ವಾಹನ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ

ಲಾಕ್​​ಡೌನ್​​ನಿಂದ ವಾಹನ ಮಾಲೀಕರು ಸಂಕಷ್ಟಕ್ಕೀಡಾಗಿದ್ರು. ಅಲ್ಲದೆ ತೆರಿಗೆ ಇಳಿಕೆ ಮಾಡುವಂತೆಯೂ ಸರ್ಕಾರಕ್ಕೆ ಮನವಿ ಮಾಡಿದ್ದರು. ಈಗ ಅಂತಿಮವಾಗಿ ವಾಹನ ಮಾಲೀಕರಿಗೆ ತೆರಿಗೆ ಇಳಿಕೆ ಮಾಡಿದೆ. ಇದರಿಂದ ವಾಹನ ಮಾಲೀಕರು ಸ್ವಲ್ಪ ಸಮಾಧಾನ ಗೊಂಡಿದ್ದಾರೆ.

news18-kannada
Updated:September 30, 2020, 4:31 PM IST
ವಾಹನ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ
ಡಿಸಿಎಂ ಲಕ್ಷ್ಮಣ ಸವದಿ
  • Share this:
ಬೆಂಗಳೂರು(ಸೆ.30): ವಾಹನ ಮಾಲೀಕರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ವಾಹನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಮೂಲಕ ಡಿಸಿಎಂ ಹಾಗೂ ಸಾರಿಗೆ ಲಕ್ಷ್ಮಣ ಸವಧಿ ತಿಳಿಸಿದ್ದಾರೆ. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಅಧಿನಿಯಮ 1957(ಕರ್ನಾಟಕ ಕಾಯ್ದೆ 35/1957) ಕಲಂ 16(1) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಮೋಟಾರು ವಾಹನಗಳ ಅಧಿನಿಯಮ 1957ರ ಷೆಡ್ಯೂಲ್ (ಎ) ಐಟಂ ಸಂಖ್ಯೆ: 5(ಎ)(iii) ರಂತೆ ರಾಜ್ಯದಲ್ಲಿನ 13 ರಿಂದ 20 ಆಸನ ಸಾಮರ್ಥ್ಯವುಳ್ಳ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ನಿಗದಿಪಡಿಸಿರುವ ರೂ. 900/-ಗಳ ಮೋಟಾರು ವಾಹನ ತೆರಿಗೆಯನ್ನು ರೂ. 700/-ಗಳಿಗೆ ಇಳಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

ಮೋಟಾರು ವಾಹನಗಳ ತೆರಿಗೆಯನ್ನು ಇಳಿಸಬೇಕೆಂದು ಹಲವಾರು ವಾಹನ ಮಾಲೀಕರು ಹಾಗೂ ವಿವಿಧ ಸಂಘಟನೆಗಳು ಸರ್ಕಾರ ಮನವಿ ಮಾಡಿದ್ದವು. ಇದೀಗ ಮನವಿಗೆ ಸ್ಪಂದಿಸಿ ಸರ್ಕಾರ ತೆರಳಿ ಇಳಿಕೆ ನಿರ್ಧಾರ ಕೈಗೊಂಡಿದೆ. ಲಾಕ್​​ಡೌನ್​​ನಿಂದ ವಾಹನ ಮಾಲೀಕರು ಸಂಕಷ್ಟಕ್ಕೀಡಾಗಿದ್ರು. ಅಲ್ಲದೆ ತೆರಿಗೆ ಇಳಿಕೆ ಮಾಡುವಂತೆಯೂ ಸರ್ಕಾರಕ್ಕೆ ಮನವಿ ಮಾಡಿದ್ದರು. ಈಗ ಅಂತಿಮವಾಗಿ ವಾಹನ ಮಾಲೀಕರಿಗೆ ತೆರಿಗೆ ಇಳಿಕೆ ಮಾಡಿದೆ. ಇದರಿಂದ ವಾಹನ ಮಾಲೀಕರು ಸ್ವಲ್ಪ ಸಮಾಧಾನ ಗೊಂಡಿದ್ದಾರೆ.

ಈ ಹಿಂದೆ ಜೂನ್​​ನಲ್ಲಿ ಕೊರೋನಾದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಟೂರಿಸ್ಟ್‌ ವಾಹನಗಳು ಪಾವತಿಸಬೇಕಿರುವ ವಾಹನ ತೆರಿಗೆಯಲ್ಲಿ ಶೇ.50 ರಷ್ಟನ್ನು ರಾಜ್ಯ ಸರ್ಕಾರ ಮನ್ನಾ ಮಾಡಿತ್ತು. ಈ ಮೂಲಕ ತೆರೆದುಕೊಳ್ಳುವ ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲ ಸಿಕ್ಕಂತಾಗಿದೆ. ಇದರ ಜೊತೆಗೆ ಇತರ ರಾಜ್ಯಗಳಿಂದ ರಾಜ್ಯಕ್ಕೆ ಟೂರಿಸ್ಟ್‌ ವಾಹನ ಪ್ರವೇಶಕ್ಕೆ ವಿಧಿಸಲಾಗುತ್ತಿರುವ ಪ್ರವೇಶ ತೆರಿಗೆ ರದ್ದತಿ ಬಗ್ಗೆಯೂ ಸರಕಾರ ಚಿಂತನೆ ನಡೆಸುವ ಸೂಚನೆ ನೀಡಿತ್ತು.
ಕೊರೋನಾದಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ಅವಲಂಬಿಸಿರುವ 35 ಲಕ್ಷ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಲ್ಲಿ ಪ್ರವಾಸಿ ವಾಹನಗಳ ಮಾಲೀಕರು, ಚಾಲಕರು, ಟೂರಿಸ್ಟ್‌ ಗೈಡ್‌ಗಳು, ಟ್ರಾವೆಲ್‌ ಏಜೆಂಟ್‌ಗಳು, ಹೋಟೆಲ್‌ ಮಾಲೀಕರು ಸಹ ಸೇರಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ. ಈ ಕ್ಷೇತ್ರ ಹಂತ ಹಂತವಾಗಿ ಸಹಜ ಸ್ಥಿತಿಗೆ ಮರಳುವ ವಿಶ್ವಾಸವಿದೆ. ಸದ್ಯದ ಸಂಕಷ್ಟ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಹೊಸ ಪ್ರವಾಸೋದ್ಯಮ ನೀತಿ ಹೊರತರಲಾಗುವುದು. ಅದರಲ್ಲಿ ಸಬ್ಸಿಡಿ ಬಗ್ಗೆಯೂ ಹೊಸ ಚಿಂತನೆ ಇರುತ್ತದೆ. ಸೀನಿಯಾರಿಟಿ ಆಧಾರದ ಮೇಲೆ ಸಬ್ಸಿಡಿ ಬಿಡುಗಡೆ ಮಾಡಲಾಗುತ್ತಿದ್ದು ಇನ್ನೂ 38 ಕೋಟಿ ರೂ. ಬಾಕಿ ಇದೆ ಹಿಂದೆಯೇ ಸವದಿ ಹೇಳಿದ್ದರು.
Published by: Ganesh Nachikethu
First published: September 30, 2020, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading