• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Women Reservation Karnataka: ಮಹಿಳೆಯರಿಗೆ ಬಂಪರ್! ಸರ್ಕಾರಿ ಹೊರಗುತ್ತಿಗೆ ಕೆಲಸಗಳಲ್ಲೂ ಮಹಿಳಾ ಉದ್ಯೋಗಿಗಳಿಗೆ ಶೇ. 33 ಮೀಸಲಾತಿ ಘೋಷಣೆ

Women Reservation Karnataka: ಮಹಿಳೆಯರಿಗೆ ಬಂಪರ್! ಸರ್ಕಾರಿ ಹೊರಗುತ್ತಿಗೆ ಕೆಲಸಗಳಲ್ಲೂ ಮಹಿಳಾ ಉದ್ಯೋಗಿಗಳಿಗೆ ಶೇ. 33 ಮೀಸಲಾತಿ ಘೋಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶೇಕಡಾ 33 ರಷ್ಟು ಮೀಸಲಾತಿಯು ಎಲ್ಲಾ ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸರ್ಕಾರಿ ಕಚೇರಿಗಳಿಗೆ ಅನ್ವಯಿಸುತ್ತದೆ. ಯಾವುದೇ ಅಡೆತಡೆಯಿಲ್ಲದೆ ಅನುಷ್ಠಾನವಾಗುವಂತೆ ಹಿರಿಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸುತ್ತೋಲೆಯನ್ನು ತಿಳಿಸಲಾಗಿದೆ.   

ಮುಂದೆ ಓದಿ ...
  • Share this:

ಮಹಿಳೆಯರ ಮೀಸಲಾತಿಗೆ ಸಂಬಂಧಿಸಿ ಮಹತ್ವದ ನಿರ್ಧಾರ ಕೈಗೊಂಡಿರುವ ಕರ್ನಾಟಕ ರಾಜ್ಯ ಸರಕಾರ (Karnataka Government) ಎಲ್ಲ ಇಲಾಖೆಗಳಲ್ಲಿ ಹೊರಗುತ್ತಿಗೆ ಮಹಿಳಾ ಉದ್ಯೋಗಿಗಳಿಗೆ ಶೇ.33ರಷ್ಟು ಮೀಸಲಾತಿ ನೀಡುವುದಾಗಿ (Outsourced Women Employees Reservation) ಪ್ರಕಟಿಸಿದೆ. ಈ ಸಂಬಂಧ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ (Chief Secretary P. Ravikumar) ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ. ಪ್ರಸ್ತುತ ಕರ್ನಾಟಕದಲ್ಲಿ 4.6 ಲಕ್ಷ ಉದ್ಯೋಗಿಗಳಿರುವ 7.2 ಲಕ್ಷ ಮಂಜೂರಾದ ಹುದ್ದೆಗಳಲ್ಲಿ 1.5 ಲಕ್ಷ ಹೊರಗುತ್ತಿಗೆ ಸಿಬ್ಬಂದಿ ಇದ್ದಾರೆ. ಈಗ ಮಹಿಳಾ ಉದ್ಯೋಗಿಗಳಿಗೆ 50,000 ಹುದ್ದೆಗಳನ್ನು ಮೀಸಲಿಡಲಾಗುವುದು (Women Reservation Karnataka) ಎಂದು ಸುತ್ತೋಲೆಯನ್ನು ಮಾಹಿತಿ ನೀಡಲಾಗಿದೆ.    


ಸುತ್ತೋಲೆಯ ಪ್ರಕಾರ, ರಾಜ್ಯ ಸರ್ಕಾರವು ಚಾಲಕರು, ಡೇಟಾ ಎಂಟ್ರಿ ಆಪರೇಟರ್‌ಗಳು, ಹೌಸ್‌ಕೀಪಿಂಗ್ ಸಿಬ್ಬಂದಿ ಮತ್ತು ಇತರ ಗ್ರೂಪ್ ಡಿ ನೌಕರರನ್ನು ಹೊರಗುತ್ತಿಗೆ ಮೂಲಕ ನೇಮಕ ಮಾಡಿಕೊಳ್ಳುತ್ತದೆ. ಪ್ರಸ್ತುತ ಮಹಿಳೆಯರಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ಕರ್ನಾಟಕ ಸಿವಿಲ್ ಸರ್ವೀಸ್ ಅಡಿಯಲ್ಲಿ ನೇರ ನೇಮಕಾತಿಯಲ್ಲಿ ಶೇ.30ರಷ್ಟು ಮೀಸಲಾತಿ ನೀಡಲಾಗಿದೆ.


ಇನ್ನೂ ಏನೆಲ್ಲ ಇದೆ ಸುತ್ತೋಲೆಯಲ್ಲಿ?
ಹೊರಗುತ್ತಿಗೆ ಉದ್ಯೋಗದಲ್ಲೂ ಮಹಿಳೆಯರು ಅಷ್ಟೇ ಉತ್ತಮ ಕೆಲಸ ಮಾಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದ್ದರಿಂದ ಹೊರಗುತ್ತಿಗೆ ಮೂಲಕ ನೀಡುವ ಎಲ್ಲ ಸರಕಾರಿ ಉದ್ಯೋಗ ಮತ್ತು ಸೇವೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕು.


ಇದನ್ನೂMLA's Salary: ಏರಿಕೆಯಾಯ್ತು ಜನ ಪ್ರತಿನಿಧಿಗಳ ಸಂಬಳ; ಈಗ ನಮ್ಮ ಶಾಸಕರ ಸ್ಯಾಲರಿ 2 ಲಕ್ಷ!ಓದಿ: 


ಸಂಬಂಧಪಟ್ಟ ಅಧಿಕಾರಿಗಳು ಹೊರಗುತ್ತಿಗೆ ನೌಕರರನ್ನು ಹುಡುಕುವ ಟೆಂಡರ್‌ನಲ್ಲಿ ನಮೂದಿಸಬೇಕು. ಹೊರಗುತ್ತಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವಾಗ ಖಾಸಗಿ ಏಜೆನ್ಸಿಗಳೊಂದಿಗಿನ ತಿಳುವಳಿಕೆ ಪತ್ರದಲ್ಲಿಯೂ ಈಕುರಿತು ಮಾಹಿತಿ ಸಹ ಸೇರಿಸಬೇಕು ಎಂದು ಸುತ್ತೋಲೆಯನ್ನು ಸೂಚಿಸಲಾಗಿದೆ.


ಎಲ್ಲೆಲ್ಲಿ ಅನ್ವಯ ಆಗುತ್ತದೆ?
ಶೇಕಡಾ 33 ರಷ್ಟು ಮೀಸಲಾತಿಯು ಎಲ್ಲಾ ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಇತರ ಸರ್ಕಾರಿ ಕಚೇರಿಗಳಿಗೆ ಅನ್ವಯಿಸುತ್ತದೆ. ಯಾವುದೇ ಅಡೆತಡೆಯಿಲ್ಲದೆ ಅನುಷ್ಠಾನವಾಗುವಂತೆ ಹಿರಿಯ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸುತ್ತೋಲೆಯನ್ನು ತಿಳಿಸಲಾಗಿದೆ. 


ಎಸ್​ಎಸ್​ಎಲ್​ಸಿಲಿ ಅತ್ಯುತ್ತಮ ಅಂಕ ಪಡೆದಿದ್ದರೆ ಇಲ್ಲಿದೆ ಗುಡ್ ನ್ಯೂಸ್
ನೀವು ಎಸ್ಎಸ್ಎಲ್‌ಸಿ ಸ್ಟೂಡೆಂಟಾ (SSLC Students) ? ಅಥವಾ ನಿಮ್ಮ ಮನೆಯಲ್ಲಿ 10ನೇ ತರಗತಿ (10th Class) ಮುಗಿಸಿದ ವಿದ್ಯಾರ್ಥಿಗಳಿದ್ದಾರಾ? ನೀವು ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ (Marks) ಪಡೆದು ಪಾಸಾಗಿದ್ದೀರಾ? ಹಾಗಿದ್ರೆ ನಿಮಗೆ ಇಲ್ಲಿದೆ ನೋಡಿ ಒಂದು ಗುಡ್ ನ್ಯೂಸ್ (Good News). ಅದೇನಪ್ಪಾ ಅಂದ್ರೆ 2021-22ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಒಂದು ಬಿಗ್ ಆಫರ್ (Big Offer) ಕೊಡ್ತಿದೆ. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು 25 ಸಾವಿರ ರೂಪಾಯಿ ಪ್ರೋತ್ಸಾಹ ಧನದ ರೂಪದಲ್ಲಿ ಕ್ಯಾಶ್ ಪ್ರೈಸ್ (Cash Prize) ಕೊಡುತ್ತಿದೆ. ಹಾಗಿದ್ರೆ ಇದನ್ನು ಪಡೆಯೋದಕ್ಕೆ ಏನು ಮಾಡಬೇಕು? ಯಾವೆಲ್ಲಾ ಅರ್ಹತೆಗಳು ಇರಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…


ಇದನ್ನೂ ಓದಿ: SSLCಯಲ್ಲಿ Rank ಪಡೆದಿದ್ದೀರಾ? ಹಾಗಾದ್ರೆ ನಿಮಗೆ BBMP ಕೊಡುತ್ತಿದೆ ಬಿಗ್ ಆಫರ್! ಏನದು ಅಂತ ತಿಳಿದುಕೊಳ್ಳಲು ಇಲ್ಲಿ ಓದಿ


ಬಿಬಿಎಂಪಿಯಿಂದ ವಿದ್ಯಾರ್ಥಿಗಳಿಗೆ 25,000 ರೂಪಾಯಿ ಬಹುಮಾನ
ಬಿಬಿಎಂಪಿ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಬಿಬಿಎಂಪಿ ಗುಡ್‌ ನ್ಯೂಸ್‌ ಒಂದನ್ನ ನೀಡಿದೆ. ಬಿಬಿಎಂಪಿ ಪ್ರೌಢಶಾಲೆಗಳ ಶಾಲೆಯಲ್ಲಿ ಓದಿ, ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ಪ್ರೋತ್ಸಾಹಧನ ನೀಡಿ ಗೌರವಿಸಲು ತೀರ್ಮಾನಿಸಿದೆ. ಇದು ಬಿಬಿಎಂಪಿ ವ್ಯಾಪ್ತಿಯ 144 ವಿದ್ಯಾರ್ಥಿಗಳಿಗೆ ಸಿಗಲಿದೆ.

top videos
    First published: