HOME » NEWS » State » KARNATAKA FLOOD MORE THAN 30 COWS GOT STUCK IN BAGALKOT KRISHNA RIVER FLOOD SCT

Karnataka Flood: ಕೃಷ್ಣಾ ನದಿ ಪ್ರವಾಹ; ಬಾಗಲಕೋಟೆಯ ಮುತ್ತೂರು ನಡುಗಡ್ಡೆಯಲ್ಲಿ ಸಿಲುಕಿದ ಹಸುಗಳು

Krishna Flood: ಕೃಷ್ಣಾ ನದಿಯ ನೀರಿನಿಂದ ಜಮಖಂಡಿ ತಾಲೂಕಿನ ಮುತ್ತೂರು ನಡುಗಡ್ಡೆಯಾಗಿದೆ. ಮುತ್ತೂರು ನಡುಗಡ್ಡೆಯಲ್ಲಿ 30ಕ್ಕೂ ಹೆಚ್ಚು ಎಮ್ಮೆ, ಹಸುಗಳು ಸಿಲುಕಿವೆ.

news18-kannada
Updated:August 22, 2020, 10:04 AM IST
Karnataka Flood: ಕೃಷ್ಣಾ ನದಿ ಪ್ರವಾಹ; ಬಾಗಲಕೋಟೆಯ ಮುತ್ತೂರು ನಡುಗಡ್ಡೆಯಲ್ಲಿ ಸಿಲುಕಿದ ಹಸುಗಳು
ಕೃಷ್ಣಾ ನದಿ
  • Share this:
ಬಾಗಲಕೋಟೆ (ಆ. 22): ಉತ್ತರ ಕರ್ನಾಟಕದಲ್ಲಿ ಇನ್ನೂ ಪ್ರವಾಹದ ಪರಿಸ್ಥಿತಿ ಕಡಿಮೆಯಾಗಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಮುಂದುವರಿದಿದೆ. ಘಟಪ್ರಭಾ ನದಿಯಲ್ಲಿ ಪ್ರವಾಹ ಕೊಂಚ ಇಳಿಮುಖವಾಗಿದ್ದು, ಮಲಪ್ರಭಾ ಪ್ರವಾಹವೂ ತಗ್ಗಿದೆ.

ಕೃಷ್ಣಾ ನದಿಯ ನೀರಿನಿಂದ ಮುತ್ತೂರು ನಡುಗಡ್ಡೆಯಾಗಿದೆ. ಮುತ್ತೂರು ನಡುಗಡ್ಡೆಯಿಂದ ದನ-ಕರುಗಳನ್ನು ಸ್ಥಳಾಂತರಿಸಲು ಇನ್ನೊಂದು ಬೋಟ್ ವ್ಯವಸ್ಥೆಗೆ ಆಗ್ರಹಪಡಿಸಲಾಗಿದೆ. ಕೇವಲ ಒಂದೇ ಬೋಟ್ ವ್ಯವಸ್ಥೆ ಹಿನ್ನೆಲೆ ದನಕರುಗಳ ರಕ್ಷಣೆಗೆ ರೈತರು ಪರದಾಡುತ್ತಿದ್ದಾರೆ. ಮುತ್ತೂರು ನಡುಗಡ್ಡೆಯಲ್ಲಿ 30ಕ್ಕೂ ಹೆಚ್ಚು ಎಮ್ಮೆ, ಆಕಳುಗಳು ಸಿಲುಕಿವೆ. ಜಮಖಂಡಿ ತಾಲೂಕಿನ ಮುತ್ತೂರು ನಡುಗಡ್ಡೆಯಲ್ಲಿ ದನಕರುಗಳು ಸಿಲುಕಿವೆ.

ಇದನ್ನೂ ಓದಿ: ಸಂಘ ಪರಿವಾರ ಜಾತಿವಾದಿಯೂ ಅಲ್ಲ, ದೇಶದ್ರೋಹಿಯೂ ಅಲ್ಲ; ಸಿದ್ದರಾಮಯ್ಯ ಆರೋಪಕ್ಕೆ ಸಿ.ಟಿ. ರವಿ ಆಕ್ರೋಶ

ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಿಲ್ಲ. ನೀರಿನಲ್ಲಿರೋ ವಿದ್ಯುತ್ ಕಂಬಗಳ ಸಂಪರ್ಕ ಕಡಿತ ಮಾಡಿಲ್ಲ. ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ರೈತರು ಕಂಗಾಲಾಗಿದ್ದಾರೆ. ಪ್ರತಿ ವರ್ಷ ಪ್ರವಾಹ ಬಂದು ಮುತ್ತೂರು ನಡುಗಡ್ಡೆಯಲ್ಲಿ ನೂರಾರು ಎಕರೆ ಜಮೀನಿನಲ್ಲಿ ಕಬ್ಬು ಬೆಳೆ ನೀರುಪಾಲಾಗುತ್ತದೆ. ನಡುಗಡ್ಡೆ ಜಮೀನುಗಳಿಗೆ ಪರಿಹಾರ ನೀಡಿ, ಸ್ಥಳಾಂತರಿಸಲು ರೈತ ಸದಾಶಿವ ಆಗ್ರಹಪಡಿಸಿದ್ದಾರೆ.

ನಾರಾಯಣಪುರದ ಬಸವಸಾಗರ ಜಲಾಶಯದಿಂದ ಇಂದು ಹೊರಹರಿವಿನ ಪ್ರಮಾಣ ಕೊಂಚ ಇಳಿಕೆಯಾಗಿದೆ. ಬಸವಸಾಗರ ಜಲಾಶಯಕ್ಕೆ ಈಗ 2.50 ಲಕ್ಷ ಕ್ಯೂಸೆಕ್ ಒಳಹರಿವು ಇದೆ. ಹೊರಹರಿವು ಸಹ 2.50 ಲಕ್ಷ ಕ್ಯೂಸೆಕ್ ಬಿಡಲಾಗುತ್ತಿದೆ. ಜಲಾಶಯ ಒಟ್ಟು ಎತ್ತರ 492.25 ಮೀಟರ್ ಇದ್ದು, ಈಗ 489.71 ಮೀಟರ್ ಎತ್ತರ ನೀರು ನಿಂತಿದೆ. ಒಟ್ಟು 33.33 ಟಿಎಂಸಿ ಸಾಮಾರ್ಥ್ಯದ ಜಲಾಶಯದಲ್ಲಿ ಈಗ 23.16 ಟಿಎಂಸಿ ನೀರು ಸಂಗ್ರಹವಾಗಿದೆ. ನಿನ್ನೆ 2.80 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಡಲಾಗಿತ್ತು.

ಬಾಗಲಕೋಟೆ, ರಾಯಚೂರು, ಬೆಳಗಾವಿ ಮುಂತಾದ ಕೃಷ್ಣಾ ನದಿ ತೀರದ ಜಿಲ್ಲೆಗಳಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಕೂಡ ಸಿಎಂ ಜೊತೆಗೆ ಸಮೀಕ್ಷೆ ನಡೆಸಲಿದ್ದಾರೆ. ಪ್ರವಾಹ ಸಂತ್ರಸ್ಥರನ್ನು ಭೇಟಿಯಾಗಲಿರುವ ಸಿಎಂ ಯಡಿಯೂರಪ್ಪ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.
Published by: Sushma Chakre
First published: August 22, 2020, 10:04 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories