• Home
  • »
  • News
  • »
  • state
  • »
  • Bengaluru Traffic: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ITMS ತಂತ್ರಜ್ಞಾನ; ವಾಹನ ಸಂಚಾರ ಮತ್ತಷ್ಟು ಸುಗಮ

Bengaluru Traffic: ಬೆಂಗಳೂರು ಟ್ರಾಫಿಕ್ ನಿಯಂತ್ರಣಕ್ಕೆ ITMS ತಂತ್ರಜ್ಞಾನ; ವಾಹನ ಸಂಚಾರ ಮತ್ತಷ್ಟು ಸುಗಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

"ಡಾರ್ಕ್ ಏರಿಯಾದಲ್ಲಿ (ಟ್ರಾಫಿಕ್ ಬ್ಲಾಕ್ ಸ್ಪಾಟ್) ಐದು ಹೊಸ ಟ್ರಾಫಿಕ್ ಪೊಲೀಸ್ ಠಾಣೆಗಳು ಬರಲಿವೆ ಮತ್ತು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್) ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುವುದು.

  • Trending Desk
  • 3-MIN READ
  • Last Updated :
  • Share this:

ನೀವು ಬೆಂಗಳೂರು ಮಹಾನಗರದ (Bengaluru City) ನಿವಾಸಿಯಾಗಿದ್ದರೆ, ನಿಮಗೆ ದಿನ ಬೆಳಗಾದರೆ ಈ ಟ್ರಾಫಿಕ್ ಜಾಮ್ (Bengaluru Traffic Problem) ಸಮಸ್ಯೆಯನ್ನು ನೋಡಿ ನೋಡಿ ಸಾಕಾಗಿರುತ್ತದೆ ಅಂತಾನೆ ಹೇಳಬಹುದು. ಹೌದು.. ಬೆಂಗಳೂರು ನಗರವು  (Bengaluru Weather) ಸಿಲಿಕಾನ್ ಸಿಟಿಯಾಗಿದ್ದು ಮತ್ತು ಇಲ್ಲಿನ ವಾತಾವರಣವು ತುಂಬಾನೇ ಸುಖಕರವಾಗಿರುವುದರಿಂದ, ದೇಶದ ಎಲ್ಲಾ ರಾಜ್ಯಗಳಿಂದ ಜನರು ತಮ್ಮ ಕೆಲಸವನ್ನು ಹುಡುಕಿಕೊಂಡು ಪ್ರತಿದಿನ ಇಲ್ಲಿಗೆ ಬರುತ್ತಾರೆ. ಹೀಗೆ ಏನಿಲ್ಲಾ ಅಂತ ಹೇಳಿದರೂ ಸಾವಿರಾರು ಜನರು ಪ್ರತಿದಿನ ಬೆಂಗಳೂರಿಗೆ ಬಂದು ಇಳಿಯುತ್ತಾರೆ ಅಂತ ಹೇಳಬಹುದು. ಇದರಿಂದಾಗಿ ಜನಸಂಖ್ಯೆ (Bengaluru Population) ಮತ್ತು ವಾಹನಗಳ ಸಂಖ್ಯೆ (Bengaluru Vehicles) ಸಹ ಜಾಸ್ತಿಯಾಗುವುದು ಸಹಜವಾಗಿದೆ.


ಈಗಂತೂ ದಿನೇ ದಿನೇ ಬೆಂಗಳೂರಿನಲ್ಲಿ ಈ ದ್ವಿಚಕ್ರ ಮತ್ತು ನಾಲ್ಕು ಚಕ್ರಗಳ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈಗಾಗಲೇ ಮೆಟ್ರೋ ಅನ್ನು ಶುರು ಮಾಡಿದರೂ ಸಹ ರಸ್ತೆಯ ಮೇಲಿನ ವಾಹನ ದಟ್ಟಣೆ ಮಾತ್ರ ಕಡಿಮೆ ಆಗುತ್ತಿಲ್ಲ ಅಂತ ಹೇಳಬಹುದು.


ಈ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಎಲ್ಲಿಯೂ ಟ್ರಾಫಿಕ್ ಜಾಮ್ ಗಳಾಗದಂತೆ ನೋಡಿಕೊಳ್ಳಲು ಹೆಚ್ಚು ಹೆಚ್ಚು ಸಂಚಾರಿ ಪೊಲೀಸ್ ಠಾಣೆಗಳ ಅವಶ್ಯಕತೆ ಇದ್ದು, ಇನ್ನೂ ಹೆಚ್ಚಿನ ಸಂಚಾರಿ ಪೊಲೀಸರನ್ನು ರಸ್ತೆಯ ಮೇಲೆ ವಾಹನ ದಟ್ಟಣೆಯನ್ನು ಸರಿಯಾಗಿ ನಿಯಂತ್ರಿಸಲು ನಿಯೋಜಿಸುವ ಅವಶ್ಯಕತೆ ಇದೆ ಅಂತ ಹೇಳಬಹುದು.


bengaluru traffic, ITMS technology, bengaluru traffic police, kannada news, karnataka news, ಬೆಂಗಳೂರು ಟ್ರಾಫಿಕ್, ಬೆಂಗಳೂರು ಟ್ರಾಫಿಕ್ ನಿಯಂತ್ರಣ
ಬೆಂಗಳೂರು ಟ್ರಾಫಿಕ್


ಇನ್ನೂ ಐದು ಸಂಚಾರಿ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡ್ತಾರಂತೆ ಸಿಎಂ


ಇದೇ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಹ ಯೋಚಿಸುತ್ತಿದ್ದಾರೆ ಅಂತ ಹೇಳುವುದಕ್ಕೆ ಈ ನಿರ್ಧಾರವೇ ಸಾಕ್ಷಿ ಅಂತ ಹೇಳಬಹುದು. ಮುಂದಿನ ಕೆಲವು ದಿನಗಳಲ್ಲಿ ಇನ್ನೂ ಐದು ಹೊಸ ಸಂಚಾರ ಪೊಲೀಸ್ ಠಾಣೆಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಗುರುವಾರ ಘೋಷಿಸಿದ್ದಾರೆ.


"ಡಾರ್ಕ್ ಏರಿಯಾದಲ್ಲಿ (ಟ್ರಾಫಿಕ್ ಬ್ಲಾಕ್ ಸ್ಪಾಟ್) ಐದು ಹೊಸ ಟ್ರಾಫಿಕ್ ಪೊಲೀಸ್ ಠಾಣೆಗಳು ಬರಲಿವೆ ಮತ್ತು ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ (ಐಟಿಎಂಎಸ್) ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗುವುದು.


ಇದು ಯಾವುದೇ ಸಂಚಾರ ಉಲ್ಲಂಘನೆಗಳನ್ನು ಗುರುತಿಸುತ್ತದೆ ಮತ್ತು ವಾಹನ ಸವಾರರ ನಿಲುಗಡೆ, ಕಿರುಕುಳ, ಭ್ರಷ್ಟಾಚಾರ ಮತ್ತು ಸವಾರಿ ಮಾಡುವ ಸಾರ್ವಜನಿಕರಿಗೆ ಇತರ ಸಮಸ್ಯೆಗಳನ್ನು ನಿವಾರಿಸುತ್ತದೆ" ಎಂದು ಸಿಎಂ ಬೊಮ್ಮಾಯಿ ಅವರು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.


bengaluru traffic, ITMS technology, bengaluru traffic police, kannada news, karnataka news, ಬೆಂಗಳೂರು ಟ್ರಾಫಿಕ್, ಬೆಂಗಳೂರು ಟ್ರಾಫಿಕ್ ನಿಯಂತ್ರಣ
ಸಾಂದರ್ಭಿಕ ಚಿತ್ರ


ವಾಹನ ಸಂಚಾರ ಮತ್ತಷ್ಟು ಸುಗಮ


ಐಟಿಎಂಎಸ್ ತಂತ್ರಜ್ಞಾನವು ವಾಹನ ಸಂಚಾರವನ್ನು ಇನ್ನಷ್ಟು ಸುಗಮಗೊಳಿಸುತ್ತದೆ ಎಂದು ಅವರು ಹೇಳಿದರು. ಈಗಾಗಲೇ ಮಿನರ್ವ ವೃತ್ತದಿಂದ ಟೌನ್ ಹಾಲ್ ವರೆಗೆ ಈ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದರು.


ಇದನ್ನೂ ಓದಿ: Karnataka Election: ಬಿಜೆಪಿಗೆ ಗುಜರಾತ್, ಕಾಂಗ್ರೆಸ್​ಗೆ ಹಿಮಾಚಲ ಮಾಡೆಲ್; ಕರ್ನಾಟಕ ಕದನ ಕಣದಲ್ಲಿ ಹತ್ತಾರು ಲೆಕ್ಕಾಚಾರ!


ಇತರ ಸ್ಥಳಗಳಲ್ಲಿಯೂ ಸಿಂಕ್ರೊನೈಜೇಶನ್ ಕೆಲಸವನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.


ಮುಂಬರುವ ದಿನಗಳಲ್ಲಿ ಸಂಚಾರ ನಿರ್ವಹಣೆಯನ್ನು ಸಹ ಸುಧಾರಿಸಲಾಗುವುದು: ಸಿಎಂ


"ಡಿಸೆಂಬರ್ 8 ರಂದು ಸಂಚಾರ ಸಭೆಯನ್ನು ನಡೆಸಲಾಗಿದ್ದು, ಇದರಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು 12 ಅಧಿಕ ಸಾಂದ್ರತೆಯ ಕಾರಿಡಾರ್ ಗಳಲ್ಲಿ ಈ ಸಿಂಕ್ರೊನೈಸೇಶನ್ ಮಾಡಲು ಸೂಚನೆಗಳನ್ನು ನೀಡಲಾಗಿದೆ" ಎಂದು ಬೊಮ್ಮಾಯಿ ಅವರು ಹೇಳಿದರು. "ಮುಂಬರುವ ದಿನಗಳಲ್ಲಿ, ರಸ್ತೆ ಅಭಿವೃದ್ಧಿಯ ಹೊರತಾಗಿ, ಸಂಚಾರ ನಿರ್ವಹಣೆಯನ್ನು ಸಹ ಸುಧಾರಿಸಲಾಗುವುದು" ಎಂದು ಅವರು ಭರವಸೆ ನೀಡಿದರು.


ಏತನ್ಮಧ್ಯೆ, ಅವರು ಈಗ ಸಂಚಾರಕ್ಕಾಗಿ ವಿಶೇಷ ಆಯುಕ್ತರ ಹುದ್ದೆಯನ್ನು ಸೃಷ್ಟಿಸಿರುವುದರಿಂದ ಹೊಸ ಸಂಚಾರ ವ್ಯವಸ್ಥೆಯೂ ಅಸ್ತಿತ್ವಕ್ಕೆ ಬಂದಿದೆ ಎಂದು ಸಿಎಂ ಹೇಳಿದರು.


ಸಂಚಾರ ನಿರ್ವಹಣೆಯಲ್ಲಿ ಬದಲಾವಣೆ


"ಸಂಚಾರ ನಿರ್ವಹಣಾ ತಜ್ಞ ಮತ್ತು ಪಿಎಚ್‌ಡಿ ಹೊಂದಿರುವ ಎಂ.ಎ.ಸಲೀಂ ಅವರನ್ನು ಹೊಸದಾಗಿ ರಚಿಸಲಾದ ಹುದ್ದೆಗೆ ನೇಮಿಸಲಾಗಿದೆ. ಈಗಾಗಲೇ, ಅವರು ಸಂಚಾರ ನಿರ್ವಹಣೆಯಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದಾರೆ" ಎಂದು ಬೊಮ್ಮಾಯಿ ಅವರು ಹೇಳಿದರು.


ಇದನ್ನೂ ಓದಿ:  Karnataka Report Card: ಬಡತನ, ಶಿಕ್ಷಣ, ಉದ್ಯೋಗ; ಕರ್ನಾಟಕದ ರಿಪೋರ್ಟ್ ಕಾರ್ಡ್​ ಇಲ್ಲಿದೆ


ಸಿಎಂ ಬೊಮ್ಮಾಯಿ ಅವರ ಪತ್ರಿಕಾಗೋಷ್ಟಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ, ಶಾಸಕ ರಿಜ್ವಾನ್ ಅರ್ಷದ್, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

Published by:Mahmadrafik K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು