HOME » NEWS » State » KARNATAKA GOVERNMENT ORDERS TO CUT COVID 19 TEST RATE AFTER CORONAVIRUS POSITIVITY RATE INCREASES SCT

Karnataka Coronavirus: ಕರ್ನಾಟಕದಲ್ಲಿ ಅಪಾಯದ ಮಿತಿ ಮೀರಿದ ಕೊರೋನಾ ಪಾಸಿಟಿವಿಟಿ ರೇಟ್; ಟೆಸ್ಟ್ ಪ್ರಮಾಣ ಕಡಿತಗೊಳಿಸಲು ಸರ್ಕಾರ ಸೂಚನೆ

Karnataka Coronavirus: ಭಾರತದಲ್ಲಿ ಅತಿಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿರುವ ಟಾಪ್ 5 ಜಿಲ್ಲೆಗಳ ಪೈಕಿ ಕರ್ನಾಟಕದ 2 ಜಿಲ್ಲೆಗಳು ಗುರುತಿಸಿಕೊಂಡಿವೆ. ಇದರ ನಡುವೆ ಕೊರೋನಾ ಸೋಂಕು ಹೆಚ್ಚಳದಿಂದ ಒತ್ತಡಕ್ಕೆ ಒಳಗಾಗಿ ಕಡಿಮೆ ಟೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ.

news18-kannada
Updated:May 18, 2021, 12:56 PM IST
Karnataka Coronavirus: ಕರ್ನಾಟಕದಲ್ಲಿ ಅಪಾಯದ ಮಿತಿ ಮೀರಿದ ಕೊರೋನಾ ಪಾಸಿಟಿವಿಟಿ ರೇಟ್; ಟೆಸ್ಟ್ ಪ್ರಮಾಣ ಕಡಿತಗೊಳಿಸಲು ಸರ್ಕಾರ ಸೂಚನೆ
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಮೇ 18): ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಅಪಾಯದ ಮಟ್ಟ ಮೀರಿದೆ. ಭಾರತದಲ್ಲಿ ಅತಿಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿರುವ ಟಾಪ್ 5 ಜಿಲ್ಲೆಗಳ ಪೈಕಿ ಕರ್ನಾಟಕದ 2 ಜಿಲ್ಲೆಗಳು ಗುರುತಿಸಿಕೊಂಡಿವೆ. ಬಳ್ಳಾರಿ ಮತ್ತು ಉತ್ತರ ಕನ್ನಡದಲ್ಲಿ ಅತಿಹೆಚ್ಚು ಕೊರೋನಾ ಪಾಸಿಟಿವಿಟಿ ರೇಟ್ ಇರುವುದು ಪತ್ತೆಯಾಗಿದೆ. ಇದರ ನಡುವೆ ಕೊರೋನಾ ಸೋಂಕು ಹೆಚ್ಚಳದಿಂದ ಒತ್ತಡಕ್ಕೆ ಒಳಗಾಗಿ ಕಡಿಮೆ ಟೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ. ರೋಗ ಲಕ್ಷಣಗಳಿದ್ದರೆ ಮಾತ್ರ ಕೊರೋನಾ ಟೆಸ್ಟ್ ನಡೆಸಲು ಸರ್ಕಾರ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ದೈನಂದಿನ ಟೆಸ್ಟ್​ ಪ್ರಮಾಣ 1 ಲಕ್ಷಕ್ಕೂ ಕಡಿಮೆಯಾಗಿದೆ.

ಸೋಮವಾರ ಕರ್ನಾಟಕದಲ್ಲಿ ಕೇವಲ 97,336 ಮಂದಿಗೆ ಕೊರೋನಾ ಟೆಸ್ಟ್ ಮಾಡಲಾಗಿದೆ. ಇಷ್ಟು ಕಡಿಮೆ ಟೆಸ್ಟ್ ಮಾಡಿದರೂ 38,603 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಕರ್ನಾಟಕದ ಕೊರೋನಾ ಪಾಸಿಟಿವಿಟಿ ರೇಟ್ 39.70ಗೆ ಏರಿಕೆಯಾಗಿದೆ. ಕರ್ನಾಟಕ ಸರ್ಕಾರ ಮಾಡುತ್ತಿರುವ ಎಡವಟ್ಟು ಅನಾಹುತದಿಂದ ಟೆಸ್ಟ್ ಸಂಖ್ಯೆ ಇಳಿಮುಖವಾದರೆ ಸಾವು, ಸೋಂಕು ಎರಡೂ ಉಲ್ಬಣಿಸುತ್ತದೆ. ಸೋಂಕು ಪತ್ತೆ ವಿಳಂಬದಿಂದ ಇನ್ನಷ್ಟು ಮಂದಿಗೆ ಸೋಂಕು ಅಂಟುತ್ತದೆ. ಬೇಗ ಕೊರೋನಾ ಸೋಂಕು ಪತ್ತೆಯಾಗದಿದ್ದರೆ ಸಾವಿನ ಪ್ರಮಾಣವೂ ಹೆಚ್ಚಾಗುತ್ತದೆ. ಸೋಂಕು ಉಲ್ಬಣಿಸಿದಾಗ ಸೋಂಕು ಪತ್ತೆಯಾದರೆ ವ್ಯಕ್ತಿ ಸಾವಿಗೀಡಾಗುವ ಸಾಧ್ಯತೆ ಹೆಚ್ಚಾಗಿರಲಿದೆ.

Youtube Video

ಬಳ್ಳಾರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೊರೋನಾ ಪಾಸಿಟಿವಿಟಿ ದರ ಹೆಚ್ಚಾಗಿದೆ. ಈ 2 ಜಿಲ್ಲೆಗಳಲ್ಲಿ ಟೆಸ್ಟ್ ಮಾಡಿಸಿದ 100 ಜನರ ಪೈಕಿ 47 ಜನರಿಗೆ ಕೊರೋನಾ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತರಿಯಾಗುತ್ತಿದೆ. ಹೀಗಾಗಿ, ಮೊದಲ ಅಲೆಯಿಂದಲೂ ಟೆಸ್ಟ್ ಹೆಚ್ಚಿಸಲು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಆದರೆ, ಸರ್ಕಾರ ಎರಡನೇ ಅಲೆ ವೇಳೆ ಟೆಸ್ಟ್ ಸಂಖ್ಯೆ ಇಳಿಕೆ ಮಾಡಿದೆ. ಟೆಸ್ಟ್ ರಿಪೋರ್ಟ್ ವಿಳಂಬವಾಗುತ್ತಿದೆ ಎಂಬ ಕಾರಣಕ್ಕೆ ಟೆಸ್ಟ್ ಸಂಖ್ಯೆ ಇಳಿಕೆಯಾಗಿದೆ. ರೋಗ ಲಕ್ಷಣಗಳಿದ್ದರೆ ಮಾತ್ರ ಟೆಸ್ಟ್ ನಡೆಸಲು ಸೂಚನೆ ನೀಡಲಾಗಿದೆ. ಇದರಿಂದ ಲಕ್ಷಕ್ಕೂ ಕಡಿಮೆ ಪ್ರಮಾಣದಲ್ಲಿ ದೈನಂದಿನ ಟೆಸ್ಟ್ ಮಾಡಲಾಗುತ್ತಿದೆ.
Published by: Sushma Chakre
First published: May 18, 2021, 12:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories