Karnataka Flood: ನೆರೆ ಸಂತ್ರಸ್ಥರ ನೆರವಿಗೆ ಸರ್ಕಾರವಿದೆ - ಯಾರೂ ಧೃತಿಗೆಡಬೇಡಿ ; ಸಚಿವ ಲಕ್ಷ್ಮಣ ಸವದಿ ಭರವಸೆ

ಪಕ್ಷದ ಕಾರ್ಯಕರ್ತನಾಗಿ ರಾಜ್ಯದಲ್ಲಿ ಎಲ್ಲೆ ಚುನಾವಣೆ ನಡೆದರೂ ಕೆಲಸ ಮಾಡುತ್ತೇನೆ. ಇದು ನನಗೆ ಬಯಸದೇ ಬಂದ ಭಾಗ್ಯ

G Hareeshkumar | news18
Updated:August 21, 2019, 6:48 PM IST
Karnataka Flood: ನೆರೆ ಸಂತ್ರಸ್ಥರ ನೆರವಿಗೆ ಸರ್ಕಾರವಿದೆ - ಯಾರೂ ಧೃತಿಗೆಡಬೇಡಿ ; ಸಚಿವ ಲಕ್ಷ್ಮಣ ಸವದಿ ಭರವಸೆ
ಸಚಿವ ಲಕ್ಷ್ಣಣ ಸವದಿ
  • News18
  • Last Updated: August 21, 2019, 6:48 PM IST
  • Share this:
ಬೆಳಗಾವಿ (ಆ. 21) : ನೆರೆ ಸಂತ್ರಸ್ತರು ಭಯಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಪರವಾಗಿ ಇದ್ದು, ಯಾರೂ ಧೈರ್ಯ ಕಳೆದುಕೊಳ್ಳಬೇಡಿ ಎಂದು ನೂತನ ಸಚಿವ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.

ಪ್ರವಾಹದಿಂದ ಜಿಲ್ಲೆಯಲ್ಲಿ ಆಗಿರುವ ಪರಿಸ್ಥಿತಿಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜನರಿಗೆ ಹೊಸ ಬದುಕು ಕಟ್ಟಿಕೊಡುವ ಯತ್ನ ನಡೆಯುತ್ತಿದ್ದು, ಜಿಲ್ಲೆಯಾದ್ಯಂತ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ಎರಡು ದಿನದಲ್ಲಿ ಮಾಹಿತಿ ಸಂಗ್ರಹಿಸಲಾಗುವುದು ಎಂದರು.

ಮಾಜಿ ಶಾಸಕನಾದರೂ ನನ್ನ ಮೇಲೆ ನಂಬಿಕೆ ಇಟ್ಟು ಕೇಂದ್ರ ನಾಯಕರು ಸಚಿವ ಸ್ಥಾನವನ್ನು ನೀಡಿದ್ದಾರೆ. ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತೇನೆ. ಜಿಲ್ಲೆಯ ಅಥಣಿ, ಕಾಗವಾಡ ಉಪ ಚುನಾವಣೆ ಜವಾಬ್ದಾರಿ ವಿಚಾರ. ಪಕ್ಷದ ಕಾರ್ಯಕರ್ತನಾಗಿ ರಾಜ್ಯದಲ್ಲಿ ಎಲ್ಲೆ ಚುನಾವಣೆ ನಡೆದರೂ ಕೆಲಸ ಮಾಡುತ್ತೇನೆ. ಇದು ನನಗೆ ಬಯಸದೇ ಬಂದ ಭಾಗ್ಯ. ಈಗ ಯಾವುದೇ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿಲ್ಲ. ಎಂದು ಹೇಳಿದರು.

ಇದನ್ನೂ ಓದಿ :  ಮೋದಿ, ಅಮಿತ್ ಶಾ ತಲೆಯಲ್ಲಿ ಏನಿದೆ ಎಂಬುದು ದೇವರಿಗೂ ಗೊತ್ತಿಲ್ಲ; ನೂತನ ಸಚಿವ ಕೆ.ಎಸ್.ಈಶ್ವರಪ್ಪ

ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ  ಹಿರಿಯ ಶಾಸಕ ಉಮೇಶ್​​​ ಕತ್ತಿ ಅವರು ಅಸಮಾಧಾನ ಆಗಿರುವುದು ಸಹಜ, ಇದು ಪಕ್ಷದ ನಿರ್ಧಾರ ಇದರ ಬಗ್ಗೆ ನನಗೆನು ಗೊತ್ತಿಲ್ಲ. ನನ್ನ ಪರ ಯಾರು ಲಾಭಿ ಮಾಡಿದ್ರು ಅನ್ನೊ ಬಗ್ಗೆ ಗೊತ್ತಿಲ್ಲ. ಮಧ್ಯರಾತ್ರಿ 2 ಗಂಟೆಗೆ ನೀವು ಸಚಿವರಾಗುತ್ತಿರಿ ಅಂತ ವರಿಷ್ಠರು ಹೇಳಿದರು ಎಂದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವರ ಸಭೆ

ನೂತನ ಸಚಿವರಾದ ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚಿಕ್ಕೊಡಿ ಮತ್ತು ಬೆಳಗಾವಿ ವಿಭಾಗದ ನೆರೆ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯಕ್ರಮಗಳ ಕುರಿತು ಜಿಲ್ಲಾ ಮಟ್ಟದಲ್ಲಿ ಅಧಿಕಾರಿಗಳ ಜೊತೆಗೆ ಸಭೆ ನಡೆಯಿತು. ನೆರೆ ಸಂತ್ರಸ್ತರಿಗೆ ಪರಿಹಾರ, ಸೆಡ್ ಗಳ ನಿರ್ಮಾಣ, ಸ್ಥಳಾಂತರ ಕುರಿತು ಅಧಿಕಾರಿಗಳ ಜತೆಗೆ ಚರ್ಚೆ ನಡೆಯಿತು.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಲು ಇಲ್ಲಿ ಕ್ಲಿಕ್​ ಮಾಡಿ

First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ