HOME » NEWS » State » KARNATAKA FLOOD HEAVY LOSS IN DHARAWAD DISTRICT FROM HEAVY RAIN IN THIS YEAR LG

ಪ್ರವಾಹದಿಂದ ಧಾರವಾಡ ಜಿಲ್ಲೆಯಲ್ಲಿ 388 ಕೋಟಿ ರೂ ಬೆಳೆಹಾನಿ, 582 ಕೋಟಿ ರೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ

ಈ ಬಾರಿಯೂ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣವಾಗಿ, 25 ಮನೆಗಳು ಭಾಗಶಃ, 1200 ಮನೆಗಳು ಅಲ್ಪ ಪ್ರಮಾಣದಲ್ಲಿ ಹಾನಿಗೀಡಾಗಿವೆ.

news18-kannada
Updated:September 9, 2020, 7:57 AM IST
ಪ್ರವಾಹದಿಂದ ಧಾರವಾಡ ಜಿಲ್ಲೆಯಲ್ಲಿ 388 ಕೋಟಿ ರೂ ಬೆಳೆಹಾನಿ, 582 ಕೋಟಿ ರೂ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ
ಜಿಲ್ಲಾಧಿಕಾರಿ ನಿತೇಶ್ ಪಾಟೀಲ್
  • Share this:
ಧಾರವಾಡ(ಸೆ.09): ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ 388 ಕೋಟಿ ರೂಪಾಯಿ ಬೆಳೆಹಾನಿ ಹಾಗೂ 582 ಕೋಟಿ ರೂಪಾಯಿ ಸಾರ್ವಜನಿಕ ಆಸ್ತಿ ನಷ್ಟ ಉಂಟಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿದರು. ನಗರದ ಡೆನ್ನಿಸನ್ಸ್ ಹೋಟೆಲ್ ನಲ್ಲಿ ಜರುಗಿದ ಕೇಂದ್ರದ ಅಂತರ್ ಸಚಿವಾಲಯ ಅತಿವೃಷ್ಟಿ ಅಧ್ಯಯನ ತಂಡದ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ವರ್ಷವೂ ನೆರೆ ಬಂದು ಅಪಾರ ಪ್ರಮಾಣದ ಹಾನಿ ಉಂಟಾಗಿತ್ತು.‌ ಈ ಬಾರಿಯೂ ವಾಡಿಕೆಗಿಂತ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ 2 ಮನೆಗಳು ಸಂಪೂರ್ಣವಾಗಿ, 25 ಮನೆಗಳು ಭಾಗಶಃ, 1200 ಮನೆಗಳು ಅಲ್ಪ ಪ್ರಮಾಣದಲ್ಲಿ ಹಾನಿಗೀಡಾಗಿವೆ. ಎನ್.ಡಿ.ಆರ್.ಎಫ್ ನಿಯಮಾನುಸಾರ ಮನೆಗಳಿಗೆ ಪರಿಹಾರ ಧನ ವಿತರಿಸಲಾಗುತ್ತಿದೆ. 55970 ಹೆಕ್ಟೇರ ಕೃಷಿ ಬೆಳೆ, 6635 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಮಂಗಳೂರು : ಇಬ್ಬರು ಶಾಸಕರನ್ನು ನೀಡಿದರೂ ಇದು ಈಗಲೂ ಕುಗ್ರಾಮ - ಕಲ್ಲಡ್ಕದ ಕಥೆ ಕೇಳುವವರೇ ಇಲ್ಲ..!

ಮುಂದುವರೆದ ಅವರು, ಲೋಕೋಪಯೋಗಿ ಇಲಾಖೆಯಡಿ ಬರುವ 185.92 ಕಿ.ಮೀ.ರಸ್ತೆ, 41 ಸೇತುವೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಡಿ ಬರುವ 553.84 ಕಿ.ಮೀ. ರಸ್ತೆ, 59 ಸೇತುವೆ, 66 ಟ್ಯಾಂಕ್ ಗಳು ಹಾನಿಗೀಡಾಗಿವೆ. 168‌ ಶಾಲೆ, 150 ಅಂಗನವಾಡಿ ಕಟ್ಟಡಗಳು ಹಾನಿಯಾಗಿವೆ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 147 ಕಿ. ಮೀ ‌ರಸ್ತೆ ಹಾನಿಯಾಗಿದೆ. ಜಿ.ಪಿ.ಎಸ್ ಆಧರಿಸಿ ಹಾನಿಗೊಳಗಾದ ಮನೆಗಳ ಸರ್ವೇ ಕಾರ್ಯ ನಡೆಸಲಾಗಿದೆ. ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಕುರಿತು ಕೃಷಿ, ತೋಟಗಾರಿಕೆ ಕಂದಾಯ ಇಲಾಖೆಗಳ ಜಂಟಿ ಸರ್ವೇ ಕೈಗೊಳ್ಳಲಾಗಿದೆ. ಅತಿವೃಷ್ಠಿಯಿಂದಾಗಿ ಇಬ್ಬರು ವ್ಯಕ್ತಿಗಳು ಹಾಗೂ 3 ಜಾನುವಾರುಗಳ ಪ್ರಾಣಹಾನಿ ಉಂಟಾಗಿದೆ ಎಂದರು.
Youtube Video

ಸಭೆಯಲ್ಲಿ ಕೇಂದ್ರ ಕೃಷಿ ಹಾಗೂ ರೈತರ ಸಹಕಾರ ಮಾರುಕಟ್ಟೆ ಮಂತ್ರಾಲಯದ ಎಣ್ಣೆ ಬೀಜ ಅಭಿವೃದ್ಧಿ ನಿರ್ದೇಶಕ ಡಾ. ಮನೋಹರನ್, ಕೇಂದ್ರ ಜಲಶಕ್ತಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ಗುರುಪ್ರಸಾದ್ ಜೆ, ರಾಜ್ಯ ಕಂದಾಯ ಇಲಾಖೆಯ ಕೆಎಸ್ ಡಿ ಎಂ ಎ ವಿಭಾಗೀಯ ವ್ಯವಸ್ಥಾಪಕ ಡಾ. ಜೆ‌. ಎಸ್. ಶ್ರೀನಿವಾಸರೆಡ್ಡಿ, ಅಪರ ಜಿಲ್ಲಾಧಿಕಾರಿ‌ ಶಿವಾನಂದ ಕರಾಡೆ, ಉಪ ವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ, ಪಾಲಿಕೆ ಆಯುಕ್ತ ಡಾ. ಸುರೇಶ್ ಇಟ್ನಾಳ್ ಸೇರಿದಂತೆ‌ ಕೃಷಿ, ಪಶು ವೈದ್ಯಕೀಯ, ಲೋಕೋಪಯೋಗಿ, ಶಿಕ್ಷಣ ‌ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Published by: Latha CG
First published: September 9, 2020, 7:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories