• Home
  • »
  • News
  • »
  • state
  • »
  • IAS Officer J Manjunath: ಲಂಚ ಪಡೆದ ಆರೋಪದಡಿ ಅರೆಸ್ಟ್ ಆಗಿದ್ದ ಐಎಎಸ್ ಅಧಿಕಾರಿ ಮರುನೇಮಕ

IAS Officer J Manjunath: ಲಂಚ ಪಡೆದ ಆರೋಪದಡಿ ಅರೆಸ್ಟ್ ಆಗಿದ್ದ ಐಎಎಸ್ ಅಧಿಕಾರಿ ಮರುನೇಮಕ

ಜೆ ಮಂಜುನಾಥ್

ಜೆ ಮಂಜುನಾಥ್

ಬಂಧನಕ್ಕೊಳಗಾದ ಸಂದರ್ಭದಲ್ಲಿ ಜೆ.ಮಂಜುನಾಥ್, ಬೆಂಗಳೂರು ನಗರದ (Bengaluru City DC) ಜಿಲ್ಲಾಧಿಕಾರಿಗಳಾಗಿದ್ದರು. ಭ್ರಷ್ಟಾಚಾರ ನಿಗ್ರಹ ದಳ (ACB) ಲಂಚ ಪಡೆದ ಆರೋಪದಡಿ ಮಂಜುನಾಥ್ ಅವರನ್ನು ಬಂಧಿಸಿತ್ತು.

  • Share this:

ಲಂಚ (Bribe Allegation) ಪಡೆದ ಆರೋಪದಡಿ ಇದೇ ವರ್ಷ ಜುಲೈನಲ್ಲಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಜೆ.ಮಂಜುನಾಥ್ (IAS Officer J Manjunath) ಅವರನ್ನು ರಾಜ್ಯ ಸರ್ಕಾರ (Karnataka Government) ಜಂಟಿ ಕಾರ್ಯದರ್ಶಿಯಾಗಿ ಮರು ನೇಮಕಗೊಳಿಸಿ ಆದೇಶ ಹೊರಡಿಸಿದೆ. ಸೋಮವಾರ ರಾಜ್ಯ ಸರ್ಕಾರ ವಿಶೇಷ ಅಧಿಕಾರಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪದನಿಮಿತ್ತ ಜಂಟಿ ಕಾರ್ಯದರ್ಶಿಯಾಗಿ ನೇಮಿಸಿದೆ. ಬಂಧನಕ್ಕೊಳಗಾದ ಸಂದರ್ಭದಲ್ಲಿ ಜೆ.ಮಂಜುನಾಥ್, ಬೆಂಗಳೂರು ನಗರದ (Bengaluru City DC) ಜಿಲ್ಲಾಧಿಕಾರಿಗಳಾಗಿದ್ದರು. ಭ್ರಷ್ಟಾಚಾರ ನಿಗ್ರಹ ದಳ (ACB) ಲಂಚ ಪಡೆದ ಆರೋಪದಡಿ ಮಂಜುನಾಥ್ ಅವರನ್ನು ಬಂಧಿಸಿತ್ತು.


ಏನಿದು ಪ್ರಕರಣ?


2021 ಮೇನಲ್ಲಿ ಎಸಿಬಿ ಅಧಿಕಾರಿಗಳು ಉಪತಹಶೀಲ್ದಾರ್ ಮಹೇಶ್ ಪಿಎಸ್​ ಮತ್ತು ಗುತ್ತಿಗೆ ನೌಕರ ಚೇತನ್ ಎಂಬವರನ್ನು ಬಂಧಿಸಿತ್ತು. ಬಂಧಿತ ಇಬ್ಬರು ಬೆಂಗಳೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಭೂ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಿಂದ ಅನುಕೂಲರ ಆದೇಶ ಪಡೆಯಲು ಐದು ಲಕ್ಷ ರೂಪಾಯಿ ಹಣ ಪಡೆಯುತ್ತಿರುವ ಸಂದರ್ಭದಲ್ಲಿ ಎಸಿಬಿ ಬಲೆಗೆ ಬಿದ್ದಿದ್ದರು.


ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ (Karnataka highcourt)​​, ಜಿಲ್ಲಾಧಿಕಾರಿಗಳನ್ನು ಯಾಕೆ ವಿಚಾರಣೆಗೆ ಒಳಪಡಿಸಿಲ್ಲ ಎಂದು ಎಸಿಬಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಹೈಕೋರ್ಟ್​ ತರಾಟೆ ಬಳಿಕ ಜೆ.ಮಂಜುನಾಥ್ ಅವರನ್ನು ಎಸಿಬಿ ಬಂಧಿಸಿತ್ತು. ಬಂಧನ ಬಳಿಕ ಮಂಜುನಾಥ್ ಅವರನ್ನು ಅಮಾನತುಗೊಳಿಸಲಾಗಿತ್ತು.


ಚಾರ್ಜ್​ಶೀಟ್​ ಸಲ್ಲಿಸಲು ವಿಫಲವಾದ ಎಸಿಬಿ


ಇನ್ನು ಆರೋಪಿಯನ್ನು ಬಂಧಿಸಿದ ಬಳಿಕ ಎಸಿಬಿ ನ್ಯಾಯಾಲಯಕ್ಕೆ ಆರವತ್ತು ದಿನಗಳಲ್ಲಿ ಆರೋಪಪಟ್ಟಿ  ಸಲ್ಲಿಸಲು ವಿಫಲವಾಗಿತ್ತು. ಈ ಹಿನ್ನೆಲೆ ಸೆಪ್ಟೆಂಬರ್‌ನಲ್ಲಿ ವಿಶೇಷ ನ್ಯಾಯಾಲಯ ಮಂಜುನಾಥ್ ಅವರಿಗೆ ಷರತ್ತು ಡೀಫಾಲ್ಟ್ ಜಾಮೀನು ಮಂಜೂರು ಮಾಡಿತ್ತು. ನ್ಯಾಯಾಲಯಕ್ಕೆ ಮಾಹಿತಿ ನೀಡದೇ ದೇಶ ತೊರೆಯುವಂತಿಲ್ಲ ಎಂದು ನ್ಯಾಯಾಲಯ ಜಾಮೀನು ಆದೇಶದಲ್ಲಿ ಉಲ್ಲೇಖಿಸಿದೆ.


₹7.6 ಲಕ್ಷ ಕೋಟಿ ಹೂಡಿಕೆ


ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಹಮ್ಮಿಕೊಂಡಿರುವ 3 ದಿನಗಳ ಜಾಗತಿಕ ಹೂಡಿಕೆದಾರರ ಸಮಾವೇಶ ನಿರೀಕ್ಷೆಗೂ ಮೀರಿ ಫಲ ನೀಡಿದ್ದು, ಮೊದಲ ದಿನವೇ ಬರೋಬ್ಬರಿ 7.6 ಲಕ್ಷ ಕೋಟಿ ರು.ಬಂಡವಾಳ ಹೂಡಿಕೆಯ ಒಪ್ಪಂದಗಳಿಗೆ ಸಹಿ ಬಿದ್ದಿದೆ.


ಇದನ್ನೂ ಓದಿ:  Kalaburagi: ರೇಪ್​ ಆಂಡ್ ಮರ್ಡರ್​ ಕೇಸ್; ಸದಾ ಒಂಟಿಯಾಗಿಯೇ ಇರುತ್ತಿದ್ದ ಆರೋಪಿ ಬಾಲಕ


ಈ ಮೂಲಕ 5 ಲಕ್ಷ ಕೋಟಿ ರೂಪಾಯಿ ಹೂಡಿಕೆ ನಿರೀಕ್ಷಿಸಿದ್ದ ಐದನೇ ಜಾಗತಿಕ ಹೂಡಿಕೆದಾರರ ಸಮಾವೇಶವು ನಿರೀಕ್ಷೆಗಿಂತ ಹೆಚ್ಚು ಯಶಸ್ವಿ ಆಗಿದೆ. ಇನ್ನೆರಡು ದಿನದಲ್ಲಿ ಇನ್ನಷ್ಟು ಹೂಡಿಕೆ ನಿರೀಕಿಸಲಾಗಿದೆ. ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಿಮ್ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.


‘ಜಲ ಜೀವನ್ ಮಿಷನ್’ ದುರುಪಯೋಗ?


ಧಾರವಾಡದಲ್ಲಿ ಕೇಂದ್ರ ಸರ್ಕಾರ ಜಲ ಜೀವನ್ ಮಿಷನ್ ಯೋಜನೆ ದುರುಪಯೋಗ ಮಾಡಿಕೊಳ್ಳಲಾಗ್ತಿದೆ. ಮನೆಬಾಗಿಲಿಗೆ ಕುಡಿಯೋ ನೀರು, ಮನೆಗೊಂದು ನಳ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗ್ತಿದೆ. ಆದ್ರೆ ನವಲಗುಂದ ಪಟ್ಟಣದ ಹೊರವಲಯದಲ್ಲಿ ಎನ್ಎ ಲೇಔಟ್ ನಿರ್ಮಾಣ ಮಾಡಲಾಗಿದ್ದು, ಇಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪೈಪ್ ಲೈನ್ ಅಳವಡಿಕೆ ಮಾಡಲಾಗಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೇ ಜೆಜೆಎಂ ಯೋಜನೆಯ ಅಕ್ರಮದಲ್ಲಿ ಅಧಿಕಾರಿಗಳು ಶಾಮಿಲಾಗಿದ್ದಾರೆ. ಈ ಕುರಿತು ಸೂಕ್ತ ತನಿಖೆ ಆಗಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.


ಇದನ್ನೂ ಓದಿ:  Srujan-Arun: ಸೃಜನ್ ಲೋಕೇಶ್ ಹಾಗೂ ಸಚಿವರ ಪುತ್ರನ ನಡುವೆ ಫೈಟ್​ ನಡೆದಿದ್ದು ನಿಜನಾ? ಅರುಣ್ ಸೋಮಣ್ಣ ಹೇಳಿದ್ದೇನು?


BMTC ಡಿಕ್ಕಿ, ಬೈಕ್ ಸವಾರ ಸಾವು


ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್, ಬೈಕ್​ಗೆ ಡಿಕ್ಕಿ ಹೊಡೆದು ಬೈಕ್ ಸವಾರನೊಬ್ಬ ಮೃತಪಟ್ಟಿದ್ದಾನೆ. ಕಾಮಾಕ್ಷಿಪಾಳ್ಯ ಬಳಿಯ ಸುಮನಹಳ್ಳಿ ಬ್ರಿಡ್ಜ್ ಬಳಿ ಘಟನೆ ನಡೆದಿದ್ದು, ಪ್ರಮೋದ್ ಮೃತ ಯುವಕ. ಸುಮನಹಳ್ಳಿಯಿಂದ ಲಗ್ಗೆರೆ ಕಡೆ ಚಲಿಸುತ್ತಿದ್ದ ಬಸ್, ಬೈಕ್​ಗೆ ಡಿಕ್ಕಿ ಹೊಡೆದು ದುರಂತ ಸಂಭವಿಸಿದೆ. ಇನ್ನು ಬಸ್ ಚಾಲಕನಿಗೆ ಸಾರ್ವಜನಿಕರು ಹಲ್ಲೆ ಮಾಡಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹಕನನ್ನ ವಶಕ್ಕೆ ಪಡೆದಿದ್ದಾರೆ.

Published by:Mahmadrafik K
First published: