ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್ ಸರ್ಜರಿ; 25 ಡಿವೈಎಸ್​ಪಿ, 24 ಇನ್​ಸ್ಪೆಕ್ಟರ್​ಗಳ ವರ್ಗಾವಣೆ

ಕರ್ನಾಟಕದ ವೆಂಕಟೇಶ ಪ್ರಸನ್ನ, ಲಕ್ಷ್ಮೀನಾರಾಯಣ ಸೇರಿದಂತೆ 25 ಡಿವೈಎಸ್​ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

news18-kannada
Updated:May 23, 2020, 6:53 AM IST
ಕರ್ನಾಟಕ ಪೊಲೀಸ್​ ಇಲಾಖೆಗೆ ಮೇಜರ್ ಸರ್ಜರಿ; 25 ಡಿವೈಎಸ್​ಪಿ, 24 ಇನ್​ಸ್ಪೆಕ್ಟರ್​ಗಳ ವರ್ಗಾವಣೆ
ಸಿಎಂ ಬಿ.ಎಸ್.ಯಡಿಯೂರಪ್ಪ.
  • Share this:
ಬೆಂಗಳೂರು (ಮೇ 23): ಕರ್ನಾಟಕದಲ್ಲಿ ಕೊರೋನಾ ವೈರಸ್​​ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಾರಕ ಸೋಂಕಿನ ನಿಯಂತ್ರಣದತ್ತಲೇ ಹೆಚ್ಚು ಗಮನಹರಿಸಿದ್ದ ರಾಜ್ಯ ಸರ್ಕಾರ ಆಡಳಿತಾತ್ಮಕವಾಗಿ ಯಾವುದೇ ಮಹತ್ತರವಾದ ಬದಲಾವಣೆಗಳನ್ನು ಮಾಡಿರಲಿಲ್ಲ. ಆದರೆ, ಇಂದು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಸಲಾಗಿದ್ದು, ಕರ್ನಾಟಕದ 25 ಡಿವೈಎಸ್ಪಿ ಹಾಗೂ 24 ಇನ್​ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಲಾಗಿದೆ.

ಕರ್ನಾಟಕದ ವೆಂಕಟೇಶ ಪ್ರಸನ್ನ, ಲಕ್ಷ್ಮೀನಾರಾಯಣ ಸೇರಿದಂತೆ 25 ಡಿವೈಎಸ್​ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಾಗೇ, ರಾಜ್ಯದ ವಿವಿಧೆಡೆಗೆ 24 ಇನ್​ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಬಗ್ಗೆ ಶುಕ್ರವಾರ ಸಂಜೆ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಇದನ್ನೂ ಓದಿ: Seva Sindhu: ಆಟೋ ಕ್ಯಾಬ್‌ ಡ್ರೈವರ್‌ಗಳ ಗಮನಕ್ಕೆ; ಸೇವಾಸಿಂಧು ಆಪ್‌ನಲ್ಲಿ ಅರ್ಜಿ ಸಲ್ಲಿಸಿದರೆ ಮಾತ್ರ 5000 ರೂ. ಪರಿಹಾರ

ವಿವಿಐಪಿ ಭದ್ರತಾ ವಿಭಾಗದಿಂದ ವೆಂಕಟೇಶ್ ಪ್ರಸನ್ನ ಅವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆ ಮಾಡಲಾಗಿದೆ. ಇವರು ರವಿ ಪೂಜಾರಿ ಸಂಪರ್ಕ ಆರೋಪದಲ್ಲಿ ಸಿಸಿಬಿಯಿಂದ ವಿವಿಐಪಿ ಭದ್ರತಾ ವಿಭಾಗಕ್ಕೆ ವರ್ಗಾವಣೆಗೊಂಡಿದ್ದರು. ಸದ್ಯ ಇವರನ್ನು ರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.
First published:May 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading