• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • SP Rishyanth: ಶಾಮನೂರು ಕುಟುಂಬದ ಮೇಲೆ ಕೇಸ್ ಮಾಡಿದ್ದ ದಾವಣಗೆರೆ ಎಸ್‌ಪಿ ದಿಢೀರ್ ವರ್ಗಾವಣೆ!

SP Rishyanth: ಶಾಮನೂರು ಕುಟುಂಬದ ಮೇಲೆ ಕೇಸ್ ಮಾಡಿದ್ದ ದಾವಣಗೆರೆ ಎಸ್‌ಪಿ ದಿಢೀರ್ ವರ್ಗಾವಣೆ!

ಖಡಕ್ ಅಧಿಕಾರಿ ವರ್ಗಾವಣೆ!

ಖಡಕ್ ಅಧಿಕಾರಿ ವರ್ಗಾವಣೆ!

ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಎಸ್‌ಪಿ ರಿಷ್ಯಂತ್‌ ಅವರನ್ನು ರಾಜ್ಯ ಸರ್ಕಾರ ಇದೀಗ ದಿಢೀರ್ ವರ್ಗಾವಣೆ ಮಾಡಿರೋದು ಅಚ್ಚರಿ ಮೂಡಿಸಿದೆ.

  • Share this:

ದಾವಣಗೆರೆ: ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರ ಕುಟುಂಬದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದ ಎಸ್‌ಪಿ ರಿಷ್ಯಂತ್‌ (SP Rishyanth) ಅವರನ್ನು ಇದೀಗ ದಿಢೀರ್ ವರ್ಗಾವಣೆ ಮಾಡಿರೋದು ಅಚ್ಚರಿ ಮೂಡಿಸಿದೆ. ಚುನಾವಣೆ ಹೊತ್ತಲ್ಲಿಯೇ ರಾಜ್ಯ ಸರ್ಕಾರ ವರ್ಗಾವಣೆ (Trasferred) ಮಾಡಿ ಆದೇಶ ಹೊರಡಿಸಿರೋದು ಸಾಕಷ್ಟು ಚರ್ಚಗೂ ಗ್ರಾಸವಾಗಿದೆ.


ಹೇಳಿ ಕೇಳಿ ಶಾಮನೂರು ಶಿವಶಂಕರಪ್ಪ ಅವರು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ. ಆದರೆ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಕ್ಕೆ ಎಸ್‌ಪಿ ರಿಷ್ಯಂತ್ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿರೋದು ಕುತೂಹಲ ಮೂಡಿಸಿದೆ. ಎಸ್‌ಪಿ ರಿಷ್ಯಂತ್ ಅವರನ್ನು ಯಾವುದೇ ಹುದ್ದೆ ಅಥವಾ ಸ್ಥಳಕ್ಕೆ ನಿಯೋಜನೆ ಮಾಡದೆ ವರ್ಗಾವಣೆ ಮಾಡಿದ್ದು, ಹೀಗಾಘಗಿ ರಿಷ್ಯಂತ್ ಅವರು ಕೂಡ ವರ್ಗಾವಣೆ ಬಳಿಕ ತಾನು ಎಲ್ಲಿ ಹೋಗಬೇಕು ಎಂಬ ಗೊಂದಲದಲ್ಲಿದ್ದಾರೆ.


ಇದನ್ನೂ ಓದಿ: Dr K Annadani: ಗೆದ್ದೇ ಗೆಲ್ಲುವ ಛಲದಲ್ಲಿರುವ ಮಳವಳ್ಳಿ ಶಾಸಕ ಡಾ ಕೆ ಅನ್ನದಾನಿಯವರ ಬಗ್ಗೆ ನಿಮಗೆಷ್ಟು ಗೊತ್ತು?


ವರ್ಗಾವಣೆ ವಿರುದ್ಧ ಜನರ ಆಕ್ರೋಶ


ಸದ್ಯ ರಿಷ್ಯಂತ್ ಅವರ ಜಾಗಕ್ಕೆ ದಾವಣಗೆರೆ ಎಸ್‌ಪಿಯಾಗಿ ಡಾ. ಅರುಣ್ ಅವರನ್ನು ನಿಯೋಜನೆ ಮಾಡಲಾಗಿದೆ. ಆದರೆ ಇದಕ್ಕೂ ಮುಖ್ಯವಾಗಿ ಜಿಲ್ಲೆಯಾದ್ಯಂತ ಖಡಕ್ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದ ರಿಷ್ಯಂತ್ ಅವರನ್ನು ಹೇಳದೆ ಕೇಳದೆ ಏಕಾಏಕಿ ವರ್ಗಾವಣೆ ಮಾಡಿರೋದು ಜನರಲ್ಲಿ ಆಕ್ರೋಶವನ್ನುಂಟು ಮಾಡಿದೆ. ಖಡಕ್ ಅಧಿಕಾರಿ ರಿಷ್ಯಂತ್ ಅವರ ವರ್ಗಾವಣೆ ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: GD Harish Gowda: ಹುಣಸೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಿಡಿ ಹರೀಶ್ ಗೌಡ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಪೂರ್ಣ ವಿವರ


ಶಾಮನೂರು ತಂದೆ, ಪುತ್ರ ಎ1-ಎ2 ಆರೋಪಿ


ಕಳೆದ  15 ದಿನಗಳ ಹಿಂದೆಯಷ್ಟೇ ಕಾಂಗ್ರೆಸ್‌ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಮತ್ತು ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಮೇಲೆ ಕೇಸ್ ದಾಖಲಿಸಲಾಗಿತ್ತು. ಹಾಲಿ ಶಾಸಕ ಶಾಮನೂರು ಶಿವಶಂಕರಪ್ಪ A1 ಆರೋಪಿ ಮತ್ತು ಅವರ ಪುತ್ರ ಮಾಜಿ ಸಚಿವ ಮಲ್ಲಿಕಾರ್ಜುನ A2 ಆರೋಪಿಯನ್ನಾಗಿ ಪೊಲೀಸರು ಮಾಡಿದ್ದರು.
ಇವಿಷ್ಟೇ ಅಲ್ಲದೇ, ಇತ್ತೀಚೆಗೆ ಕೆಲ ಪುಡಿ ರೌಡಿಗಳನ್ನ ಗೂಂಡಾ ಕಾಯ್ದೆ ಹಾಕಿ ಎಸ್‌ಪಿ ರಿಷ್ಯಂತ್ ಗಡಿಪಾರು ಮಾಡಿದ್ದರು. ಇದೇ ಹೊತ್ತಲ್ಲೆ ಖಡಕ್ ಎಸ್ಪಿ ಅಂತ ಹೆಸರುವಾಸಿಯಾಗಿದ್ದ ರಿಷ್ಯಂತ ಅವರನ್ನು ಎತ್ತಂಗಡಿ ಮಾಡಿರೋದು ಜಿಲ್ಲೆಯ ಜನರಿಗೆ ಅಚ್ಚರಿ ಮೂಡಿಸಿದೆ.

top videos
    First published: