12 ಕಿ.ಮೀ ರಸ್ತೆಗೆ 450 ಕೋಟಿ ಖರ್ಚು: ಚಂದ್ರಯಾನಕ್ಕಿಂತಲೂ ಹೆಚ್ಚು ದುಡ್ಡು ಸುರಿಯುತ್ತಿದೆ ರಾಜ್ಯ ಸರ್ಕಾರ


Updated:February 13, 2018, 9:20 PM IST
12 ಕಿ.ಮೀ ರಸ್ತೆಗೆ 450 ಕೋಟಿ ಖರ್ಚು: ಚಂದ್ರಯಾನಕ್ಕಿಂತಲೂ ಹೆಚ್ಚು ದುಡ್ಡು ಸುರಿಯುತ್ತಿದೆ ರಾಜ್ಯ ಸರ್ಕಾರ

Updated: February 13, 2018, 9:20 PM IST
ಥಾಮಸ್ ಪುಷ್ಪರಾಜ್, ನ್ಯೂಸ್ 18 ಕನ್ನಡ
:
ಬೆಂಗಳೂರು(ಫೆ.13): ನಮ್ಮ ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನಕ್ಕೆ ಖರ್ಚಾಗಿರುವುದ 450 ಕೋಟಿ. ಆದರೆ, ಇದಕ್ಕಿಂತ ಹೆಚ್ಚಿನ ಹಣವನ್ನು ಸಿದ್ದರಾಮಯ್ಯ ಸರ್ಕಾರ ಬರೀ 12 ಕಿಲೋಮೀಟರ್ ರಸ್ತೆಗೆ ಖರ್ಚು ಮಾಡಲು ಹೊರಟಿದೆ. ಸರ್ಕಾರದ ಈ ನಿರ್ಧಾರ ಸಾರ್ವಜನಿಕವಾಗಿ ಟೀಕೆಗೆ ಗುರಿಯಾಗುತ್ತಿದೆ.

ಹೌದು, ನಮ್ಮ ಬಿಡಿಎ ಪ್ರತಿ ಕಿಲೋಮೀಟರ್ ರಸ್ತೆಗೆ ಖರ್ಚು ಮಾಡುವುದಕ್ಕೆ ಹೊರಟಿರುವ ಮೊತ್ತ ಬರೋಬ್ಬರಿ 39 ಕೋಟಿ. ಬಿಡಿಎನೇ ಸ್ಟಾರ್ ಕನ್​ಸ್ಟ್ರಕ್ಷನ್ ಎನ್ನುವ ಸಂಸ್ಥೆಗೆ ಕೊಟ್ಟಿರುವ ಟೆಂಡರ್​ ದಾಖಲೆ ಸರ್ಕಾರದ ಮೂರ್ಖತನವನ್ನು ಸಾರಿ ಹೇಳುತ್ತಿದೆ. ಪ್ರತೀ ಕಿಲೋಮೀಟರ್ ಗೆ 39 ಕೋಟಿಯಂತೆ 12 ಕಿಲೋಮೀಟರ್​ಗೆ 468 ಕೋಟಿ ಖರ್ಚು ಮಾಡುತ್ತಿದೆ.ಕೆಂಪೇಗೌಡ ಲೇಔಟ್ ಪ್ರಾಜೆಕ್ಟ್​ನ ಭಾಗವಾಗಿ ಈ ಕಾಮಗಾರಿಯ ಗುತ್ತಿಗೆಯನ್ನು ಸ್ಟಾರ್ ಕಂಪೆನಿಗೆ ವಹಿಸಿಕೊಡಲಾಗುತ್ತಿದೆ.

ಒಂದು ಕಿಲೋಮೀಟರ್ ಡಾಂಬರ್ ರಸ್ತೆಗೆ ಹೆಚ್ಚೆಂದ್ರೆ ಖರ್ಚಾಗುವುದು 1 ಕೋಟಿ. ಇನ್ನೂ ಕಾಂಕ್ರಿಟ್ ರಸ್ತೆಗೆ ಪ್ರತಿ ಕಿಲೋಮೀಟರ್​ಗೆ 2ರಿಂದ ಮೂರುವರೆ ಕೋಟಿಯಾಗುತ್ತೆ. ಇವತ್ತಿನ ದಿನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಟೆಂಡರ್ ಶ್ಯೂರ್ ರಸ್ತೆಗೆ ಪ್ರತಿ ಕಿಲೋಮೀಟರ್​ಗೆ 5 ಕೋಟಿಯಾದರೆ ವೈಟ್ ಟಾಪಿಂಗ್ ರಸ್ತೆಯ ಖರ್ಚಾಗೋದು ಕಿಲೋಮೀಟರ್​ಗೆ ಹೆಚ್ಚೆಂದ್ರೂ 10 ಕೋಟಿ.

ಹೀಗಿರುವಾಗ ಕೆಂಪೇಗೌಡ ಲೇಔಟ್​ನ ಪ್ರತಿ ಕಿಲೋಮೀಟರ್ ರಸ್ತೆಗೆ 39 ಕೋಟಿ ಖರ್ಚು ಮಾಡುತ್ತಿರುವುದು ಯಾರ ಉದ್ದಾರಕ್ಕೆ ಎನ್ನುವುದು ಈಗಿರುವ ಪ್ರಶ್ನೆ.

ಅಕ್ರಮದ ಶಂಕೆಗೆ ಗುರಿಯಾಗಿರುವ ಯೋಜನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಅಕ್ರಮಕ್ಕೆ ಯಾವುದೇ ಕಾರಣಕ್ಕೂ ಆಸ್ಪದ ಕೊಡಲ್ಲ. ಈ ಬಗ್ಗೆ ಮರುಪರಿಶೀಲನೆ ನಡೆಸುತ್ತೇವೆ ಎಂದಿದ್ದಾರೆ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ