ಐದು ತಿಂಗಳ ಬಳಿಕ ಪೂರ್ಣ ಪ್ರಮಾಣದ ಥಿಯೇಟರ್​ ಭರ್ತಿಗೆ ಅವಕಾಶ; ರಿಲೀಸ್​ಗೆ ಸಾಲುಗಟ್ಟಿವೆ ಕನ್ನಡ ಚಿತ್ರಗಳು!

ಥಿಯೇಟರ್ ಆವರಣದಲ್ಲಿ ಮತ್ತೆ ಸ್ಟಾರ್ ಗಳ ಕಟೌಟ್​ಗಳು ಎದ್ದು ನಿಂತಿದ್ದು, ಕಟೌಟ್ ಗೆ ಹಾರ ಹಾಕಿ, ಬ್ಯಾನರ್ ಬಂಟಿಂಗ್ ಹಾಕಿ ಚಿತ್ರದ ರಿಲೀಸ್ ಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

ಸಿನಿಮಾ ಥಿಯೇಟರ್.

ಸಿನಿಮಾ ಥಿಯೇಟರ್.

 • Share this:
  ಬೆಂಗಳೂರು (ಅಕ್ಟೋಬರ್​ 01); ಕೊರೋನಾ ವೈರಸ್​ ಎರಡನೇ (CoronaVirus 2nd Wave) ಅಲೆಯ ಕಾರಣಕ್ಕೆ ಕಳೆದ ಏಪ್ರಿಲ್​-ಮೇ (April-May) ತಿಂಗಳಿನಿಂದ ರಾಜ್ಯದಲ್ಲಿ ಎಲ್ಲಾ ಚಿತ್ರ ಮಂದಿರಗಳನ್ನು (Theatre) ಮುಚ್ಚಲಾಗಿತ್ತು. ಕಳೆದ ತಿಂಗಳು ಚಿತ್ರ ಮಂದಿರಗಳನ್ನು ತೆರೆಯಲು ಅವಕಾಶ ನೀಡಿದ್ದರೂ ಸಹ ಶೇ.50 ರಷ್ಟು ಪ್ರಮಾಣದ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಅಲ್ಲದೆ, ಸಾಮಾಜಿಕ ಅಂತರ (Social Distance) ಸೇರಿದಂತೆ ಎಲ್ಲಾ ನೀತಿಗಳನ್ನೂ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿತ್ತು. ಆದರೆ, ಇದೀಗ ಕೊರೋನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಕ್ರಮೇಣ ಕಡಿಮೆಯಾಗುತ್ತಿರುವ ಪರಿಣಾಮ ಐದು ತಿಂಗಳ ಬಳಿಕ ಶೇ.100 ರಷ್ಟು ಪ್ರಮಾಣದಲ್ಲಿ ಸಂಪೂರ್ಣ ಥಿಯೇಟರ್​ ಭರ್ತಿಗೆ ರಾಜ್ಯ ಸರ್ಕಾರ ಕೊನೆಗೂ ಇಂದು ಅನುಮತಿ ನೀಡಿದೆ. ಪರಿಣಾಮ ಸಾಲು ಸಾಲು ಕನ್ನಡ ಚಿತ್ರಗಳು ಬಿಡುಗಡೆಗೆ ಸಿದ್ದವಾಗಿದ್ದರೆ, ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.

  ಇಂದಿನಿಂದ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ. ಹೀಗಾಗಿ ಇಂದೇ ಕನ್ನಡದ ಎರಡು ಸಿನಿಮಾಗಳು ರಿಲೀಸ್ ಸಿದ್ದವಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಪಿ. ಶೇಷಾದ್ರಿ ನಿರ್ದೇಶನದ ಮೋಹನದಾಸ ಹಾಗೂ ಚಂದ್ರಹಾಸ ನಿರ್ದೇಶನದ ಕಾಗೆ ಮೊಟ್ಟೆ ಚಿತ್ರಗಳು ಇಂದು ತೆರೆಗೆ ಅಪ್ಪಳಿಸಲಿವೆ ಎನ್ನಲಾಗಿದೆ.

  ಇದಲ್ಲದೆ, ಗುರುರಾಜ್ ಜಗ್ಗೇಶ್, ತನುಜಾ ನಟಿಸಿರುವ ಆಕ್ಷನ್ ಥ್ರಿಲ್ಲರ್ ಕಾಗೆಮೊಟ್ಟೆ ಸಿನಿಮಾ ಸಹ ಬಿಡುಗಡೆಯಾಗಲಿದ್ದು, ಪ್ರಮುಖ ಚಿತ್ರಮಂದಿರವಾದ ತ್ರಿವೇಣಿಯಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ದತೆ ನಡೆಸಿದೆ.  ಶೇ.100 ರಷ್ಟು ಹೌಸ್ ಫುಲ್ ಪ್ರದರ್ಶನಕ್ಕೆ ಅನುಮತಿ ನೀಡಲಾಗಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.

  ಇದನ್ನೂ ಓದಿ: ಕೊರೋನಾ 2.0 ಬಳಿಕ Kaage Motte ತೆರೆಗೆ: ಚಂದ್ರಹಾಸಗೆ ಸಿಗುತ್ತಾ ಪ್ರೇಕ್ಷಕರ ಮಂದಹಾಸ..!

  ಹೀಗಾಗಿ ಥಿಯೇಟರ್ ಆವರಣದಲ್ಲಿ ಮತ್ತೆ ಸ್ಟಾರ್ ಗಳ ಕಟೌಟ್​ಗಳು ಎದ್ದು ನಿಂತಿದ್ದು, ಕಟೌಟ್ ಗೆ ಹಾರ ಹಾಕಿ, ಬ್ಯಾನರ್ ಬಂಟಿಂಗ್ ಹಾಕಿ ಚಿತ್ರದ ರಿಲೀಸ್ ಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: