HOME » NEWS » State » KARNATAKA FLOOD BAGALKOT MIRJI VILLAGE DROWNED IN GHATAPRABHA RIVER WATER SCT

ಬಾಗಲಕೋಟೆಯಲ್ಲಿ ಘಟಪ್ರಭಾ ಪ್ರವಾಹ; ಮಿರ್ಜಿ ಗ್ರಾಮದ 50ಕ್ಕೂ ಅಧಿಕ ಮನೆಗಳು ಜಲಾವೃತ

Karnataka Flood: ಬಾಗಲಕೋಟೆಯ ಮಿರ್ಜಿ ಗ್ರಾಮದ ಸುತ್ತಲೂ ನೀರು ತುಂಬಿಕೊಂಡಿದೆ. ಇಲ್ಲಿನ 50ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಸಾಮೂಹಿಕ ಶೌಚಾಲಯಗಳು ಕೂಡ ಮುಳುಗಿವೆ. ಇದರಿಂದ ಅಪಾರ ಪ್ರಮಾಣದ ಕಬ್ಬು ಬೆಳೆ ನೀರುಪಾಲಾಗಿದೆ.

news18-kannada
Updated:August 20, 2020, 8:50 AM IST
ಬಾಗಲಕೋಟೆಯಲ್ಲಿ ಘಟಪ್ರಭಾ ಪ್ರವಾಹ; ಮಿರ್ಜಿ ಗ್ರಾಮದ 50ಕ್ಕೂ ಅಧಿಕ ಮನೆಗಳು ಜಲಾವೃತ
ಘಟಪ್ರಭಾ ಪ್ರವಾಹದ ಸಾಂದರ್ಭಿಕ ಚಿತ್ರ
  • Share this:
ಬಾಗಲಕೋಟೆ: ಬಾಗಲಕೋಟೆಯಲ್ಲಿ ಘಟಪ್ರಭಾ ನದಿಯ ಅಬ್ಬರ ಮುಂದುವರೆದಿದೆ. ಇಲ್ಲಿನ ಮಿರ್ಜಿ ಗ್ರಾಮದಲ್ಲಿ 50ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿದ್ದು, ಜನರು ಪ್ರವಾಹ ಭೀತಿಯಿಂದ ಕಂಗಾಲಾಗಿದ್ದಾರೆ. ಬೆಳಗಾವಿ, ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಮಳೆಯಿಂದ ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳು ಉಕ್ಕಿ ಹರಿಯುತ್ತಿವೆ. ಬಾಗಲಕೋಟೆಯ ಮಿರ್ಜಿ ಗ್ರಾಮದ ಸುತ್ತಲೂ ನೀರು ತುಂಬಿಕೊಂಡಿದೆ. ಇಲ್ಲಿನ 50ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಸಾಮೂಹಿಕ ಶೌಚಾಲಯಗಳು ಕೂಡ ಮುಳುಗಿವೆ. ಇದರಿಂದ ಅಪಾರ ಪ್ರಮಾಣದ ಕಬ್ಬು ಬೆಳೆ ನೀರುಪಾಲಾಗಿದೆ. ಡಿಸಿಎಂ ಗೋವಿಂದ ಕಾರಜೋಳ ಅವರ ಸ್ವಕ್ಷೇತ್ರ ಮುಧೋಳ ತಾಲೂಕಿನ ಮಿರ್ಜಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಕಳೆದ ವರ್ಷದ ಪ್ರವಾಹಕ್ಕೆ ತತ್ತರಿಸಿದ್ದ ಮಿರ್ಜಿ ಇದೀಗ ಮತ್ತೆ ಪ್ರವಾಹಕ್ಕೆ ಸಿಲುಕಿದೆ. ಜಲಾವೃತವಾಗಿರುವ ಇಲ್ಲಿನ 50ಕ್ಕೂ ಹೆಚ್ಚು ಮನೆಗಳ ಜನರಿಗೆ ಕಾಳಜಿ ಕೇಂದ್ರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಇದನ್ನೂ ಓದಿ: Chikmagalur: ಚಿಕ್ಕಮಗಳೂರಿನಲ್ಲಿ ನಿಂತಿಲ್ಲ ದನಗಳ್ಳರ ಹಾವಳಿ; ಅಮ್ಮನಿಗಾಗಿ ಕರುವಿನ ಮೂಕರೋದನ

ಬಾಗಲಕೋಟೆ ಜಿಲ್ಲೆಯ ಬದಾಮಿಯಲ್ಲಿ ಮಲಪ್ರಭಾ ಅಬ್ಬರ ಸ್ವಲ್ಪ ಕಡಿಮೆಯಾಗಿದೆ. ಮುಳುಗಿದ್ದ ಚೊಳಚಗುಡ್ಡ ಸೇತುವೆ ಬಳಿ ನದಿ ನೀರು ತಗ್ಗಿದೆ. ಸೇತುವೆ ಕೆಳಗೆ ಹರಿದು ಹೋಗುತ್ತಿರುವ ನೀರಿನಿಂದ ಬದಾಮಿ ತಾಲೂಕಿನ ಚೊಳಚಗುಡ್ಡ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಬಾಗಲಕೋಟೆ ಮತ್ತು ಗದಗ ಜಿಲ್ಲೆಯನ್ನು ಸಂಪರ್ಕಿಸೋ ಚೊಳಚಗುಡ್ಡ ಸೇತುವೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಮಲಪ್ರಭಾ ನದಿ ತೀರದಲ್ಲಿ ಸ್ವಲ್ಪ ತಗ್ಗಿದ ಪ್ರವಾಹದಿಂದಾಗಿ ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ನದಿ ತೀರದ ಗ್ರಾಮಸ್ಥರು ನಿರಾಳರಾಗಿದ್ದಾರೆ.

ಬದಾಮಿ ತಾಲೂಕಿನ ಚಿಕ್ಕನಸಬಿ ಗ್ರಾಮದಲ್ಲಿ ಮಲಪ್ರಭಾ ನದಿಯಲ್ಲಿ ಸಿಲುಕಿದ್ದ 25 ಮಂಗಗಳಿಗಾಗಿ ನಿನ್ನೆ ಕಾರ್ಯಾಚರಣೆ ನಡೆಸಲಾಯಿತು. ಆ ಕಾರ್ಯಾಚರಣೆ ಯಶಸ್ವಿಯಾಗದಿದ್ದರೂ ಮಂಗಗಳು ತಾವಾಗಿಯೇ ದಡ ಸೇರಿ, ಪ್ರಾಣ ಉಳಿಸಿಕೊಂಡಿವೆ. ಮಲಪ್ರಭಾ ನದಿಯ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನವಿಲನ್ನು ಗ್ರಾಮಸ್ಥರಉ ರಕ್ಷಿಸಿದ್ದಾರೆ. ನಂತರ ಆ ನವಿಲನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
Published by: Sushma Chakre
First published: August 20, 2020, 8:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories