ರಾಜ್ಯ ಸರಕಾರದಿಂದ ಪೆಟ್ರೋಲ್ ಶಾಕ್..! ಏರಿಕೆಯಾಯ್ತು ತೆರಿಗೆ ದರ; ಇಲ್ಲಿದೆ ಹೊಸ ಪೆಟ್ರೋಲ್ ಬೆಲೆ

ರಾಜ್ಯ ಸರಕಾರವು ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ., 28.75ರಿಂದ ಶೇ. 32 ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 17.73ರಿಂದ ಶೇ. 21ಕ್ಕೆ ಏರಿಕೆ ಮಾಡಿದೆ.

Vijayasarthy SN | news18
Updated:January 4, 2019, 9:19 PM IST
ರಾಜ್ಯ ಸರಕಾರದಿಂದ ಪೆಟ್ರೋಲ್ ಶಾಕ್..! ಏರಿಕೆಯಾಯ್ತು ತೆರಿಗೆ ದರ; ಇಲ್ಲಿದೆ ಹೊಸ ಪೆಟ್ರೋಲ್ ಬೆಲೆ
ಪೆಟ್ರೋಲ್ ಬಂಕ್
  • News18
  • Last Updated: January 4, 2019, 9:19 PM IST
  • Share this:
- ಜನಾರ್ದನ ಹೆಬ್ಬಾರ್,

ಬೆಂಗಳೂರು(ಜ. 04): ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಏರಿಕೆ ಮಾಡಿದೆ. ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ. 3.25 ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 3.27ರಷ್ಟು ಹೆಚ್ಚಳ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಅಂದರೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ಸರಕಾರದ ತೆರಿಗೆಯು ಶೇ. 32 ಹಾಗೂ ಶೇ. 21ಕ್ಕೆ ಏರಿಕೆಯಾಗಿದೆ. ಇದು 2018ರ ಸೆಪ್ಟೆಂಬರ್ 17ಕ್ಕೆ ಪೂರ್ವದಲ್ಲಿ ಇದ್ದ ತೆರಿಗೆ ಮೊತ್ತವಾಗಿದೆ.

ತೆರಿಗೆ ಏರಿಕೆ ಕ್ರಮವನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರಕಾರವು, ಬೊಕ್ಕಸಕ್ಕೆ ಸಂಗ್ರಹವಾಗುತ್ತಿದ್ದ ರಾಜಸ್ವ ಮೊತ್ತ ಕಡಿಮೆಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ತೆರಿಗೆ ಏರಿಕೆಯ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದೆ. ಈಗ ತೆರಿಗೆ ಏರಿಕೆಯ ನಡುವೆಯೂ ನೆರೆ ರಾಜ್ಯಗಳಿಗಿಂತಲೂ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಇರಲಿದೆ ಎಂದು ರಾಜ್ಯ ಸರಕಾರ ವಾದಿಸಿದೆ.

2018ರ ಜುಲೈ15ರಂದು ರಾಜ್ಯ ಸರಕಾರವು ಪೆಟ್ರೋಲ್ ಮೇಲಿನ ತೆರಿಗೆ ದರವನ್ನು ಶೇ. 30ರಿಂದ ಶೇ. 32ಕ್ಕೆ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಶೇ. 19ರಿಂದ ಶೇ. 21ಕ್ಕೆ ಹೆಚ್ಚಳ ಮಾಡಿತ್ತು. ಈ ಕ್ರಮದಿಂದ ಪ್ರತೀ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್​ನಿಂದ 1.14 ಹಾಗೂ 1.12 ರೂಪಾಯಿಯಷ್ಟು ಹೆಚ್ಚುವರಿ ಆದಾಯ ದೊರಕುತ್ತಿತ್ತು. ಅದಾದ ನಂತರ ಜಾಗತಿಕ ಮಾರುಕಟ್ಟೆಯ ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಏರಿಕೆಯಾಗುತ್ತಿದ್ದರಿಂದ ರಾಜ್ಯದ ಜನತೆಯ ಭಾರ ಇಳಿಸಲು ರಾಜ್ಯ ಸರಕಾರ ಲೀಟರ್​ಗೆ 2 ರೂಪಾಯಿಯಷ್ಟು ಹಣ ಕಡಿಮೆ ಮಾಡಿತು. ಈಗ ಪೆಟ್ರೋಲ್ ಮೂಲ ಬೆಲೆಯಲ್ಲಿ ಗಣನೀಯ ಇಳಿಕೆಯಾಗುತ್ತಿರುವುದರಿಂದ ರಾಜ್ಯ ಸರಕಾರದ ಬೊಕ್ಕಸಕ್ಕೆ ಬೀಳುವ ಹಣ ಕಡಿಮೆಯಾಗುತ್ತಿದೆ. ಹೀಗಾಗಿ, ಮೊದಲಿದ್ದ ತೆರಿಗೆಯನ್ನೇ ವಿಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರಕಾರವು ಪ್ರಕಟಣೆ ಹೊರಡಿಸಿದೆ.

ಕರ್ನಾಟಕದಲ್ಲಿ ನೂತನ ಬೆಲೆ:

ಪೆಟ್ರೋಲ್: 70.83 ರೂ.
ಡೀಸೆಲ್: 64.66 ರೂ.
First published:January 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ