ಮಂಡ್ಯ ವಿವಿಯನ್ನು ರದ್ದುಗೊಳಿಸಿ, ಸ್ವಾಯತ್ತ ಮಾಡಿದ ಸರ್ಕಾರ; ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು

ಮಂಡ್ಯ ವಿವಿ ವಿಶೇಷ ಅಧಿಕಾರಿಯಾಗಿದ್ದ ಮಹದೇವನಾಯಕ ಅವರು ಈ ವೇಳೆ ಅಕ್ರಮ ನೇಮಕಾತಿ ಹಾಗೂ ಕೋರ್ಸ್‌ಗಳನ್ನು ತೆರೆದಿದ್ದು, ಇವು ನಿಯಮಬಾಹಿರವಾದ ಹಿನ್ನೆಲೆ ವಿವಿಯನ್ನು ರದ್ದು ಮಾಡಿ ಸರ್ಕಾರ ಆದೇಶ ನೀಡಿದೆ.

news18-kannada
Updated:January 11, 2020, 4:20 PM IST
ಮಂಡ್ಯ ವಿವಿಯನ್ನು ರದ್ದುಗೊಳಿಸಿ, ಸ್ವಾಯತ್ತ ಮಾಡಿದ ಸರ್ಕಾರ; ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳು
ಮಂಡ್ಯ ಕಾಲೇಜಿನ ಚಿತ್ರ
  • Share this:
ಮಂಡ್ಯ (ಜ.11): ಕಳೆದ ವರ್ಷ ಆರಂಭಗೊಂಡಿದ್ದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಅಕ್ರಮಗಳು ಕೇಳಿ ಬಂದ ಹಿನ್ನೆಲೆ ವಿವಿಯನ್ನು ರದ್ದುಗೊಳಿಸಿ,  ಸರ್ಕಾರಿ ಮಹಾವಿದ್ಯಾಲಯ ಕಾಲೇಜು (ಸ್ವಾಯತ್ತ)  ಮಾಡಿದ ಹಿನ್ನೆಲೆ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಪ್ರತಿಭಟನೆಗೆ ಮುಂದಾಗಿದ್ದಾರೆ. 

ಇಲ್ಲಿನ ಬಾಲಕರ ಮಹಾವಿದ್ಯಾಲಯವನ್ನು ಕಳೆದ ವರ್ಷ ಮಂಡ್ಯ ವಿಶ್ವವಿದ್ಯಾಲಯವಾಗಿ ಘೋಷಣೆ ಮಾಡಲಾಗಿತ್ತು. ಕಾಲೇಜು ವಿವಿಯಾಗಿ ಮಾರ್ಪಡಾದ ಹಿನ್ನೆಲೆ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಿತ್ತು. ಮಂಡ್ಯ ವಿವಿ ವಿಶೇಷ ಅಧಿಕಾರಿಯಾಗಿದ್ದ ಮಹದೇವನಾಯಕ ಅವರು ಈ ವೇಳೆ ಅಕ್ರಮ ನೇಮಕಾತಿ ಹಾಗೂ ಕೋರ್ಸ್‌ಗಳನ್ನು ತೆರೆದಿದ್ದು, ಇವು ನಿಯಮಬಾಹಿರವಾಗಿದೆ ಎಂದು ಆರೋಪಿಸಿದೆ. ಅಲ್ಲದೇ ಮಹದೇವನಾಯಕ  ಅವರನ್ನು ಕೂಡ ಸರ್ಕಾರ ಅಮಾನತುಗೊಳಿಸಿದೆ.ನೂತನ ವಿವಿ ಗೆ ಸೆನೆಟ್ ಮತ್ತು ಸಿಂಡಿಕೇಟ್ ರಚನೆ ಮಾಡದೆ, ಯಾರಿದಂದಲೂ ಅನುಮೋದನೆ ಪಡೆಯದೆ ಹೊಸ ಶೈಕ್ಷಣಿಕ ಕೋರ್ಸ್ ಆರಂಭಿಸುವುದರ ಜೊತೆಗೆ ಮಂಡ್ಯ ವಿವಿಗೆ ಅಕ್ರಮವಾಗಿ ಸುಮಾರು 400 ಜನರನ್ನು ನೇಮಕ ಮಾಡಿದ್ದರು. ಈ ಅಕ್ರಮದ ವಿರುದ್ದ ಮಂಡ್ಯ ಶಾಸಕ ಶ್ರೀನಿವಾಸ್ ಪರಿಷತ್ ಸದಸ್ಯರಾದ ಶ್ರೀಕಂಠೇಗೌಡ ಮತ್ತು ಮರಿತಿಬ್ಬೇಗೌಡ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಈ ಕುರಿತು ಸರ್ಕಾರ ನಡೆಸಿದ ತನಿಖೆಯಲ್ಲಿ  ಆರೋಪ ಸಾಬೀತಾಗಿದ್ದು,  ಹೊಸ ಆಡಳಿತಾವಧಿಯನ್ನು ಅಮಾನತ್ತು ಗೊಳಿಸಿದೆ.

ಇನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದತಾತ್ಕಾಲಿಕವಾಗಿ  ಸ್ವಾಯತ್ತ ವಿವಿಯಲ್ಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವಂತೆ ಸೂಚಿಸಿದೆ. ಆಡಳಿತ ಮಂಡಳಿ‌ ಕೂಡ ಸರ್ಕಾರದ ಆದೇಶ ಪಾಲಿಸಲು ಮುಂದಾಗಿದೆ‌.

ವಿಶ್ವವಿದ್ಯಾಲಯ ಎಂದು ದಾಖಲಾದ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ಸ್ವಾಯತ್ತ ಕಾಲೇಜು ಎಂದು ಹೇಳಲಾಗಿದ್ದು, ಎಂದಿನಂತೆ ಸರ್ಕಾರಿ ಮಹಾವಿದ್ಯಾಲಯ ಕಾಲೇಜು (ಸ್ವಾಯತ್ತ) ಅಡಿಯಲ್ಲಿ ಪರೀಕ್ಷೆ ಬರೆಯುವಂತೆ ಸರ್ಕಾರ ಸೂಚನೆ ನೀಡಿದೆ.

ಇದನ್ನು ಓದಿ: ಸುಳ್ಳು ಸುದ್ದಿ - ಏಪ್ರಿಲ್​ನಲ್ಲಿ ಪಂಚಾಯತ್ ಚುನಾವಣೆ ಇಲ್ಲ: ಗೆಜೆಟ್ ನೋಟಿಫಿಕೇಶನ್ ನಕಲಿ - ಆಂತರಿಕ ತನಿಖೆಗೆ ಆದೇಶಮಂಡ್ಯ ವಿವಿಯಲ್ಲಿ ನಡೆದ ಅಕ್ರಮದಿಂದ ಸರ್ಕಾರ ವಿಶ್ವವಿದ್ಯಾಲಯವನ್ನೇ ರದ್ದು ಪಡಿಸಿದ್ದು,  ಸರ್ಕಾರ ಹಾಗೂ ವಿವಿಯ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಒಂದು ಸೆಮಿಸ್ಟರ್ ಪರೀಕ್ಷೇಯನ್ನು ವಿವಿ ನಿಯಮದಡಿ ಬರೆದಿರುವ ವಿದ್ಯಾರ್ಥಿಗಳು, ಈಗ ಸ್ವಾಯತ್ತತೆ ಅಡಿಯಲ್ಲಿ ಪರೀಕ್ಷೆ ಬರಿಯುವುದಿಲ್ಲ ಎಂದಿದ್ದಾರೆ.
First published:January 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ