ಬೆಂಗಳೂರು: ಕರ್ನಾಟಕ ಸರ್ಕಾರ (Karnataka government) ರಾಜ್ಯದ ಎಲ್ಲಾ ಮಹಿಳೆಯರಿಗೆ ಫ್ರೀ ಬಸ್ ಪ್ರಯಾಣಕ್ಕೆ (free bus travel to all women) ಅವಕಾಶ ನೀಡಿ ಆದೇಶ ಹೊರಡಿಸಿದೆ. ಚುನಾವಣೆಗೂ (elections) ಮುನ್ನ ಕಾಂಗ್ರೆಸ್ (Congress) ನೀಡಿದ್ದ ಗ್ಯಾರಂಟಿಯಲ್ಲಿ (guarantee) ಮಹಿಳೆಯರ ಉಚಿತ ಬಸ್ ಪ್ರಯಾಣ ಕೂಡ ಸೇರಿತ್ತು. ಇದೀಗ ಅದನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯತತ್ಪರವಾಗಿದೆ. ಇದೇ ಜೂನ್ 12ರಿಂದ ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಮತ್ತು ಲೈಂಗಿಕ ಅಲ್ಪ ಸಂಖ್ಯಾತರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದೀಗ ಮಹಿಳೆಯರ ಉಚಿತ ಪ್ರಯಾಣಕ್ಕೆ ರಾಜ್ಯ ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ ಮಹಿಳೆಯರು ಹೇಗೆ ಉಚಿತ ಬಸ್ ಪ್ರಯಾಣ ಮಾಡಬಹುದು? ಯಾವೆಲ್ಲ ಬಸ್ಗಳಲ್ಲಿ ಸಂಚರಿಸಬಹುದು? ಎಷ್ಟು ಬಾರಿ ಓಡಾಡಬಹುದು? ಕುತೂಹಲಕ್ಕಾಗಿ ಈ ಸುದ್ದಿ ಓದಿ…
ಮಹಿಳೆಯರ ಉಚಿತ ಪ್ರಯಾಣಕ್ಕೆ ಮಾರ್ಗಸೂಚಿ
ರಾಜ್ಯ ಸರ್ಕಾರವು ಇದೀಗ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿಯಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ. ಹಾಗಾದ್ರೆ ಅವುಗಳು ಏನು ಅಂತ ನೋಡೋದಾದ್ರೆ
ಈ ಬಸ್‌ಗಳಲ್ಲಿ ಉಚಿತ ಸಂಚಾರ ಇರೋದಿಲ್ಲ
ಉಚಿತ ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಟ್ ಅಥವಾ ಗುರುತಿನ ಚೀಟಿ ಅಗತ್ಯ
ಇದನ್ನೂ ಓದಿ: Free Electricity: ನಿಮ್ಮ ಮನೆಗೂ ಸಿಗುತ್ತಾ 200 ಯುನಿಟ್ ಉಚಿತ ವಿದ್ಯುತ್? ಫ್ರೀ ಕರೆಂಟ್ ಪಡೆಯುವುದು ಹೇಗೆ?
ಜೂನ್ 12ರಿಂದಲೇ ಉಚಿತ ಪ್ರಯಾಣ ಪ್ರಾರಂಭ
ರಾಜ್ಯ ಸರ್ಕಾರವು ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಇದೇ ಜೂನ್ 12ರಿಂದ ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ