HOME » NEWS » State » KARNATAKA GOVERNMENT DOES NOT HAVE GRANT TO MLA FUND CONGRESS LEADER MB PATIL ACCUSES SCT

ದಿವಾಳಿಯಾಗಿರುವ ಸರ್ಕಾರದ ಬಳಿ ಎಂಎಲ್ಎ ಅನುದಾನಕ್ಕೂ ಹಣವಿಲ್ಲ; ಎಂ. ಬಿ. ಪಾಟೀಲ ಆರೋಪ

ಹಿಂದಿನ ಸಿಎಂ ನೀಡಿದ ಅನುದಾನವನ್ನು ಈಗಿನ ಸಿಎಂ ತಡೆ ಹಿಡಿದಿದ್ದಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ್, ಹಿಂದಿನ ಸಮ್ಮಿಶ್ರ ಸರ್ಕಾರ, ಅದರ ಹಿಂದಿನ ಸಿದ್ಧರಾಮಯ್ಯ ಸರಕಾರ ನೀಡಿದ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ ಎಂದಿದ್ದಾರೆ.

news18
Updated:August 27, 2020, 1:10 PM IST
ದಿವಾಳಿಯಾಗಿರುವ ಸರ್ಕಾರದ ಬಳಿ ಎಂಎಲ್ಎ ಅನುದಾನಕ್ಕೂ ಹಣವಿಲ್ಲ; ಎಂ. ಬಿ. ಪಾಟೀಲ ಆರೋಪ
ಎಂ.ಬಿ. ಪಾಟೀಲ್.
  • News18
  • Last Updated: August 27, 2020, 1:10 PM IST
  • Share this:
ವಿಜಯಪುರ (ಆ. 27): ರಾಜ್ಯದಲ್ಲಿ ಸರ್ಕಾರ ದಿವಾಳಿಯಾಗಿದೆ.  ಸರ್ಕಾರದ ಬಳಿ ಎಂಎಲ್ಎಗಳಿಗೆ ಗ್ರ್ಯಾಂಟ್ ನೀಡಲೂ ಹಣವಿಲ್ಲ ಎಂದು ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ್ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಹಾಮಂಡಳ ಗಣೇಶೋತ್ಸವ ಸ್ಥಳದ ಬಳಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಮಳೆಗಾಲ ಆರಂಭವಾಗಿರುವುದರಿಂದ ಜನರು ರಸ್ತೆಗಳಿಗೆ ಗಟ್ಟಿ ಮಣ್ಣು ಹಾಕುವಂತೆ ಕೇಳುತ್ತಿದ್ದಾರೆ.  ಅದಕ್ಕೂ ಸರಕಾರದ ಬಳಿ ದುಡ್ಡಿಲ್ಲ. ನಮ್ಮ ಮತಕ್ಷೇತ್ರದ ಬಾಬಾನಗರ ಮತ್ತು ಹಂಗರಗಿಗಳಲ್ಲಿ ಸಮುದಾಯ ಭವನ ನಿರ್ಮಾಣವನ್ನು ತಡೆ ಹಿಡಿದಿದ್ದಾರೆ.  ಕೊರೋನಾ ಸಂದರ್ಭದಲ್ಲಿ ಹೆಚ್ಚು ಮಾತನಾಡುವುದಿಲ್ಲ. ಜನವರಿಯಿಂದ ಈ ಬಗ್ಗೆ ಮಾತನಾಡುತ್ತೇನೆ. ಯಾರೆಲ್ಲ ಮಹಾನುಭಾವರು ಮತ್ತು ಪುಣ್ಯಾತ್ಮರು ಈ ಭಾಗದ ನೀರಾವರಿ ಯೋಜನೆಗಳಿಗೆ ರೂ. 10 ಸಾವಿರ ಕೋಟಿ ಅನುದಾನ ತರುವುದಾಗಿ ಹೇಳಿದ್ದರೋ ಅದೆಲ್ಲವನ್ನೂ ಜನವರಿಯಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದರು.

ಇದನ್ನೂ ಓದಿ: ಕಾಸರಗೋಡು- ಕರ್ನಾಟಕ ಗಡಿ ರಸ್ತೆ ತೆರವುಗೊಳಿಸಲು ಕೇರಳ ಹೈಕೋರ್ಟ್ ಆದೇಶ

ಹಿಂದಿನ ಸಿಎಂ ನೀಡಿದ ಅನುದಾನವನ್ನು ಈಗಿನ ಸಿಎಂ ತಡೆ ಹಿಡಿದಿದ್ದಾರೆ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಎಂ.ಬಿ. ಪಾಟೀಲ್, ಹಿಂದಿನ ಸಮ್ಮಿಶ್ರ ಸರ್ಕಾರ, ಅದರ ಹಿಂದಿನ ಸಿದ್ಧರಾಮಯ್ಯ ಸರಕಾರ ನೀಡಿದ ಅನುದಾನವನ್ನು ಕಡಿತಗೊಳಿಸಲಾಗುತ್ತಿದೆ.  ಯತ್ನಾಳ್ ಅದನ್ನೇ ಹೇಳಿದ್ದಾರೆ ಎಂದು ತಿಳಿಸಿದರು.

ಸರ್ಕಾರದಲ್ಲಿ ಸಿಎಂ ಪುತ್ರ ವಿಜಯೇಂದ್ರ ಹಕ್ತಕ್ಷೇಪ ಮತ್ತು ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ವೈಯಕ್ತಿಕ ಟೀಕೆ ಮಾಡುವುದಿಲ್ಲ.  ಮಾಧ್ಯಮಗಳಲ್ಲಿ ಇದನ್ನು ನೋಡುತ್ತಿದ್ದೇನೆ.  ಈ ಬಗ್ಗೆ ಬಹಳಷ್ಚು ಕೂಗು ಕೇಳಿ ಬರುತ್ತಿದೆ.  ಜನ ಮತ್ತು ಅವರ ಬಿಜೆಪಿ ಪಕ್ಷದವರು ಇದನ್ನು ಅರಿತು ಕೊಳ್ಳಬೇಕು ಎಂದು ಎಂ. ಬಿ. ಪಾಟೀಲ್ ಹೇಳಿದರು.

ಹಳ್ಳಿ-ಹಳ್ಳಿಗಳಲ್ಲಿ ಕೊರೋನಾ ಹರಡುತ್ತಿರುವುದಕ್ಕೆ ನಾವೇ ಕಾರಣ.  ನಾವು ಮಾಸ್ಕ್ ಹಾಕಿಕೊಳ್ಳುವುದಿಲ್ಲ. ಸಾಮಾಜಿಕ ಅಂತರ ಕಾಪಾಡುವುದಿಲ್ಲ.  ನಮಗೆ ಸಿಕ್ಕ ಸಿಕ್ಕಲ್ಲಿ ಉಗುಳುವ ಚಟವಿದೆ.  ಇದರಿಂದ ಅಪಾಯವಿದೆ.  ನಾವು ಸುಧಾರಣೆಯಾಗದ ಹೊರತು ಕೊರೋನಾ ನಿಯಂತ್ರಣ ಅಸಾಧ್ಯ ಎಂದು ಅವರು ತಿಳಿಸಿದರು.  ಜನರಿಗೆ ಈಗ ಕೊರೊನಾ ಭಯವೇ ಹೋಗಿದೆ. ಆಸ್ಪತ್ರೆ ಮುಖ್ಯಸ್ಥನಾಗಿ ಹೇಳುತ್ತಿದ್ದೇನೆ,  ರಾತ್ರಿ ಫೋನ್ ಮಾಡಿ ಮಧ್ಯರಾತ್ರಿ 12ಕ್ಕೆ ಮತ್ತು 2ಕ್ಕೆ ಕರೆ ಮಾಡಿ ಗೋಳು ತೋಡಿಕೊಳ್ಳುತ್ತಾರೆ.  ಬರೀ ವಯಸ್ಸಾದವರು ಹೆಚ್ಚಿಗೆ ಸಾಯುತ್ತಾರೆ ಎಂದು ತಪ್ಪು ತಿಳುವಳಿಕೆಯಿದೆ.  ಸಣ್ಣವರು ಕೂಡ ಕೊರೋನಾದಿಂದ ಸತ್ತಿದ್ದಾರೆ ಎಂದರು.
Youtube Video
ಈ ಬಗ್ಗೆ ಸರಕಾರವನ್ನು ದೂಷಿಸಿ ಪ್ರಯೋಜನವಿಲ್ಲ.  ನಾವು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ನಿಯಂತ್ರಣ ಅಸಾಧ್ಯ. ಸರಕಾರ, ಮಹಾನಗರ ಪಾಲಿಕೆಗಳಿಂದ, ಮಾಧ್ಯಮಗಳಿಂದ ಎಷ್ಟು ಜಾಗೃತಿ ಮೂಡಿಸಿದರೂ ಸಾಲದು.  ಜನರೇ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಎಂ. ಬಿ. ಪಾಟೀಲ ಹೇಳಿದರು.
Published by: Sushma Chakre
First published: August 27, 2020, 1:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories