ಬೆಂಗಳೂರು ಕೆರೆಗಳ ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲ; ಹಸಿರು ನ್ಯಾಯಾಧಿಕರಣದ ಕ್ಷಮೆ ಕೋರಿದ ರಾಜ್ಯ ಸರ್ಕಾರ

ನವೆಂಬರ್​ನಲ್ಲಿ ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡಿದ್ದ ಹಸಿರು ನ್ಯಾಯಾಧಿಕರಣ ಬೆಂಗಳೂರಿನ ಕೆರೆಗಳ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾ? ಅವರನ್ನೇಕೆ ಜೈಲಿಗೆ ಹಾಕಬಾರದು? ಎಂದು ತರಾಟೆ ತೆಗೆದುಕೊಂಡಿತ್ತು.

news18-kannada
Updated:December 2, 2019, 1:23 PM IST
ಬೆಂಗಳೂರು ಕೆರೆಗಳ ಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲ; ಹಸಿರು ನ್ಯಾಯಾಧಿಕರಣದ ಕ್ಷಮೆ ಕೋರಿದ ರಾಜ್ಯ ಸರ್ಕಾರ
ಎನ್​ಜಿಟಿ
  • Share this:
ನವದೆಹಲಿ (ಡಿ. 2): ಬೆಳ್ಳಂದೂರು, ವರ್ತೂರು, ಕೆರೆ ಮಾಲಿನ್ಯ ಪ್ರಕರಣದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) ಮುಖ್ಯ ಪೀಠದಲ್ಲಿ ಇಂದು ವಿಚಾರಣೆ ನಡೆಯುತ್ತಿದೆ. ಬೆಂಗಳೂರಿನ ಕೆರೆಗಳ ಮಾಲಿನ್ಯವನ್ನು ತಡೆಗಟ್ಟುವ ಸಂಬಂಧ ಎನ್​ಜಿಟಿ ಆದೇಶವನ್ನು ಪಾಲನೆ ಮಾಡದಿರುವುದಕ್ಕೆ ರಾಜ್ಯ ಸರ್ಕಾರ ಕ್ಷಮೆ ಯಾಚಿಸಿದೆ.

ಹಸಿರು ನ್ಯಾಯಾಧಿಕರಣದ ಆದೇಶವನ್ನು ಪಾಲನೆ ಮಾಡದಿರಲು ಕಾರಣವೇನು? ಎಂಬ ಪ್ರಶ್ನೆಗೆ ಇದಕ್ಕೆ ಬೆಂಗಳೂರು ಜಲಮಂಡಳಿ (ಬಿಡಬ್ಲುಎಸ್​ಎಸ್​​ಬಿ) ಕಾರಣ ಎಂದು ವಕೀಲರು ತಿಳಿಸಿದ್ದಾರೆ. ಸೂಕ್ತ ರೀತಿಯಲ್ಲಿ ಎಸ್​ಟಿಪಿ ಸ್ಥಾಪನೆಯಾಗಿಲ್ಲ. ಕಾಲಮಿತಿಯಲ್ಲಿ ಚಟುವಟಿಕೆಗಳು ನಡೆಯುತ್ತಿಲ್ಲ ಎಂದು ಹಿರಿಯ ವಕೀಲ ರಾಜ್ ಪಂಜ್ವಾನಿ ಅವರಿಂದ ಸಮಿತಿಯ ಪರವಾಗಿ ನ್ಯಾಯಾಧಿಕರಣಕ್ಕೆ ಮಾಹಿತಿ ನೀಡಲಾಯಿತು. 2019ರ ಜೂನ್ 30ರವರೆಗೆ ಗಡುವು ನೀಡಲಾಗಿತ್ತು. ಆ ಗಡುವನ್ನು ಮೀರಲು ಕಾರಣವೇ ಇರಲಿಲ್ಲ. ಆದರೂ ತಡ ಮಾಡಿದ್ದಾರೆ ಎಂದು ರಾಜ್ಯದ ಪರ ವಕೀಲರು ವಾದ ಮಂಡನೆ ಮಾಡಿದ್ದಾರೆ.

ಎಸ್​ಟಿಪಿಗಳು ಸೂಕ್ತವಾಗಿ ಕಾರ್ಯ ನಿರ್ವಹಿಸಬೇಕು ಎಂದು ನ್ಯಾ. ಸಂತೋಷ್ ಹೆಗ್ಡೆ ವರದಿ ಹೇಳಿದೆ. ಜೂನ್ 30ರೊಳಗೆ ಎಲ್ಲ ಬಗೆಹರಿಯಬೇಕಾಗಿತ್ತು. ಆದರೆ, ನೀವೀಗ ಎಚ್ಚರಗೊಂಡಿದ್ದೀರಿ ಎಂದು ನ್ಯಾಯಾಧಿಕರಣ ತರಾಟೆ ತೆಗೆದುಕೊಂಡಿದೆ.

ಅದಕ್ಕೆ ಪ್ರತಿಯಾಗಿ ಉತ್ತರಿಸಿ ರಾಜ್ಯ ಸರ್ಕಾರ ಪರ ವಕೀಲರು, ನಾವು ವಿಳಂಬದ ಹೊಣೆ ಹೊರುತ್ತೇವೆ. ಆದರೆ ರಾತ್ರಿ ಬೆಳಗಾಗುವುದರೊಳಗೆ ಎಲ್ಲವನ್ನೂ ಮಾಡಿ ಮುಗಿಸಲು ಸಾಧ್ಯವಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ಬೆಳ್ಳಂದೂರು ಕೆರೆ ಮಾಲಿನ್ಯ; ಬಿಬಿಎಂಪಿಗೆ 25 ಕೋಟಿ, ಸರ್ಕಾರಕ್ಕೆ 50 ಕೋಟಿ ರೂ. ದಂಡ!

ಎಸ್​ಟಿಪಿ ನಿರ್ಮಾಣದ ಬಗ್ಗೆ ಯಾಕೆ ವಿಳಂಬ ಮಾಡುತ್ತಿದ್ದೀರಿ? ಕಳೆದ 2 ವರ್ಷಗಳಿಂದ ಇದನ್ನೇ ಹೇಳುತ್ತಿದ್ದೀರಿ. ಎಸ್​ಟಿಪಿ ರಚನೆಗೆ ಕಾಲ ಮಿತಿ ವಿಸ್ತರಿಸುವ ಅಧಿಕಾರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇದೆಯೇ? ಎಂದು ನ್ಯಾಯಾಧಿಕರಣ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದೆ.

ಎಸ್​ಟಿಪಿ ಸ್ಥಾಪಿಸದ ಕೆಲವರ ಮೇಲೆ ಕ್ರಿಮಿನಲ್ ಕೇಸ್ ಹಾಕಿದ್ದೇವೆ ಎಂದ ರಾಜ್ಯದ ಪರ ವಕೀಲರು, 6 ತಿಂಗಳೊಳಗೆ ನಾವು ಎಸ್​ಟಿಪಿ ಬಗೆಗಿನ ನಿಮ್ಮ ಆದೇಶವನ್ನು ಸಂಪೂರ್ಣವಾಗಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ.ಕೊನೆಗೆ ಈ ಕುರಿತು ವಿಚಾರಣೆಯನ್ನು ಹಸಿರು ನ್ಯಾಯಾಧಿಕರಣ ಡಿಸೆಂಬರ್ 11ಕ್ಕೆ ಮುಂದೂಡಿತು. ವಿಚಾರಣೆ ವೇಳೆ ಸಹಾಯಕ ಮುಖ್ಯ ಕಾರ್ಯದರ್ಶಿ (ನಗರಾಭಿವೃದ್ಧಿ) ರಮಣ ರೆಡ್ಡಿ, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಕೊಳಚೆ ನಿರ್ವಹಣಾ ಮಂಡಳಿಯ ಮುಖ್ಯಸ್ಥ-ತುಷಾರ್ ಗಿರಿನಾಥ್ ಹಾಜರಿದ್ದರು.

4 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ; ವಿಕೃತ ಕಾಮಿಗೆ ಥಳಿಸಿ, ಊರ ಬೀದಿಯಲ್ಲಿ ಬೆತ್ತಲೆ ಮೆರವಣಿಗೆ

ನವೆಂಬರ್​ನಲ್ಲಿ ಈ ಬಗ್ಗೆ ವಿಚಾರಣೆ ಕೈಗೆತ್ತಿಕೊಂಡಿದ್ದ ಹಸಿರು ನ್ಯಾಯಾಧಿಕರಣ ಬೆಂಗಳೂರಿನ ಕೆರೆಗಳ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾ? ಅವರನ್ನೇಕೆ ಜೈಲಿಗೆ ಹಾಕಬಾರದು? ಎಂದು ತರಾಟೆ ತೆಗೆದುಕೊಂಡಿತ್ತು. ಹಿಂದೆ ಸಹ ಬೆಳ್ಳಂದೂರು ಹಾಗೂ ವರ್ತೂರು ಕೆರೆ ಶುಚಿ ಮಾಡಲು 500 ಕೋಟಿ ರೂಪಾಯಿಯನ್ನು ಎಸ್ಕೋದಲ್ಲಿ ಠೇವಣಿ ಇಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್​ಜಿಟಿ) ಕರ್ನಾಟಕ ಸರ್ಕಾರಕ್ಕೆ ಸೂಚಿಸಿತ್ತು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಸರ್ಕಾರಕ್ಕೆ ಸೂಚನೆ ನೀಡಿ, 75 ಕೋಟಿ ರೂ ದಂಡ ವಿಧಿಸಿತ್ತು. ಈ ಸಂಬಂಧ ಕರ್ನಾಟಕ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ