ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮುಂದಾಗಿರುವುದೇಕೆ..? ಇಲ್ಲಿದೆ ರಾಜಕೀಯ ಕಾರಣಗಳ ಕಂಪ್ಲೀಟ್ ರಿಪೋರ್ಟ್


Updated:March 14, 2018, 12:45 AM IST
ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮುಂದಾಗಿರುವುದೇಕೆ..? ಇಲ್ಲಿದೆ ರಾಜಕೀಯ ಕಾರಣಗಳ ಕಂಪ್ಲೀಟ್ ರಿಪೋರ್ಟ್
ಸಿಎಂ ಸಿದ್ದರಾಮಯ್ಯ

Updated: March 14, 2018, 12:45 AM IST
- ಚಿದಾನಂದ ಪಟೇಲ್​,  ನ್ಯೂಸ್​ 18 ಕನ್ನಡ

ಬೆಂಗಳೂರು(ಮಾ.13): ಒಂದು ವರ್ಷದಿಂದ ಹಗ್ಗಜಗ್ಗಾಟದಲ್ಲಿರುವ ಪ್ರತ್ಯೇಕ ಲಿಂಗಾಯತ ಧರ್ಮದ ದಾರಿ ಯಾವುದು ಎನ್ನುವುದಕ್ಕೆ ಇಂದೇ ಉತ್ತರ ಸಿಗಲಿದೆ. ಬಿಜೆಪಿಯನ್ನ ಶತಾಯಗತಾಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ದರಾಮಯ್ಯ ಸರ್ಕಾರ ಜಿದ್ದಾಜಿದ್ದಿಗೆ ಬಿದ್ದಿದೆ. ಮೂಲಗಳ ಪ್ರಕಾರ ಇಂದೇ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್​ ದಾಸ್​ ನೇತೃತ್ವದ ತಜ್ಞರ ಸಮಿತಿ ವರದಿಗೆ ಅಂಕಿತ ಹಾಕಿ ಕೇಂದ್ರಕ್ಕೆ ನೀಡುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ರಾಜಕೀಯ ಕಾರಣಗಳು ಇವೆ.

ಕಾಂಗ್ರೆಸ್​ಗೆ ಏನು ಲಾಭ..?

- ಲಿಂಗಾಯತ ಪ್ರತ್ಯೇಕ ಧರ್ಮ ವರದಿಯನ್ನ ಕೇಂದ್ರಕ್ಕೆ ಇಂದೇ ಕಳುಹಿಸಬಹುದು

- ಆಗ ಕೇಂದ್ರ ಒಪ್ಪಿಗೆ ಕೊಟ್ರೆ ನಮ್ಮದೇ ಕೆಲಸ ಎಂದು ಕಾಂಗ್ರೆಸ್​ ಪ್ರಚಾರ ಮಾಡಬಹುದು.
- ಒಂದು ವೇಳೆ ಕೇಂದ್ರ ಒಪ್ಪದಿದ್ದರೆ ಬಿಜೆಪಿ ವಿರುದ್ಧ ​ ಪ್ರಚಾರಕ್ಕೆ ಕಾಂಗ್ರೆಸ್ ಪ್ಲಾನ್​ ಮಾಡಿದೆ.
- ವರದಿ ಅನುಷ್ಠಾನವಾದರೆ ಗಣನೀಯ ಲಿಂಗಾಯತ ಮತಗಳು ಕಾಂಗ್ರೆಸ್​ ಸಿಗುವ ಲೆಕ್ಕಾಚಾರವೂ ಇದೆ.
Loading...

- ಹಾಗೇ ಬಿಜೆಪಿ ತೆಕ್ಕೆಯಲ್ಲಿರುವ ಲಿಂಗಾಯತ ಮತ ವಿಭಜಿಸುವ ಪ್ಲಾನ್​ ಕೂಡ ಕಾಂಗ್ರೆಸ್​ನದ್ದಾಗಿದೆ.
- ಜೊತೆಗೆ ಯಡಿಯೂರಪ್ಪ ಲಿಂಗಾಯತ ನಾಯಕ ಎಂಬ ಹಣೆಪಟ್ಟಿಗೆ ಪೆಟ್ಟು ಕೊಡಬಹುದು
- ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ಲಿಂಗಾಯತ ಅಭ್ಯರ್ಥಿಗಳಿಗೆ ಇದು ಲಾಭವಾಗಬಹುದು

ಕಾಂಗ್ರೆಸ್​ನಲ್ಲಿ ಪರ-ವಿರೋಧ ಯಾಕೆ?

- 33 ಸಚಿವರಲ್ಲಿ ಬಹುತೇಕ ಸಚಿವರು ಪ್ರತ್ಯೇಕ ಧರ್ಮ ವರದಿಗೆ ಜೈ ಎಂದವರೇ ಅನ್ನೋದು ಮೂಲಗಳ ಮಾಹಿತಿ.
- ಆದರೆ, ಸಚಿವರಾದ S.S.ಮಲ್ಲಿಕಾರ್ಜುನ, ಈಶ್ವರ್​ ಖಂಡ್ರೆ, ವೀರಶೈವ ಶಾಸಕರ ವಿರೋಧವಿದೆ. ವರದಿ ಅಂಗೀಕರಿಸಿದರೆ ರಾಜೀನಾಮೆ ನೀಡಲು ಇಬ್ಬರು ಸಚಿವರು ಮುಂದಾಗಬಹುದು
- ಆದರೆ, ವರದಿ ಅಂಗೀಕರಿಸದೇ ಇದ್ದರೆ ಸಚಿವ ಎಂ.ಬಿ.ಪಾಟೀಲ್​ ರಾಜೀನಾಮೆ ನೀಡಿದರೂ ಅಚ್ಚರಿಯಿಲ್ಲ

 ಸರ್ಕಾರಕ್ಕೆ ಯಾಕಿಷ್ಟು ಆತುರ?

- ಇತ್ತೀಚೆಗೆ ಸರ್ಕಾರ ಜಾತಿ ಸಮೀಕ್ಷೆ ನಡೆಸಿ ವರದಿಯನ್ನ ಗುಟ್ಟಾಗಿ ಇಟ್ಟುಕೊಂಡಿದೆ
- ಆದರೆ ಮೂಲಗಳ ಪ್ರಕಾರ ರಾಜ್ಯದಲ್ಲಿ ಒಟ್ಟು 5.76 ಕೋಟಿ ಜನಸಂಖ್ಯೆ ಇದೆ ಅಂತ ಗೊತ್ತಾಗಿದೆ
- ಇದರಲ್ಲಿ ದಲಿತರು 1.43 ಕೋಟಿ, ಮುಸ್ಲಿಮರು 65 ಲಕ್ಷ ಜನಸಂಖ್ಯೆ ಇದೆಯಂತೆ
- ಲಿಂಗಾಯತ 57.6 ಲಕ್ಷ, ಒಕ್ಕಲಿಗರ ಸಂಖ್ಯೆ 46 ಲಕ್ಷದಷ್ಟು ಇದೆಯಂತೆ
- ದಲಿತ, ಮುಸ್ಲಿಂ ಮತ ನಮ್ಮದೇ ಎನ್ನುವ ಕಾಂಗ್ರೆಸ್​ ಲಿಂಗಾಯತ ಮತ ಛಿದ್ರಗೊಳಿಸಿದ್ರೆ ಬಿಜೆಪಿಯ 150 - ಮಿಷನ್​ಗೆ ಬ್ರೇಕ್​ ಹಾಕಬಹುದು

- ಹಾಗೆ ಏಪ್ರಿಲ್​ನಲ್ಲಿ ಚುನಾವಣೆ ದಿನಾಂಕ ಪ್ರಕಟವಾದರೆ ನೀತಿ ಸಂಹಿತೆ ಜಾರಿಯಾಗುತ್ತೆ
- ಆಮೇಲೆ ಸಂಪುಟ ಸಭೆ ಕರೆಯೋದಾಗ್ಲಿ, ವರದಿ ಶಿಫಾರಸಿಗೂ ಅಧಿಕಾರ ಇರಲ್ಲ
- ಈಗಲೇ ಕೇಂದ್ರಕ್ಕೆ ವರದಿ ಕಳಿಸಿ ಅನುಷ್ಠಾನ ತಡವಾದರೆ ಬಿಜೆಪಿ ಮೇಲೆ ಗೂಬೆ ಕೂರಿಸಬಹುದು ಎನ್ನುವ ಪ್ಲಾನ್​ನಲ್ಲಿದೆ.

ಬಿಜೆಪಿಗೆ ಭಯ ಯಾಕೆ?

- ರಾಜ್ಯದ 96 ಕ್ಷೇತ್ರಗಳಲ್ಲಿ ಲಿಂಗಾಯತ ಮತಗಳು ನಿರ್ಣಾಯಕವಾಗಲಿವೆ
- ಹೀಗಾಗಿ ವರದಿ ಜಾರಿಯಾದ್ರೂ, ಜಾರಿಯಾಗದಿದ್ರೂ ಮತ ವಿಭಜನೆ ಆಗುತ್ತೆ ಎನ್ನುವ ಭಯ ಶುರುವಾಗಿದೆ
- ಸಾಂಪ್ರದಾಯಕ ಮತ ಕಳೆದುಕೊಂಡ್ರೆ ಮಿಷನ್​ 150 ಮುಟ್ಟುವುದು ಕಷ್ಟವಾಗಲಿದೆ
- ಉಮೇಶ್​ ಕತ್ತಿ ಸೇರಿ ಹಲವು ಲಿಂಗಾಯತ ಶಾಸಕರು ಪ್ರತ್ಯೇಕ ಧರ್ಮದ ಪರ ಪರೋಕ್ಷವಾಗಿ ನಿಂತಿದ್ದಾರೆ
- ಕಾಂಗ್ರೆಸ್​ ಇದೇ ಅಂಶವನ್ನ ಮುಂದಿಟ್ಟು ಬಿಜೆಪಿ ವಿರುದ್ಧ ಅಪ್ರಚಾರ ಮಾಡುವ ಭಯವೂ ಇದೆ

ಮಠಾಧೀಶರ ವಾದ ಏನು?

- ಪಂಚ ಪೀಠಾಧೀಶರು, ವೀರಶೈವ ಮಠಾಧೀಶರಿಂದ ವರದಿಗೆ ವಿರೋಧವಿದೆ
- ಲಿಂಗಾಯತ ಸ್ವಾಮೀಜಿಗಳು ಅಂತ ಗುರುತಿಸಿಕೊಂಡವರಿಂದ ಬೆಂಬಲವಿದೆ
- ಆದರೆ, ಸುತ್ತೂರು, ಸಿದ್ಧಗಂಗಾ, ಸಿರಿಗೆರೆ ಶ್ರೀಗಳು ತಟಸ್ಥವಾಗಿದ್ದಾರೆ

ಹೀಗಾಗಿ, ಇವೆಲ್ಲ ಪ್ಲಾನ್ ಹಾಕಿಕೊಂಡೇ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮದ ವರದಿಯನ್ನ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ಸಾಧ್ಯತೆಯಿದೆ.. ಆದರೆ, ಕಾಂಗ್ರೆಸ್​ನಲ್ಲೇ ಕೆಲವು ಸಚಿವರು, ಶಾಸಕರು ವಿರೋಧ ಮಾಡ್ತಿದ್ದು  ಇವತ್ತೇ ಎಲ್ಲ ಕುತೂಹಲಕ್ಕೂ ಉತ್ತರ ಸಿಗಲಿದೆ.

 
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ