾಡುವ ಯೋಜನೆಯನ್ನು ಕೈಬಿಡುತ್ತಿದೆ. ಕರ್ನಾಟಕ ಅಬಕಾರಿ (ಪರವಾನಗಿಗಳ ಸಾಮಾನ್ಯ ಷರತ್ತುಗಳು) ನಿಯಮಗಳ (1) (ಇ) ನಿಯಮ 10 ರಲ್ಲಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಹೇಳಿದೆ.


ತಕ್ಷಣವೇ ಜಾರಿಗೆ ಬರುವಂತೆ ಹಿಂಪಡೆದ ಸರ್ಕಾರ
"ವಯೋಮಿತಿಯನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸುವ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು, ಸಂಘಗಳು ಮತ್ತು ಮಾಧ್ಯಮಗಳು ವ್ಯಕ್ತಪಡಿಸಿದ ಆಕ್ಷೇಪಣೆಗಳನ್ನು ಪರಿಗಣಿಸಿ, ತಕ್ಷಣವೇ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ" ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.


ತಿದ್ದುಪಡಿ ಏನಾಗಿತ್ತು?


ಕರ್ನಾಟಕ ಅಬಕಾರಿ ಪರವಾನಗಿಗಳ (ಸಾಮಾನ್ಯ ಷರತ್ತುಗಳು) ನಿಯಮಗಳು 1967ರ ಸೆಕ್ಷನ್‌ 10(1)(ಇ) ಅಡಿಯಲ್ಲಿದ್ದ ಮದ್ಯ ಖರೀದಿದಾರನ ವಯಸ್ಸಿನ ಮಿತಿಯನ್ನು 21 ರಿಂದ ಇಳಿಸಿ ಹೊಸ ಪ್ರಸ್ತಾಪದಂತೆ ಆ ವಯಸ್ಸಿನ ಮಿತಿಯನ್ನು 18 ಕ್ಕೆ ಬದಲಾಯಿಸಲು ತಿದ್ದುಪಡಿ ಉದ್ದೇಶಿಸಿತ್ತು.


ಇದನ್ನೂ ಓದಿ: Haveri Viral Video: ವಿಮಾನದಲ್ಲಿ ಅಮ್ಮನ ಹುಟ್ಟುಹಬ್ಬ ಆಚರಿಸಿದ ಹಾವೇರಿ ಹೈದ!


ಅಂದರೆ ಸೆಕ್ಷನ್‌ 10(1)(ಇ) ನಿಯಮವನ್ನು ತಿದ್ದುಪಡಿ ಮಾಡಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವಂತಿಲ್ಲ ಎಂದು ಹೊಸ ತಿದ್ದುಪಡಿ ಹೇಳಿತ್ತು.


ಸರ್ಕಾರದ ದೊಡ್ಡ ಆದಾಯದ ಮೂಲ ʼಮದ್ಯ ಉದ್ಯಮʼ
ಮಾರ್ಚ್‌ಗೆ ಕೊನೆಗೊಳ್ಳುವ ಹಣಕಾಸು ವರ್ಷದ ಮೊದಲು 30,000 ಕೋಟಿ ರೂಪಾಯಿಗಳನ್ನು ಮುಟ್ಟುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ. ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಅವಧಿಯಲ್ಲಿ ಅಬಕಾರಿ ಆದಾಯವು ಶೇಕಡಾ 10.63 ರಷ್ಟು ಕಡಿಮೆಯಾಗಿದೆ, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮದ್ಯ ಮಾರಾಟವು ಶೇಕಡಾ 14.86 ರಷ್ಟು ಹೆಚ್ಚಳವನ್ನು ಕಂಡಿತ್ತು.




ಹೊಸ ವರ್ಷದ ಮುನ್ನಾದಿನದಂದು ಅಬಕಾರಿ ಇಲಾಖೆ ಒದಗಿಸಿದ ಮಾಹಿತಿಯ ಪ್ರಕಾರ, ಕಳೆದ ವರ್ಷ 1.1 ಮಿಲಿಯನ್ ಕೇಸ್‌ಗಳಿಗೆ ಹೋಲಿಸಿದರೆ ಈ ಬಾರಿ ಒಟ್ಟು 1.5 ಮಿಲಿಯನ್ ಕೇಸ್ ಬಿಯರ್ ಮಾರಾಟವಾಗಿದೆ, ಇದು ಶೇಕಡಾ 33.81 ರಷ್ಟು ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ.


ಇದನ್ನೂ ಓದಿ: Lalbagh Flower Show 2023: ಬೆಂಗಳೂರಿನಲ್ಲಿ ಹೂಗಳ ಹಬ್ಬ! ಲಾಲ್​ಬಾಗ್​ ಪುಷ್ಪಲೋಕದ ವೈಭವ ನೋಡಿ


IML ವಿಷಯದಲ್ಲಿ, ಕಳೆದ ವರ್ಷ ಒಟ್ಟು 1.9 ಮಿಲಿಯನ್ ಪೆಟ್ಟಿಗೆಗಳ ವಿರುದ್ಧ 2.6 ಮಿಲಿಯನ್ ಪೆಟ್ಟಿಗೆಗಳು ಮಾರಾಟವಾಗಿದ್ದು, 6.17 ಶೇಕಡಾ ಹೆಚ್ಚಳವನ್ನು ವರದಿ ಹೇಳಿದೆ. 2022 ರ ಡಿಸೆಂಬರ್ 23 ರಿಂದ 1,262 ಕೋಟಿ ರೂಪಾಯಿ ಮೌಲ್ಯದ ಭಾರತೀಯ ನಿರ್ಮಿತ ಮದ್ಯ (IML) ಮತ್ತು ಬಿಯರ್ ಮಾರಾಟವನ್ನು ರಾಜ್ಯವು ವರದಿ ಮಾಡಿದರೆ, ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 1,099 ಕೋಟಿ ರೂಪಾಯಿ ಮಾರಾಟವಾಗಿದೆ ಎಂದು ತಿಳಿಸಿದೆ.

Published by:ಗುರುಗಣೇಶ ಡಬ್ಗುಳಿ
First published: