ಪ್ರವಾಹದಲ್ಲೂ ಸೇತುವೆಯ ಮೇಲೆ ನಡೆದು ಆಂಬುಲೆನ್ಸ್​​ಗೆ ದಾರಿ ತೋರಿದ ರಾಯಚೂರು ಪೋರ; ವಿಡಿಯೋ ವೈರಲ್

ಈ ವಿಡಿಯೋ ಈಗ ವೈರಲ್​ ಆಗಿದೆ. ಜೀವದ ಹಂಗು ತೊರೆದು ಆಂಬುಲೆನ್ಸ್​​ಗೆ ದಾರಿ ತೋರಿದ ವೆಂಕಟೇಶ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟಾಕ್​ ಶುರುವಾಗಿದೆ.

Rajesh Duggumane | news18
Updated:August 14, 2019, 3:49 PM IST
ಪ್ರವಾಹದಲ್ಲೂ ಸೇತುವೆಯ ಮೇಲೆ ನಡೆದು ಆಂಬುಲೆನ್ಸ್​​ಗೆ ದಾರಿ ತೋರಿದ ರಾಯಚೂರು ಪೋರ; ವಿಡಿಯೋ ವೈರಲ್
ಆಂಬುಲೆನ್ಸ್​ಗೆ ದಾರಿ ತೋರಿದ ಬಾಲಕ
  • News18
  • Last Updated: August 14, 2019, 3:49 PM IST
  • Share this:
ಭಾರೀ ಮಳೆಯಿಂದಾಗಿ ಕರ್ನಾಟಕದ ಸಾಕಷ್ಟು ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ನೆರೆಪೀಡಿತ ಪ್ರದೇಶಗಳಿಗೆ ತುತ್ತಾದವರ ರಕ್ಷಣೆ ಸಾಕಷ್ಟು ಜನರು ಮುಂದಾಗಿದ್ದಾರೆ. ಕೆಲವರು ಸಾಹಸ ಮಾಡಿದ ನೆರೆ ಸಂತ್ರಸ್ತರನ್ನು ರಕ್ಷಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅದೇ ರೀತಿ ರಾಯಚೂರಿನ ಪೋರನೊಬ್ಬ ಆಂಬುಲೆನ್ಸ್​ಗೆ ದಾರಿ ತೋರಿಸಿದ ವಿಡಿಯೋ ಈಗ ಸದ್ದು ಮಾಡುತ್ತಿದೆ.

ರಾಯಚೂರಿನ ಯಾದಗಿರಿ  ಹಿರೆರಾಯನಕುಂಪೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ಓದುತ್ತಿರುವ ವೆಂಟಕೇಶ್​ ಈ ಸಾಧನೆ ಮಾಡಿದ ಬಾಲಕ. ಮಳೆಯಿಂದಾಗ ರಾಯಚೂರು, ಯಾದಗಿರಿ ಸೇರಿ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವೇಳೆ ನದಿಗಳು ಉಕ್ಕಿ ಹರಿದಿದ್ದರಿಂದ ಸೇತುವೆಗಳು ಜಲಾವೃತಗೊಂಡಿದ್ದವು. ಇಂಥ ಸಂದರ್ಭದಲ್ಲಿ ವೆಂಕಟೇಶ್​ ಮಾಡಿದ ಸಾಧನೆ ಎಲ್ಲರೂ ಮೆಚ್ಚುವಂಥದ್ದು.

ಮಚನೂರ್​ ಸೇತುವೆ ಮೇಲೆ ನೀರು ಹರಿಯುತ್ತಿದ್ದರಿಂದ ರಸ್ತೆ ಕಾಣದೆ ಆಂಬುಲೆನ್ಸ್​ ಚಾಲಕ ಕಂಗಾಲಾಗಿ ಕೂತಿದ್ದ. ಈ ವೇಳೆ ಸ್ಥಳದಲ್ಲಿದ್ದ ವೆಂಕಟೇಶ್​, “ನಾನು ದಾರಿ ತೋರಿಸುತ್ತೇನೆ. ನನ್ನನ್ನು ಹಿಂಬಾಲಿಸಿ,” ಎಂದು ಆಂಬುಲೆನ್ಸ್​ ಚಾಲಕನಿಗ ಸೂಚಿಸದ ವೆಂಕಟೇಶ್, ಪ್ರವಾಹವನ್ನು ಲೆಕ್ಕಿಸದೇ ಸೇತುವೆ ಮೆಲೆ ಏಳುತ್ತಾ-ಬೀಳುತ್ತಾ ನಡೆದು ಬಂದಿದ್ದ. ಆಂಬುಲೆನ್ಸ್​ ಚಾಲಕ ಬಾಲಕನನ್ನು ಹಿಂಬಾಲಿಸಿ ಸುರಕ್ಷಿತವಾಗಿ ರಸ್ತೆ ದಾಟಿದ್ದ.ಈ ವಿಡಿಯೋ ಈಗ ವೈರಲ್​ ಆಗಿದೆ. ಜೀವದ ಹಂಗು ತೊರೆದು ಆಂಬುಲೆನ್ಸ್​​ಗೆ ದಾರಿ ತೋರಿದ ವೆಂಕಟೇಶ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟಾಕ್​ ಶುರುವಾಗಿದೆ.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ