• Home
  • »
  • News
  • »
  • state
  • »
  • Vivek Classroom: ರಾಜ್ಯಾದ್ಯಂತ ಶಾಲೆಗಳ ಕೊಠಡಿಯಲ್ಲಿ ಕೇಸರಿ ಬಣ್ಣಕ್ಕೆ ಸರ್ಕಾರದ ಚಿಂತನೆ

Vivek Classroom: ರಾಜ್ಯಾದ್ಯಂತ ಶಾಲೆಗಳ ಕೊಠಡಿಯಲ್ಲಿ ಕೇಸರಿ ಬಣ್ಣಕ್ಕೆ ಸರ್ಕಾರದ ಚಿಂತನೆ

ಬಿ ಸಿ ನಾಗೇಶ್

ಬಿ ಸಿ ನಾಗೇಶ್

ಸರ್ಕಾರದ ನಡೆಯನ್ನು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಖಂಡಿಸಿದ್ದಾರೆ. ಚುನಾವಣೆಗೆ 150 ದಿನಗಳು ಉಳಿದಿವೆ. ಈ ಸಂದರ್ಭದಲ್ಲಿ ಎಂಟು ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಇಷ್ಟು ಕೊಠಡಿಗಳ ನಿರ್ಮಾಣ ಸಾಧ್ಯವಾ ಎಂದು ಅಬ್ದುಲ್ ರಜಾಕ್ ಪ್ರಶ್ನೆ ಮಾಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಕಳೆದ ಒಂದೂವರೆ ವರ್ಷದಿಂದ ರಾಜ್ಯದ ಶಾಲೆಗಳ (Karnataka Schools) ಮೇಲೆ ರಾಜಕೀಯದ (Politics) ಕಪ್ಪು ನೆರಳು ಆವರಿಸಿದೆ. ಹಿಜಾಬ್, ಟಿಪ್ಪು ಪಠ್ಯಕ್ಕೆ ಕತ್ತರಿ, ಶಾಲೆಗಳ ಪಠ್ಯ ಪುಸ್ತಕ ರಚನಾ ಸಮಿತಿಯ ಗೊಂದಲಗಳು, ಮಕ್ಕಳಿಗೆ ಶೂ ವಿತರಣೆ ಹೀಗೆ ಒಂದಿಲ್ಲೊಂದು ಪ್ರಕರಣಗಳು ಕೇಳಿ ಬರುತ್ತಿವೆ. ಇತ್ತೀಚೆಗಷ್ಟೇ ಕಡ್ಡಾಯ ಯೋಗದ ಆದೇಶದ ಬಗ್ಗೆ ವಿಪಕ್ಷಗಳು ಅಪಸ್ವರ ಎತ್ತಿದ್ದವು. ಇದೀಗ ಮತ್ತೊಂದು ವಿವಾದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister BC Nagesh) ಅವರನ್ನು ಸುತ್ತುವರಿದಿದೆ. ಹೌದು, ಶಾಲೆಗಳ ಕೊಠಡಿಗಳಿಗೆ ಕೇಸರಿ ಬಣ್ಣ (Saffron Color) ಬಳಿಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಈ ಚಿಂತನೆಯನ್ನು ವಿರೋಧ ಪಕ್ಷಗಳು ಮತ್ತು ಮುಸ್ಲಿಂ ಮುಖಂಡರು ವಿರೋಧಿಸಿದ್ದಾರೆ.


ರಾಜ್ಯಾದ್ಯಂತ  ಶಾಲೆಗಳಲ್ಲಿ ಕೊಠಡಿಯಲ್ಲಿ ಏಕರೂಪದ ಬಣ್ಣ ಬಳಿದು ರೂಂಗಳಿಗೆ ಸ್ವಾಮಿ ವಿವೇಕಾನಂದ ಹೆಸರಿಡಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದಲ್ಲಿ ನಿರ್ಮಾಣವಾಗುತ್ತಿರುವ 8,100 ಶಾಲಾ ಕಾಲೇಜು ಕೊಠಡಿಗೆ ಸ್ವಾಮಿ ವಿವೇಕಾನಂದ ಅವರು ಹೆಸರು ಇಡಲು ಸರ್ಕಾರ ನಿರ್ಧಾರ ಮಾಡಿದೆ.


ಸ್ವಾಮಿ  ವಿವೇಕಾನಂದರು ಧರಿಸಿರುವ ಬಟ್ಟೆಯ ಬಣ್ಣವನ್ನು ಇರಿಸಲು ಸರ್ಕಾರ ಚಿಂತನೆ  ನಡೆದಿದೆ. ಈ ಚಿಂತನೆ ಮತ್ತೊಂದು ಸುತ್ತಿನ ಕೇಸರಿ ವಾಗ್ವಾದಕ್ಕೆ ನಾಂದಿಯಾಗುವ ಸಾಧ್ಯತೆಗಳಿವೆ. 992 ಕೋಟಿ ವೆಚ್ಚದಲ್ಲಿ ಶಾಲಾಕಾಲೇಜು‌ ಕೊಠಡಿಗಳ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ.


karnataka government plan to saffron color to viveka classroom mrq
ಸಾಂದರ್ಭಿಕ ಚಿತ್ರ


ವಿರೋಧ ಯಾಕೆ?


*ಕಮಲ‌ ಸರ್ಕಾರದ ಕೇಸರೀಕರಣದ ವಿರುದ್ಧ ಪ್ರತಿಪಕ್ಷಗಳ ಅಪಸ್ವರ ಕೇಳಿ ಬರುವ ಸಾಧ್ಯತೆ


*ಪಠ್ಯ ಪರಿಷ್ಕರಣದ ವೇಳೆ ಬಲ ಪಂಥೀಯ ವಿಚಾರ ಸೇರಿಸಲಾಗಿತ್ತು ಎಂದು ಆರೋಪ ಕೇಳಿ ಬಂದ ಹಿನ್ನೆಲೆ ಮತ್ತೊಮ್ಮೆ ಪಠ್ಯ ಮರು ಪರಿಸ್ಕರಿಸಲಾಗಿತ್ತು.


*ಭಗತ್ ಸಿಂಗ್ ಗದ್ಯ ಕೈಬಿಟ್ಟು ಆರ್​​ಎಸ್​​ಎಸ್ ಸಂಸ್ಥಾಪಕ ಕೆಬಿ ಹೆಡಗೇವಾರ್ ಭಾಷಣ ಸೇರಿಸಿದ್ದಾರೆಂಬ ಅಂಶ ವಿವಾದಕ್ಕೆ ಕಾರಣವಾಗಿತ್ತು.


ಮಕ್ಕಳಿಗೆ ಕಲಿಯಲು‌ ಬಿಡಿ. ಪಠ್ಯಪುಸ್ತಕ, ಶಿಕ್ಷಣ ವಿಚಾರದಲ್ಲಿ ರಾಜಕೀಯ ನಿಲ್ಲಿಸಿ. ಗುಣಮಟ್ಟದ ಶಿಕ್ಷಣದ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


ಇದನ್ನೂ ಓದಿ:  Hijab, ಕೇಸರಿ ಶಾಲು ಬಳಿಕ ಸಿಂಧೂರ ಸಮರ.. ಮಹತ್ವದ ಹೇಳಿಕೆ ನೀಡಿದ ಶಿಕ್ಷಣ ಸಚಿವ BC Nagesh


ಅಬ್ದುಲ್ ರಜಾಕ್ ಆಕ್ರೋಶ


ಸರ್ಕಾರದ ನಡೆಯನ್ನು ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಖಂಡಿಸಿದ್ದಾರೆ. ಚುನಾವಣೆಗೆ 150 ದಿನಗಳು ಉಳಿದಿವೆ. ಈ ಸಂದರ್ಭದಲ್ಲಿ ಎಂಟು ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಮೂರ್ನಾಲ್ಕು ತಿಂಗಳಲ್ಲಿ ಇಷ್ಟು ಕೊಠಡಿಗಳ ನಿರ್ಮಾಣ ಸಾಧ್ಯವಾ ಎಂದು ಅಬ್ದುಲ್ ರಜಾಕ್ ಪ್ರಶ್ನೆ ಮಾಡಿದ್ದಾರೆ.


ಶಾಲಾ ಕೊಠಡಿಗಳ ನಿರ್ಮಾಣ ಮಾಡುತ್ತಿರೋದು ಸರ್ಕಾರದ ಹಣದಲ್ಲಿ. ಸ್ವಾಮಿ ವಿವೇಕಾನಂದರ ಹೆಸರಿಟ್ಟಿರೋದು ಒಳ್ಳೆಯ ನಿರ್ಧಾರ. ಆದ್ರೆ ಈ ನೆಪದಲ್ಲಿ ಶಾಲೆಗಳು ಕೇಸರಿಕರಣ ಮಾಡುತ್ತಿದೆ ಎಂದು ಆರೋಪಿಸಿದರು.


karnataka government plan to saffron color to viveka classroom mrq
ಸಾಂಕೇತಿಕ ಚಿತ್ರ


ಶಾಲೆಯಲ್ಲಿ 100 ರೂ ದೇಣಿಗೆ ಸಂಗ್ರಹ ಆದೇಶ ವಾಪಸ್​!


ಶಾಲಾ ಅಭಿವೃದ್ಧಿಗಾಗಿ (School Development) ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸರ್ಕಾರಿ ಶಾಲಾ ಮಕ್ಕಳ (Children) ಪೋಷಕರ ಬಳಿ 100 ರೂಪಾಯಿ ಸಂಗ್ರಹ ಮಾಡೋದು ನಾಚಿಕೆ ವಿಚಾರ ಎಂದು ಬಿಜೆಪಿ ಸರ್ಕಾರದ (BJP Government) ವಿರುದ್ಧ ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ರು.


ಇದನ್ನೂ ಓದಿ:  BC Nagesh: ಶಾಲೆ-ಕಾಲೇಜುಗಳಲ್ಲಿ ಈ ವರ್ಷದಿಂದಲೇ ಭಗವದ್ಗೀತೆ ಬೋಧನೆ


ಜೊತೆಗೆ ಪೋಷಕರು ಹಾಗೂ ಸಾರ್ವಜನಿಕರಿಂದಲೂ ವಿರೋಧ ವ್ಯಕ್ತವಾದ ಹಿನ್ನೆಲೆ ಇದೀಗ ಸರ್ಕಾರ ದೇಣಿಗೆ ಸಂಗ್ರಹ ಆದೇಶ (Order) ವಾಪಸ್ಸು ಪಡೆಯಲು ಸೂಚಿಸಿದೆ.


ದೇಣಿಗೆ ಸಂಗ್ರಹದ ಆದೇಶ ವಾಪಸ್​ ಪಡೆಯಲು ಶಿಕ್ಷಣ ಇಲಾಖೆ ಆಯುಕ್ತರಿಗೆ ಸಚಿವ ಬಿಸಿ ನಾಗೇಶ್ ಸೂಚನೆ ನೀಡಿದ್ದಾರೆ. ಶಾಲೆಗಳ ಅಭಿವೃದ್ಧಿಗಾಗಿ 100 ರೂಪಾಯಿ ದೇಣಿಗೆ ಸಂಗ್ರಹಕ್ಕೆ ಶಿಕ್ಷಣ ಇಲಾಖೆ ಆದೇಶ​ ಹೊರಡಿಸಿತ್ತು.

Published by:Mahmadrafik K
First published: