HOME » NEWS » State » KARNATAKA FLOOD IN KRISHNA RIVER RAICHUR FOUR PEOPLE MISSING IN RIVER LG

ಕೃಷ್ಣಾ ನದಿಯಲ್ಲಿ ಪ್ರವಾಹ; ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ನಾಪತ್ತೆ

ಕೃಷ್ಣಾ ನದಿಗೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನಿನ್ನೆ 2.80 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ಇದರೊಂದಿಗೆ ಭೀಮಾ ನದಿಯಿಂದಲೂ ಒಂದಿಷ್ಟು ನೀರು ಹರಿದು ಬರುತ್ತಿರುವುದರಿಂದ ಪ್ರವಾಹ ಅಧಿಕವಾಗಿದೆ.

news18-kannada
Updated:August 18, 2020, 9:56 AM IST
ಕೃಷ್ಣಾ ನದಿಯಲ್ಲಿ ಪ್ರವಾಹ; ತೆಪ್ಪದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ನಾಪತ್ತೆ
ಕೃಷ್ಣಾ ನದಿಯಲ್ಲಿ ಪ್ರವಾಹ
  • Share this:
ರಾಯಚೂರು(ಆ.18): ಮಹಾರಾಷ್ಟ್ರ, ಬೆಳಗಾವಿ ಧಾರವಾಡ ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನಲೆ, ಕೃಷ್ಣಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಪ್ರವಾಹದ ಮಧ್ಯೆಯೂ ತೆಪ್ಪದಲ್ಲಿ ಸಂತೆಗೆ ಹೋಗಿ ವಾಪಸ್ಸಾಗುತ್ತಿದ್ದ ನಾಲ್ಕು ಜನರು ನಾಪತ್ತೆಯಾಗಿದ್ದಾರೆ. ರಾಯಚೂರು ತಾಲೂಕಿನ ಕುರ್ವಾಕುಲದಿಂದ ನಿನ್ನೆ 13 ಜನರು ತೆಲಂಗಾಣದ ನಾರಾಯಣಪೇಟೆಯ ಪಂಚಾದಿಪಾಡಕ್ಕೆ ವಾರದ ಸಂತೆಗಾಗಿ ಹೋಗಿದ್ದರು. ಹೋದವರು ಸಂತೆ ಮಾಡಿಕೊಂಡು ವಾಪಸ್ಸು ಬರುವಾಗ ಅವರು ಪ್ರಯಾಣಿಸುತ್ತಿದ್ದ ತೆಪ್ಪ ಸೆಳೆವಿಗೆ ಸಿಲುಕಿದೆ. ಈ ಸಂದರ್ಭದಲ್ಲಿ ನಾಲ್ಕು ಜನರು ನದಿಯಲ್ಲಿ ನಾಪತ್ತೆಯಾಗಿದ್ದಾರೆ. ಉಳಿದ 9 ಜನರು ಪಾರಾಗಿ ಸುರಕ್ಷಿತವಾಗಿ ದಡ ಸೇರಿದ್ದಾರೆ.

ಪಾರ್ವತಿ, ನರಸಮ್ಮ, ರೋಜಾ ಹಾಗು ನರಸಮ್ಮ ನಾಪತ್ತೆಯಾಗಿದ್ದಾರೆ. ನಿನ್ನೆ ಸಂಜೆ 4.30ರ ಸಮಯದಲ್ಲಿ ಈ ಘಟನೆ ನಡೆದಿದೆ. ನಾರಾಯಣಪುರಪೇಟೆ ಹಾಗೂ ರಾಯಚೂರು ಜಿಲ್ಲಾಡಳಿತವು ಸಂಜೆಯಿಂದ ಕಾರ್ಯಾಚರಣೆ ಆರಂಭಿಸಿದೆ. ಆದರೆ ಪ್ರವಾಹ ಅಧಿಕವಾಗಿರುವ ಹಿನ್ನಲೆ ನಾಪತ್ತೆಯಾದವರ ಪತ್ತೆ ಮಾಡಲಾಗಲಿಲ್ಲ. ಈ ಮಧ್ಯೆ ರಾಯಚೂರಿನಲ್ಲಿ ಎನ್ ಡಿಆರ್​​ಎಫ್ ತಂಡ ಸಂಜೆಯ ವೇಳೆಗೆ ಘಟನಾ ಸ್ಥಳಕ್ಕೆ ಧಾವಿಸಿದೆ. ಆದರೆ ರಾತ್ರಿಯಾಗಿದ್ದರಿಂದ ಕಾರ್ಯಾಚರಣೆ ಮಾಡಲು ಆಗಲಿಲ್ಲ. ಈ ಮಧ್ಯೆ ಇಂದು ಮುಂಜಾನೆಯಿಂದ ಎರಡೂ ಜಿಲ್ಲಾಡಳಿತವು ಎನ್ ಡಿಆರ್ ಎಫ್ ಹಾಗೂ ಬೆಂಗಳೂರಿನಿಂದ ಬಂದ ಎಸ್ ಡಿ ಆರ್​ಎಫ್ ತಂಡಗಳು ಕಾರ್ಯಾಚರಣೆ ಆರಂಭಿಸಿವೆ.

Petrol Price: ಮತ್ತೆ ಹೆಚ್ಚಳ ಕಂಡ ಪೆಟ್ರೋಲ್​ ದರ; ದೇಶದ ವಿವಿಧ ನಗರಗಳಲ್ಲಿ ಬೆಲೆ ಇಂತಿದೆ

ಕೃಷ್ಣಾ ನದಿಗೆ ನಾರಾಯಣಪುರದ ಬಸವಸಾಗರ ಜಲಾಶಯದಿಂದ ನಿನ್ನೆ 2.80 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿತ್ತು. ಇದರೊಂದಿಗೆ ಭೀಮಾ ನದಿಯಿಂದಲೂ ಒಂದಿಷ್ಟು ನೀರು ಹರಿದು ಬರುತ್ತಿರುವುದರಿಂದ ಪ್ರವಾಹ ಅಧಿಕವಾಗಿದೆ. ಮುಂಜಾನೆಯಿಂದ ಕೃಷ್ಣಾ ನದಿಯಲ್ಲಿ ಪ್ರವಾಹ ಕೊಂಚ ಇಳಿಕೆಯಾಗಿದೆ. ಈ ಮಧ್ಯೆ ನಾಪತ್ತೆಯಾದವರು ಎಲ್ಲಿಯವರೆಗೂ ತೇಲಿಕೊಂಡು ಹೋಗಿದ್ದಾರೆ ಎಂಬ ಅಂದಾಜು ಸಹ ಸಿಗುವುದು ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಎನ್ ಡಿಆರ್ ಎಫ್ ನ ತಜ್ಞರು ಪರಿಶೀಲಿಸಿ ಕಾರ್ಯಾಚರಣೆ ಆರಂಭಿಸಲಿದ್ದಾರೆ.

ಕುರ್ವಾಕುಲ, ಕುರ್ವಾಕುರ್ದಾ, ಮೂಗಿಗಡ್ಡೆ, ಅಗ್ರಹಾತಗಳು ಕೃಷ್ಣಾ ನದಿಯ ಮಧ್ಯದಲ್ಲಿದ್ದು ಪ್ರತಿ ವರ್ಷ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ. ಈ ನಡುಗಡ್ಡೆಯವರು ಕೃಷ್ಣಾ ನದಿಯಲ್ಲಿ ಪ್ರವಾಹ ಇಳಿಕೆಯಾದ ನಂತರ ತೆಪ್ಪದಲ್ಲಿ ತಿರುಗಾಡುತ್ತಾರೆ. ಭಾರಿ ಪ್ರವಾಹವಾದಾಗ ಮಾತ್ರ ಅವರ ಸಂಚಾರ ಬಂದ್ ಆಗಿರುತ್ತದೆ.

ಸಾಮಾನ್ಯವಾಗಿ ಅವರು ರಾಯಚೂರು ಹಾಗೂ ತೆಲಂಗಾಣದ ಮಕ್ತಲ್ ಮಾರುಕಟ್ಟೆ ಆಶ್ರಯಿಸಿದ್ದು ನಿನ್ನೆ ಮಕ್ತಲ್ ಮಾರುಕಟ್ಟೆಗೆ ಹೋಗಿ ಬರುವಾಗ ಈ ದುರ್ಘಟನೆ ನಡೆದಿದೆ. ಈ ಗ್ರಾಮಗಳಿಗೆ ಸೇತುವೆ ನಿರ್ಮಿಸಲು ದಶಕಗಳಿಂದಲೂ ಬೇಡಿಕೆ ಇದ್ದು ಅದು ಈಡೇರಿಲ್ಲ. ಬೇಗ ಸೇತುವೆ ನಿರ್ಮಿಸಿ ಇಲ್ಲಿ ಜನರಿಗೆ ಕೃಷ್ಣೆ ಭಯ ನಿವಾರಿಸಬೇಕಾಗಿದೆ.
Published by: Latha CG
First published: August 18, 2020, 9:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories