• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • 7th Pay Commission: ಮಾರ್ಚ್ 1ರಿಂದ ಮನೆ ಮುಂದಿನ ಕಸ ಎತ್ತಲ್ಲ! ವೇತನ ಪರಿಷ್ಕರಣೆಗೆ ಬಿಬಿಎಂಪಿ ನೌಕರರ ಪಟ್ಟು

7th Pay Commission: ಮಾರ್ಚ್ 1ರಿಂದ ಮನೆ ಮುಂದಿನ ಕಸ ಎತ್ತಲ್ಲ! ವೇತನ ಪರಿಷ್ಕರಣೆಗೆ ಬಿಬಿಎಂಪಿ ನೌಕರರ ಪಟ್ಟು

7 ನೇ ವೇತನ ಆಯೋಗ ಅನುಷ್ಠಾನಕ್ಕೆ ಸರ್ಕಾರಿ ನೌಕರರ ಒತ್ತಾಯ

7 ನೇ ವೇತನ ಆಯೋಗ ಅನುಷ್ಠಾನಕ್ಕೆ ಸರ್ಕಾರಿ ನೌಕರರ ಒತ್ತಾಯ

ಸರ್ಕಾರಿ ನೌಕರರ ಸಂಘದ ತುರ್ತು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 7ನೇ ವೇತನ ಆಯೋಗ ಹಾಗೂ ಒಪಿಎಸ್​ ಪಿಂಚಣಿ ಯೋಜನೆ ಅನುಷ್ಟಾನ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ಫೆಬ್ರವರಿ 23ರಿಂದ 28ರವರೆಗೆ ಏಳು ದಿನಗಳ ಕಾಲ ಸರ್ಕಾರಕ್ಕೆ ಗಡುವು ನೀಡಲಾಗಿದೆ.

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Bangalore [Bangalore], India
  • Share this:

ಬೆಂಗಳೂರು: ರಾಜ್ಯ ಸರ್ಕಾರ (State Government) ಈ ವರ್ಷದ ಬಜೆಟ್​ನಲ್ಲಿ 7ನೇ ವೇತನ ಆಯೋಗ (7th Pay Commission) ಹಾಗೂ ಒಪಿಎಸ್​ ಪಿಂಚಣಿ (OPS Pension) ಯೋಜನೆಯ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ. ಈ ಹಿನ್ನಲೆಯಲ್ಲಿ ಮಂಗಳವಾರ ಸರ್ಕಾರಿ ನೌಕರರ(Government Employees) ಸಂಘ ಸಭೆ ನಡೆಸಿದ್ದು, ಇನ್ನು ಏಳು ದಿನಗಳಲ್ಲಿ 7ನೇ ವೇತನ ಆಯೋಗ ಹಾಗೂ ಹಳೆಯ​ ಪಿಂಚಿಣಿ ಯೋಜನೆಯನ್ನು ಅನುಷ್ಟಾನಕ್ಕೆ ತರಬೇಕೆಂದು ಒತ್ತಾಯಿಸಿದೆ. ಒಂದು ವೇಳೆ ತಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಅನಿರ್ಧಿಷ್ಟಾವಧಿಗೆ ಹೋರಾಟ (Protest) ಮಾಡುವುದಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


ಸರ್ಕಾರಿ ನೌಕರರ ಸಂಘದ ತುರ್ತು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 7ನೇ ವೇತನ ಆಯೋಗ ಹಾಗೂ ಒಪಿಎಸ್​ ಪಿಂಚಣಿ ಯೋಜನೆ ಅನುಷ್ಟಾನ  ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳಲು ಫೆಬ್ರವರಿ 23ರಿಂದ 28ರವರೆಗೆ ಏಳು ದಿನಗಳ ಕಾಲ ಸರ್ಕಾರಕ್ಕೆ ಗಡುವು ನೀಡಲಾಗಿದೆ. ಒಂದು ವೇಳೆ ಸರ್ಕಾರ ಗಡುವಿಗೆ ಸ್ಪಂದಿಸದೇ ಹೋದರೆ ಅನಿರ್ಧಿಷ್ಟಾವಧಿ ಹೋರಾಟ ಮಾಡುತ್ತೇವೆ ಎಂದು ನೌಕರರ ಸಂಘ ತಿಳಿಸಿದೆ.


ಮಾರ್ಚ್​ 1ರಿಂದ ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ


ನೌಕರರ ಸಂಘ ಗಡುವು ನೀಡಿರುವ 7 ದಿನಗಳಲ್ಲಿ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಮಾರ್ಚ್​ 1ರಿಂದ ಕರ್ತವ್ಯಕ್ಕೆ ಗೈರಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಸರ್ಕಾರಿ ನೌಕರರ ಸಂಘದ ತುರ್ತು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಅಲ್ಲದೆ ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರವನ್ನು ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರಿ ನೌಕರ ಸಂಘದ ಕಚೇರಿ ಮುಂದೆ ಜರುಗುತ್ತಿರುವ ಸಭೆಯಲ್ಲಿ ಸುಮಾರು ಆರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದರು.


ಇದನ್ನೂ ಓದಿ: 7th Pay Commission: ಏನಿದು ರಾಜ್ಯ 7ನೇ ವೇತನ ಆಯೋಗ? ಇದರಿಂದ ಸರ್ಕಾರಿ ನೌಕರರಿಗೆ ಆಗುವ ಅನುಕೂಲಗಳೇನು?


ಅನಿರ್ಧಿಷ್ಟಾವಧಿ ಮುಷ್ಕರ


ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಈಡೇರಿಸಬೇಕು. ಫೆಬ್ರವರಿ 28ರೊಳಗೆ ಸರ್ಕಾರಿ ನೌಕರರ ಸಂಘದ‌ ಜೊತೆ ಮಾತನಾಡಬೇಕು. ಬೇಡಿಕೆ ಈಡೇರಿಸದೇ ಹೋದಲ್ಲಿ ಮಾರ್ಚ್​ 1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು ಎಂದು ಬಹಿರಂಗ ಸಭೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು, ಬಿಬಿಎಂಪಿ, ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.




ನಿವೃತ್ತ ನೌಕರರಿಂದಲೂ ಬೆಂಬಲ


ಸರ್ಕಾರಿ ನೌಕರರ ಎರಡು ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಮಾರ್ಚ್ 1ರಿಂದ ಸರ್ಕಾರಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ. ಈ ಮುಷ್ಕರಕ್ಕೆ ನಿವೃತ್ತ ನೌಕರರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸುಮಾರು ಆರು ಲಕ್ಷ ನಿವೃತ್ತ ನೌಕರರು ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.


ಇನ್ನು ಸರ್ಕಾರ 7 ದಿನಗಳೊಳಗೆ ನೌಕರರ ಸಂಘದ ಬೇಡಿಕೆಗಳನ್ನು ಈಡೇರಿಸದಿದ್ದರೆ, ಮಾರ್ಚ್​ 1ರಿಂದ ಬೆಂಗಳೂರಿನಲ್ಲಿ ಕಸ ಎತ್ತುವುದಿಲ್ಲ ಎಂದು ಬಿಬಿಎಂಪಿ ನೌಕರರ ಸಂಘದ ಅಧ್ಯಕ್ಷ‌ ಅಮೃತ್ ರಾಜ್ ಮಾಹಿತಿ ನೀಡಿದ್ದಾರೆ.


ಎನ್​ಪಿಎಸ್​ ಹೋರಾಟಗಾರರ ಮೇಲೆ ಹಲ್ಲೆ ಆರೋಪ


ರಾಜ್ಯ ಸರ್ಕಾರಿ ನೌಕರರ ಸಂಘ ಕಾರ್ಯಕಾರಣಿ ಸಭೆಯಲ್ಲಿ ಭಾರೀ ಗೊಂದಲ ಏರ್ಪಟ್ಟಿದೆ. ಸಭೆಯ ಮಧ್ಯೆ ಎನ್‌ಪಿಎಸ್‌ ಹೋರಾಟ ಸಂಘಟನೆಯ ಕೆಲ‌ ಸದಸ್ಯರಿಂದ ತಾವೂ ವೇದಿಕೆಯಲ್ಲಿ ಮಾತನಾಡಬೇಕೆಂದು ಆಗ್ರಹಪಡಿಸಿದ್ದಾರೆ. ಆನಂತರ ಮಾತನಾಡಲು ಅವಕಾಶ ಕೊಡ್ತೀವಿ ಎಂದರೂ ಸಭೆ ವೇದಿಕೆ ಮುಂದೆ ಆಗಮಿಸಿದ್ದಾರೆ. ಈ ವೇಳೆ ಎನ್​ಪಿಎಸ್​ ಹೋರಾಟ ಸಂಘಟನೆಯ ಮುಖಂಡರ ಮೇಲೆ ಚೇರ್ ಎಸೆದು ಆಕ್ರೋಶ ವ್ಯಕ್ತಪಡಿಸಲಾಗಿದೆ.

Published by:Rajesha M B
First published: