LIVE NOW

Karnataka Rains LIVE: ಕರ್ನಾಟಕ ಪ್ರವಾಹ; ಸಾವಿನ ಸಂಖ್ಯೆ 58ರಿಂದ 61ಕ್ಕೇರಿಕೆ

Karnataka Rains Live Updates: ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರೆದಿದೆ. ಇತ್ತ ಮಲೆನಾಡಿನಲ್ಲೂ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. ಕೊಡಗು ಜಿಲ್ಲೆ ಈ ವರ್ಷವೂ ಪ್ರವಾಹದ ಹೊಡೆತಕ್ಕೆ ಸಿಲುಕಿದೆ. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Kannada.news18.com | August 14, 2019, 10:08 PM IST
facebook Twitter Linkedin
Last Updated August 14, 2019
auto-refresh
Karnataka Rains Live: ಒಂದು ವಾರ ಕಳೆದರೂ ಕರ್ನಾಟಕದಲ್ಲಿ ಮಳೆಯ ಅಬ್ಬರ ನಿಂತಿಲ್ಲ. ಉತ್ತರ ಕರ್ನಾಟಕ ಭಾಗದ ಬೆಳಗಾವಿ, ಬಾಗಲಕೋಟೆ, ಚಿಕ್ಕೋಡಿಯಲ್ಲಿ ಪ್ರವಾಹ ಮುಂದುವರೆದಿದೆ. ಇತ್ತ ಮಲೆನಾಡಿನಲ್ಲೂ ನದಿಗಳ ನೀರಿನ ಮಟ್ಟ ಹೆಚ್ಚುತ್ತಿದ್ದು, ಉತ್ತರ ಕನ್ನಡ ಜಿಲ್ಲೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಹೆಚ್ಚಿದೆ. ಕೊಡಗು ಜಿಲ್ಲೆ ಈ ವರ್ಷವೂ ಪ್ರವಾಹದ ಹೊಡೆತಕ್ಕೆ ಸಿಲುಕಿದೆ. ಸೇನಾಪಡೆ, ನೌಕಾಪಡೆ, ವಾಯುಪಡೆಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ರಾಜ್ಯದಲ್ಲಿ ಒಟ್ಟು 80 ತಾಲೂಕುಗಳನ್ನು ಪ್ರವಾಹಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಇದುವರೆಗೂ ಸುಮಾರು 7 ಲಕ್ಷ ಜನರನ್ನು ರಕ್ಷಿಸಲಾಗಿದೆ. 40 ಸಾವಿರ ಮನೆಗಳು ಹಾನಿಗೊಳಗಾಗಿವೆ. ಈ ಎಲ್ಲದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ...
7:27 pm (IST)

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕುಸಿಯುತ್ತಿರೋ ಗುಡ್ಡದ ಮಣ್ಣು, ರಸ್ತೆ ಭೂ ಕುಸಿತ ಹಿನ್ನೆಲೆ 

ಸೆ.13 ರವರೆಗೆ ಚಾರ್ಮಾಡಿ ಘಾಟ್ ಬಂದ್

ಚಾರ್ಮಾಡಿ ಘಾಟ್ ರಸ್ತೆ ಒಂದು ತಿಂಗಳು ಬಂದ್ 

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಕುಸಿಯುತ್ತಿರೋ ಗುಡ್ಡದ ಮಣ್ಣು, ರಸ್ತೆ ಭೂ ಕುಸಿತ

ಸೆಪ್ಟೆಂಬರ್ 13 ರವರೆಗೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಬಂದ್

ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ

ಒಂದು ತಿಂಗಳ ಕಾಲ ಚಾರ್ಮಾಡಿ ಘಾಟ್ ಮಾರ್ಗದ ಚಿಕ್ಕಮಗಳೂರು - ದಕ್ಷಿಣ ಕನ್ನಡ, ಧರ್ಮಸ್ಥಳ ಸಂಪರ್ಕ ಕಡಿತ

ರಸ್ತೆಗೆ ಬಿದ್ದಿದ್ದ ಮಣ್ಣನ್ನ ತೆರವುಗೊಳಿಸುತ್ತಿರುವ ಜಿಲ್ಲಾಡಳಿತ 

ಒಂದು ವಾರದಿಂದ ಮಣ್ಣು ತೆರವುಗೊಳಿಸುತ್ತಿರೋ ಜೆಸಿಬಿಗಳು

12 ಜೆಸಿಬಿಗಳಲ್ಲಿ ಮುಂದುವರೆದ ತೆರವು ಕಾರ್ಯ

ಇನ್ನು ಮುಗಿಯದ ತೆರವು ಕಾರ್ಯಾಚರಣೆ

5:06 pm (IST)

ಬಾಗಲಕೋಟೆ: 

ಮಲಪ್ರಭಾ ನದಿ ಪ್ರವಾಹ ಹಿನ್ನಲೆ...

ಪರಿಹಾರ ಕೇಂದ್ರದಲ್ಲಿ ಇನ್ನೂ ನಿಂತಿಲ್ಲ ಮಹಿಳಾ ನಿರಾಶ್ರಿತರ ಕಣ್ಣೀರಿನ ಕಥೆಗಳು.....

ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದ ಶಾಲೆಯಲ್ಲಿನ ಪರಿಹಾರ ಕೇಂದ್ರದಲ್ಲಿ ಮಹಿಳಾ ನಿರಾಶ್ರಿತರ ಕಣ್ಣೀರು...

ಮನೆ ಬಿದ್ದಾವು,ಉಟ್ಟಬಟ್ಟೆಯಲ್ಲೇ ಮಕ್ಕಳನ್ನು ಕಟ್ಟಿಕೊಂಡು ಇಲ್ಲಿಗೆ ಬಂದಿವಿ..

ಇನ್ನು ಎಷ್ಟು ದಿನ ಅಂತ ಇಲ್ಲೇ ಪರಿಹಾರ ಕೇಂದ್ರದೊಳಗೆ ಇರೋಣ..

ಊಟ ಕೊಡ್ತಾರೆ ಆದ್ರೆ ಪ್ರವಾಹದೊಳಗೆ ಹೋದ ನಮ್ಮ ಬದುಕು ಯಾರ ಕೊಡ್ತಾರೆ..

ಉಪಜೀವನಕ್ಕೆ ಆಧಾರವಾಗಿದ್ದ ನೇಕಾರಕೆ ಮಗ್ಗ ಮುಳುಗಿ ಹೋಗಿ ನಮ್ಮ ಎದೆ ಒಡದಂಗಾಗೈದೆಂದು ನೇರಕಾರ ಮಹಿಳೆ ಕಣ್ಣೀರು..

ನಮ್ ಮಕ್ಕಳಿಗೆ ಹಾಲು ಕೊಡ್ತಿದ್ದ ಹಸುಗಳು ನೀರಾಗ ಕೊಚ್ಚಿಕೊಂಡು ಹೋಗಿದ್ದಾವೆ..

ನಮ್ ಅಣ್ಣಾವ್ರು ಹಸು, ಜಾನುವಾರುಗಳು ಸಾವನ್ನಪ್ಪಿದಕ್ಕೆ ಊಟ ಬಿಟ್ಟಾರೆ ಎಂದು ರೈತ ಮಹಿಳೆ  ಕಣ್ಣೀರು..

ನಮ್ಗ ಜಾನುವಾರು ಸಾವನ್ನಪ್ಪಿರೋದಕ್ಕೆ ಪರಿಹಾರ ಕೊಡಿಸಿ ಎಂದು ಗೋಳು...

ಐದಾರು ದಿನಗಳಿಂದ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯವಿರುವ ನಿರಾಶ್ರಿತರು....

5:05 pm (IST)

ಕೂಡಲಸಂಗಮದಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪವರ ಹೇಳಿಕೆ
ಈ ಬಾರಿಯ ಪ್ರವಾಹದಿಂದ ಹುನಗುಂದ ತಾಲೂಕಿನ ಹಲವು ಗ್ರಾಮಗಳು ಜಲಾವೃತವಾಗಿವೆ...
ಗ್ರಾಮಗಳ ಮುಳುಗಡೆಯಿಂದ ಅತೀವ ಹಾನಿಯಾಗಿದೆ...
ಈ ಬಾರಿ ಸಕಾ೯ರ ೨೧ ಗ್ರಾಮಗಳ ಮುಳುಗಡೆ ಮಾಡಲೇಬೇಕು....
ಮುಳುಗಡೆ ಘೋಷಿಸಿ ಶಾಶ್ವತವಾಗಿ ಸ್ಥಳಾಂತರ ಮಾಡಲು ಮುಂದಾಗಬೇಕು...
ಮುಳುಗಡೆ ಮಾಡದೇ ಹೋದ್ರೆ ಉಗ್ರ ಹೋರಾಟ ಮಾಡ್ತೀವಿ..
ಮುಳುಗಡೆ ಆಗುವ ೨೧ ಗ್ರಾಮಗಳ ಜನರೊಂದಿಗೆ ಸಭೆ ನಡೆಸಿ..
ಹೋರಾಟಕ್ಕೆ ಮುಂದಾಗ್ತೀವಿ...
ಯಡಿಯೂರಪ್ಪ ಕಾಲಗುಣದಿಂದಲೇ ರಾಜ್ಯದಲ್ಲಿ ಈ ಬಾರಿಯೂ ಪ್ರವಾಹ ಬಂದಿದೆ...
ಈ ಹಿಂದೆಯೂ ಇದೇ ಪರಿಸ್ಥಿತಿ ಆಗಿತ್ತು...
ಈಗ ಮತ್ತೇ ಅದೇ ಪರಿಸ್ಥಿತಿ ಬಂದಿದೆ ಅಂದ್ರೆ ಅವರ ಕಾಲಗುಣ ಸರಿಯಿಲ್ಲ ಅನ್ನಬಹುದು...
ಸಿದ್ದರಾಮಯ್ಯ ಅವರಿಗೆ ಆಪರೇಷನ್ ಆಗಿರೋದ್ರಿಂದ ಸ್ವಕ್ಷೇತ್ರ ಬಾದಾಮಿಗೆ ಬರಲಾಗಿಲ್ಲ..
ಹೀಗಾಗಿ ಅವರ ಕಾಯ೯ವನ್ನ ಅವರ ಪುತ್ರ ಮಾಡ್ತಿದ್ದಾರೆ
ಆರಾಮವಾದ ಬಳಿಕ ಸಿದ್ದರಾಮಯ್ಯನವರು ಭೇಟಿ ನೀಡ್ತಾರೆ...
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಹೇಳಿಕೆ.

Load More