Social Media Hero Officers- ಸೋಷಿಯಲ್ ಮೀಡಿಯಾ ಶೂರ ಅಧಿಕಾರಿಗಳಿಗೆ ರಾಜ್ಯ ಸರ್ಕಾರದಿಂದ ಮೂಗುದಾರ

ಸರ್ಕಾರದ ಉನ್ನತ ಸ್ತರದ ಅಧಿಕಾರಿಗಳು ತಮ್ಮನ್ನು ತಾವು ವೈಭವೀಕರಿಸಿಕೊಳ್ಳಲು ಸೋಷಿಯಲ್ ಮೀಡಿಯಾವನ್ನು ಬಳಸುತ್ತಿರುವ ನಿದರ್ಶನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಂಥ ಅಧಿಕಾರಿಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಇತ್ತೀಚೆಗೆ ಕೆಲ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮನ್ನು ತಾವೇ ವೈಭವೀಕರಣ ಮಾಡಿಕೊಳ್ಳುತ್ತಿರುವ ಖಯಾಲಿ ಹೆಚ್ಚಾಗುತ್ತಿದೆ. ಅದರ ಮೂಲಕ ತಾವೇ ಸಾಧನೆ ಮಾಡುತ್ತಿದ್ದೇವೆ ಎಂದು ಹೇಳಿ ಜನರ ಮೆಚ್ಚುಗೆ ಗಳಿಸಲು ಯತ್ನಿಸುವವರ ಸಂಖ್ಯೆ ಬೆಳೆಯುತ್ತಿದೆ. ಇಂತಹ ಅಧಿಕಾರಿಗಳಿಗೆ ಮೂಗುದಾರ ಹಾಕಲು ಸರ್ಕಾರ ಮುಂದಾಗಿದೆ. ಅನಗತ್ಯ ವಿಷಯಗಳಿಗೆ ಮೀಡಿಯಾ ಅಥವಾ ಸೋಷಿಯಲ್ ಮೀಡಿಯಲು ಹೋಗುವುದನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಈ ಬಗ್ಗೆ ಸರ್ಕಾರ ಅಧಿಕೃತ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲಿ ಏನಿದೆ: ಸರ್ಕಾರಿ ಅಧಿಕಾರಿಗಳು ರಾಜ್ಯ, ಕೇಂದ್ರ ಸರ್ಕಾರದ ನೀತಿಯ ಬಗ್ಗೆ ಟೀಕೆ ಮಾಡುವಂತಿಲ್ಲ. ಆಡಳಿತ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಯಾವುದೇ ಸಂಗತಿಗಳ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸುವಂತಿಲ್ಲ. ಸುತ್ತೋಲೆ ಹೊರಿಡಿಸಿದ ರಾಜ್ಯ ಸರ್ಕಾರ ಎಲ್ಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಒಂದು ವೇಳೆ‌ ಮಾಧ್ಯಮಗಳ ಮುಂದೆ ಹಾಜರಾಗಾಬೇಕಾದರೆ ನಿಯಮಿಸಲಾದ ಪ್ರಾಧಿಕಾರದ ಪೂರ್ವಾನುಮೋದನೆ ಕಡ್ಡಾಯ ಪಡೆಯಲೇಬೇಕು. ಯಾವುದೇ ಅಧಿಕೃತ ಕಡತದ ಸಮರ್ಥನೆಗಾಗಿ ಯಾವುದೇ ನ್ಯಾಯಾಲಯಕ್ಕೆ ಅಥವಾ ಪತ್ರಿಕೆಗೆ ಮೊರೆ ಹೋಗತಕ್ಕದಲ್ಲ. ಅನಪೇಕ್ಷಿತ ವೇದಿಕೆಗಳಲ್ಲಿ ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಬಾರದು. ಸರ್ಕಾರದ ವರ್ಚಸ್ಸಿಗೆ ಧಕ್ಕೆ ತರಬಾರದು. ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೃತ್ಯಗಳಲ್ಲಿ  ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಸರ್ಕಾರಿ ಯೋಜನೆಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅಧಿಕೃತ ಮಾಹಿತಿ ಪ್ರಸಾರಕ್ಕೂ ನಿರ್ಬಂಧ ಹೇರಲಾಗಿದೆ. ಅಗತ್ಯವಿದ್ದಲ್ಲಿ ಮಾತ್ರ ಅಧಿಕಾರಿಗಳು ಮಾಧ್ಯಮಗಳನ್ನು ಬಳಸಬಹುದಾಗಿದೆ. ಆದರೆ, ಕುಂದು ಕೊರತೆಗಳನ್ನು ವ್ಯಕ್ತಪಡಿಸಲು ಮಾಧ್ಯಮಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: Son Killed by Father: 2 ವರ್ಷದ ಮಗನನ್ನೇ ಕೊಂದು ನಾಟಕವಾಡಿದ ಪಾಪಿ ತಂದೆ ಸಿಕ್ಕಿಬಿದ್ದಿದ್ದೇ ರೋಚಕ!

ಬೇಕಾಬಿಟ್ಟಿ ಸೋಷಿಯಲ್ ಮೀಡಿಯಾ ಬಳಕೆ ಬೇಡ:

ಸೋಶಿಯಲ್ ಮೀಡಿಯಾಗಳು ಕೆಲವೊಮ್ಮೆ ಅಧಿಕಾರಿಗಳ ಸ್ವೇಚ್ಛಾಚಾರಕ್ಕೂ ಬಳಕೆಯಾದ ಉದಾಹರಣೆ ಇದೆ. ಕೆಲ ಐಪಿಎಸ್ ಅಧಿಕಾರಿಗಳ ಟ್ವಿಟರ್ ಅಕೌಂಟ್‌ಗಳನ್ನು ಬ್ಯಾನ್ ಮಾಡಿರುವ ಉದಾಹರಣೆಯೂ ಇದೆ. ಕೆಲ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳು ತಮ್ಮ Facebook, Instagram, Twitter ಅಕೌಂಟ್‌ಗಳಲ್ಲಿ fans club ಹೊಂದಿದ್ದಾರೆ. ಅವರ ಇಲಾಖೆ ಕೆಲಸಗಳಿಗಿಂತ ವೈಯಕ್ತಿಕ ವಿಜೃಂಭಣೆಗಳೇ ಜಾಸ್ತಿಯಾಗುತ್ತಿವೆ. ಅವರ ಬಾಲ್ಯ, ಸಾಧನೆ, ಭಾಷಣದ ತುಣುಕುಗಳು ಹೆಚ್ಚಾಗಿ ಕಾಣಿಸುತ್ತಿವೆ. ಕೆಲವು ವಿಡಿಯೋ ತುಣುಕುಗಳು ಯುವಕರಿಗೆ ಪ್ರೇರಣೆಯಾಗಿವೆ. ಆದರೆ ಅದುವೇ ಹೆಚ್ಚಾದರೆ ಪ್ರಚಾರದ ಗೀಳಿಗೆ ಸಿಲುಕುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರಚಾರದ ಹಿಂದೆ ಬಿದ್ದವರು ಹೆಚ್ಚಿನ ಜನಪರ ಕಾರ್ಯಗಳಲ್ಲಿ ತೊಡಗುವ ಸಾಧ್ಯತೆ ಕಡಿಮೆ ಎಂದು ಸರ್ಕಾರ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ. ಹೀಗಾಗಿ ಇಂತಹ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Rave Party: ರೆಸಾರ್ಟ್​​​ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ದಾಳಿ; 37 ಮಂದಿ ವಶಕ್ಕೆ

ಇಲಾಖೆ ಸಾಧನೆ ಮುಖ್ಯ:

ಸರ್ಕಾರಿ ಉದ್ಯೋಗ, ಅದಕ್ಕೆ ಸರ್ಕಾರಿ ಸಂಬಳ ಪಡೆಯುತ್ತಾರೆ. ಆದರೂ ಇಲಾಖೆ ಕಾರ್ಯಗಳಿಗೆ ವೈಯಕ್ತಿಕ ಪ್ರಶಂಸೆ ಪಡೆಯುತ್ತಾರೆ. ಹೀಗಾಗಿ ಇಲಾಖೆಯ ಸಾಧನೆಗಳನ್ನು ಅಧಿಕಾರಿಗಳ ವೈಯಕ್ತಿಕ ಸಾಧನೆಗಳೆಂಬಂತೆ ಪ್ರದರ್ಶಿಸಿಸುವುದನ್ನುಕಡ್ಡಾಯವಾಗಿ ನಿಷೇಧ ಮಾಡಲಾಗಿದೆ. ಪ್ರಸಾರ ಮಾಡಬೇಕಾದ ಸಂದರ್ಭದಲ್ಲಿ ಅಧಿಕಾರಿಗಳು ಸೋಷಿಯಲ್ ಮೀಡಿಯಾ ಬಳಸಬಹುದು. ವೈಯಕ್ತಿಕ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸಬಾರದು. ಸರ್ಕಾರದ ಆಡಳಿತ ಹೆಸರಿನಲ್ಲಿ ತೆರೆಯಲಾದ ಖಾತೆಗಳನ್ನು ಮಾತ್ರ ಬಳಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಮಾಧ್ಯಮಗಳ ಮುಂದೆ ಬಡಾಯಿ ಕೊಚ್ಚಿಕೊಳ್ಳುವ ಅಧಿಕಾರಿಗಳಿಗೆ ಈ ಸುತ್ತೋಲೆ ಶಾಕ್ ನೀಡಿದೆ.

ವರದಿ: ದಶರಥ್ ಸಾವೂರು
Published by:Vijayasarthy SN
First published: