ಸೆಪ್ಟೆಂಬರ್​ನಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್​, ಡಿಗ್ರಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಎಕ್ಸಾಂ; ಜುಲೈ 30, 31ಕ್ಕೆ ಸಿಇಟಿ ಪರೀಕ್ಷೆ

ರಾಜ್ಯದ ಡಿಪ್ಲೊಮಾ, ಇಂಜಿನಿಯರ್ ಹಾಗೂ ಪದವಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಉಳಿದ ತರಗತಿಗಳಲ್ಲಿರುವವರಿಗೆ ಪರೀಕ್ಷೆ ಇಲ್ಲ. ಇದೇ ತಿಂಗಳ 30 ಮತ್ತು 31ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಆ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ.

news18-kannada
Updated:July 10, 2020, 2:32 PM IST
ಸೆಪ್ಟೆಂಬರ್​ನಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್​, ಡಿಗ್ರಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಎಕ್ಸಾಂ; ಜುಲೈ 30, 31ಕ್ಕೆ ಸಿಇಟಿ ಪರೀಕ್ಷೆ
ಸುದ್ದಿಗೋಷ್ಠಿಯಲ್ಲಿ ಪರೀಕ್ಷೆಗಳ ದಿನಾಂಕ ಪ್ರಕಟಿಸಿದ ಡಿಸಿಎಂ ಅಶ್ವಥ್ ನಾರಾಯಣ
  • Share this:
ಬೆಂಗಳೂರು (ಜು. 10): ಲಾಕ್​ಡೌನ್​ನಿಂದಾಗಿ ರಾಜ್ಯದ ಎಲ್ಲ ಶಾಲಾ-ಕಾಲೇಜುಗಳ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಈಗಾಗಲೇ ಎಸ್​ಎಸ್​ಎಲ್​ಸಿ, ಪಿಯುಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿರುವ ರಾಜ್ಯ ಸರ್ಕಾರ ಇದೀಗ ಡಿಪ್ಲೊಮಾ, ಇಂಜಿನಿಯರಿಂಗ್, ಪದವಿ ತರಗತಿಗಳ ಪರೀಕ್ಷೆ ದಿನಾಂಕವನ್ನು ಘೋಷಿಸಿದೆ.

ರಾಜ್ಯದ ಡಿಪ್ಲೊಮಾ, ಇಂಜಿನಿಯರ್ ಹಾಗೂ ಪದವಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು. ಉಳಿದ ತರಗತಿಗಳಲ್ಲಿರುವವರಿಗೆ ಪರೀಕ್ಷೆ ಇಲ್ಲ. ಫೈನಲ್ ಪರೀಕ್ಷೆ ಜೊತೆಗೆ ಬ್ಯಾಕ್ ಲಾಗ್ ಪರೀಕ್ಷೆಗೂ ಅವಕಾಶ ನೀಡಲಾಗುತ್ತದೆ. ಇದೇ ವರ್ಷದ ಸೆಪ್ಟೆಂಬರ್​ನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿವೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಖಾಸಗಿ ಹಾಗೂ ಸರ್ಕಾರಿ ವಿವಿಗಳಿಗೆ ಪರೀಕ್ಷೆ ಮಾಡಲು ಅವಕಾಶ ನೀಡಲಾಗಿದೆ. ಈ ಸೆಮಿಸ್ಟರ್​ನಲ್ಲಿ ಪರೀಕ್ಷೆ ಬರೆಯಲು ಆಗುವುದಿಲ್ಲ ಎನ್ನುವ ವಿದ್ಯಾರ್ಥಿಗಳಿಗೆ ಮುಂದೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. ಇಂಜಿನಿಯರಿಂಗ್, ಡಿಪ್ಲೊಮಾ, ಪದವಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಅವರ ಸುರಕ್ಷತೆ‌ ದೃಷ್ಟಿಯಲ್ಲಿಟ್ಟುಕೊಂಡು ಪರೀಕ್ಷೆ ನಡೆಸದಿರಲು ನಿರ್ಧರಿಸಲಾಗಿದೆ. ಆ ವಿದ್ಯಾರ್ಥಿಗಳ ಇಂಟರ್ನಲ್ ಅಸ್ಸೆಸ್ಮೆಂಟ್ ಆಧರಿಸಿ ಮತ್ತು ಹಿಂದಿನ ಅವರ ಪರೀಕ್ಷೆ ಫಲಿತಾಂಶ ನೋಡಿ ಪ್ರಮೋಟ್ ಮಾಡಲಾಗುತ್ತದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಮಾಹಿತಿ ನೀಡಿದ್ದಾರೆ.

ಸಿಇಟಿ ಪರೀಕ್ಷೆ ದಿನಾಂಕದಲ್ಲಿ ಬದಲಾವಣೆ ಇಲ್ಲ:

ಇದೇ ತಿಂಗಳ 30 ಮತ್ತು 31ರಂದು ಸಿಇಟಿ ಪರೀಕ್ಷೆ ನಡೆಯಲಿದೆ. ಆ ದಿನಾಂಕದಲ್ಲಿ ಯಾವುದೇ ಬದಲಾವಣೆಯಿಲ್ಲ. ಪಿಜಿ ಸಿಇಟಿ ಪರೀಕ್ಷೆ ಆಗಸ್ಟ್​ 8, 9ರಂದು ನಡೆಯಲಿದೆ. ಡಿಪ್ಲೊಮಾ ಸಿಇಟಿ ಆಗಸ್ಟ್​ 9ಕ್ಕೆ ನಡೆಯಲಿದೆ. ಸಿಇಟಿ ಪರೀಕ್ಷೆಗೂ ಸಹಾಯವಾಣಿ ತೆರೆದಿದ್ದೇವೆ. ವಿದ್ಯಾರ್ಥಿಗಳು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಎಂದು ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಇದನ್ನೂ ಓದಿ: ಬಿ.ಎಸ್. ಯಡಿಯೂರಪ್ಪಗೂ ಕೊರೋನಾ ಭೀತಿ; ಸಿಎಂ ಮನೆ, ಗೃಹ ಕಚೇರಿಯ 10 ಸಿಬ್ಬಂದಿಗೆ ಸೋಂಕು ಪತ್ತೆ

ಸೆಪ್ಟೆಂಬರ್ ತಿಂಗಳ ಮೊದಲ‌ ದಿನದಿಂದ ಅಕೆಡೆಮಿಕ್ ಕ್ಲಾಸ್ ಆರಂಭಿಸಲು ತೀರ್ಮಾನ ಮಾಡಲಾಗಿದೆ. ಸೆಪ್ಟೆಂಬರ್​ನಲ್ಲಿ ಆನ್​ಲೈನ್ ಕ್ಲಾಸ್​ಗಳು ಹಾಗೂ ನವೆಂಬರ್​ನಿಂದ ರೆಗ್ಯುಲರ್ ಕ್ಲಾಸ್‌ಗಳು ಆರಂಭವಾಗಲಿವೆ. ಫೈನಲ್ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದಿದ್ದಾರೆ.ಉನ್ನತ ಶಿಕ್ಷಣದಲ್ಲಿ, ಪದವಿ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷೆ ನಡೆಸಲು ಸಾಕಷ್ಟು ಅಡತಡೆಗಳು ಬಂದಿದ್ವು.‌ ಅದರಲ್ಲಿ ಕೊರೋನಾ ಕೂಡ ಒಂದು. ಆದರೂ 50 ಸಾವಿರ ಆನ್​ಲೈನ್ ಕ್ಲಾಸ್​ಗಳನ್ನು ಮಾಡಿದ್ದೇವೆ. ವಿದ್ಯಾರ್ಥಿಗಳಿಗೆ ವಿಡಿಯೋ ಕಂಟೆಂಟ್ ಕೊಟ್ಟಿದ್ದೇವೆ. ವಿದ್ಯಾಸಂಸ್ಥೆಗಳು ಶಕ್ತಿಮೀರಿ ಕೆಲಸ ಮಾಡಿವೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by: Sushma Chakre
First published: July 10, 2020, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading