KFD Recruitment: ಅರಣ್ಯ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ವೇತನ 50 ಸಾವಿರ ರೂ.

Kfd recruitment 2019: ಅರ್ಜಿಯನ್ನು ಆಹ್ವಾನಿಸಿ ಜಾರಿ ಮಾಡಲಾಗಿರುವ ಅಧಿಸೂಚನೆ ದಿನಾಂಕಕ್ಕೆ ಅರ್ಜಿದಾರರು 65 ವರ್ಷ ವಯಸ್ಸನ್ನು ಮೀರಿರಬಾರದು.

zahir | news18-kannada
Updated:September 11, 2019, 3:18 PM IST
KFD Recruitment: ಅರಣ್ಯ ಇಲಾಖೆ ಹುದ್ದೆಗಳಿಗೆ ಅರ್ಜಿ ಆಹ್ವಾನ: ತಿಂಗಳ ವೇತನ 50 ಸಾವಿರ ರೂ.
ಸಾಂದರ್ಭಿಕ ಚಿತ್ರ
  • Share this:
ಕರ್ನಾಟಕ ಅರಣ್ಯ ಇಲಾಖೆಯು ಅರಣ್ಯ ವ್ಯವಸ್ಥಾಪನಾಧಿಕಾರಿ ಹುದ್ದೆಗಳ (forest settlement officer) ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ವಿಭಾಗದಲ್ಲಿ ಹತ್ತು ಹುದ್ದೆಗಳು ಖಾಲಿಯಿದ್ದು, ಗುತ್ತಿ ಆಧಾರದಲ್ಲಿ ನೇಮಕ ನಡೆಯಲಿದೆ. ಈಗಾಗಲೇ ಈ ಹುದ್ದೆಗಳ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 1 ರೊಳಗೆ ಅರ್ಜಿ ಸಲ್ಲಿಸಬೇಕು. ಅರಣ್ಯ ವ್ಯವಸ್ಥಾಪನಾಧಿಕಾರಿ ಹುದ್ದೆಗಳ  ಮತ್ತಷ್ಟು ವಿವರಗಳು ಈ ಕೆಳಗಿನಂತಿವೆ.

ಒಟ್ಟು ಹುದ್ದೆಗಳ ಸಂಖ್ಯೆ : 10

ಸೇವಾ ಅವಧಿ : 2 ವರ್ಷ

ಅರ್ಹತೆ:
ಸಹಾಯಕ ಆಯುಕ್ತರು (ಕಂದಾಯ) ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರಬೇಕು ಹಾಗೂ ಈ ಕೆಳಕಂಡ ವಿಷಯಗಳ ಕುರಿತು ಪರಿಣಿತರಾಗಿರಬೇಕು.
1- ಅರಣ್ಯ ಮೋಜಣಿ ಹಾಗೂ ಗಡಿರೇಖೆ ಗುರುತಿಸುವಿಕೆ ಮತ್ತು ನಕಾಶೆ ತಯಾರಿಕೆ
2- ಭೂ ವಿವಾದಗಳ ಕುರಿತಂತೆ ಸಿವಿಲ್ ನ್ಯಾಯಾಲಯದಂತೆ ಕರ್ತವ್ಯ ನಿರ್ವಹಿಸಬೇಕು.3- ಥಿಯೋಡೊಲೈಟ್ ಸರ್ವೆ ಮತ್ತು ಜಿಪಿಎಸ್ ಸರ್ವೆ ಕುರಿತಂತೆ ಪರಿಣಿತರಾಗಿರಬೇಕು.

ಕರ್ತವ್ಯ ನಿರ್ವಹಿಸುವ ಕೇಂದ್ರಸ್ಥಾನದ ಜಿಲ್ಲಾ ವ್ಯಾಪ್ತಿಯ ಅರ್ಜಿದಾರರಿಗೆ ಮೊದಲ ಆಧ್ಯತೆ ನೀಡಲಾಗುವುದು.

ವಯೋಮಿತಿ:
ಅರ್ಜಿಯನ್ನು ಆಹ್ವಾನಿಸಿ ಜಾರಿ ಮಾಡಲಾಗಿರುವ ಅಧಿಸೂಚನೆ ದಿನಾಂಕಕ್ಕೆ ಅರ್ಜಿದಾರರು 65 ವರ್ಷ ವಯಸ್ಸನ್ನು ಮೀರಿರಬಾರದು.

ಆಯ್ಕೆ ವಿಧಾನ:
ಅರ್ಜಿದಾರರನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:
ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್​ನಲ್ಲಿ ಅರ್ಜಿ ಡೌನ್‌ಲೋಡ್ ಮಾಡಿ ಭರ್ತಿ ಮಾಡಬೇಕು. ಈ ಅರ್ಜಿಯನ್ನು ಅಂಚೆ ಮೂಲಕ ಅಥವಾ ಖುದ್ದಾಗಿ ಇಲಾಖೆಯ ವಿಳಾಸಕ್ಕೆ ಕಳುಹಿಸಬೇಕು.

ವಿಳಾಸ:
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಮುಖ್ಯಸ್ಥರು ಅರಣ್ಯ ಪಡೆ),
ಅರಣ್ಯ ಭವನ, ಮಲ್ಲೇಶ್ವರಂ,
ಬೆಂಗಳೂರು - 560 003

ವೇತನ:
ಗುತ್ತಿಗೆ ಆಧಾರದಲ್ಲಿ ನೇಮಕವಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ 50 ಸಾವಿರ ರೂ. ನೀಡಲಾಗುವುದು.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ: ಸೆಪ್ಟೆಂಬರ್ 03, 2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 01, 2019

ಈ ಹುದ್ದೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಅರಣ್ಯ ಇಲಾಖೆಯ ಅಧಿಕೃತ ವೆಬ್‌ಸೈಟ್‌ www.aranya.gov.in ಗೆ ಭೇಟಿ ನೀಡಬಹುದು.

ಇದನ್ನೂ ಓದಿ: ತಾಯಿಯಾದ ನಗುವಿನ ರಾಣಿ: ಇಲ್ಲಿದೆ ಶ್ವೇತಾ ಚೆಂಗಪ್ಪನವರ ಮುದ್ದು ಕಂದಮ್ಮನ ಮೊದಲ ಫೋಟೋ

First published:September 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading