ಬೆಂಗಳೂರು(ಮೇ.10): ಬುಧವಾರ ಕರ್ನಾಟಕದಲ್ಲಿ ಚುನಾವಣೆ (Karnataka Elections) ಆರಂಭವಾಗುವ ಕೆಲವೇ ಗಂಟೆಗಳ ಮೊದಲು, ಉತ್ತರ ಕರ್ನಾಟಕದಲ್ಲಿ ಗೋವಾದ ಬಸ್‌ಗಳು ಕಾಣಿಸಿಕೊಂಡಿವೆ ಎಂದು ಕಾಂಗ್ರೆಸ್ ಎಚ್ಚರಿಸಿದೆ. ಬಸ್ಸಿನ ವಿಡಿಯೋವನ್ನು ಹಂಚಿಕೊಂಡ ಕಾಂಗ್ರೆಸ್, ಅಕ್ರಮ ಹಣ ಸಾಗಣೆಯಾಗುತ್ತಿದೆಯೇ ಅಥವಾ ರಾಜ್ಯದಲ್ಲಿ ನಕಲಿ ಮತದಾನದ ಉದ್ದೇಶವಾಗಿದೆಯೇ ಎಂದು ಪ್ರಶ್ನಿಸಿದೆ. ಕಾಂಗ್ರೆಸ್‌ನ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಮತದಾನ ಪ್ರಾರಂಭವಾಗುವ ಮೊದಲೇ 'ರೆಸಾರ್ಟ್' ಪಾಲಿಟಿಕ್ಸ್ ಆರಂಭವಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಅವರು ಗೋವಾದ ಸಚಿವ ವಿಶ್ವಜಿತ್ ರಾಣೆ ದಾಂಡೇಲಿಯ ವಿಸ್ಲಿಂಗ್ ವುಡ್ಸ್ ಜಂಗಲ್ ರೆಸಾರ್ಟ್‌ನಲ್ಲಿ ಆರು ಕೊಠಡಿಗಳನ್ನು ಕಾಯ್ದಿರಿಸಿದ್ದಾರೆಯೇ ಎಂದು ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುರ್ಜೇವಾಲಾ "ಕರ್ನಾಟಕ ಪೊಲೀಸರು ಎಲ್ಲಿದ್ದಾರೆ? ಇಸಿಐ (ಚುನಾವಣಾ ಆಯೋಗ) ಕಾರ್ಯನಿರ್ವಹಿಸುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ರೆಸಾರ್ಟ್ ರಾಜಕಾರಣದ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: Savitha Bai: ನಾನು ನಿಮ್ಮನ್ನೇ ನಂಬಿ ಬಂದಿದ್ದೇನೆ; ಫೇಸ್‌ಬುಕ್ ಲೈವ್‌ನಲ್ಲಿ ಗಳಗಳನೇ ಅತ್ತ ಪಕ್ಷೇತರ ಅಭ್ಯರ್ಥಿ!
Why is the Goa BJP govt sending people from Goa on Kadamba Transport Corporation buses to northern Karnataka tonight?
Why???
Is illicit money being transported?
Is bogus voting the objective? https://t.co/yQFDuZTDs6
— Congress (@INCIndia) May 9, 2023
ಕರ್ನಾಟಕದಲ್ಲಿ ಮತದಾನಕ್ಕೂ ಮುನ್ನ ಬಿರುಸಿನ ಪ್ರಚಾರ ನಡೆದಿದ್ದು, ಇಡೀ ದೇಶದ ಚಿತ್ತ ರಾಜ್ಯದತ್ತ ನೆಟ್ಟಿದೆ. ಆರಂಭಿಕ ಚುನಾವಣಾ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ ಗೆಲುವು ನಿಶ್ಚಿತ ಎಂದಿದ್ದರೂ, ಬಳಿಕದ ಸಮೀಕ್ಷೆಯಲ್ಲಿ ಈ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇನ್ನು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಸಾರ್ವಭೌಮತ್ವದ ಹೇಳಿಕೆ ವಿಚಾರವಾಗಿ ಚುನಾವಣಾ ಆಯೋಗವು ಅಪರಾಧಿಗಳಿಗೆ ನೋಟಿಸ್ ಜಾರಿ ಮಾಡುವುದರೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ತೀವ್ರ ಮಾತಿನ ಸಮರದಲ್ಲಿ ತೊಡಗಿದ್ದಾರೆ.
Why is the Goa BJP govt sending people from Goa on Kadamba Transport Corporation buses to northern Karnataka tonight?
Why???
Is illicit money being transported?
Is bogus voting the objective? https://t.co/yQFDuZTDs6
— Congress (@INCIndia) May 9, 2023
ಅಲ್ಲದೇ ಅಧಿಕಾರಕ್ಕೆ ಬಂದರೆ ಬಜರಂಗ ದಳದ ಮೇಲೆ ನಿಷೇಧ ಹೇರುವುದಾಗಿ ಕಾಂಗ್ರೆಸ್‌ನ ಪ್ರಣಾಳಿಕೆ ಭರವಸೆ ನೀಡಿತ್ತು. ಆದರೆ ಇದರ ಲಾಭ ಪಡೆದುಕೊಂಡ ಬಿಜೆಪಿ ಇದೇ ವಿಚಾರವನ್ನಿಟ್ಟುಕೊಂಡು ಪ್ರಚಾರ ನಡೆಸಿದೆ. ಖುದ್ದು ಪ್ರಧಾನಿ ಮೋದಿಯೇ ಈ ವಿಚಾಋವಾಗಿ ಕಾಂಗ್ರೆಸ್ನ್ನು ಟೀಕಿಸಿದ್ದರು.
ಇನ್ನು ಅಂತಿಮ ಕಸರತ್ತು ಎನ್ನುವಂತೆ ಮಂಗಳವಾರ ನೀತಿ ಸಂಹಿತೆ ಜಾರಿ ಇದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಕರುನಾಡಿನ ಜನತೆಯನ್ನುದ್ದೇಶಿಸಿ ಬರೆದಿದ್ದ ಪತ್ರ ವಿಚಾರವಾಗಿ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಈ ಬಗ್ಗೆ ನೀಡಿದ ದೂರಿನಲ್ಲಿ "ಮಾದರಿ ನೀತಿ ಸಂಹಿತೆ ಮತ್ತು ಪ್ರಜಾಪ್ರತಿನಿಧಿ ಕಾಯಿದೆಯ ನಿಬಂಧನೆಗಳ ಉದ್ದೇಶಪೂರ್ವಕ ಮತ್ತು ಲೆಕ್ಕಾಚಾರದ ಉಲ್ಲಂಘನೆ" ಎಂದು ಬಣ್ಣಿಸಿದ್ದಾರೆ.
ಇನ್ನು 224 ಸ್ಥಾನಗಳ ವಿಧಾನಸಭೆಗೆ ಬೆಳಗ್ಗೆ 7 ಗಂಟೆಗೆ ಆರಂಭವಾದ ಚುನಾವಣೆ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿದೆ. ಈ ಬಾರಿ ವರುಣಾ, ಕನಕಪುರ, ಶಿಗ್ಗಾಂವ್, ಹುಬ್ಬಳ್ಳಿ-ದಾರವಾಡ, ಚನ್ನಪಟ್ಟಣ, ಶಿಕಾರಿಪುರ, ಚಿತ್ತಾಪುರ, ರಾಮನಗರ ಮತ್ತು ಚಿಕ್ಕಮಗಳೂರು ಪ್ರಮುಖ ಕ್ಷೇತ್ರಗಳಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ