• Home
  • »
  • News
  • »
  • state
  • »
  • Bengaluru: ರಾಜ್ಯದಲ್ಲಿ ಜಾರಿಗೆ ಬರಲಿದೆ ಗುಜರಿ ನೀತಿ; ಸ್ಕ್ರ್ಯಾಪಿಂಗ್ ಪಾಲಿಸಿ ಬಗ್ಗೆ ಗೊತ್ತಿರಬೇಕಾದ ವಿಷಯ

Bengaluru: ರಾಜ್ಯದಲ್ಲಿ ಜಾರಿಗೆ ಬರಲಿದೆ ಗುಜರಿ ನೀತಿ; ಸ್ಕ್ರ್ಯಾಪಿಂಗ್ ಪಾಲಿಸಿ ಬಗ್ಗೆ ಗೊತ್ತಿರಬೇಕಾದ ವಿಷಯ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಆಗಸ್ಟ್ 13, 2021 ರಂದು ಪ್ರಾರಂಭಿಸಲಾದ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯು ಹಳೆಯದಾದ, ಸವೆದ ವಾಹನಗಳನ್ನು ಆಧುನಿಕ ಮತ್ತು ಹೊಸ ವಾಹನಗಳೊಂದಿಗೆ ಬದಲಾಯಿಸುವ ಸರಕಾರದ ಅನುದಾನಿತ ಕಾರ್ಯಕ್ರಮವಾಗಿದೆ.

  • Share this:

ಕರ್ನಾಟಕದಲ್ಲಿ (Karnataka) 2.8 ಕೋಟಿ ವಾಹನಗಳಲ್ಲಿ 80 ಲಕ್ಷಕ್ಕಿಂತ ಅಧಿಕ ವಾಹನಗಳು (Vehicles) 15 ವರ್ಷಗಳಿಗಿಂತಲೂ ಹಳೆಯದಾಗಿರುವುದರಿಂದ ಆಗಸ್ಟ್‌ನಲ್ಲಿ ಕೇಂದ್ರವು 2021 ರಲ್ಲಿ ಬಿಡುಗಡೆ ಮಾಡಿರುವ ವಾಹನ ಸ್ಕ್ರ್ಯಾಪೇಜ್ ನೀತಿ 2021 ಅಂದರೆ ವಾಹನಗಳನ್ನು ಗುಜರಿಗೆ ಹಾಕುವ ಸ್ಕ್ರ್ಯಾಪ್ ನೀತಿಯನ್ನು ಅನ್ವಯಿಸಲು ಕರ್ನಾಟಕ ಸರಕಾರ ನಿರ್ಧರಿಸಿದೆ. ಆಗಸ್ಟ್ 13, 2021 ರಂದು ಪ್ರಾರಂಭಿಸಲಾದ ವೆಹಿಕಲ್ ಸ್ಕ್ರ್ಯಾಪೇಜ್ ನೀತಿಯು (Vehicle Scrappage Policy) ಹಳೆಯದಾದ, ಸವೆದ ವಾಹನಗಳನ್ನು ಆಧುನಿಕ ಮತ್ತು ಹೊಸ ವಾಹನಗಳೊಂದಿಗೆ ಬದಲಾಯಿಸುವ ಸರಕಾರದ ಅನುದಾನಿತ ಕಾರ್ಯಕ್ರಮವಾಗಿದೆ. 2023 ರಿಂದ ಎಲ್ಲಾ ರೀತಿಯ ಭಾರಿ ವಾಹನಗಳನ್ನು ಕಡ್ಡಾಯ ಫಿಟ್ನೆಸ್ ಪರೀಕ್ಷೆಗೆ (Fitness test) ಒಳಪಡಿಸಬೇಕಾಗುತ್ತದೆ. ಈ ನೀತಿಯು 2024 ರಿಂದ ಖಾಸಗಿ ಹಾಗೂ ಇತರ ವಾಹನಗಳ ಗುಂಪುಗಳಿಗೆ ಅನ್ವಯಿಸಲಿದೆ.


ಹಳೆ ವಾಹನಗಳಿಂದಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಈ ಯೋಜನೆ 


ಈ ನೀತಿಯು ರಸ್ತೆಗಳಲ್ಲಿ ಸಂಚರಿಸುವ ಹಳೆಯ ಮತ್ತು ಯೋಗ್ಯವಲ್ಲದ ವಾಹನಗಳನ್ನು ಹಂತಹಂತವಾಗಿ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದ್ದು ಅವುಗಳ ನೋಂದಣಿಯನ್ನು ರದ್ದುಗೊಳಿಸುವ ಮೂಲಕ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಆ ಮೂಲಕ ಅವುಗಳನ್ನು ರದ್ದುಪಡಿಸುವ ಇರಾದೆಯನ್ನು ಹೊಂದಿದೆ.


ಅಂತೆಯೇ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಮತ್ತು ಹೊಸ ವಾಹನಗಳಿಗೆ ಬೇಡಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಅಮೆರಿಕಾ, ಜರ್ಮನಿ, ಕೆನಡಾ ಮತ್ತು ಚೀನಾ ಸೇರಿದಂತೆ ಹಲವಾರು ದೇಶಗಳು ವಾಹನ ಉದ್ಯಮಗಳನ್ನು ಉತ್ತೇಜಿಸಲು ಮತ್ತು ವಾಹನ ಮಾಲಿನ್ಯವನ್ನು ಕಡಿಮೆ ಮಾಡಲು ವಾಹನ ಸ್ಕ್ರ್ಯಾಪೇಜ್ ನೀತಿಗಳನ್ನು ಪರಿಚಯಿಸಿವೆ.


ನಗರದಲ್ಲಿ ಹಳೆಯ ವಾಹನಗಳ ಹಾವಳಿ


ಸಾರಿಗೆ ವಿಭಾಗದ ಪ್ರಕಾರ ಬೆಂಗಳೂರು ಮಾತ್ರವೇ 1 ಕೋಟಿ ವಾಹನಗಳನ್ನು ಹೊಂದಿದ್ದು ಅದರಲ್ಲಿ 29 ಲಕ್ಷ ವಾಹನಗಳು ಈ ವರ್ಷ ಮಾರ್ಚ್‌ ತಿಂಗಳಿನಲ್ಲಿಯೇ 15 ವರ್ಷಗಳ ಮಿತಿಯನ್ನು ಮೀರಿವೆ. ಇನ್ನು ಹೆಚ್ಚಿನ ವಾಯು ಮಾಲಿನ್ಯಕ್ಕೆ ಕಾರಣವಾಗಿರುವ ಎರಡು ಸ್ಟ್ರೋಕ್ (ಆಂತರಿಕ ದಹನಕಾರಿ ಎಂಜಿನ್) ಅಟೊರಿಕ್ಷಾಗಳು ಇನ್ನೂ ಬೆಂಗಳೂರು ನಗರದಲ್ಲಿ ಓಡಾಡಿಕೊಂಡಿವೆ.


ಇದನ್ನೂ ಓದಿ:  Mysuru Dasara: ಪ್ರಯಾಣಿಕರೇ ಗಮನಿಸಿ, ಮೈಸೂರು ಪ್ರವೇಶಿಸುವ, ನಿರ್ಗಮಿಸುವ ಬಸ್​ಗಳ ಮಾರ್ಗ ಬದಲಾವಣೆ


ಕೇಂದ್ರ ಸ್ಕ್ರಾಪೇಜ್ ನೀತಿಗೆ ಅನುಗುಣವಾಗಿ ಹಳೆಯ ಹಾಗೂ ದುರ್ಬಲ ವಾಹನಗಳನ್ನು ರದ್ದುಗೊಳಿಸಲಾಗುತ್ತದೆ ಹಾಗೂ ಪರಿಸರ ಸ್ನೇಹಿ ವಿಧಾನದ ಮೂಲಕ ಗುಜರಿಯ ವಾಹನವನ್ನು ಮರುಬಳಕೆ ಮಾಡಲಾಗುತ್ತದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.


ವಿಭಾಗವು ಈ ನೀತಿಯನ್ನು ಅನುಮೋದನೆಗಾಗಿ ಕ್ಯಾಬಿನೆಟ್‌ ಮುಂದೆ ತರುತ್ತಿದೆ. ಗುಜರಾತ್, ಬಿಹಾರ್, ಅಸ್ಸಾಮ್ ಮೊದಲಾದ ರಾಜ್ಯಗಳು ಈಗಾಗಲೇ ಈ ನೀತಿಯನ್ನು ಅನುಷ್ಠಾನಗೊಳಿಸಿವೆ.


ಎಷ್ಟು ಹಳೆಯ ವಾಹನಗಳು ನೀತಿಗೆ ಒಳಪಡುತ್ತವೆ?


20 ವರ್ಷಕ್ಕಿಂತಲೂ ಹಳೆಯದಾಗಿರುವ ಖಾಸಗಿ ವಾಹನಗಳನ್ನು ಹಾಗೂ 15 ವರ್ಷಕ್ಕಿಂತಲೂ ಹಳೆಯದಾಗಿರುವ ವಾಣಿಜ್ಯ ವಾಹನಗಳ ನೋಂದಣಿಯನ್ನು ರದ್ದುಗೊಳಿಸುವ ಇರಾದೆಯನ್ನು ಕೇಂದ್ರದ ನೀತಿಯು ಹೊಂದಿದೆ.


ಈ ಕುರಿತು ಸುದ್ದಿಮಾಧ್ಯಮಕ್ಕೆ ಮಾಹಿತಿ ನೀಡಿರುವ ಸಾರಿಗೆ ಕಮೀಷನರ್ ಟಿಎಚ್‌ಎಮ್ ಕುಮಾರ್, 15 ವರ್ಷಕ್ಕಿಂತ ಹಳೆಯದಾಗಿರುವ ಖಾಸಗಿ ವಾಹನಗಳು ನೀತಿಗೆ ಒಳಪಡುತ್ತವೆ ಎಂದಿದ್ದಾರೆ.


ನಿಯಮಗಳನ್ನು ನಿಗದಿಪಡಿಸುವುದು ಮತ್ತು ನೀತಿಯನ್ನು ಅನುಷ್ಠಾನಗೊಳಿಸುವುದು ಪ್ರತ್ಯೇಕ ರಾಜ್ಯಗಳಿಗೆ ಸಂಬಂಧಿಸಿದೆ. 15 ವರ್ಷಕ್ಕಿಂತ ಹಳೆಯದಾಗಿರುವ ಖಾಸಗಿ ವಾಹನಗಳು ನೀತಿಗೆ ಒಳಪಡುತ್ತವೆ.


ಒಮ್ಮೆ ನೀತಿಯನ್ನು ಕ್ಯಾಬಿನೆಟ್ ಮುಂದೆ ಇಟ್ಟ ಬಳಿಕ, ಸ್ವಯಂಪ್ರೇರಣೆಯಿಂದ ತಮ್ಮ ವಾಹನಗಳನ್ನು ಸ್ಕ್ರ್ಯಾಪಿಂಗ್ ಮಾಡಲು ನೀಡುವ ಮಾಲೀಕರಿಗೆ ಹಳೆಯ ವಾಹನಗಳನ್ನು ತೊಡೆದುಹಾಕಿದ ನಂತರ ಹೊಸ ವಾಹನಗಳನ್ನು ಖರೀದಿಸುವ ಮೋಟಾರು ವಾಹನ ತೆರಿಗೆ ಪ್ರೋತ್ಸಾಹದಂತಹ ವಿವರಗಳನ್ನು ನಾವು ಬಹಿರಂಗಪಡಿಸುತ್ತೇವೆ ಎಂದು ಸಾರಿಗೆ ಕಮೀಷನರ್ ತಿಳಿಸಿದ್ದಾರೆ.


ಈ ಸ್ಕ್ರ್ಯಾಪೇಜ್ ನೀತಿ ಏಕೆ ಬೇಕಿತ್ತು?


ಕಳೆದ ಕೆಲವು ವರ್ಷಗಳಿಂದ ವಾಹನ ಮಾಲೀಕತ್ವವು ನಾಟಕೀಯವಾಗಿ ಹೆಚ್ಚಾಗಿದೆ. ಭಾರತವು ಪ್ರಪಂಚದ ಏಳನೇ ಅತಿದೊಡ್ಡ ವಾಹನ ತಯಾರಕನಾಗಿದ್ದು, ಅದರ ಉತ್ಪಾದನೆಯ ಬಹುಪಾಲು ದೇಶೀಯವಾಗಿ ಬಳಕೆಯಾಗುತ್ತದೆ.


ಇದನ್ನೂ ಓದಿ:  Traffic Rules: ಹುಷಾರ್‌! ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಬೀಳುತ್ತೆ 1 ಲಕ್ಷ ದಂಡ


ವಿಶೇಷವಾಗಿ ದ್ವಿಚಕ್ರ ವಾಹನಗಳಿಗೆ, ಭಾರತವು ವಿಶ್ವದ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದನಿಸಿದೆ. ಅಸಂಖ್ಯಾತ ಆರ್ಥಿಕ ಪ್ರಯೋಜನಗಳನ್ನು ಉಂಟುಮಾಡಿರುವ ಈ ವ್ಯವಸ್ಥೆಯು ದೇಶವನ್ನು ಹೆಚ್ಚು ಕಲುಷಿತವಾಗಿಸಿದೆ ಮಾತ್ರವಲ್ಲದೆ, ವಾಹನಗಳು ಮಾಲಿನ್ಯಕ್ಕೆ ಗಣನೀಯವಾಗಿ ಕೊಡುಗೆ ನೀಡುತ್ತಿವೆ.

Published by:Ashwini Prabhu
First published: