Temple demolition: ಜನಾಕ್ರೋಶದ ಹಿನ್ನಲೆ ನಂಜನಗೂಡಿನಲ್ಲಿ ದೇವಾಲಯ ಮರು ನಿರ್ಮಾಣಕ್ಕೆ ಮುಂದಾದ ಸರ್ಕಾರ?

ದೇವಸ್ಥಾನ ತೆರವು ಮಾಡಿದ ಸರ್ಕಾರದ ಕ್ರಮಕ್ಕೆ ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿರುವ ಹಿನ್ನಲೆ ಈ ಕುರಿತು ಪರಿಹಾರ ಕಂಡು ಕೊಳ್ಳಲು ಸರ್ಕಾರ ಮುಂದಾಗಿದೆ.

ದೇವಸ್ಥಾನ ತೆರವು

ದೇವಸ್ಥಾನ ತೆರವು

 • Share this:
  ಮೈಸೂರು (ಸೆ.17): ನಂಜನಗೂಡಿನ ಹುಚ್ಚಗಣಿ ದೇವಸ್ಥಾನ ಧ್ವಂಸ ಪ್ರಕರಣ (Nanjangudu temple Demolition) ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಸದನದಲ್ಲಿ ಭಾರೀ ಚರ್ಚೆಗೆ ಗ್ರಾಸವಾದ ಈ ವಿಚಾರ ಕುರಿತು ಅನೇಕ ಹಿಂದೂ ಪರ ಸಂಘಟನೆಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿವೆ. ಧಾರ್ಮಿಕ ಕಟ್ಟಡ ಧ್ವಂಸ ಮಾಡುವ ಮೂಲಕ ರಾಜ್ಯದ ಜನರ ದೈವಿಕ ಭಾವನೆಗೆ ಧಕ್ಕೆ ತದ್ದ ಹಿನ್ನಲೆ ಬಿಜೆಪಿ ಸರ್ಕಾರದ ವಿರುದ್ದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಆಡಳಿತ ಪಕ್ಷದ ಕೆಲವು ನಾಯಕರಗಳು ಕೂಡ ಈ ಬಗ್ಗೆ ಖಂಡನೆ ವ್ಯಕ್ತಪಡಿಸಿದ್ದವು. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿರುವ ಈ ವಿಚಾರ ಕುರಿತು ಇಂದು ಕಲಬುರಗಿಯಲ್ಲಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, (BS Basavaraja Bommai) ದೇವಸ್ಥಾನಗಳು ನಮ್ಮ ಅಸ್ಮಿತೆ ಪ್ರತೀಕ. ದೇವಾಲಯಗಳನ್ನು ರಕ್ಷಣೆ ನಮ್ಮ ಹೊಣೆ ಎಂದು ಜನರು ಮನವೊಲಿಸಲು ಮುಂದಾಗಿದ್ದಾರೆ.

  ಇನ್ನು ಈ ಪ್ರಕರಣದ ಸಂಬಂಧ ಇನ್ನೆರಡು ದಿನಗಳಲ್ಲಿ ಸ್ಪಷ್ಟ ನಿರದೇಶನ ನೀಡುತ್ತೇನೆ. ಈಗಾಗಲೇ ಈ ಕುರಿತು ಕಾರಣ ಕೇಳಿ ಮೈಸೂರು ಜಿಲ್ಲಾಧಿಕಾರಿ ಮತ್ತು ನಂಜನಗೂಡು ತಹಶೀಲ್ದಾರ್​ ಅವರಿಗೆ ನೋಟಿಸ್​ ಜಾರಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
  ಬಿಜೆಪಿ ಸರ್ಕಾರದಿಂದ ಈ ರೀತಿಯ ಕ್ರಮ ನಿರೀಕ್ಷಿಸದ ರಾಜ್ಯದ ಜನರಿಗೆ ದೇವಾಲಯಗ ತೆರವು ಪ್ರಕ್ರಿಯೆ ಸಾಕಷ್ಟು ನೋವು ಉಂಟು ಮಾಡಿದೆ. ಇದೇ ಹಿನ್ನಲೆ ನಾಡಿನ ಜನರ ವಿರೋಧಕ್ಕೆ ಪರಿಹಾರ ಕಂಡು ಕೊಳ್ಳಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಈಗ ಅದೇ ಜಾಗದಲ್ಲಿ ಮತ್ತೆ ದೇವಸ್ಥಾನ ಮರು ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ.

  ದೇವಾಲಯ ಮರು ನಿರ್ಮಾಣಕ್ಕೆ ಮುಂದಾದ ಸರ್ಕಾರ

  ಇದಕ್ಕಾಗಿ ಮೈಸೂರು ಜಿಲ್ಲಾಡಳಿತ ತೆರವು ಮಾಡಿದ್ದ ನಂಜನಗೂಡಿನ ಪುರಾತನ ಹುಚ್ಚ ದೇವಸ್ಥಾನ ಮರು ನಿರ್ಮಾಣಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ದೇವಸ್ಥಾನ ತೆರವಿಗೆ ಭಾರೀ ವಿರೋಧ ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದ್ದು, ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಖುದ್ದು ಘೋಷಣೆ ಮಾಡಲಿದ್ದಾರೆ. ಅದೇ ಗ್ರಾಮದಲ್ಲಿ ಗ್ರಾಮಸ್ಥರು ಹೇಳಿದ ಜಾಗದಲ್ಲಿ ದೇಗುಲದ ಮರು ನಿರ್ಮಾಣ ಮಾಡಲು ಸರ್ಕಾರ ಸಜ್ಜಾಗಿದೆ. ಈ ಬಗ್ಗೆ ಮೈಸೂರು ಜಿಲ್ಲಾಡಳಿತ, ಮತ್ತು ಮುಜರಾಯಿ‌ ಇಲಾಖೆ ಜತೆ ಮುಖ್ಯಮಂತ್ರಿಗಳು ಚರ್ಚೆ ನಡೆಸಿದ ಬಳಿಕ ಈ ಬಗ್ಗೆ ಅಧಿಕೃತ ಆದೇಶ ಹೊರ ಬೀಳುವ ಸಾಧ್ಯತೆ ಇದೆ.

  ಇದನ್ನು ಓದಿ: ದೇವಾಲಯಗಳು ನಮ್ಮ ಅಸ್ಮಿತೆ, ದೇವಸ್ಥಾನಗಳ ರಕ್ಷಣೆ ಮಾಡುತ್ತೇವೆ; ಸಿಎಂ ಬಸವರಾಜ ಬೊಮ್ಮಾಯಿ

  ಈ ಸಂಬಂಧ ಇಂದು ಮುಖ್ಯಮಂತ್ರಿಗಳು ಗೃಹ ಕೃಷ್ಣಾದಲ್ಲಿಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ಮುಜರಾಯಿ ಇಲಾಖೆ ಅಧಿಕಾರಿಗಳ ಜೊತೆ ಚರ್ಚೆ ನಡೆಸಲು ಮುಂದಾಗಿದ್ದಾರೆ.

  ದೇವಸ್ಥಾನ ತೆರವಿಗೂ ತಡೆ
  ನಂಜನಗೂಡು ದೇವಾಲಯ ತೆರವಿನ ಬಳಿಕ ವ್ಯಕ್ತವಾದ ವಿರೋಧದ ಹಿನ್ನಲೆ ಜಿಲ್ಲೆಯ ಉಳಿದ 93 ದೇವಾಲಯಗಳ ತೆರವು ಕಾರ್ಯಚಾರಣೆಯನ್ನು ಸ್ಥಗಿತಗೊಳಿಸಲಾಗಿದೆ. ಇನ್ನು ಸರ್ಕಾರದಿಂದ ಜಾರಿಯಾಗಿರುವ ನೋಟಿಸ್​​ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿಗಳು, ಈ ಸಂಬಂಧ ಸರ್ಕಾರಕ್ಕೆ ಸ್ಪಷ್ಟ ವಿವರಣೆ ನೀಡುತ್ತೇವೆ. ಈ ಬಗ್ಗೆ ಬಹಿರಂಗ ಪಡಿಸಲು ಸಾಧ್ಯವಿಲ್ಲ. ಸರ್ಕಾರದ ಆದೇಶದ ಹಿನ್ನಲೆ ಈಗ ಈ ತೆರವು ಕಾರ್ಯಕ್ಕೆ ತಡೆ ನೀಡಲಾಗಿದೆ ಎಂದು ಡಿಸಿ ಬಗಾದಿ ಗೌತಮ್​ ತಿಳಿಸಿದ್ದಾರೆ.
  Published by:Seema R
  First published: