Karnataka Government: ನಿಗಮ, ಮಂಡಳಿ ಮತ್ತು ಪ್ರಾಧಿಕಾರಕ್ಕೆ ಅಧ್ಯಕ್ಷರ ನೇಮಕ

ಇಲ್ಲಿಯ ತನಕ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಮಾಡೋಕೆ ಸಾಧ್ಯವಾಗಿರಲಿಲ್ಲ. ಇದೀಗ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಮಾಡಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.  

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

  • Share this:
ಬಿ.ಎಸ್.ಯಡಿಯೂರಪ್ಪ ಸಿಎಂ (Yediyurappa) ಆಗಿದ್ದ ಅವಧಿಯಲ್ಲಿ ನೇಮಕವಾಗಿದ್ದ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಆಗಬೇಕು ಅನ್ನೋದು ಬಿಎಸ್‌ವೈ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರ ಆಗಿತ್ತು. ಆದ್ರೆ ಅಂದು ನಿರ್ಧಾರ ಆಗಿದ್ದರೂ ಇಲ್ಲಿಯ ತನಕ ನಿಗಮ ಮಂಡಳಿ (Board And Corporation) ಅಧ್ಯಕ್ಷರ ಬದಲಾವಣೆ  ಮಾಡೋಕೆ ಸಾಧ್ಯವಾಗಿರಲಿಲ್ಲ. ಇದೀಗ ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆ ಮಾಡಿ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.  

ಮಂಡಳಿ ಮತ್ತು ನಿಗಮದ ಸದಸ್ಯರ ಪಟ್ಟಿ

ಚಂಗಾವರ ಮಾರಣ್ಣ - ಕಾಡುಗೊಲ್ಲ ಅಭಿವೃದ್ಧಿ ನಿಗಮ
ಮಲ್ಲಿಕಾರ್ಜುನ ಬಸವಣ್ಣಪ್ಪ - ಮದ್ಯಪಾನ ಸಂಯಮ ಮಂಡಳಿ
ಎಂ. ಸರವಣ - ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
ಕೆ ಪಿ ವೆಂಕಟೇಶ್ - ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಕೊಲ್ಲಾ ಶೇಷಗಿರಿ ರಾವ್ - ಕಾಡಾ, ತುಂಗಭದ್ರಾ
ಜಿ ನಿಜಗುಣರಾಜು - ಕಾಡಾ, ಕಾವೇರಿ ಜಲಾನಯನ
ಮಾರುತಿ ಮಲ್ಲಪ್ಪ ಅಷ್ಟಗಿ - ಕರಕುಶಲ ಅಭಿವೃದ್ಧಿ ನಿಗಮ
------
ಕೆ ವಿ ನಾಗರಾಜ - ಖಾದಿ & ಗ್ರಾಮೋದ್ಯೋಗ ಮಂಡಳಿ
ಗುತ್ತಿಗನೂರು ವಿರುಪಾಕ್ಷಗೌಡ - ಜವಳಿ ಮೂಲ ಸೌಲಭ್ಯ ನಿಗಮ
ರಘು ಕೌಟಿಲ್ಯ - ಬಣ್ಣ & ಅರಗು ಕಾರ್ಖಾನೆ

ಇದನ್ನೂ ಓದಿ: President of India: 15ನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದ ದ್ರೌಪದಿ ಮುರ್ಮು

ಎಂ ಎಸ್ ಕರಿಗೌಡ್ರ - ಮಾರ್ಕೆಟಿಂಗ್​ ಕಮ್ಯೂನಿಕೇಶನ್ಸ್​
ಎ ವಿ ತೀರ್ಥರಾಮ - ಮೀನುಗಾರಿಕೆ ಅಭಿವೃದ್ಧಿ ನಿಗಮ
ಧರ್ಮಣ್ಣ ದೊಡ್ಡಮನಿ - ಕುರಿ & ಉಣ್ಣೆ ಅಭಿವೃದ್ಧಿ ನಿಗಮ
ಮಣಿರಾಜ ಶೆಟ್ಟಿ - ಗೇರು ಅಭಿವೃದ್ಧಿ ನಿಗಮ
ಗೋವಿಂದ ಜಟ್ಟಪ್ಪ ನಾಯ್ಕ - ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ
ಎಂ ಶಿವಕುಮಾರ್ - ಮೃಗಾಲಯ ಪ್ರಾಧಿಕಾರ
ಎನ್​ ರೇವಣಪ್ಪ ಕೋಳಗಿ - ಅರಣ್ಯ ಅಭಿವೃದ್ಧಿ ನಿಗಮ
------
ಎನ್​ ಎಂ ರವಿ ಕಾಳಪ್ಪ - ಜೀವ ವೈವಿಧ್ಯ ಮಂಡಳಿ
ಚಂದ್ರಶೇಖರ ಕವಟಗಿ - ಲಿಂಬೆ ಅಭಿವೃದ್ಧಿ ಮಂಡಳಿ
ಗೌತಮ್ ಗೌಡ - ಕರ್ನಾಟಕ ರೇಷ್ಮೆ ಉದ್ಯಮ
ಬಿ ಸಿ ನಾರಾಯಣಸ್ವಾಮಿ - ರೇಷ್ಮೆ ಮಾರಾಟ ಮಂಡಳಿ
ಎನ್ ಎಂ ರವಿನಾರಾಯಣರೆಡ್ಡಿ - ದ್ರಾಕ್ಷಿ & ವೈನ್​ ಮಂಡಳಿ
ಎಂ ಕೆ ವಾಸುದೇವ್ - ಮಾವು ಅಭಿವೃದ್ಧಿ & ಮಾರುಕಟ್ಟೆ
ಎಂ ಕೆ ಶ್ರೀನಿವಾಸ್ - ವಸ್ತು ಪ್ರದರ್ಶನ ಪ್ರಾಧಿಕಾರ
ದೇವೇಂದ್ರನಾಥ ಕೆ. ನಾದ್​ - ಅಲೆಮಾರಿ ಅಭಿವೃದ್ಧಿ ನಿಗಮ

ಕಸ್ತೂರಿ ರಂಗನ್ ವರದಿ  ಅವೈಜ್ಞಾನಿಕ- ಬೊಮ್ಮಾಯಿ

ಕಸ್ತೂರಿ ರಂಗನ್ ವರದಿಯಲ್ಲಿ ಯಾವುದೇ ಭೂ ಸಮೀಕ್ಷೆ ಮಾಡದೇ, ಕೇವಲ ಸ್ಯಾಟಿಲೈಟ್ ಸಮೀಕ್ಷೆ ನಡೆಸಲಾಗಿದ್ದು, ಹಸಿರು ಪ್ರದೇಶಗಳನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸಲು ಹೊರಟಿದ್ದಾರೆ. ಅಲ್ಲಿಯ ಜನಜೀವನ, ಪರಿಸರ ಒಟ್ಟಾಗಿದ್ದು, ಹಸಿರನ್ನು ಅವಲಂಬಿಸಿರುವ ಜನರಿದ್ದಾರೆ. ಕಾಫಿ, ಅಡಿಕೆ , ತೆಂಗು, ರಬ್ಬರ್ ತೋಟಗಳಿದ್ದು, ಅಲ್ಲಿಯ ಜನ ಹಸಿರನ್ನು ಉಳಿಸಿ ಬೆಳೆಸಿದ್ದಾರೆ. ಆದ್ದರಿಂದ ಈ ಪ್ರದೇಶದ ಭೂಮಿ ಸಮೀಕ್ಷೆ ನಡೆಸದೇ ವಾಸ್ತವಾಂಶ ತಿಳಿಯುವುದಿಲ್ಲ ಎಂಬುದು ರಾಜ್ಯದ ವಾದವಾಗಿದೆ ಎಂದರು.

ಇದನ್ನೂ ಓದಿ: Suspected Terrorist: ಉಗ್ರರ ಅಡಗು ತಾಣವಾಗಿದ್ಯಾ ಬೆಂಗಳೂರು? ಮತ್ತೊಬ್ಬ ಶಂಕಿತ ಉಗ್ರನ ಬಂಧನ

ಗ್ರಾಪಂ ಅಭಿಪ್ರಾಯ ಪಡೆದಿಲ್ಲ

ರಾಜ್ಯದ ಜೈವಿಕ ವೈವಿಧ್ಯತೆ ನೀತಿಯ ಪ್ರಕಾರ,  ವರದಿ ತಯಾರಿಸುವಾಗ ಸ್ಥಳೀಯ ಗ್ರಾಮಪಂಚಾಯತಿ, ತಾಲ್ಲೂಕು ಪಂಚಾಯತಿಯ ಅಭಿಪ್ರಾಯ ಪಡೆದಿರುವುದಿಲ್ಲ. ಒಟ್ಟಾರೆ ಸ್ಥಳೀಯ ಜನರ ಅಭಿಪ್ರಾಯವನ್ನು ಪಡೆಯದೆಯೇ ಕಸ್ತೂರಿ ರಂಗನ್ ವರದಿಯನ್ನು ಸಿದ್ಧಪಡಿಸಲಾಗಿದೆ. ಅಲ್ಲಿನ ನೈಸರ್ಗಿಕ  ಹಾಗೂ ಸಾಂಸ್ಕೃತಿಕ ಭೂ ಪ್ರದೇಶವನ್ನು ಪ್ರತ್ಯೇಕವಾಗಿ ಗುರುತಿಸಲು ವರದಿಯ ವಿಚಾರಣಾ ಉಲ್ಲೇಖಗಳಲ್ಲಿದ್ದರೂ , ಅದನ್ನು ಪ್ರತ್ಯೇಕಿಸಿಲ್ಲ ಎಂದರು.
Published by:Pavana HS
First published: