ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ; ಕಳೆದ ವರ್ಷದ ಕೊಡಗು ಭೀಕರತೆ ಮರುಸೃಷ್ಟಿ?

ಕೆಲವರು ಮನೆ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಕುಟುಂಬದವರನ್ನೇ ಕಳೆದುಕೊಂಡಿದ್ದಾರೆ. ಗಾಳಿ ಮಳೆಯ ಅಬ್ಬರಕ್ಕೆ ಮನೆಯ ಮೇಲೆ ಮರ ಬಿದ್ದ ಪ್ರಕರಣಗಳಂತೂ ನೂರಾರು. ಬೆಳಗಾವಿ ಒಂದರಲ್ಲೇ 1.45 ಜನರನ್ನು ರಕ್ಷಣೆ ಮಾಡಲಾಗಿದೆ.

Rajesh Duggumane | news18
Updated:August 10, 2019, 8:49 AM IST
ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ; ಕಳೆದ ವರ್ಷದ ಕೊಡಗು ಭೀಕರತೆ ಮರುಸೃಷ್ಟಿ?
ಮಳೆಯಿಂದ ರಕ್ಷಣೆ ಪಡೆಯುತ್ತಿರುವ ತಂದೆ ಮಗಳು
  • News18
  • Last Updated: August 10, 2019, 8:49 AM IST
  • Share this:
ಬೆಂಗಳೂರು (ಆ.10): ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ನದಿ ಪಾತ್ರದ ಭಾಗದ ಜನರ ಬದುಕು ಮೂರಾಬಟ್ಟೆಯಾಗಿದೆ. ಒಂದು ಕಡೆ ಪ್ರವಾಹ, ಮತ್ತೊಂದು ಕಡೆ ಎಡಬಿಡದೆ ಸುರಿಯುತ್ತಿರುವ ಮಳೆ. ಈ ಎಲ್ಲ ಕಾರಣಗಳಿಂದ ರಾಜ್ಯದ ಬಹುತೇಕ ಜಿಲ್ಲೆಗಳ ಸ್ಥಿತಿ ಗಂಭೀರವಾಗಿದೆ. ಶುಕ್ರವಾರ ಒಂದೇ 10 ಜನರು ಮೃತಪಟ್ಟಿದ್ದು ಸಾವಿನ ಸಂಖ್ಯೆ 31ಕ್ಕೆ ಏರಿಕೆ ಆಗಿದೆ.

ನದಿ ಪಾತ್ರದ ಭಾಗದ ಜನರ ಸ್ಥಿತಿ ಶೋಚನೀಯವಾಗಿದೆ. ಕರಾವಳಿ, ಮಲೆನಾಡಿನಲ್ಲಿ ಮಳೆಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಪರಿಣಾಮ ಜನರು ತೊಂದರೆಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.

ಕೆಲವರು ಮನೆ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಕುಟುಂಬದವರನ್ನೇ ಅಗಲಿದ್ದಾರೆ. ಗಾಳಿ ಮಳೆಯ ಅಬ್ಬರಕ್ಕೆ ಮನೆಯ ಮೇಲೆ ಮರ ಬಿದ್ದ ಪ್ರಕರಣಗಳಂತೂ ನೂರಾರು. ಬೆಳಗಾವಿ ಒಂದರಲ್ಲೇ 1.45 ಲಕ್ಷ ಜನರನ್ನು ರಕ್ಷಣೆ ಮಾಡಲಾಗಿದೆ. ರಾಜ್ಯಾದ್ಯಾಂತ ಸುಮಾರು 2.20 ಲಕ್ಷಕ್ಕೂ ಅಧಿಕ ಜನರು ಮನೆ-ಮಠ ತೊರೆದಿದ್ದಾರೆ. ರಾಜ್ಯದಲ್ಲಿ 840 ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದೆ. 2.17 ಲಕ್ಷ ಹೆಕ್ಟೇರ್​ ಜಮೀನು ಮುಳುಗಡೆ ಆಗಿದೆ.

ಮಲೆನಾಡಿನಲ್ಲಿ ಮುಂದುವರಿದ ಮಳೆ

ಕರಾವಳಿ ಭಾಗದಲ್ಲಿ ಮಳೆ ಕೊಂಚ ಬಿಡುವು ನೀಡಿದೆ. ಆದರೆ, ಶಿರಸಿ, ಯಲ್ಲಾಪುರ, ಸಾಗರ, ಸಿದ್ದಾಪುರ ಸೇರಿ ಮಲೆನಾಡಿನ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಎಗ್ಗಿಲ್ಲದೆ ಸಾಗಿದೆ. ಕಳೆದ ಬಾರಿ ಕೊಡಗು ಭಾಗದಲ್ಲಿ ಮಳೆ ಭಾರೀ ಅವಾಂತರ ಸೃಷ್ಟಿಸಿತ್ತು. ಮತ್ತದೇ ಭೀಕರತೆ ಮಲೆನಾಡಿನಲ್ಲೂ ಮರುಸೃಷ್ಟಿಯಾಗುವ ಆತಂಕ ಸೃಷ್ಟಿಯಾಗಿದೆ.

ಇದನ್ನೂ ಓದಿ: ದಶಕದ ಮಹಾಮಳೆಗೆ ತತ್ತರಿಸಿದ ರಾಜ್ಯ, 20ಕ್ಕೂ ಹೆಚ್ಚು ಮಂದಿ ಸಾವು

ರಕ್ಷಣಾ ಸಿಬ್ಬಂದಿಗೆ ಸಲಾಂ:ಸುಮಾರು 1,600 ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಕ್ಷಣಾ ಸಿಬ್ಬಂದಿಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್​ಗಳನ್ನು ಹಾಕಲಾಗುತ್ತಿದೆ. 10 ಹೆಲಿಕಾಪ್ಟರ್​ಗಳನ್ನು ರಕ್ಷಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಪರಿಹಾರ ಬಿಡುಗಡೆ:

ಅತಿಹೆಚ್ಚು ಹಾನಿಯಾದ ಬೆಳಗಾವಿಗೆ 25 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.  ಬಾಗಲಕೋಟೆ, ಉತ್ತರ ಕನ್ನಡಕ್ಕೆ ತಲಾ 10 ಕೋಟಿ ರೂ ನೀಡಲಾಗಿದೆ. ವಿಜಯಪುರ, ಯಾದಗಿರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ಕೊಡಗು, ಚಿಕ್ಕಮಗಳೂರು, ಹಾಸನ, ಧಾರವಾಡ, ಗದಗ ಹಾಗೂ ಕಲ್ಬುರ್ಗಿ ಜಿಲ್ಲೆಗೆ 5 ಕೋಟಿ ರೂ. ಪರಿಹಾರ ನೀಡಲಾಗಿದೆ.

First published: August 10, 2019, 8:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading