• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Govt Employees Strike: ಸರ್ಕಾರದ ವಿರುದ್ಧ ಸರ್ಕಾರಿ ನೌಕರರ ಸಮರ; ಏನಿರುತ್ತೆ? ಏನಿರಲ್ಲ?

Govt Employees Strike: ಸರ್ಕಾರದ ವಿರುದ್ಧ ಸರ್ಕಾರಿ ನೌಕರರ ಸಮರ; ಏನಿರುತ್ತೆ? ಏನಿರಲ್ಲ?

ಸರ್ಕಾರಿ ನೌಕರರ ಮುಷ್ಕರ

ಸರ್ಕಾರಿ ನೌಕರರ ಮುಷ್ಕರ

ಸಭೆಯಲ್ಲಿ ಸಿಎಂಗೆ ಶೇಕಡ 40ರಷ್ಟು ವೇತನ ಹೆಚ್ಚಿಸುವಂತೆ ನೌಕರರು ಮನವಿ ಮಾಡಿಕೊಂಡಿದ್ದಾರೆ. ಶೇ.7 ರಿಂದ 8 ಮಾತ್ರ ಮಾತ್ರ ಸಾಧ್ಯ ಎಂದು ಸಿಎಂ ಹೇಳಿದ್ದಾರಂತೆ. ಹೀಗಾಗಿ ಇಂದಿನಿಂದ ಮುಷ್ಕರ ನಡೆಯಲಿದೆ. ಮುಷ್ಕರ ಹಿನ್ನೆಲೆ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ ಎಂಬುದರ ಮಾಹಿತಿ ಇಲ್ಲಿದೆ.

ಮುಂದೆ ಓದಿ ...
  • Share this:

ಬೆಂಗಳೂರು: ಇಂದಿನಿಂದ ರಾಜ್ಯ ಸರ್ಕಾರಿ ನೌಕರರು (State Government Employees) ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆ ರಾಜ್ಯದ ಬಹುತೇಕ ಸರ್ಕಾರಿ ಕಚೇರಿಗಳು (Government Office) ಬಂದ್ ಆಗಲಿವೆ. ಮಂಗಳವಾರ ರಾತ್ರಿ ಸರ್ಕಾರಿ ನೌಕರರ ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಇಂದು ಮುಷ್ಕರ ಇರಲಿದೆ. ಸಭೆ ಬಳಿಕ ಮಾತನಾಡಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಮುಷ್ಕರ ವಾಪಸ್ ಪಡೆದಿಲ್ಲ ಎಂದು ಖಚಿತಪಡಿಸಿದ್ದು, ಬೇಡಿಕೆ (Government Employees Demand) ಈಡೇರೋವರೆಗೂ ನೌಕರರು ಅನಿರ್ದಿಷ್ಟವಾಧಿವರೆಗೆ ಪ್ರತಿಭಟನೆ ನಡೆಸಲಿದ್ದಾರೆ. ಮುಷ್ಕರ ಹಿನ್ನೆಲೆ ಸರ್ಕಾರಿ ಸೇವೆಗಳನ್ನು ಸ್ಥಗಿತಗೊಳ್ಳಲಿವೆ.


ಸಿಎಂ ನೇತೃತ್ವದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಸರ್ಕಾರಿ ನೌಕರರು ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸುವುದಕ್ಕೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿಲ್ಲ. ಸಭೆಯಲ್ಲಿ ಸಿಎಂಗೆ ಶೇಕಡ 40ರಷ್ಟು ವೇತನ ಹೆಚ್ಚಿಸುವಂತೆ ನೌಕರರು ಮನವಿ ಮಾಡಿಕೊಂಡಿದ್ದಾರೆ. ಶೇ.7 ರಿಂದ 8 ಮಾತ್ರ ಮಾತ್ರ ಸಾಧ್ಯ ಎಂದು ಸಿಎಂ ಹೇಳಿದ್ದಾರಂತೆ. ಹೀಗಾಗಿ ಇಂದಿನಿಂದ ಮುಷ್ಕರ ನಡೆಯಲಿದೆ. ಮುಷ್ಕರ ಹಿನ್ನೆಲೆ ರಾಜ್ಯದಲ್ಲಿ ಏನಿರುತ್ತೆ? ಏನಿರಲ್ಲ ಎಂಬುದರ ಮಾಹಿತಿ ಇಲ್ಲಿದೆ.


ಯಾವ ಸೇವೆ ಇರಲ್ಲ?


ವಿಧಾನಸೌಧದ ಕಚೇರಿಗಳು, ಬಿಬಿಎಂಪಿ ಕೇಂದ್ರ ಕಚೇರಿ , ಕಂದಾಯ ಇಲಾಖೆ, ತಹಶೀಲ್ದಾರ್ ಕಚೇರಿ, ಜಿಲ್ಲಾಧಿಕಾರಿ ಕಚೇರಿ, ಗ್ರಾಮ ಪಂಚಾಯ್ತಿ, ಪುರಸಭೆ ಕಚೇರಿ, ಸರ್ಕಾರಿ ಶಾಲೆಗಳು, ಸರ್ಕಾರಿ ಕಾಲೇಜು, ಸರ್ಕಾರಿ ಆಸ್ಪತ್ರೆ (ಒಪಿಡಿ), ಉಪ ನೋಂದಣಾಧಿಕಾರಿ ಕಚೇರಿ, ಪ್ರಾದೇಶಿಕ ಸಾರಿಗೆ ಇಲಾಖೆ, ಕಸ ಸಂಗ್ರಹಣೆ, ನೀರು ಪೂರೈಕೆ


Karnataka government employees strike What is open, what is closed mrq
ಬಸವರಾಜ್ ಬೊಮ್ಮಾಯಿ, ಸಿಎಂ


ಏನೆಲ್ಲಾ ಇರುತ್ತೆ?


ಸರ್ಕಾರಿ ಬಸ್ ಸೇವೆ, ತುರ್ತು ಆರೋಗ್ಯ ಸೇವೆ, ಆಸ್ಪತ್ರೆಯಲ್ಲಿ ಒಳರೋಗಿಗಳ ಸೇವೆ ಮತ್ತು ಐಸಿಯು ಸೇವೆ ಇರಲಿದೆ.


ನೌಕರರ ಬೇಡಿಕೆಗಳೇನು


1.ಮೂಲ ವೇತನದೊಂದಿಗೆ ತುಟ್ಟಿ ಭತ್ಯೆ ಬೇಕು


2.ಮೂಲ ವೇತನದ ಶೇ. 40ರಷ್ಟು ವೇತನ ಹೆಚ್ಚಳ


3.2023ರ ಏಪ್ರಿಲ್‌ 1ರಿಂದ ಆರ್ಥಿಕ ಅನುಕೂಲ ಬೇಕು


4.NPS ರದ್ದು ಮಾಡಿ OPS ವ್ಯಾಪ್ತಿಗೆ ತರಬೇಕು.
ಇದನ್ನೂ ಓದಿ: Govt Employees Strike: ಸಿಎಂ ಜೊತೆಗಿನ ಸಂಧಾನ ವಿಫಲ; ಇಂದಿನಿಂದ ಸರ್ಕಾರಿ ಕಚೇರಿಗಳು ಬಂದ್!


Karnataka government employees strike What is open, what is closed mrq
ಸಿ.ಎಸ್.ಷಡಕ್ಷರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ


ಮುಷ್ಕರ ವಾಪಸ್ ಪಡೆದಿಲ್ಲ


ಮುಷ್ಕರ ವಾಪಸ್ ಪಡೆದಿಲ್ಲ. ಸರ್ಕಾರ ಒಪ್ಪಿ ಆದೇಶ ಮಾಡಿದ ಬಳಿಕವಷ್ಟೇ ನಾವು ಮುಷ್ಕರದ ಹಿಂತೆಗೆದುಕೊಳ್ಳಲಾಗುವುದು. ಪರ್ಸೆಂಟೇಜ್ ಬಗ್ಗೆ ನೇರವಾಗಿ‌ ಮಾತನಾಡುತ್ತೇವೆ. ಫಿಟ್ಮೆಂಟ್ 40% ಕೇಳಿದ್ದೇವೆ. ಐಆರ್ ಅನ್ನು ನಾವು ಕೇಳುತ್ತಿಲ್ಲ. ಮುಷ್ಕರ ನಿರಂತರವಾಗಿ‌ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದರು.

Published by:Mahmadrafik K
First published: