Karnataka Government Holiday: 2022ರಲ್ಲಿ ಒಟ್ಟು ಎಷ್ಟು ರಜೆಗಳಿವೆ? ಫುಲ್ ಲಿಸ್ಟ್ ಇಲ್ಲಿದೆ

Karnataka Government Holiday 2022: ಕರ್ನಾಟಕ ಸರ್ಕಾರ 2022ರ ಸಾರ್ವತ್ರಿಕ ರಜೆ ದಿನಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Karnataka Government Holiday 2022: ಕರ್ನಾಟಕ ಸರ್ಕಾರ 2022ರ ಸಾರ್ವತ್ರಿಕ ರಜೆ ದಿನಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ಸಿಬ್ಬಂದಿಗೆ ರಜೆ ಇರಲಿದೆ. ಈ ರಜೆಗಳನ್ನು ಹೊರತು ಪಡಿಸಿ, ಸಾರ್ವತ್ರಿಕ ರಜೆಗಳ ಅಧಿಕೃತ ಪಟ್ಟಿಯನ್ನು ಸರ್ಕಾರ ಪ್ರಕಟಿಸಿದೆ. ರಜಾ ಪಟ್ಟಿಯಲ್ಲಿ ಮೇ-1 ಕಾರ್ಮಿಕ ದಿನಾಚರಣೆ, ಜುಲೈ 10 ಬಕ್ರೀದ್, ಸೆಪ್ಟೆಂಬರ್ 25 ಮಹಾಲಯ ಅಮವಾಸ್ಯೆ, ಅಕ್ಟೋಬರ್ 2 ಗಾಂಧಿ ಜಯಂತಿ, ಅಕ್ಟೋಬರ್ 9ರಂದು ಈದ್ ಮಿಲಾದ್ ಮತ್ತು ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಡಿಸೆಂಬರ್ 25ರ ಕ್ರಿಸ್ ಮಸ್ ರಜೆಯನ್ನು ಈ ಪಟ್ಟಿ ಒಳಗೊಂಡಿಲ್ಲ .

ಮುಸ್ಲಿಮರಿಗೆ ಹಬ್ಬ  ಬೇರೆ ದಿನಗಳು ಬಂದರೆ ಅದನ್ನು ಬದಲಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 3 ಕೈಲ್ ಮುಹೂರ್ತ ಹಾಗೂ ಡಿಸೆಂಬರ್ 8 ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಅನ್ವಯವಾಗುವಂತೆ ಸ್ಥಳೀಯ ರಜೆ ನೀಡಲಾಗಿದೆ. ವರ್ಷದಲ್ಲಿ 22 ಪರಿಮಿತ ರಜೆಗಳು ಸಹ ಸೇರಿವೆ.

15-1-2022: ಶನಿವಾರ- ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ
26-1-2022: ಬುಧವಾರ- ಗಣರಾಜ್ಯೋತ್ಸವ
1-3-2022: ಮಂಗಳವಾರ- ಮಹಾ ಶಿವರಾತ್ರಿ
2-4-2022: ಶನಿವಾರ- ಯುಗಾದಿ ಹಬ್ಬ
14-4-2022: ಗುರುವಾರ- ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ
15-4-2022: ಶುಕ್ರವಾರ- ಗುಡ್ ​ಫ್ರೈಡೇ
3-5-2022: ಮಂಗಳವಾರ- ಬಸವೇಶ್ವರ ಜಯಂತಿ/ಅಕ್ಷಯ ತೃತೀಯ, ಖುತುಬ್-ಎ-ರಂಜಾನ್
9-8-2022: ಬುಧವಾರ- ಮೊಹರಂ ಕಡೇ ದಿನ
15-8-2022: ಸೋಮವಾರ- ಸ್ವಾತಂತ್ರ್ಯ ದಿನಾಚರಣೆ
31-8-2022: ಬುಧವಾರ- ವರಸಿದ್ಧಿ ವಿನಾಯಕ ವ್ರತ
4-10-2022: ಮಂಗಳವಾರ- ಮಹಾನವಮಿ, ಆಯುಧಪೂಜೆ
5-10-2022: ಬುಧವಾರ- ವಿಜಯದಶಮಿ
24-10-2022: ಸೋಮವಾರ- ನರಕ ಚತುರ್ದಶಿ
26-10-2022: ಬುಧವಾರ- ಬಲಿಪಾಡ್ಯಮಿ, ದೀಪಾವಳಿ
1-11-2022: ಮಂಗಳವಾರ- ಕನ್ನಡ ರಾಜ್ಯೋತ್ಸವ
11-11-2022: ಶುಕ್ರವಾರ- ಕನಕದಾಸ ಜಯಂತಿ

ಡಿಸೆಂಬರ್ ನಲ್ಲಿ ಬ್ಯಾಂಕ್ ರಜಾ ದಿನಗಳು

ಪ್ರತಿ ತಿಂಗಳು ಬ್ಯಾಂಕ್(Bank)‌ಗೆ ಇಂತಿಷ್ಟು ರಜಾ ದಿನಗಳೆಂದು ಘೋಷಿಸಲಾಗುತ್ತದೆ. ಆದರೆ, ಒಮ್ಮೊಮ್ಮೆ ಎಲ್ಲ ರಜೆ(Holidays)ಗಳು ಒಂದೇ ವೇಳೆಯಲ್ಲಿ ಬರುತ್ತದೆ. ಸತತವಾಗಿ 2 - 3 ದಿನಗಳ ಕಾಲ ರಜಾ ಇದ್ದರೆ ಬ್ಯಾಂಕ್‌ ಗ್ರಾಹಕರಿಗೆ(Bank Customers) ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಇದನ್ನೂ ಓದಿ:  Vastu Tips : ನಿಮ್ಮ ಮನೆಯಲ್ಲಿ ಮನಿ ಪ್ಲಾಂಟ್ ಇದ್ಯಾ? ಹಾಗಿದ್ರೆ ಈ ನಿಯಮಗಳನ್ನು ತಪ್ಪದೇ ಫಾಲೋ ಮಾಡಿ.

ರಿಸರ್ವ್​ ಬ್ಯಾಂಕ್​​ ಆಫ್​ ಇಂಡಿಯಾ(Reserve Bank of India)ದ ಹಾಲಿಡೇ ಕ್ಯಾಲೆಂಡರ್(Holiday Calendar)​ ಪ್ರಕಾರ, ಡಿಸೆಂಬರ್(December)​ ತಿಂಗಳಿನಲ್ಲಿ ಬರೋಬ್ಬರಿ 12 ದಿನಗಳು ಬ್ಯಾಂಕ್‌ ಬಂದ್‌ ಆಗಲಿದೆ. ಇದರಿಂದ ಬ್ಯಾಂಕ್ ಕೆಲಸವಿರುವ ಗ್ರಾಹಕರಿಗೆ ತೊಂದರೆಯಾಗಬಹುದು.

ಬ್ಯಾಂಕ್ರಜಾ ದಿನಗಳ ಪಟ್ಟಿ ಹೀಗಿದೆ ನೋಡಿ.

ಡಿಸೆಂಬರ್ 3: ಫೀಸ್ಟ್​ ಆಫ್​ ಸೇಂಟ್ ಫ್ರಾನ್ಸಿಸ್ ಗ್ಸೇವಿಯರ್
ಡಿಸೆಂಬರ್ 18: ಯು ಸೋಸೋ ಥಾಮ್ ಡೆತ್ ಆನಿವರ್ಸರಿ
ಡಿಸೆಂಬರ್ 24: ಕ್ರಿಸ್​ಮಸ್ ಈವ್
ಡಿಸೆಂಬರ್ 25: ಕ್ರಿಸ್​ಮಸ್
ಡಿಸೆಂಬರ್ 27: ಕ್ರಿಸ್​ಮಸ್ ಸೆಲೆಬ್ರೇಷನ್
ಡಿಸೆಂಬರ್ 30: ಯು ಕಿಯಾಂಗ್ ನಾಂಗ್​ಬಹ್
ಡಿಸೆಂಬರ್ 31: ನ್ಯೂ ಇಯರ್ ಈವ್

ಮೇಲ್ಕಂಡ ರಜೆಗಳ ಹೊರತಾಗಿ ಡಿಸೆಂಬರ್ ತಿಂಗಳ ರಜೆ ಪಟ್ಟಿಯಲ್ಲಿ ಎರಡನೇ ಶನಿವಾರ, 4ನೇ ಶನಿವಾರ ಹಾಗೂ ಭಾನುವಾರಗಳು ಸೇರಿವೆ.

ಡಿಸೆಂಬರ್ 5- ಭಾನುವಾರ
ಡಿಸೆಂಬರ್ 11- ಎರಡನೇ ಶನಿವಾರ
ಡಿಸೆಂಬರ್ 12- ಭಾನುವಾರ
ಡಿಸೆಂಬರ್ 19- ಭಾನುವಾರ
ಡಿಸೆಂಬರ್ 25- ನಾಲ್ಕನೇ ಶನಿವಾರ & ಕ್ರಿಸ್​ಮಸ್
ಡಿಸೆಂಬರ್ 26- ಭಾನುವಾರ

ಇದನ್ನೂ ಓದಿ: Karnataka Weather Report: ಮತ್ತೆ ರಾಜ್ಯದಲ್ಲಿ 2 ದಿನ ಮಳೆ ಸಾಧ್ಯತೆ

ಈ ಡಿಸೆಂಬರ್​ ತಿಂಗಳಿನಲ್ಲಿ ವಿಶೇಷ ದಿನಗಳಿರುವುದರಿಂದ ಬ್ಯಾಂಕ್​ ರಜೆ ಇರುತ್ತದೆ ಎಂದು ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ ಹೇಳಿದೆ. ಆದರೆ, ಎಲ್ಲಾ ಬ್ಯಾಂಕುಗಳಲ್ಲಿ ಹಾಗೂ ಎಲ್ಲಾ ರಾಜ್ಯಗಳಲ್ಲಿ 12 ದಿನಗಳ ಕಾಲ ರಜೆ ಇರುವುದಿಲ್ಲ. ರಾಜ್ಯದಿಂದ ರಾಜ್ಯಕ್ಕೆ ಬ್ಯಾಂಕ್​ ರಜೆಗಳು ಬದಲಾಗಲಿವೆ. ಗೆಜೆಟೆಡ್ ರಜಾದಿನಗಳು ಮಾತ್ರ ದೇಶಾದ್ಯಂತ ಎಲ್ಲಾ ಬ್ಯಾಂಕ್​ಗಳಿಗೆ ಅನ್ವಯವಾಗಲಿವೆ. ಗೆಜೆಟೆಡ್​ ರಜಾದಿನಗಳಲ್ಲಿ ಶನಿವಾರ ಮತ್ತು ಭಾನುವಾರಗಳು ಸೇರಿವೆ.
Published by:Mahmadrafik K
First published: