• Home
  • »
  • News
  • »
  • state
  • »
  • Karnataka: ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಸರ್ಕಾರದಿಂದ ಅನುದಾನ; ಸಿಎಂ ಬೊಮ್ಮಾಯಿ

Karnataka: ಮಹಾರಾಷ್ಟ್ರದ ಕನ್ನಡ ಶಾಲೆಗಳಿಗೆ ಸರ್ಕಾರದಿಂದ ಅನುದಾನ; ಸಿಎಂ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

ಇಂದು ನ್ಯಾ. ಕೆಎಂ ಜೋಸೆಫ್ ಅವರು ಬೇರೊಂದು ಪ್ರಕರಣದಲ್ಲಿ ಸಂವಿಧಾನಿಕ ಪೀಠದಲ್ಲಿ ಇರುವ ಹಿನ್ನೆಲೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಕೇಸ್ ವಿಚಾರಣೆ ನಿಗದಿಯಾಗಿಲ್ಲ.

  • News18 Kannada
  • Last Updated :
  • Karnataka, India
  • Share this:

ಗಡಿ ವಿಚಾರದಲ್ಲಿ ಉದ್ಧಟತನ ತೋರಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ (Maharashtra Government) ಕರ್ನಾಟಕ (Karnataka) ತಿರುಗೇಟು ನೀಡಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳ (Kannada School) ಅಭಿವೃದ್ಧಿಗೆ ಹೆಚ್ಚಿನ ಹಣ ನೀಡೋದಾಗಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ತಿಳಿಸಿದ್ದಾರೆ. ಜೊತೆಗೆ ಮಹಾರಾಷ್ಟ್ರದಲ್ಲಿ ಕನ್ನಡಿಗ ಸ್ವಾತಂತ್ರ್ಯ ಹೋರಾಟಗಾರರಿಗೆ ಪಿಂಚಣಿ ನೀಡಲು (Pension) ಕರ್ನಾಟಕ ಸರ್ಕಾರ (Karnataka Government) ಮುಂದಾಗಿದೆ. ಅಷ್ಟೇ ಅಲ್ಲದೆ ಮಹಾರಾಷ್ಟ್ರದ ಜತ್ (Jatt, Maharasgtra) ತಾಲೂಕನ್ನ ಕರ್ನಾಟಕಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚಿಂತನೆ ಮಾಡ್ತಿರೋದಾಗಿ ತಿಳಿಸಿದೆ. ಇನ್ನು ಬೆಳಗಾವಿ ಗಡಿ ವಿವಾದ ಅರ್ಜಿ ವಿಚಾರಣೆ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿ, ಮಂಗಳವಾರ ರಾತ್ರಿ ಅಡ್ವಕೇಟ್ ಜನರಲ್ ಪ್ರಭುಲಿಂಗ ನಾವದಗಿ ಜೊತೆ ಮಾತುಕತೆ ನಡೆಸಿದರು. ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರೋ ಸಿಎಂ ನಿವಾಸದಲ್ಲಿ ಅಡ್ವಕೇಟ್ ಜನರಲ್ (Advocate General for Karnataka) ಜೊತೆ ಸಿಎಂ ಮಹತ್ವದ ಸಭೆ ನಡೆಸಿದರು. ಸುಪ್ರೀಂಕೋರ್ಟ್‌ನಲ್ಲಿ (Supreme Court) ಸಮರ್ಥವಾಗಿ ವಾದ ಮಂಡಿಸುವ ಸಂಬಂಧ ಇಬ್ಬರು ಚರ್ಚಿಸಿದ್ದಾರೆ.


ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ವಿವಾದ (Karnataka Maharashtra Border) ವಿಚಾರದ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿ ಇಂದು ವಿಚಾರಣೆ ಇಲ್ಲ. ಈ ಹಿಂದೆ ಪ್ರಕರಣ ವಿಚಾರಣೆ ಸಂದರ್ಭದಲ್ಲಿ ಪ್ರಕರಣವನ್ನ ನ.23 ಕ್ಕೆ ಮುಂದೂಡಲಾಗಿತ್ತು. ನ್ಯಾ. ಕೆ ಎಂ ಜೋಸೆಫ್ ನೇತೃತ್ವದ ಪೀಠದ ತ್ರಿಸದಸ್ಯ ಪೀಠದಿಂದ ಮುಂದೂಡಲಾಗಿತ್ತು.


ದಿನಾಂಕ ನಿಗದಿಯಾಗಿಲ್ಲ


ಆದರೆ ಇಂದು ನ್ಯಾ. ಕೆಎಂ ಜೋಸೆಫ್ ಅವರು ಬೇರೊಂದು ಪ್ರಕರಣದಲ್ಲಿ ಸಂವಿಧಾನಿಕ ಪೀಠದಲ್ಲಿ ಇರುವ ಹಿನ್ನೆಲೆ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಕೇಸ್ ವಿಚಾರಣೆ ನಿಗದಿಯಾಗಿಲ್ಲ. ಪ್ರಕರಣದ ವಿಚಾರಣೆ ಯಾವತ್ತು ಎಂಬ ಬಗ್ಗೆಯೂ ಪ್ರಸ್ತಾಪಿಸಿಲ್ಲ‌


ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಅಂತಿಮ ಘಟಕ್ಕೆ ಬಂದು ನಿಂತಿದೆ.  ಗಡಿ ವಿವಾದ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತಾ ಅಥವಾ ಇಲ್ಲವಾ ಎಂಬುದರ ಕುರಿತು ತೀರ್ಪು ಪ್ರಕಟವಾಗಬೇಕಿದೆ.


ನಿನ್ನೆ ಮಹತ್ವದ ಸಭೆ ನಡೆಸಿದ್ದ ಮಹಾರಾಷ್ಟ್ರ ಸರ್ಕಾರ


ಬುಧವಾರ ಗಡಿ ವಿವಾದದ ಸಂಬಂಧ ಮಹಾರಾಷ್ಟ್ರ ಸರ್ಕಾರ ಮಹತ್ವದ ಸಭೆ ನಡೆಸಿತ್ತು. ಮುಖ್ಯಮಂತ್ರಿ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಸೇರಿ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು. ಜತೆಗೆ ಇಬ್ಬರು ಸಚಿವರನ್ನು ಗಡಿ ಉಸ್ತುವಾರಿಗೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜೇ ದೇಸಾಯಿ ನೇಮಕ ಮಾಡಲಾಗಿದೆ.


ಸಿಎಂ ಬೊಮ್ಮಾಯಿ ಎಚ್ಚರಿಕೆ ಸಂದೇಶ


ಇತ್ತ ಸಿಎಂ ಬಸವರಾಜ್ ಬೊಮ್ಮಾಯಿ ಸಭೆ ನಡೆಸಿ ಕಾನೂನು ಕ್ರಮಗಳ ಗಂಭೀರ ಚರ್ಚೆ ನಡೆಸಿದ್ದಾರೆ. ಗಡಿ ವಿವಾದವನ್ನು ರಾಜಕೀಯ ಲಾಭಕ್ಕಾಗಿ ಮಹಾರಾಷ್ಟ್ರ ಬಳಕೆ ಮಾಡಿಕೊಳ್ಳುತ್ತಿದ್ದು, ನೆಲ ಜಲ ಭಾಷೆ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎನ್ನುವ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದ್ದಾರೆ.


ಇದನ್ನೂ ಓದಿ:  Doddaballapur: ಸಮಾಧಿ ಬಳಿ ಯುವತಿಯ ಫೋಟೋ ಇಟ್ಟು ವಶೀಕರಣ ಪೂಜೆ?


ಕೇಂದ್ರದಿಂದ ಎರಡು ಸಮಿತಿಗಳ ರಚನೆ


ಕೇಂದ್ರ ಸರ್ಕಾರ ರಚಿಸಿದ್ದ ಎರಡೂ ಸಮಿತಿಗಳ ವರದಿಯೂ ಕನ್ನಡಿಗರ ಪರ ಬಂದಿವೆ.  ಭಾಷಾವಾರು ಪ್ರಾಂತ್ಯ ರಚನೆಗಾಗಿ ಕೇಂದ್ರದಿಂದ 1953ರಲ್ಲಿ ಫಸಲ್ ಅಲಿ ನೇತೃತ್ವದ ಸಮಿತಿ ರಚನೆ ಮಾಡಲಾಗಿತ್ತು. 1955ರಲ್ಲಿ ಫಸಲ್ ಅಲಿ ಆಯೋಗದ ವರದಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಮುಂಬೈ ಪ್ರಾಂತ್ಯದಲ್ಲಿದ್ದ ಬೆಳಗಾವಿ ಸೇರಿ 865 ಗಡಿ ಪ್ರದೇಶಗಳು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಲಾಗಿತ್ತು.


ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ


ಫಸಲ್ ಅಲಿ ಆಯೋಗದ ವರದಿಗೆ ಮಹಾರಾಷ್ಟ್ರ ಆಕ್ಷೇಪ ವ್ಯಕ್ತಪಡಿಸಿ ಒಂದು ದಶಕಗಳ ಕಾಲ ಹೋರಾಟ ನಡಸುತ್ತಿದೆ. ಫಸಲ್ ಅಲಿ ಆಯೋಗದ  ಹಾಗೂ ಮಹಾಜನ್ ಆಯೋಗ ಎರಡರಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಲಾಗಿದೆ.


ಇದನ್ನೂ ಓದಿ:  Bengaluru Roads: ವಿನೂತನ ಟೆಕ್ನಾಲಜಿ ಬಳಸಿ ಬೆಂಗಳೂರಿನಲ್ಲಿ ರಸ್ತೆ ನಿರ್ಮಾಣ


ಮಹಾಜನ್ ವರದಿಯನ್ನು ಕೇಂದ್ರ ಸರ್ಕಾರ ಒಪ್ಪಿಲ್ಲ, ತಿರಸ್ಕಾರವು ಮಾಡಿಲ್ಲ. ಮಹಾಜನ್ ವರದಿ ವಿರುದ್ಧ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

Published by:Mahmadrafik K
First published: