Night Curfew: ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ವಿಸ್ತರಣೆ; ಅ. 11ರವರೆಗೆ ಜಾರಿ

ರಾಜ್ಯ ಸರ್ಕಾರದ ಬಿಗಿ ಕ್ರಮದೊಂದಿಗೆ ರಾಜ್ಯದಲ್ಲಿ ಸದ್ಯ ಕೊರೋನಾ ಪ್ರಕರಣಗಳು ಇಳಿಕೆ ಕಾಣುತ್ತಿದೆ. ರಾಜ್ಯದಲ್ಲಿ ಇಂದು 504 ಜನರಿಗೆ ಸೋಂಕು ತಗುಲಿದೆ.

,

,

  • Share this:
    ಬೆಂಗಳೂರು (ಸೆ. 27): ರಾಜ್ಯದಲ್ಲಿ ಜಾರಿಯಲ್ಲಿರುವ ರಾತ್ರಿ ಕರ್ಫ್ಯೂ (Night Curfew Extension) ಅನ್ನು ಅಕ್ಟೋಬರ್​ 11ರವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ  ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಈ ಹಿಂದೆ ಸೆ. 27ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿ ಆದೇಶ ನೀಡಿತ್ತು. ಈಗ ಈ ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ರವರೆಗೆ ಪ್ರತಿದಿನ ನೈಟ್ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ( bangalore Ciry Police Commissioner Kamal Panth) ತಿಳಿಸಿದ್ದಾರೆ. ಸರ್ಕಾರದ ಮಾರ್ಗಸೂಚಿ ಮೇರೆಗೆ ನಗರ ಪೊಲೀಸ್ ಆಯುಕ್ತರ ಆದೇಶ ಹೊರಡಿಸಿದ್ದಾರೆ. 

    ಗಡಿ ಪ್ರದೇಶದಲ್ಲಿ ಬಿಗಿ ಕ್ರಮ
    ರಾಜ್ಯದಲ್ಲಿ ಮೂರನೇ ಅಲೆ ಸೋಂಕು ಆತಂಕದ ಹಿನ್ನಲೆ ಈಗಾಗಲೇ ಸರ್ಕಾರ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಮಹಾರಾಷ್ಟ್ರ, ಕೇರಳ ಸೇರಿದಂತೆ ಗಡಿ ಪ್ರದೇಶದ ಜಿಲ್ಲೆಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಈ ಮೂಲಕ ನೆರೆ ರಾಜ್ಯದಿಂದ ಯಾವುದೇ ರೀತಿ ಸೋಂಕು ಉಲ್ಬಣವಾಗದಂತೆ ಮುಂಜಾಗ್ರತೆ ನಡೆಸಲಾಗಿದೆ. ಈ ನಡುವೆ ರಾಜ್ಯದಲ್ಲಿ ದಿನೇ ದಿನೇ ಸೋಂಕು ಇಳಿಕೆ ಕಾಣುತ್ತಿರುವುದು ಕೊಂಚ ನಿಟ್ಟು ಉಸಿರು ಮೂಡುವಂತೆ ಮಾಡಿದೆ.

    ಇದನ್ನು ಓದಿ: SSC ನೇಮಕಾತಿ: 3261 ಹುದ್ದೆಗಳಿಗೆ ಅರ್ಜಿ ಆಹ್ವಾನ

    ರಾಜ್ಯದೆಲ್ಲೆಡೆ ಸೋಂಕಿನ ಇಳಿಕೆ
    ರಾಜ್ಯ ಸರ್ಕಾರದ ಬಿಗಿ ಕ್ರಮದೊಂದಿಗೆ ರಾಜ್ಯದಲ್ಲಿ ಸದ್ಯ ಕೊರೋನಾ ಪ್ರಕರಣಗಳು ಇಳಿಕೆ ಕಾಣುತ್ತಿದೆ. ರಾಜ್ಯದಲ್ಲಿ ಇಂದು 504 ಜನರಿಗೆ ಸೋಂಕು ತಗುಲಿದೆ. ರಾಜ್ಯದಲ್ಲಿ ಸೋಂಕಿಗೆ 20 ಜನರು ಸಾವನ್ನಪ್ಪಿದ್ದೆರೆ, ಬೆಂಗಳೂರಿನಲ್ಲಿ ಐವರು ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸಕ್ರಿಯ 7394 ಪ್ರಕರಣಗಳು ಇದ್ದು, ಶೇ. 0. 48 ಪಾಸಿಟಿವಿಟಿ ದರ ಇದೆ. ಇನನು ಬೆಂಗಳೂರಿನಲ್ಲಿ 181 ಜನರು ಸೋಂಕಿಗೆ ತುತ್ತಾಗಿದ್ದು, 265 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಸೋಂಕಿನ ಇಳಿಕೆ ಬೆನ್ನಲ್ಲೇ ಪ್ರಾಥಮಿಕ ಶಾಲೆ ಆರಂಭಕ್ಕೆ ಚಿಂತನೆ
    ರಾಜ್ಯದಲ್ಲಿ ಸೋಂಕಿನ ದರ ದಿನದಿಂದ ದಿನಕ್ಕೆ ತಗ್ಗುತ್ತಿರುವ ಹಿನ್ನಲೆ ರಾಜ್ಯ ಸರ್ಕಾರ ಪ್ರಾಥಮಿಕ ಶಾಲೆ ಆರಂಭಕ್ಕೂ ಮುಂದಾಗಿದೆ. ಈಗಾಗಲೇ 6 ರಿಂದ ಮೇಲ್ಪಟ್ಟ ಮಕ್ಕಳ ಶಾಲೆಗಳು ಸೂಸುತ್ರವಾಗಿ ಆರಂಭವಾಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ. ಈ ಹಿನ್ನಲೆ ಪ್ರಾಥಮಿಕ ಶಾಲೆ ಮಕ್ಕಳ ಪ್ರಾರಂಭಕ್ಕೂ ಕೂಡ ಉತ್ಸಹ ಕಂಡು ಬಂದಿದೆ. ಈ ಸಂಬಂಧ ಇಂದು ಸಭೆ ಕೂಡ ನಡೆಸಲಾಗುತ್ತಿದೆ.

    ಇದನ್ನು ಓದಿ: ಬೆಂಗಳೂರಿನಲ್ಲಿ ನೋಡ ನೋಡುತ್ತಿದ್ದಂತೆಯೇ ಕುಸಿದ ಬಹುಮಹಡಿ ಕಟ್ಟಡ

    ಇನ್ನು ಈ ಕುರಿತು ಇಂದು ಮಾತನಾಡಿರುವ ಆರೋಗ್ಯ ಸಚಿವ ಕೆ ಸುಧಾಕರ್​ ಸದ್ಯ ದಸರಾ ರಜೆ ಆರಂಭ ಆಗುವ ಹಿನ್ನಲೆ ದಸರಾ ರಜೆ ಬಳಿಕ ಮಕ್ಕಳಿಕೆ ಶಾಲೆ ಆರಂಭದ ಕುರಿತು ಚಿಂತನೆ ನಡೆಸಲಾಗುವುದು ಎಂದಿದ್ದಾರೆ. ಈ ನಡುವೆ ಒಂದು ಮತ್ತು ಎರಡನೇ ತರಗತಿ ಮಕ್ಕಳು ಚಿಕ್ಕವರಿದ್ದು, ಅವರ ಹೊರತಾಗಿ ಮೂರು, ನಾಲ್ಕು ಮತ್ತು ಐದನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸುವುದು ಒಳಿತು ಎಂಬ ಸಲಹೆ ಕೇಳಿ ಬಂದಿದೆ. ಈ ಬಗ್ಗೆ ಸರ್ಕಾರ ಅಧಿಕೃತ ನಿರ್ಧಾರ ತೆಗೆದುಕೊಳ್ಳ ಬೇಕಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Seema R
    First published: