• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Minimum Wage: ಕರ್ನಾಟಕದಲ್ಲಿ ಕನಿಷ್ಠ ವೇತನ ಪ್ರಕಟ; ಇನ್ಮುಂದೆ ನಿಮಗೆ ಇಷ್ಟು ಸ್ಯಾಲರಿ ಗ್ಯಾರೆಂಟಿ

Minimum Wage: ಕರ್ನಾಟಕದಲ್ಲಿ ಕನಿಷ್ಠ ವೇತನ ಪ್ರಕಟ; ಇನ್ಮುಂದೆ ನಿಮಗೆ ಇಷ್ಟು ಸ್ಯಾಲರಿ ಗ್ಯಾರೆಂಟಿ

ಕನಿಷ್ಠ ವೇತನ ಜಾರಿ

ಕನಿಷ್ಠ ವೇತನ ಜಾರಿ

ಶ್ರಾವಣ ಮಾಸ ಅಂದ್ರೆ ಹಬ್ಬಗಳ ಸಾಲು ಸಾಲು. ಹೀಗಿರೋವಾಗ ಸರ್ಕಾರ ಕಾರ್ಮಿಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಕನಿಷ್ಠ ವೇತನ ಪ್ರಕಟವಾಗಿದ್ದು ಹಬ್ಬಗಳ ಮಾಸದಲ್ಲೇ ಕಾರ್ಮಿಕರ ಬಾಳಲ್ಲಿ ಮತ್ತಷ್ಟು ರಂಗು ಬಂದಂತಾಗಿದೆ.

 • Share this:

ಬೆಂಗಳೂರು: ಕರ್ನಾಟಕ  ರಾಜ್ಯ ಸರ್ಕಾರ ಕನಿಷ್ಠ ವೇತನ (Minimum Wage) ಪ್ರಕಟಿಸಿದೆ. ಕೊರೋನಾ (Corona) ಕಾಟದಿಂದಾಗಿ ಕಳೆದ 2 ವರ್ಷಗಳಿಂದ ನಿಂತುಹೋಗಿದ್ದ ಕನಿಷ್ಠ ವೇತನವನ್ನು ಸರ್ಕಾರ (Karnataka Government) ಜಾರಿಗೆ ಮುಂದಾಗಿದೆ. ಈ ಮೂಲಕ ಕಾರ್ಮಿಕರಿಗೆ ಸರ್ಕಾರ ಗುಡ್​ನ್ಯೂಸ್​ (Good News) ಕೊಟ್ಟಿದೆ. ಕೊರೋನಾದಿಂದ ಕನಿಷ್ಠ ವೇತನ ಪರಿಷ್ಕೃರಣೆ ಆಗಿರಲಿಲ್ಲ. ಈಗ ಒಂದಷ್ಟು ವಿಭಾಗಕ್ಕೆ ಕನಿಷ್ಠ ವೇತನ ಜಾರಿಯಾಗಿದ್ದು ಕಾರ್ಮಿಕರಿಗೆ ಹಬ್ಬಗಳ (Festival) ಮಾಸದಂದೇ ಗಿಫ್ಟ್ ಸಿಕ್ಕಂತಾಗಿದೆ. ಹೊಸ ವೇತನವು ಜುಲೈ 28ರಿಂದ  ಅಧಿಸೂಚನೆ ಪ್ರಕಟವಾದಾಗಿನಿಂದ ಜಾರಿಗೆ ಬಂದಿದೆ. ಕಾರ್ಮಿಕರ ವೇತನ, ಪಿಎಫ್​ಗಾಗಿ (Provident Fund) ಕಡಿತವಾಗುವ ಹಣ ಹಾಗೂ ಕೆಲಸದ ಸಮಯ ಬದಲಾಗುತ್ತೆ ಅನ್ನೋ ಚರ್ಚೆ ನಡುವೆಯೇ ಕನಿಷ್ಠ ವೇತನ ಪ್ರಕಟವಾಗಿದೆ.


ಶ್ರಾವಣ ಮಾಸ ಅಂದ್ರೆ ಹಬ್ಬಗಳ ಸಾಲು ಸಾಲು. ಹೀಗಿರೋವಾಗ ಸರ್ಕಾರ ಕಾರ್ಮಿಕರಿಗೆ ಭರ್ಜರಿ ಗುಡ್​ನ್ಯೂಸ್ ಕೊಟ್ಟಿದೆ. ಕನಿಷ್ಠ ವೇತನ ಪ್ರಕಟಗೊಂಡಿದ್ದು ಹಬ್ಬಗಳ ಮಾಸದಲ್ಲೇ ಕಾರ್ಮಿಕರ ಬಾಳಲ್ಲಿ ಮತ್ತಷ್ಟು ರಂಗು ಬಂದಂತಾಗಿದೆ.


ಯಾರಿಗೆಷ್ಟು ಕನಿಷ್ಠ ವೇತನ?
ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಗುಡ್​ನ್ಯೂಸ್ ಸಿಕ್ಕಂತಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಾರ್ಮಿಕರಿಗೆ ಪರಿಷ್ಕೃತ ಕನಿಷ್ಠ ವೇತನ ಸಿಗಲಿದೆ. ಈ ಬಗ್ಗೆ  ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿದೆ.


ಇದನ್ನೂ ಓದಿ: ಬೆಳಗಾವಿಯಲ್ಲಿದೆ ಸ್ಟೆನೋಗ್ರಾಫರ್​ ಹುದ್ದೆ; ಮಾಸಿಕ 52650 ರೂವರೆಗೆ ವೇತನ


ಬಿಬಿಎಂಪಿ ಸಿಬ್ಬಂದಿಗೂ ಕನಿಷ್ಠ ವೇತನ
ಬಿಬಿಎಂಪಿ ಕಾರ್ಮಿಕರಿಗೂ ಸರ್ಕಾರ ಶುಭಸುದ್ದಿ ಕೊಟ್ಟಿದೆ. ಹಬ್ಬದ ಸಂದರ್ಭದಲ್ಲಿ ಬಿಬಿಎಂಪಿ ಕಾರ್ಮಿಕರಿಗೂ ಕನಿಷ್ಠ ವೇತನ ಜಾರಿ ನೆಮ್ಮದಿ ತರಿಸಿದೆ. ಸರ್ಕಾರ ಕೊಡುವ ಕನಿಷ್ಠ ವೇತನ ಪ್ಲಾನ್​ನಲ್ಲಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಯೂ ಸೇರಿದೆ.


Karnataka government notifies new Minimum wage good news to BBMP Workers
ಕನಿಷ್ಠ ವೇತನ ಜಾರಿ


ಕನಿಷ್ಠ ವೇತನದಿಂದ BBMP ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ಕಾರ್ಮಿಕರು ಮತ್ತು ಕ್ಲರ್ಕ್‌ಗಳು, ಕಂಪ್ಯೂಟರ್/ಡಾಟಾ ಎಂಟ್ರಿ ಆಪರೇಟರ್‌ಗಳು, ಲ್ಯಾಬ್ ತಂತ್ರಜ್ಞರು ಮತ್ತು ಸಹಾಯಕ ಗ್ರಂಥಪಾಲಕರು ಅಂದಾಜು 18,000 ರೂಪಾಯಿಯಷ್ಟು ಸಂಬಳ ಪಡೆಯಲಿದ್ದಾರೆ.


ಯಾರ ಸಂಬಳ ಎಷ್ಟಾಗಿದೆ?


ಕ್ಲರ್ಕ್​-16,564 ರೂಪಾಯಿ


ಡ್ರೈವರ್ ಕಮ್ ನಿರ್ವಾಹಕರು- 15,777 ರೂಪಾಯಿ


ಚಾಲಕರು- 15,112 ರೂಪಾಯಿ


ಕ್ಲೀನರ್- 13,974 ರೂಪಾಯಿ


ಮೆಕ್ಯಾನಿಕ್‌ಗಳು- 14,657 ರೂಪಾಯಿ


ಪ್ಲಂಬರ್‌ಗಳು- 14,657 ರೂಪಾಯಿ


ವಾಟರ್‌ಮೆನ್​ಗಳು- 14,657 ರೂಪಾಯಿ


ಇದಿಷ್ಟೇ ಅಲ್ಲದೇ ವಿವಿಧ ಸಂಸ್ಥೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಗುಡ್​ನ್ಯೂಸ್ ಸಿಕ್ಕಿದೆ. ಅವರ ವೇತನವೂ 13 ಸಾವಿರ ರೂಪಾಯಿಯಿಂದ 17 ಸಾವಿರ ರೂಪಾಯಿವರೆಗೆ ಏರಿಕೆಯಾದಂತಾಗಿದೆ.


ವಿವರ ಇಲ್ಲಿದೆ


ಅಟೆಂಡರ್- 13,974 ರೂಪಾಯಿ


ತೋಟದ ಕೆಲಸಗಾರರು- 13,974 ರೂಪಾಯಿ


ಸೆಕ್ಯೂರಿಟಿ ಗಾರ್ಡ್​- 13,974 ರೂಪಾಯಿ


ಬೀದಿ ಗುಡಿಸುವವರು-17,306 ರೂಪಾಯಿ


ತ್ಯಾಜ್ಯ ಕೆಲಸಗಾರರು- 17,306 ರೂಪಾಯಿ


ಹೊಸ ವೇತನವು ಜುಲೈ 28ರಿಂದ ಅಧಿಸೂಚನೆಯಾದಾಗಿನಿಂದ ಜಾರಿಗೆ ಬಂದಿದೆ. ಹಾಗಾಗಿ ಕಾರ್ಮಿಕರಿಗೆ ಮತ್ತಷ್ಟು ಗುಡ್​ನ್ಯೂಸ್ ಸಿಕ್ಕಂತಾಗಿದೆ.


ಆದಾಯ ಕುಂಠಿತದಿಂದ ಕನಿಷ್ಠ ವೇತನ ಜಾರಿಯಾಗಿರಲಿಲ್ಲ
ಕೇಂದ್ರ ಸರ್ಕಾರ ಕನಿಷ್ಠ ವೇತನ ದರವನ್ನು ಅಧಿನಿಯಮ 1948ರ ಅಡಿಯಲ್ಲಿ 2010ರಲ್ಲಿ  ಜಾರಿಮಾಡಿತು. ಅಕ್ಟೋಬರ್ 1ಕ್ಕೆ ಇದನ್ನು ಪರಿಷ್ಕೃರಿಸಲಾಯ್ತು. ಆಯಾ ರಾಜ್ಯ ಸರ್ಕಾರಗಳು ಆಯಾ ಕಾಲಕ್ಕೆ ತಕ್ಕಂತೆ, ವರ್ಷಕ್ಕೊಮ್ಮೆ ದರವನ್ನು ಪರಿಷ್ಕರಣೆ ಮಾಡುತ್ತದೆ. ಆದರೆ ಕೊರೋನಾದಿಂದಾಗಿ, ಆದಾಯ ಕುಂಠಿತವಾಗಿ ಕನಿಷ್ಠ ವೇತನ ಜಾರಿಯಾಗಿರಲಿಲ್ಲ. ಈಗ ಸರ್ಕಾರ ಪ್ರಕಟ ಮಾಡಿದೆ.


ಇದನ್ನೂ ಓದಿ: ಹಸಿಮೆಣಸು ಬೆಳೆದು ಇಷ್ಟೆಲ್ಲ ಲಾಭ? ಹೌದು ಅಂತಿದ್ದಾರೆ ಈ ಮಹಿಳೆಯರು!

top videos


  ಮುಖ್ಯವಾಗಿ ಕನಿಷ್ಠ ವೇತನ ದರ, ಕೃಷಿ ಸೇರಿದಂತೆ ಅನುಸೂಚಿತ ಉದ್ಯೋಗಗಳಿಗೆ ನಿಗದಿಪಡಿಸಿದ ಸಂಘಟಿತ ಮತ್ತು ಅಸಂಘಟಿತ ವಲಯಗಳ ಕ್ಷೇತ್ರಕ್ಕೂ ಅನ್ವಯವಾಗುತ್ತದೆ.

  First published: