ಕೃಷಿ (Agriculture)ಉದ್ದೇಶಕ್ಕೆ ಭೂಮಿ ಪಡೆದು ಆ ಭೂಮಿಯನ್ನ(Land) ಮನೆ (Home)ಕಟ್ಟಲು ಬಳಕೆ ಮಾಡಿಕೊಂಡರೆ ಕೈಗೊಳ್ಳಲಾಗುವುದು ಎಂದು ಕೆಲವು ದಿನಗಳ ಹಿಂದೆ ಸರ್ಕಾರ(Government) ಹೇಳಿತ್ತು. ಅಲ್ಲದೆ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನನ್ನು ಮಾರಾಟ ಮಾಡುವಂತಿಲ್ಲ. ಮಾರಾಟ ಮಾಡಿದರೆ ಫೋಡಿ ಅಥವಾ 11ಇ ನಕ್ಷೆ ದೊರೆಯುವುದಿಲ್ಲ ಎಂಬ ತುಂಬಾ ಆದೇಶವನ್ನು(Order) ಸರಕಾರ ಅಧಿಕೃತವಾಗಿ ಹೊರಡಿಸಿತ್ತು. 5 ಕುಂಟೆ ಗಿಂತ ಕಡಿಮೆ ಕೃಷಿ ಭೂಮಿ ಮಾರಾಟ ಮಾಡಲು ವಿಸ್ತೀರ್ಣದ ಮಿತಿಮೀರಿದ ರಾಜ್ಯ ಸರ್ಕಾರದ ಆದೇಶಕ್ಕೆ ರಾಜ್ಯಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು.. ಇದರ ಬೆನ್ನಲ್ಲೇ ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಇದರ ಕುರಿತು ಸ್ಪಷ್ಟೀಕರಣ ಆದೇಶ ಹೊರಡಿಸಿದೆ.
ಕೃಷಿಭೂಮಿ ಮಾರಾಟಕ್ಕೆ ವಿಸ್ತೀರ್ಣದ ಮಿತಿ ಹೇರಿದ್ದ ಸರ್ಕಾರದ ವಿರುದ್ಧ ಆಕ್ರೋಶ
ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ ಅಸ್ತಿತ್ವದಲ್ಲಿರುವ ಕೃಷಿ ಭೂಮಿಯ ವಿಸ್ತೀರ್ಣ ಎಷ್ಟೇ ಇದ್ದರೂ ಅದರಲ್ಲಿ ಭಾಗಶಃ ಅಥವಾ ಸಂಪೂರ್ಣವಾಗಿ ವಿಸ್ತೀರ್ಣವನ್ನು ಯಾವುದೇ ನಿರ್ಬಂಧವಿಲ್ಲದೆ ಪರಿವರ್ತನೆಯ ಮಾಡಬಹುದಾಗಿದೆ.
ಈ ರೀತಿಯಾಗಿ ಭಾಗಶಃ ವಿಸ್ತೀರ್ಣ ಭೂ ಪರಿವರ್ತನೆಯಾದ ಬಳಿಕ ಉಳಿದಿರುವ ಭೂಮಿ ಉಲ್ಲೇಖಿತ ಆದೇಶದಲ್ಲಿ ನಮೂದಿಸಿರುವ ವಿಸ್ತೀರ್ಣಕ್ಕಿಂತ ಕಡಿಮೆ ಇದ್ದರೂ ಉಳಿದ ವಿಸ್ತೀರ್ಣಕ್ಕೆ ಕೃಷಿ ಭೂಮಿಯಾಗಿ ಪಹಣಿ ಮುಂದುವರಿಯುತ್ತದೆ. ಬಳಿಕ ಉಳಿದಿರುವ ಕೃಷಿ ಭೂಮಿ ಎಷ್ಟೇ ವಿಸ್ತೀರ್ಣವಾಗಿದ್ದರೂ ಕೂಡ ಮತ್ತೆ ಭಾಗಶಃ ಅಥವಾ ಪೂರ್ಣ ಭೂಮಿಯನ್ನು ಪರಿವರ್ತನೆ ಮಾಡಬಹುದಾಗಿದೆ
ಇದನ್ನೂ ಓದಿ: ದಾನ ನೀಡಿದ 70 ವರ್ಷದ ಬಳಿಕ ಶಾಲೆ ಜಾಗ ಬಿಡುವಂತೆ ಕೋರ್ಟ್ ಮೊರೆ ಹೋದ ದಾನಿಯ ಸೊಸೆಯಂದಿರು
ಇನ್ನು ಹೊಸ ಆದೇಶಕ್ಕೆ ಅನುಗುಣವಾಗಿ ಮೋಜಿಣಿ ತಂತ್ರಾಂಶದಲ್ಲಿ ಸೂಕ್ತ ಅವಕಾಶ ನೀಡಲಾಗಿದೆ ಹಾಗೂ ಭೂ ಪರಿವರ್ತನೆಗೆ ಸ್ಕೆಚ್ ಮಾಡಬಹುದಾಗಿದೆ. ಅಲ್ಲದೆ ಕೃಷಿ ಭೂಮಿ ಮಾರಾಟಕ್ಕೆ 11ಇ ಸ್ಕೆಚ್ಗಾಗಿ ಪಡೆದಿರುವ ಅರ್ಜಿಗಳನ್ನು ಅವು 3 ಅಥವಾ 5 ಗುಂಟೆಗಿಂತ ಕಡಿಮೆ ಇದ್ದರೂ ಅರ್ಹತೆಗೆ ಅನುಗುಣವಾಗಿ 11ಇ ಸ್ಕೆಚ್ನ್ನು ನೀಡಬಹುದು.
ಹೊಸ ಪಹಣಿ ರಚಿಸಬಹುದು ಎಂದು ಭೂ ಮಾಪನಾ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ನೀಡಿರುವ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಈ ಹಿಂದಿನ ಆದೇಶದಲ್ಲಿ ನಾಲ್ಕು ಜಿಲ್ಲೆಗಳಿಗೆ ವಿನಾಯಿತಿ
ತುಂಡು ಭೂಮಿಯಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳಲು ಸಾಧ್ಯವಿಲ್ಲ. ಕಡಿಮೆ ವಿಸ್ತೀರ್ಣ ಹೊಂದಿರುವ ಸರ್ವೆ ನಂಬರ್ಗಳನ್ನು ಸೃಷ್ಟಿಸುವುದು ಕಷ್ಟವಾಗಿದೆ. ಅದಕ್ಕಾಗಿ ಇದನ್ನು ತಡೆಯುವ ಉದ್ದೇಶಕ್ಕೆ 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಯನ್ನು ಮಾರಾಟ ಮಾಡದಂತೆ ರಾಜ್ಯ ಸರ್ಕಾರ ತಡೆ ನೀಡಿತ್ತು .
ಅಲ್ಲದೆ ಕರ್ನಾಟಕ ಭೂಕಂದಾಯ ಅಧಿನಿಯಮ 1964 ರ 108 ರಡಿ ಕೃಷಿ ಉದ್ದೇಶಕ್ಕಾಗಿ ಬಳಸಲಾಗುವ ಭೂಮಿಯನ್ನು ಒಳಗೊಂಡ ಸರ್ವೆ ನಂ. ನ ಕನಿಷ್ಠ ವಿಸ್ತೀರ್ಣವನ್ನು ಕೊಡಗು, ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆದೇಶದಲ್ಲಿ ವಿನಾಯಿತಿ ನೀಡಲಾಗಿದ್ದು, ಈ ನಾಲ್ಕು ಜಿಲ್ಲೆಗಳಲ್ಲಿ 3 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಭೂಮಿ ಮಾರಾಟ ಮಾಡಲು ಅವಕಾಶವಿಲ್ಲ.
ಉಳಿದ ಜಿಲ್ಲೆಗಳಲ್ಲಿ ಕನಿಷ್ಠ 5 ಗುಂಟೆಯನ್ನು ಸರ್ಕಾರ ನಿಗದಿ ಮಾಡಿದೆ. ಕೃಷಿ ಉದ್ದೇಶಕ್ಕೆ ಉಪಯೋಗಿಸುವ ಭೂಮಿಯ ಸರ್ವೆ ನಂಬರ್ಗಳಲ್ಲಿ ಕನಿಷ್ಠ ವಿಸ್ತೀರ್ಣಕ್ಕಿಂತ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಾರಣ ತುಂಡು-ತುಂಡು ಭೂಮಿ ಮಾರಾಟ ಅಥವಾ ರೆವಿನ್ಯೂ ಬಡಾವಣೆ ನಿರ್ಮಾಣ ಮಾಡಿ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸರಕಾರ 5 ಗುಂಟೆ ಗಿಂತ ಕಡಿಮೆ ಕೃಷಿಭೂಮಿ ಇರುವ ಜಮೀನು ಮಾರಾಟ ಮಾಡಲು ನಿರ್ಬಂಧ ವಿಧಿಸಿತು.
ಕೃಷಿಯೇತರ ಉದ್ದೇಶಗಳಿಗೆ ಬಳಕೆಯಾಗುತ್ತಿರುವ ಕೃಷಿ ಭೂಮಿ..
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ರೈತರಿಂದ ಕೃಷಿ ಮಾಡುವ ಉದ್ದೇಶದಿಂದ ಜಮೀನು ಖರೀದಿ ಮಾಡಿ, ನಗರಾಭಿವೃದ್ಧಿ ಕಾಯ್ದೆಯಡಿ ನಿಯಮಬದ್ಧವಾಗಿ ಅನುಮೋದನೆ ಪಡೆಯದೆ ಕೃಷಿ ಭೂಮಿಗಳನ್ನು ವಾಣಿಜ್ಯೇತರ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಬಹುತೇಕರು ಕೃಷಿ ಭೂಮಿಗಳನ್ನು ಸೈಟು ಅಥವಾ ಕಟ್ಟಡಗಳಾಗಿ ಪರಿವರ್ತನೆ ಮಾಡಿ, ಲೇಔಟ್ ನಿರ್ಮಾಣ ಮಾಡುತ್ತಿದ್ದಾರೆ..ಅಲ್ಲದೆ ಕೃಷಿ ಭೂಮಿಗಳನ್ನು ಇತರರಿಗೆ ತುಂಡು ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ನಗರದಲ್ಲಿ ರಸ್ತೆ ಒಳಚರಂಡಿ ನೀರು ಜಾತಿ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಕಷ್ಟ ವಾಗುತ್ತಿದೆ ಎಂಬ ವಾದವನ್ನು ಇಟ್ಟುಕೊಂಡು ಸರ್ಕಾರ ಈ ರೀತಿಯ ಆದೇಶ ಮಾಡಿತ್ತು.
ಇದನ್ನೂ ಓದಿ: ಕೃಷಿ ಭೂಮಿ ಮಾರಾಟ ಮಾಡಬೇಕು ಎಂದುಕೊಂಡವರಿಗೆ ಸರ್ಕಾರದ ಶಾಕ್! 5 ಗುಂಟೆಗಿಂತ ಕಡಿಮೆ ಜಮೀನು ಮಾರಾಟ ಮಾಡುವಂತಿಲ್ಲ
ರೈತರಿಗೆ ಸಮಸ್ಯೆ ತಂದ ಸರ್ಕಾರದ ಆದೇಶ..
ಇನ್ನು 5 ಗುಂಟೆಗಿಂತ ಕಡಿಮೆ ವಿಸ್ತೀರ್ಣದ ಕೃಷಿ ಜಮೀನನ್ನು ಮಾರಾಟ ಮಾಡುವಂತಿಲ್ಲ ಎಂಬ ಸರ್ಕಾರದ ಆದೇಶ ಈಗ ಸಣ್ಣ ರೈತರಿಗೆ ಕಂಟಕವಾಗಿ ಪರಿಣಮಿಸಿದೆ. ತುರ್ತು ಸಂದರ್ಭಗಳಲ್ಲಿ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಬೇಕು ಎಂದರು ಸಹ ಸಮಸ್ಯೆಯ ಸುಳಿಯಲ್ಲಿ ಸಿಲುಕಲಿದ್ದಾರೆ.
ರೆವಿನ್ಯೂ ಬಡಾವಣೆಗಳಲ್ಲಿ 1 ಗುಂಟೆಗಿಂತ ಕಡಿಮೆ ವಿಸ್ತೀರ್ಣವನ್ನು ಒಂದು ಸೈಟ್ ಲೆಕ್ಕದಲ್ಲಿ ಮಾರಾಟ ಮಾಡಲಾಗುತ್ತಿದೆ. 1 ಗುಂಟೆ ಅಥವಾ ಕಂದಾಯ ಲೇಔಟ್ಗೆ ಕಡಿವಾಣ ಹಾಕಬಹುದಾಗಿತ್ತು. ಈ ಆದೇಶದಿಂದ ಸಣ್ಣ ರೈತರಿಗೆ 5 ಗುಂಟೆಗಿಂತ ಕಡಿಮೆ ಭೂಮಿ ಮಾರಾಟಕ್ಕೆ ಅವಕಾಶವಿಲ್ಲ. ಹೀಗಾಗಿ ಅನಿವಾರ್ಯ ಕಾರಣಗಳಿಂದ ತಮ್ಮ ಕೃಷಿ ಜಮೀನು ಮಾರಾಟ ಮಾಡಲು ಮುಂದಾಗುವ ರೈತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಲಿದ್ದಾರೆ..
ಹೀಗಾಗಿ ಇದರ ವಿರುದ್ಧ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಭೂ ಮಾಪನಾ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಆಯುಕ್ತ ಮುನೀಶ್ ಮೌದ್ಗಿಲ್ ಈ ಬಗ್ಗೆ ಮರು ಆದೇಶ ಹೊರಡಿಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ