• Home
  • »
  • News
  • »
  • state
  • »
  • Moral Science: ಶಾಲಾ ಮಕ್ಕಳ ನೈತಿಕ ಶಿಕ್ಷಣವನ್ನ ಮಠಾಧೀಶರು ಡಿಸೈಡ್ ಮಾಡ್ತಾರಂತೆ!

Moral Science: ಶಾಲಾ ಮಕ್ಕಳ ನೈತಿಕ ಶಿಕ್ಷಣವನ್ನ ಮಠಾಧೀಶರು ಡಿಸೈಡ್ ಮಾಡ್ತಾರಂತೆ!

ಬಿ.ಸಿ.ನಾಗೇಶ್

ಬಿ.ಸಿ.ನಾಗೇಶ್

ಕೇವಲ ಈ ಮೂರು ಸಂಸ್ಥೆಗಳಲ್ಲದೇ ಹಲವರಿಂದ ಸಲಹೆಗಳನ್ನು ಕೇಳಲಾಗಿದೆ. ಎಲ್ಲಾ ಸಲಹೆಗಳನ್ನು ಗೌರವಯುತವಾಗಿ ಪರಿಗಣಿಸಿ ಪಠ್ಯಕ್ರಮ ಸಿದ್ಧಪಡಿಸಲಾಗುವುದು ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಕರ್ನಾಟಕ ಶಿಕ್ಷಣ ಇಲಾಖೆ (Education Department) ಈ ಶೈಕ್ಷಣಿಕ ವರ್ಷದಿಂದ ಎಲ್ಲಾ ತರಗತಿಯ ಮಕ್ಕಳಿಗೆ (Students) ನೈತಿಕ ಶಿಕ್ಷಣ (Moral Science) ಪರಿಚಯಿಸಲು ನಿರ್ಧರಿಸಿದೆ. ಈ ಸಂಬಂಧ ಇಲಾಖೆ ಪಠ್ಯಕ್ರಮ (Moral Science Syllabus) ಸಿದ್ಧಪಡಿಸಲು ಮಠಾಧೀಶರು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಸಂಪರ್ಕಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister BC Nagesh) ಹೇಳಿದ್ದಾರೆ. ನೈತಿಕ ಶಿಕ್ಷಣ ಪರಿಚಯಿಸುತ್ತಿರುವ ಹಿನ್ನೆಲೆ ಪಠ್ಯಕ್ರಮ ಸಿದ್ಧಪಡಿಸಲಾಗುತ್ತಿದೆ. ಈ ಸಂಬಂಧ ಸರ್ಕಾರ ಚಿನ್ಮಯ ಮಿಷನ್, ಜೆಎಸ್​ಎಸ್ ಮತ್ತು ಆದಿಚುಂಚನಗಿರಿ ಅಂತಹ ಸಂಸ್ಥೆಗಳನ್ನು ಸಂಪರ್ಕಿಸಿ ಚರ್ಚೆ ನಡೆಸಿದೆ. ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಇಲಾಖೆ ಶೀಘ್ರದಲ್ಲಿಯೇ ಎಲ್ಲರೊಂದಿಗೆ ಸಮಾಲೋಚನೆ ನಡೆಸಲಿದೆ. ಪಠ್ಯಕ್ರಮದಲ್ಲಿ ಏನು ಸೇರಿಸಬೇಕು ಎಂಬುದರ ಕುರಿತು ಶಿಫಾರಸ್ಸುಗಳನ್ನು ಕೇಳಲಾಗಿದೆ. ಈ ಪಠ್ಯಕ್ರಮವನ್ನು ಯಾವುದೇ ಧರ್ಮಕ್ಕೆ ಸೀಮಿತಗೊಳಿಸುತ್ತಿಲ್ಲ ಎಂದು ಹೇಳಿದರು.


ಕೇವಲ ಈ ಮೂರು ಸಂಸ್ಥೆಗಳಲ್ಲದೇ ಹಲವರಿಂದ ಸಲಹೆಗಳನ್ನು ಕೇಳಲಾಗಿದೆ. ಎಲ್ಲಾ ಸಲಹೆಗಳನ್ನು ಗೌರವಯುತವಾಗಿ ಪರಿಗಣಿಸಿ ಪಠ್ಯಕ್ರಮ ಸಿದ್ಧಪಡಿಸಲಾಗುವುದು ಎಂದು ಶಿಕ್ಷಣ ಸಚಿವರು ಸ್ಪಷ್ಟಪಡಿಸಿದ್ದಾರೆ.


ನೈತಿಕ ಶಿಕ್ಷಣದ ಹೆಸರಿನಲ್ಲಿ ಕೇಸರಿಕರಣಕ್ಕೆ ಮುಂದಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿ.ಸಿ.ನಾಗೇಶ್, ಪೋಷಕರ ಸಲಹೆ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಶಾಲಾ ಪಠ್ಯಕ್ರಮದಲ್ಲಿ ನೈತಿಕ ಶಿಕ್ಷಣದ ಪಠ್ಯ ಇಲ್ಲದ ಹಿನ್ನೆಲೆ ಸೇರ್ಪಡೆ ಮಾಡಲಾಗುತ್ತಿದೆ ಎಂದು ಹೇಳಿದರು.


ಧಾರ್ಮಿಕ ಮುಖಂಡರು ಸಮಾಜವನ್ನು ಸರಿ ದಾರಿಗೆ ತೆಗೆದುಕೊಂಡು ಹೋಗುವಂತಹ ಕೆಲಸ ಮಾಡುತ್ತಿರುತ್ತಾರೆ. ತಮ್ಮ ಬೋಧನೆಗಳ ಮೂಲಕ ಸಮಾಜವನ್ನು ಎಚ್ಚರಿಸುತ್ತಾರೆ. ಈ ಹಿನ್ನೆಲೆ ಅವರಿಂದ ಶಿಫಾರಸ್ಸುಗಳನ್ನು ಕೇಳಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.


ಸರ್ಕಾರದ ನಡೆಗೆ ಶಿಕ್ಷಣ ತಜ್ಞ ಬೇಸರ


"NCERT (ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್) ನೈತಿಕ ಶಿಕ್ಷಣಕ್ಕಾಗಿ ಒಂದು ವಿಶೇಷವಾದ ಪುಸ್ತಕವನ್ನು ಸಿದ್ಧಪಡಿಸಿದೆ. ನೈತಿಕ ಶಿಕ್ಷಣವನ್ನು NCF (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು), 2005 ರಿಂದ ವಿವರವಾಗಿ ಚರ್ಚಿಸಲಾಗಿದೆ. ಇದಕ್ಕಾಗಿ ಒಂದು ಸ್ಥಾನವನ್ನು ಸಿದ್ಧಪಡಿಸಲಾಗಿದೆ.


ಸಂವಿಧಾನದಲ್ಲಿಯೇ ಎಲ್ಲಾ ಮೌಲ್ಯಗಳಿವೆ


ಹೆಚ್ಚುವರಿಯಾಗಿ ಇದಕ್ಕಾಗಿ ಡಿಎಸ್‌ಇಆರ್‌ಟಿ ಎಂಬ ಶೈಕ್ಷಣಿಕ ಸಂಸ್ಥೆ ಇದೆ. ಇದೆಲ್ಲಾ ಇರುವಾಗ ಸರ್ಕಾರ ಸ್ವಾಮೀಜಿಗಳ ಸಲಹೆ ಯಾಕೆ ಕೇಳುತ್ತಿದೆ ಎಂದುವುದು ಗೊತ್ತಾಗುತ್ತಿಲ್ಲ. ನಮ್ಮ ಸಂವಿಧಾನ ನಿಜವಾದ ಮೌಲ್ಯಗಳನ್ನು ಹೇಳುವ ಪುಸ್ತಕವಾಗಿದೆ. ಸಹಕಾರ, ಸಹನೆ ಮತ್ತು ಶಾಂತಿಯುತ ಸಹಬಾಳ್ವೆ ಬಗ್ಗೆ ಸಂವಿಧಾನದಲ್ಲಿದ್ರೂ ಸರ್ಕಾರ ಮಠಾಧೀಶರ ಸಲಹೆ ಪಡೆದುಕೊಳ್ಳಲು ಮುಂದಾಗಿದೆ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ:  Mass Killings: ಸಾಮೂಹಿಕ ಶಾಲಾ ಹತ್ಯೆ ಪ್ರಕರಣಗಳಿಗೆ ಮಾನಸಿಕ ಅಸ್ವಸ್ಥೆಯೇ ಕಾರಣವಲ್ಲ!


ಯಾವುದೇ ಧರ್ಮಕ್ಕೆ ಸೀಮಿತವಲ್ಲ


ಇದು ಯಾವುದೇ ಧರ್ಮಕ್ಕೆ ಸೀಮಿತವಲ್ಲ. ಯಾವ ಧರ್ಮದಲ್ಲಿ ಉತ್ತಮ ಅಂಶಗಳಿರುತ್ತೊ ಅದನ್ನು ಪಠ್ಯದಲ್ಲಿ ಸೇರಿಸುತ್ತೇವೆ. ಯಾವ ಧರ್ಮದ ಮಕ್ಕಳು ಶೇಕಡ 90 ರಷ್ಟು ಮಕ್ಕಳಿರುತ್ರಾರೊ ಆ ಧರ್ಮದ ವಿಚಾರಗಳನ್ನು ಪಠ್ಯದಲ್ಲಿ ಅಳವಡಿಸಲಾಗುವುದು ಎಂದು ನಾಗೇಶ್ ಸ್ಪಷ್ಟಪಡಿಸಿದರು.


ಮದರಸದಲ್ಲಿ ಕಲಿತ ಮಕ್ಕಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸ್ಪರ್ಧೆ ಮಾಡಲು ಆಗ್ತಿಲ್ಲ ಎಂದು ಮದರಸಕ್ಕೆ ಮಕ್ಕಳನ್ನು ಕಳುಹಿಸುವ ಹಲವು ಪೋಷಕರು ಹೇಳ್ತಿದ್ದಾರೆ. ಹೀಗಾಗಿ ಬೇರೆ ಶಾಲೆಗಳಂತೆ ಮದರಸದಲ್ಲೂ ಬೇರೆ ಶಾಲೆಯಲ್ಲಿನ ಶಿಕ್ಷಣ ನೀಡಿ ಎಂಬ ಕೂಗು ಕೇಳಿ ಬರ್ತಿದೆ ಎಂದು ಸಚಿವರು ತಿಳಿಸಿದ್ದಾರೆ.


ಇದನ್ನೂ ಓದಿ:  Gender Correction: ಅವಳಾದ ಅವನು, ಪಾಸ್​ಪೋರ್ಟ್​ ಲಿಂಗ ತಿದ್ದುಪಡಿ ಪ್ರಕ್ರಿಯೆಯೇ ವಿಚಿತ್ರ


2ನೇ ಕ್ಲಾಸ್​ವರೆಗಿನ ಮಕ್ಕಳಿಗೆ ನೋ ಹೋಂ ವರ್ಕ್​!?


ಇನ್ನು ಈ ಹೋಂ ವರ್ಕ್ ವಿಚಾರದ ಬಗ್ಗೆ ಶಿಕ್ಷಣ ಇಲಾಖೆ ಕೂಡ ದಿಟ್ಟ ನಿರ್ಣಯ ಕೈಗೊಂಡಿದ್ದು, ಇನ್ಮುಂದೆ ಎರಡನೇ ತರಗತಿಯವರೆಗಿನ ಮಕ್ಕಳಿಗೆ ಹೋಂ ವರ್ಕ್ ಕೊಡುವಂತಿಲ್ಲ ಎಂಬ ಬಗ್ಗೆ ಚಿಂತನೆ ನಡೆಸಿದೆ. ಸರ್ಕಾರಿ ಶಾಲೆ ಮಕ್ಕಳಿಗೆ ಈಗಾಗಲೇ ನಲಿ-ಕಲಿ ರೀತಿ ಶಿಕ್ಷಣ ಒದಗಿಸಲು ಚಿಂತನೆ ನಡೆಸಿದೆ. ಈ ಪ್ರಸಕ್ತ ವರ್ಷದಿಂದಲೇ ಸರ್ಕಾರಿ ಶಾಲೆ ಮಕ್ಕಳಿಗೆ ನಲಿ-ಕಲಿ ರೀತಿ ಪುಟ್ಟ ಮಕ್ಕಳಿಗೆ ಶಿಕ್ಷಣ ಒದಗಿಸಲು ನಿರ್ಧರಿಸಲಾಗಿದೆ.

Published by:Mahmadrafik K
First published: