ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವ ಸಂಭ್ರಮ (Independence Day) ಆರಂಭವಾಗಿದೆ. ಅದರಲ್ಲೂ ಈ ಬಾರಿಯ ಸ್ವಾತಂತ್ರ್ಯೋತ್ಸವ ಮತ್ತಷ್ಟು ವಿಶೇಷ. ಭಾರತ (India) ದೇಶ ಸ್ವಾತಂತ್ರ್ಯ ಪಡೆದು 75ನೇ ವರ್ಷ. ಹಾಗಾಗಿ ದೇಶದ ಮೂಲೆ ಮೂಲೆಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ ಜೋರಾಗಿದೆ. ಎಲ್ಲಿ ನೋಡಿದ್ರೂ ತಿರಂಗಾ (Indian Flag) ರಾರಾಜಿಸ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅದ್ಧೂರಿಯಾಗಿ ಆಚರಣೆಗೆ ಕೇಂದ್ರ ಸರ್ಕಾರವೂ ಮನವಿ ಮಾಡಿದೆ. ಕೇಂದ್ರ ಸರ್ಕಾರವೂ ಈ ಬಗ್ಗೆ ಭರ್ಜರಿ ತಯಾರಿ ಕೂಡ ನಡೆಸಿದೆ. ಕರ್ನಾಟಕದಲ್ಲೂ (Karnataka) ಹರ್ಘರ್ ತಿರಂಗಾ (Har Ghar Tiranga) ಸಂಭ್ರಮ ಮನೆ ಮಾಡಿದೆ. ಆದರೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನೆಪದಲ್ಲಿ ಹಿಂದಿ (Hindi) ಹೇರಿಕೆ ಮಾಡಲಾಗ್ತಿದ್ಯಾ ಅನ್ನೋ ಅನುಮಾನ ಮೂಡಿದ್ದು, ಕನ್ನಡಕ್ಕೆ ಅವಮಾನ ಆಗಿದೆ.
ದೇಶಾದ್ಯಂತ ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಹರ್ಘರ್ ತಿರಂಗಾ ಅಭಿಯಾನ ಮಾಡಲಾಗ್ತಿದೆ. ಕನ್ನಡಿಗರು ಕೂಡ ಕನ್ನಡ ಭಾಷೆಯಲ್ಲೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂತಾ ಹೆಮ್ಮೆಯಿಂದ ಹೇಳಿಕೊಳ್ತಿದ್ದಾರೆ. ಆದರೆ ಕನ್ನಡವನ್ನು ಉಳಿಸಬೇಕಾದ ಸರ್ಕಾರವೇ ಅಪಮಾನ ಮಾಡಿದೆ.
ಕನ್ನಡ ವೆಬ್ಸೈಟ್-ಹಿಂದಿ ಪೋಸ್ಟರ್
ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್ಸೈಟ್ನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಬಗ್ಗೆ ಹಿಂದಿ ಪೋಸ್ಟರ್ನ್ನೇ ಹಾಕಿ ಪ್ರಚಾರ ಮಾಡಲಾಗ್ತಿದೆ. ಹರ್ಘರ್ ತಿರಂಗಾ ಅನ್ನೋದನ್ನು ಹಿಂದಿಯಲ್ಲೇ ಹಾಕಲಾಗಿದೆ. ಇದಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ಸೈಟ್ನಲ್ಲಿ ಹಿಂದಿ ಹೇರಿಕೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗ್ತಿದೆ. ರಾಜ್ಯ ಸರ್ಕಾರದ್ದು ಇದು ಕನ್ನಡ ವಿರೋಧಿ ಧೋರಣೆ ಅಂತಾ ಖಂಡಿಸ್ತಿದ್ದಾರೆ. ವೆಬ್ಸೈಟ್ನಲ್ಲಿ ಹಿಂದಿ ಪೋಸ್ಟರ್ ಬದಲು ಕನ್ನಡವೇ ಯಾಕೆ ಬಳಸಬಾರದು ಅಂತಾ ಪ್ರಶ್ನಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ಸೈಟ್ ನೋಡಿ ಕನ್ನಡ ತಾಯಿ ಪಾವನವಾದಳು ಅಂತಾ ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಆಕ್ರೋಶ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ಸೈಟ್ನಲ್ಲಿ ಹಿಂದಿ ಪೋಸ್ಟರ್ ಬಳಸಿದ್ದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಶರಣಾಗತಿ ಕನ್ನಡ ಮಣ್ಣಿನ ಗುಣವಲ್ಲ. ರಾಣಿ ಅಬ್ಬಕ್ಕನ ನೆಲದಿಂದ ಬಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಈ ಗುಲಾಮಿ ಮನಸ್ಥಿತಿ ಬರಬಾರದಿತ್ತು ಎಂದಿದ್ದಾರೆ.
ಕನ್ನಡದ ರಕ್ಷಣೆಗಾಗಿಯೇ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ 2 ಸಾವಿರ ಇತಿಹಾಸವಿರೋ ಕನ್ನಡಕ್ಕೆ ಅಪಮಾನ ಮಾಡಿದ್ರೆ ಕನ್ನಡ ಭಾಷೆಯನ್ನು ರಕ್ಷಿಸುವವರು ಯಾರು ಅಂತಾ ಸಿದ್ದರಾಮಯ್ಯ ಪ್ರಶ್ನಿಸಿ 6 ಸರಣಿ ಟ್ವೀಟ್ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ವಿಚಾರಣೆಗೆ ಹಾಜರಾದ ಶಾಸಕ ಜಮೀರ್ಗೆ ಎಸಿಬಿ ಡ್ರಿಲ್, ಇವರ ಕಣ್ಣಿಗೆ ಕಾಣೋದು ನಾನು ಹಾಗೂ ಡಿಕೆಶಿ ಮಾತ್ರನಾ?
ಕೆಟ್ಟ ಮೇಲೆ ಬುದ್ಧಿ ಕಲಿತ ಸರ್ಕಾರ
ರಾಜ್ಯ ಸರ್ಕಾರದ ಹಿಂದಿ ಪ್ರೇಮ ಮತ್ತು ಕನ್ನಡ ವಿರೋಧಿ ನಡೆಗೆ ಆಕ್ರೋಶ ಹೆಚ್ಚಾಗ್ತಿದ್ದಂತೆ ಕೊನೆಗೂ ಎಚ್ಚೆತ್ತುಕೊಂಡಿದೆ. ಕನ್ನಡಿಗರ ಆಕ್ರೋಶಕ್ಕೆ ಮಣಿದು ಹರ್ಘರ್ ತಿರಂಗಾ ಅನ್ನೋ ಹಿಂದಿ ಪೋಸ್ಟರ್ನ್ನು ತೆಗೆದುಹಾಕಿದೆ.
ಸರ್ಕಾರಕ್ಕೆ ಸಿದ್ದರಾಮಯ್ಯ ಚಾಟಿ
ನಾನು ಸರಣಿ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ ನಂತರ ಸರ್ಕಾರ ಎಚ್ಚೆತ್ತುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್ಸೈಟ್ನಲ್ಲಿದ್ದ ಹಿಂದಿ ಪೋಸ್ಟರ್ನ್ನು ತೆಗೆದುಹಾಕಿದೆ.
ನಾನು ಚಾಟಿ ಬೀಸಿದ ನಂತರ ಸರ್ಕಾರ ಎಚ್ಚೆತ್ತುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿ ಅನಗತ್ಯವಾಗಿ ತುರುಕಿದ್ದ ಹಿಂದಿಯನ್ನು ಕಿತ್ತೊಗೆದಿದೆ.@BJP4Karnataka ನಾಯಕರೇ, ನಾನೊಬ್ಬ ಕನ್ನಡಿಗ ಎಂಬ ಸ್ವಾಭಿಮಾನವನ್ನು ನೀವೇ ಬೆಳೆಸಿಕೊಳ್ಳಬೇಕು, ಇದು ನಾವು ಹೇಳಿ ಬರುವಂತದ್ದಲ್ಲ.
ಹಿಂದಿ ರಾಷ್ಟ್ರಭಾಷೆ ಎಂಬ ಭ್ರಮೆಯಿಂದ ಹೊರಬನ್ನಿ. pic.twitter.com/FxWd2lTO3e
— Siddaramaiah (@siddaramaiah) August 6, 2022
ಬಿಜೆಪಿ ನಾಯಕರೇ ಹಿಂದಿ ರಾಷ್ಟ್ರಭಾಷೆ ಅನ್ನೋ ಭ್ರಮೆಯಿಂದ ಹೊರಬನ್ನಿ ಅಂತಾ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಅರರೆ, ಹುಲಿರಾಯ! ವೈರಲ್ ಆಗ್ತಿದೆ ನಾಗರಹೊಳೆಯ ವಿಡಿಯೋ
ಸರ್ಕಾರದ ಕಾರ್ಯಕ್ರಮಗಳಲ್ಲೇ ಸರ್ಕಾರದಿಂದ ಕನ್ನಡಕ್ಕೆ ಅಪಮಾನವಾಗ್ತಿದೆ. ಬೇರೆ ರಾಜ್ಯಗಳಲ್ಲಿ ಅವರ ಕಾರ್ಯಕ್ರಮಗಳಲ್ಲಿ ರಾಜ್ಯಭಾಷೆಯನ್ನೇ ಮೊದಲು ಬಳಸುವಾಗ ನಮ್ಮ ರಾಜ್ಯದಲ್ಲಿ ಮಾತ್ರ ಹಿಂದಿ ಅಂತಾ ಓಲೈಕೆ ಮಾಡುತ್ತಿರೋದಕ್ಕೆ ಕನ್ನಡಿಗರು ಪ್ರಶ್ನಿಸ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ