ಕಾವೇರಿ ನಿವಾಸ ಹೊರತುಪಡಿಸಿ, ಉಳಿದ ಸರ್ಕಾರಿ ಬಂಗಲೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಿ ಆದೇಶ

ಕಾವೇರಿ ನಿವಾಸ ಹೊರತು ಪಡಿಸಿ ಉಳಿದ ಸರ್ಕಾರಿ ಬಂಗಲೆಗಳನ್ನು ಹಂಚಿಕೆ ಮಾಡಿರುವುದು ವಿಶೇಷ. ಕಾರಣ, ಕಾವೇರಿ ನಿವಾಸದಲ್ಲಿ ಸದ್ಯ ಸಿದ್ದರಾಮಯ್ಯ ವಾಸ್ತವ್ಯ ಹೀಡಿದ ಹಿನ್ನೆಲೆ ಈ ನಿವಾಸವನ್ನು ಯಾವುದೇ ಸಚಿವರಿಗೆ ಹಂಚಿಕೆ ಮಾಡಿಲ್ಲ.

Seema.R | news18-kannada
Updated:August 22, 2019, 8:17 PM IST
ಕಾವೇರಿ ನಿವಾಸ ಹೊರತುಪಡಿಸಿ, ಉಳಿದ ಸರ್ಕಾರಿ ಬಂಗಲೆಗಳನ್ನು ನೂತನ ಸಚಿವರಿಗೆ ಹಂಚಿಕೆ ಮಾಡಿ ಆದೇಶ
ಕಾವೇರಿ ನಿವಾಸದ ಚಿತ್ರಣ
  • Share this:
ಬೆಂಗಳೂರು (ಆ.22): ನೂತನವಾಗಿ ನೇಮಕಗೊಂಡಿರುವ ಸಚಿವರಿಗೆ ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ ಬೆನ್ನಲ್ಲೇ ಸರ್ಕಾರಿ ನಿವಾಸದ ಬಂಗಲೆಗಳನ್ನು ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕಾವೇರಿ ನಿವಾಸ ಹೊರತು ಪಡಿಸಿ ಉಳಿದ ಸರ್ಕಾರಿ ಬಂಗಲೆಗಳನ್ನು ಹಂಚಿಕೆ ಮಾಡಿರುವುದು ವಿಶೇಷ. ಕಾರಣ, ಕಾವೇರಿ ನಿವಾಸದಲ್ಲಿ ಸದ್ಯ ಸಿದ್ದರಾಮಯ್ಯ ವಾಸ್ತವ್ಯ ಹೀಡಿದ ಹಿನ್ನೆಲೆ ಈ ನಿವಾಸವನ್ನು ಯಾವುದೇ ಸಚಿವರಿಗೆ ಹಂಚಿಕೆ ಮಾಡಿಲ್ಲ.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಸಿದ್ದರಾಮಯ್ಯ ಕುಮಾರಕೃಪ ರಸ್ತೆಯಲ್ಲಿರುವ ಇದೇ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ. ಕಳೆದ ಮೈತ್ರಿ ಸರ್ಕಾರದಲ್ಲಿಯೂ ಯಾವುದೇ ಸಚಿವ ಸ್ಥಾನ ಪಡೆಯದ ಹಿನ್ನೆಲೆ ಈ ಕಾವೇರಿ ನಿವಾಸದ ಮೇಲೆ ಜಿ ಪರಮೇಶ್ವರ್​ ಕಣ್ಣಿಟ್ಟಿದ್ದರು. ಆದರೆ, ಸಿದ್ದರಾಮಯ್ಯ ಈ ನಿವಾಸ ತೊರೆಯದ ಹಿನ್ನೆಲೆ ಅವರಿಗೆ ಕ್ಯಾಬಿನೆಟ್​ ದರ್ಜೆ ಸ್ಥಾನಮಾನ ನೀಡಿದ ಹಿನ್ನೆಲೆ ಈ ನಿವಾಸದಲ್ಲಿಯೇ ವಾಸ್ತವ್ಯ ಮುಂದುವರೆಸಿದ್ದರು. ಮೈತ್ರಿ ಸರ್ಕಾರ ಪತನವಾದ ಬಳಿಕವೂ ಇದೇ ನಿವಾಸದಲ್ಲಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿದ್ದಾರೆ.13 ಸಚಿವರಿಗೆ ಮಾತ್ರ ಬಂಗಲೆ ಹಂಚಿಕೆ

ನೂತನವಾಗಿ ನೇಮಕಗೊಂಡ 17 ಸಚಿವರಲ್ಲಿ ಕೇವಲ 13 ಸಚಿವರಿಗೆ ಮಾತ್ರ ನಿವಾಸ ಹಂಚಿಕೆಯಾಗಿದೆ.  ರೇಸ್ ವ್ಯೂ ಕಾಟೇಜ್ ನಂ.2 ಬಂಗಲೆಯನ್ನು ಸಿಎಂ ಯಡಿಯೂರಪ್ಪ, ರೇಸ್ ವ್ಯೂ ಕಾಟೇಜ್ ನಂ.1 ಅಶ್ವಥ್ ನಾರಾಯಣ್​, ರೇಸ್ ವ್ಯೂ ಕಾಟೇಜ್ ನಂ.4 ಜೆ.ಸಿ.ಮಾಧುಸ್ವಾಮಿಗೆ ಹಂಚಿಕೆಯಾಗಿದೆ.

ಸೆವೆನ್‌ ಮಿನಿಸ್ಟರ್ ಕ್ವಾಟ್ರಸ್‌ನಲ್ಲಿ ಸಚಿವ ವಿ.ಸೋಮಣ್ಣ, ಸಿ.ಟಿ.ರವಿ, ಲಕ್ಷ್ಮಣ ಸವದಿ, ಶ್ರೀರಾಮುಲುಗೆ ಬಂಗಲೆ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಆರ್.ಅಶೋಕ್, ನಾಗೇಶ್, ಸುರೇಶ್ ಕುಮಾರ್, ಬಸವರಾಜ ‌ಬೊಮ್ಮಾಯಿ, ಪ್ರಭು ಚೌಹಾಣ್​ಗೆ ಯಾವುದೇ ಸರ್ಕಾರಿ ಬಂಗಲೆ ಹಂಚಿಕೆಯಾಗಿಲ್ಲ.
First published: August 22, 2019, 8:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading