Vinaya Samarasya Yojana: ಅಸ್ಪೃಶ್ಯತೆ ನಿರ್ಮೂಲನೆ ಯೋಜನೆಗೆ ದೇಗುಲ ಪ್ರವೇಶಿಸಿದ್ದ ದಲಿತ ಮಗುವಿನ ಹೆಸರು

Vinaya Samarasya Yojana: ಈ ಬಾರಿಯ ಬಜೆಟ್ ನಲ್ಲಿಯೇ ವಿನಯ ಸಾಮರಸ್ಯ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ.

ದೇವಸ್ಥಾನ

ದೇವಸ್ಥಾನ

  • Share this:
ಗ್ರಾಮೀಣ ಭಾಗದಲ್ಲಿರುವ (Karnataka Rural Area) ಅಸೃಶ್ಯತೆಯನ್ನು (Untouchability) ಸಂಪೂರ್ಣವಾಗಿ ನಿಮೂರ್ಲನೆ ಮಾಡಲು ಉದ್ದೇಶಿಸಿರುವ ಜಾಗೃತಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ (Karnataka Government) ವಿನಯ ಸಾಮರಸ್ಯ (Vinaya Samarasya Yojana) ಎಂದು ಹೆಸರು ಇರಿಸಿದೆ  ಕಳೆದ ವರ್ಷ ಅಂದ್ರೆ 2021 ಸೆಪ್ಟೆಂಬರ್ ನಲ್ಲಿ ಕೊಪ್ಪಳ ಜಿಲ್ಲೆಯ ವಿಯಾಪುರ (Miyapur, Koppal) ಗ್ರಾಮದಲ್ಲಿ ಮೂರು ವರ್ಷದ ದಲಿತ ಮಗುವೊಂದು (Dalit Boy) ಆಕಸ್ಮಿಕವಾಗಿ ದೇವಾಲಯ (Temple) ಪ್ರವೇಶ ಮಾಡಿದ್ದಕ್ಕೆ, ಗ್ರಾಮದ ಜನರು ಆ ಮಗುವಿನ ಕುಟುಂಬಕ್ಕೆ ದಂಡ ವಿಧಿಸಿದ್ದರು. ಈ ವಿಷಯ ಪತ್ರಿಕೆಗಳಲ್ಲಿ ವರದಿ ಆಗುತ್ತಿದ್ದಂತೆ ಪ್ರಕರಣ ದಾಖಲಾಗಿತ್ತು. ದಲಿತ ಕುಟುಂಬಕ್ಕೆ ಗ್ರಾಮದ ಮೇಲ್ಜಾತಿಯವರು 25 ಸಾವಿರ ರೂಪಾಯಿ ದಂಡ ಹಾಕಿದ್ದರು. ಅಂದು ದೇವಾಲಯ ಪ್ರವೇಶಿಸಿದ ಮಗುವಿನ ಹೆಸರು ವಿನಯ್. ಹಾಗಾಗಿ ರಾಜ್ಯ ಸರ್ಕಾರ  ಅಸ್ಪೃಶ್ಯತೆ ತೊಡೆದು ಹಾಕಲು ಉದ್ದೇಶಿಸಿರುವ ಜಾಗೃತಿಗೆ ಆ ಮಗುವಿನ ಹೆಸರನ್ನು ಇರಿಸಲಾಗಿದೆ.

ಈ ಬಾರಿಯ ಬಜೆಟ್(Budget)ನಲ್ಲಿಯೇ ವಿನಯ ಸಾಮರಸ್ಯ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಏಪ್ರಿಲ್ 14 ರಂದು ಅಂಬೇಡ್ಕರ್ ಜಯಂತಿಯಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುವ ನಿರೀಕ್ಷೆಗಳಿವೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗ್ರಾಮವನ್ನೇ ತೊರೆದಿರುವ ಕುಟುಂಬ

ಮಗು ದೇವಾಲಯ ಪ್ರವೇಶಿಸಿದ ಬಳಿಕ ವಿನಯ್ ಕುಟುಂಬ ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾಯ್ತು. ಗ್ರಾಮದಲ್ಲಿ ಯಾವುದೇ ಅವಘಢಗಳು ನಡೆದ್ರೂ ವಿನಯ್ ಕುಟುಂಬದತ್ತ ಜನರು ಬೆರಳು ಮಾಡತೊಡಗಿದರು. ಗ್ರಾಮದಲ್ಲಿ ತಮಗೆ ಸಾಮಾಜಿಕ ಬಹಿಷ್ಕಾರ ಹೆಚ್ಚಾದ ಹಿನ್ನೆಲೆ ವಿನಯ್ ಪೋಷಕರು ಸ್ವಂತ ಮನೆ, ಜಮೀನು ಬಿಟ್ಟು ನವೆಂಬರ್ ನಲ್ಲಿ ಗ್ರಾಮವನ್ನೇ ತೊರೆದಿದ್ದಾರೆ.

ಇದನ್ನೂ ಓದಿ:  ಹಲಾಲ್, ಮುಸ್ಲಿಂ ವರ್ತಕರಿಗೆ ನಿರ್ಬಂಧ: ಸಿಎಂ ಬೊಮ್ಮಾಯಿ, ಸಚಿವೆ ಜೊಲ್ಲೆಗೆ ಪತ್ರ ಬರೆದ MLA K.G.Bopaiah

ಮಿಯಾಪುರದಲ್ಲಿ ಗಾಣಿಗ ಸಮುದಾಯ ಪ್ರಬಲವಾಗಿದ್ದು, ಅವರೇ  ಹಳ್ಳಿಯ ಮುಖಂಡರಾಗಿದ್ದಾರೆ. 1,500 ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿ ದಲಿತರದ್ದು 91 ಮನೆಗಳಿವೆ.

ಯೋಜನೆಗೆ ಮಗನ ಹೆಸರಿಟ್ಟಿದ್ದಕ್ಕೆ ತಂದೆ ಹೇಳಿದ್ದೇನು?

ಸರ್ಕಾರದ ಯೋಜನೆಗೆ ಮಗನ ಹೆಸರು ಇರಿಸಿದರೋದು ಕುರಿತು ವಿನಯ್ ತಂದೆ ಚಂದ್ರಶೇಖರ್ ಶಿವಪ್ಪದಾಸರ್ ಪತ್ರಿಕೆ ಜೊತೆ ಮಾತನಾಡಿದ್ದಾರೆ. ಈ ರೀತಿ ಮಗನ ಹೆಸರು ಇಡೋದರಿಂದ ಯಾವುದೇ ಬದಲಾವಣೆಗಳು ಆಗಲ್ಲ. ಸಂಪೂರ್ಣವಾಗಿ ಈ ಅನಿಷ್ಠ ಪದ್ಧತಿ ನಿರ್ಮೂಲನೆ ಆಗಬೇಕಿದೆ ಎಂದು ಹೇಳಿದ್ದಾರೆ.

ಮಗ ದೇವಸ್ಥಾನ ಪ್ರವೇಶಿಸಿದ ಬಳಿಕ ನಮಗೆ ಸಾಮಾಜಿಕ ಬಹಿಷ್ಕಾರ ಹಾಕಲಾಯ್ತು. ಕೆಲ ದಿನದಗಳ ನಂತರ ಬದಲಾಗುತ್ತೆ ಎಂಬ ವಿಶ್ವಾಸದಿಂದ ಕುಟುಂಬದ ಜೊತೆ ಮಿಯಾಪುರದಲ್ಲಿದ್ದೆ. ಆದ್ರೆ ಗ್ರಾಮದಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಗಳಿಗೆ ನಮ್ಮ ದೋಷಿಗಳನ್ನಾಗಿ ಮಾಡಲು ಶುರುವಾಯ್ತು.

ಕಾನೂನುಗಳನ್ನು ಸರಿಯಾಗಿ ಅನುಷ್ಠಾನಗೊಳಿಸಿದ್ದರೆ, ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು. ದಲಿತರು ದೇವಸ್ಥಾನಕ್ಕೆ ಪ್ರವೇಶಿಸುತ್ತಾರೆ ಎಂಬ ಭಯದಿಂದ ಗ್ರಾಮದಲ್ಲಿ ವಾರ್ಷಿಕ ಉತ್ಸವ/ಜಾತ್ರೆಗಳನ್ನು ಸಹ ರದ್ದುಗೊಳಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹೇಗೆ ಬದುಕಲಿ ಅಥವಾ ನನ್ನ ಮಗನನ್ನು ಬೆಳೆಯಲು ಬಿಡಲಿ ಎಂದು ಚಂದ್ರಶೇಖರ್ ಹೇಳುತ್ತಾರೆ.

ಇದನ್ನೂ ಓದಿ:  Puttur: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನೋ ಎಂಟ್ರಿ

ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಬೇಕು

ಸಾಮಾಜಿಕ ಬಹಿಷ್ಕಾರದ ವಿಷಯ ಬೆಳಕಿಗೆ ಬರುತ್ತಿದ್ದಂತೆ ಸಮಾಜ ಕಲ್ಯಾಣ ಇಲಾಖೆ ದೂರು ದಾಖಲಿಸಿದೆ. ಗ್ರಾಮಕ್ಕೆ ಬಂದ ಪೊಲೀಸರು ಕೆಲವರನ್ನು ಬಂಧಿಸಿದರು. ಆದ್ರೆ ಕೆಲವೇ ದಿನಗಳಲ್ಲಿ ಅವರೆಲ್ಲ ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಗ್ರಾಮದಲ್ಲಿ ಅವರೇ ಮುಖಂಡರಾಗಿದ್ದಾರೆ. ಸರ್ಕಾರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಮೂಲಕ ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಬೇಕೆಂದು ಚಂದ್ರಶೇಖರ್ ಒತ್ತಾಯಿಸಿದ್ದಾರೆ. ಸದ್ಯ ಚಂದ್ರಶೇಖರ್ ಕುಟುಂಬ ಯಲಬುರ್ಗಾದಲ್ಲಿ ವಾಸವಾಗಿದೆ.
Published by:Mahmadrafik K
First published: