nipah Virus: ರಾಜ್ಯದಲ್ಲೂ ನಿಫಾ ಆತಂಕ : ಸರ್ಕಾರದಿಂದ ಸೋಂಕಿನ ಗುಣ ಲಕ್ಷಣಗಳ ಪಟ್ಟಿ ಬಿಡುಗಡೆ

ಲಕ್ಷಣಗಳನ್ನು ಸರ್ಕಾರದ ಆರೋಗ್ಯ ಇಲಾಖೆ ಪಟ್ಟಿ ಮಾಡಿದೆ. ಇದರ ಜೊತೆಗೆ ಏನು ಮಾಡಬೇಕು ಏನೇನು ಮಾಡಬಾರದು ಎಂಬುವುದನ್ನೂ ತಿಳಿಸಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಸೆ. 7): ನೆರೆಯ ಕೇರಳದಲ್ಲಿ ಕೊರೋನಾ ನಡುವೆ ನಿಫಾ ವೈರಸ್ (nipah Virus) ಸೋಂಕು ಸಾಕಷ್ಟು ಆತಂಕ ಮೂಡಿಸಿದೆ. ನಿಫಾ ಸೋಂಕಿಗೆ 12 ವರ್ಷದ ಬಾಲಕ ಬಲಿಯಾಗಿದ್ದಾನೆ. ಈಗಾಗಲೇ ಕೊರೋನಾಗೆ ಬಸವಳಿದಿರುವ ಕೇರಳ ನಿಫಾ ಕಬಂಧ ಬಾಹುನಲ್ಲಿದೆ. ಈ ಹಿನ್ನೆಲೆ ಈಗ ರಾಜ್ಯದಲ್ಲೂ ಈ ಬಗ್ಗೆ ಕಟ್ಟೆಚ್ಚರಿಕೆ ಕ್ರಮಕ್ಕೆ ಮುಂದಾಗಲಾಗಿದೆ. ಗಡಿ ಜಿಲ್ಲೆಯಲ್ಲಿ ಈ ಬಗ್ಗೆ ಸಾಕಷ್ಟು ಮುನ್ನೆಚ್ಚರಿಕೆ ನೀಡಲಾಗಿದೆ. ಈ ನಡುವೆ  ರಾಜ್ಯ ಆರೋಗ್ಯ ಇಲಾಖೆ ರಾಜ್ಯಕ್ಕೂ‌ ನಿಫಾ ವೈರಸ್ ಕುರಿತು ಹೆಚ್ಚಿನ ಜಾಗ್ರತೆ ವಹಿಸುವಂತೆ ತಿಳಿಸಿದ್ದು, ಈ ಸಂಬಂಧ  ನಿಫಾ ಸೋಂಕಿನ ರೋಗ ಲಕ್ಷಣಗಳನ್ನು (Nipha Virus Symptoms) ಪಟ್ಟಿ ಮಾಡಿಕೊಂಡಿದೆ.

ಕೇರಳದಲ್ಲಿ ನಿಫಾ ಸೋಂಕು ಹಿನ್ನೆಲೆ.. ರಾಜ್ಯದಲ್ಲಿ‌ ನಿಫಾ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸಲು ಸೂಚನೆ.

ಪಕ್ಕದ ಕೇರಳದ ಕೋಝಿಕೋಡಿ(kerala kozhikode)ನಲ್ಲಿ ಕೊರೋನಾ ನಡುವೆ ನಿಫಾ ವೈರಸ್ ಪ್ರಕರಣವೊಂದು ಪತ್ತೆಯಾಗಿದೆ. ಅಲ್ಲದೇ ಈ ಸಾವನ್ನಪ್ಪಿದ ಬಾಲಕನ  ಪ್ರಾಥಮಿಕ ಸಂಪರ್ಕದಲ್ಲಿ ಇದ್ದ ಸುಮಾರು 250ಕ್ಕೂ ಹೆಚ್ಚು ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಇದು ಈಗ ರಾಜ್ಯದಲ್ಲೂ ಕೊರೋನಾ ನಡುವೆ ಆತಂಕ ಮೂಡಿಸುವಂತೆ ಮಾಡಿದೆ. ಈ ನಿಟ್ಡಿನಲ್ಲಿ ರಾಜ್ಯ ಸರ್ಕಾರ ಕೂಡ ಎಚ್ಚರವಹಿಸಲು ಆರೋಗ್ಯ ಇಲಾಖೆಗೆ ಸೂಚನೆ ಕೊಟ್ಟಿದೆ. ಹೀಗಾಗಿ ಆರೋಗ್ಯ ಇಲಾಖೆ ನಿಫಾ ವೈರಸ್ ರೋಗ ಲಕ್ಷಣಗಳನ್ನು ಪಟ್ಟಿ ಮಾಡಿಕೊಂಡಿದೆ.

ನಿಫಾ ವೈರಸ್ ಗುಣ ಲಕ್ಷಣಗಳ ಪಟ್ಟಿ ಮಾಡಿದ ರಾಜ್ಯ ಸರ್ಕಾರ.!!

• ಜ್ವರ

• ಮೈಕೈ ನೋವು
• ನಡುಕ
• ತೊದಲುವಿಕೆ
• ತಲೆನೋವು
• ವಾಂತಿ
• ನಿದ್ರೆ, ಆಲಸ್ಯ
• ಪ್ರಜ್ಞಾಹೀನತೆ

ಹೀಗೆ ಹಲವು ರೋಗ ಲಕ್ಷಣಗಳನ್ನು ಸರ್ಕಾರದ ಆರೋಗ್ಯ ಇಲಾಖೆ ಪಟ್ಟಿ ಮಾಡಿದೆ. ಇದರ ಜೊತೆಗೆ ಏನು ಮಾಡಬೇಕು ಏನೇನು ಮಾಡಬಾರದು ಎಂಬುವುದನ್ನೂ ತಿಳಿಸಿದೆ

ಸರ್ಕಾರದ ಗೈಡ್ ಲೈನ್ಸ್ ಪ್ರಕಾರ ಏನು ಮಾಡಬಾರದು.!?

• ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿದ ಹಣ್ಣು ತಿನ್ನಬಾರದು
• ಬಾವಲಿಗಳು ಅತಿ ಹೆಚ್ಚು ಕಂಡು ಬರುವ ಪ್ರದೇಶಗಳಿಂದ ಸಂಗ್ರಹಿಸಿದ ‌ನೀರು ಕುಡಿಯ ಬಾರದು
• ರೋಗಿಯ ಶರೀರ ದ್ರವದಿಂದ ಅಂದರೆ ಬೇರೆಯವರ ಜೊಲ್ಲು, ಬೆವರು, ಮೂತ್ರ ಇತ್ಯಾದಿ ಸಂಪರ್ಕ ತಪ್ಪಿಸಿ

ಇದನ್ನು ಓದಿ: ಅಕ್ರಮ ಸಂಬಂಧ ಪ್ರಶ್ನಿಸಿದ ಹೆಂಡತಿಯನ್ನು ಕೊಲೆ ಮಾಡಿದ ವೈದ್ಯ

ನಿಫಾದಿಂದ ತಪ್ಪಿಸಿಕೊಳ್ಳಲು ಏನೇನು ಮಾಡಬೇಕು.!?

• ಸೋಂಕಿತ ಪ್ರದೇಶಗಳಿಗೆ ಭೇಟಿ ನೀಡುವಾಗ ಪ್ರತಿಬಂಧಕ ಉಪಾಯಗಳನ್ನು ಕೈಗೊಳ್ಳಿ. ಮಾಸ್ಕ್, ಪಿಪಿ ಕಿಟ್ ಇತ್ಯಾದಿ ಧರಿಸುವುದು ಕಡ್ಡಾಯ
• ಹಂದಿ, ನಾಯಿ, ಕುದುರೆ, ಬೆಕ್ಕು, ಬಾವಲಿ ಸೇರಿದಂತೆ ಎಲ್ಲಾ ಹಕ್ಕಿಗಳಿಂದ ಸಾಧ್ಯವಾದಷ್ಟು ದೂರವಿರಿ
• ಸೋಂಕಿತರ ಜೊತೆ ಯಾವುದೇ ಸಂಪರ್ಕ‌ ಇಟ್ಟುಕೊಳ್ಳಬೇಡಿ
•ಹಸ್ತಲಾಘವ ಕೊಡುವುದನ್ನು ತಪ್ಪಿಸಿ, ಮನೆಯಿಂದ ಹೊರ ಹೋಗಿ ಬಂದ ಬಳಿಕ ಕೈ , ಕಾಲುಗಳನ್ನು‌ ಶುಚಿಗೊಳಿಸಿ
• ಎಲ್ಲಾ ರೀತಿಯ ಹಣ್ಣುಗಳು ತಿನ್ನುವಾಗ ಚೆನ್ನಾಗಿ ತೊಳೆದು ತಿನ್ನುವುದು

ಇನ್ನು ಈ ನಿಫಾ ಸೋಂಕಿಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ‌ ಎಂದು ಈಗಾಗಲೇ  ಸರ್ಕಾರ ಹೇಳಿದೆ. ಕೊರೋನಾ ರೀತಿಯಲ್ಲಿಯೇ ಸೋಂಕಿನ ಲಕ್ಷಣವಿರುವ ಹಿನ್ನಲೆ ಈ ಬಗ್ಗೆ ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ವೈದ್ಯರು ಕೂಡ ಸೋಂಕಿತನ ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಈಗಾಗಲೇ ಮೊದಲೊಮ್ಮೆ ಕೇರಳದಲ್ಲಿ ನಿಫಾ ವೈರಸ್ ಅಪ್ಪಳಿಸಿ ಅವಾಂತರ ಸೃಷ್ಟಿಸಿತ್ತು. ಇದೀಗ ಎರಡನೇ ಬಾರಿಯೂ ಸೋಂಕು ದೃಢವಾಗಿ ಅತಂಕ ಮೂಡಿಸಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಕೂಡ ಮುನ್ನೆಚ್ಚರಿಕೆ ಕ್ರಮವಾಗಿ ಈ ತಿಳುವಳಿಕೆಯನ್ನು ಜನತೆಗೆ ನೀಡಿದೆ.
Published by:Seema R
First published: