ಚಿತ್ರಮಂದಿರಗಳನ್ನು ಉಳಿಸಲು ಮುಂದಾದ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ!

Anitha E | news18
Updated:June 28, 2018, 2:38 PM IST
ಚಿತ್ರಮಂದಿರಗಳನ್ನು ಉಳಿಸಲು ಮುಂದಾದ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ!
Anitha E | news18
Updated: June 28, 2018, 2:38 PM IST
ನ್ಯೂಸ್​ 18 ಕನ್ನಡ 

ಇತ್ತೀಚೆಗೆ ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳು ವರ್ಷಕ್ಕೆ ಒಂದು ಬರೋದೇ ಅಪರೂಪವಾಗಿದೆ. ದೊಡ್ಡ ದೊಡ್ಡ ಸಿನಿಮಾಗಳಿಗಾಗಿ ವರ್ಷಗಟ್ಟಲೆ ಚಿತ್ರೀಕರಣದಲ್ಲಿ ವ್ಯಸ್ತವಾಗಿರುತ್ತಿದ್ದಾರೆ ಸ್ಟಾರ್ ನಾಯಕರು. ಹೀಗಾಗಿ ಅಭಿಮಾನಿಗಳು ಕೂಡ ತಮ್ಮ ನೆಚ್ಚಿನ ನಟನ ಸಿನಿಮಾ ನೋಡಲು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿರುತ್ತಾರೆ. ಸದ್ಯ ಈ ವಿಚಾರದಲ್ಲಿ ಬದಲಾವಣೆ ತರಲು ಮುಂದಾಗಿದ್ದಾರೆ ಚಲನಚಿತ್ರ ವಾಣಿಜ್ಯಮಂಡಳಿಯ ನೂತನ ಅಧ್ಯಕ್ಷರು.

ಕನ್ನಡದ ಸ್ಟಾರ್ ನಾಯಕರಾದ ಶಿವರಾಜ್​ಕುಮಾರ್​, ದರ್ಶನ್​, ಸುದೀಪ್, ಪುನೀತ್, ಗಣೇಶ್, ಯಶ್, ಶ್ರೀ ಮುರುಳಿ, ದುನಿಯಾ ವಿಜಯ್ ಹೇಗೆ ಹೇಳುತ್ತಾ ಹೋದರೆ  ಪಟ್ಟಿ ದೊಡ್ಡದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸ್ಟಾರ್ ಕಲಾವಿದರ ಸಿನಿಮಾಗಳು ವರ್ಷಕ್ಕೆ ಒಂದು ತೆರೆ ಕಾಣೋದೆ ಅಪರೂಪವಾಗಿದೆ. ಹೀಗಾಗಿಯೇ ಪರಭಾಷಾ ಸಿನಿಮಾಗಳು ಕರ್ನಾಟಕದಲ್ಲಿ ಹೆಚ್ಚಾಗಿ ಪ್ರದರ್ಶನ ಕಾಣುತ್ತಿದೆ ಅನ್ನೋದು ಚಲನಚಿತ್ರ ವಾಣಿಜ್ಯ ಮಂಡಳಿಗೆ ನೂತನವಾಗಿ ಆಯ್ಕೆಯಾಗಿರೊ ಚಿನ್ನೆಗೌಡರ ಮಾತು.

ಇತ್ತೀಚೆಗೆ ಫಿಲ್ಮ್ ಚೇಂಬರ್ ಚುನಾವಣೆಯಲ್ಲಿ ಯಶಸ್ವಿಯಾಗಿ ಜಯಗಳಿಸಿ ಅಧ್ಯಕ್ಷ ಸ್ಥಾನವನ್ನ ಅಲಂಕರಿಸಿರೋ ಚಿನ್ನೇಗೌಡರು, 'ಮುಂದಿನ ದಿನಗಳಲ್ಲಿ ಈ ವಿಚಾರದ ಕುರಿತು ಬದಲಾವಣೆ ತರಲೇಬೇಕು. ಇಲ್ಲವಾದರೆ ಕನ್ನಡ ಚಿತ್ರರಂಗ ಎಲ್ಲಿ ಹೋಗಿ ಮುಟ್ಟುತ್ತೆ ಹೇಳಲು ಅಸಾಧ್ಯ ಎಂದಿದ್ದಾರೆ. ಈ ವಿಷಯದ ಕುರಿತಾಗಿ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ ಅವರ ಬಳಿಯೂ ಮಾತನಾಡಿ ಒಂದು ನಿರ್ಧಾರಕ್ಕೆ ಬರುವುದಾಗಿ' ತಿಳಿಸಿದ್ದಾರೆ.

ಇನ್ನು ಕರ್ನಾಟಕದಲ್ಲಿ ಏಕ ಪರದೆಯ ಚಿತ್ರ ಮಂದಿರಗಳು ಮುಚ್ಚುತ್ತಿರುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿರುವ ಚಿನ್ನೇಗೌಡರು, ಈ ಬಗ್ಗೆಯೂ ಗಂಭೀರವಾಗಿ ತೀರ್ಮಾನ ತೆಗೆದುಕೊಳುವುದಾಗಿ ಹೇಳಿದ್ದಾರೆ. ಸಂಬಂಧಪಟ್ಟವರಿಗೆ ಈ ಕುರಿತು ಪತ್ರ ಕೂಡ ಬರೆದು , ಈ ಸಮಸ್ಯೆಯನ್ನ ಅವರ ಕಾಲವಧಿಯಲ್ಲೇ ಬಗೆಹರಿಸುವುದಾಗಿ, ತಮ್ಮ ಮುಂದಿನ ಯೋಜನೆಗಳ ಬಗ್ಗೆ ವಿವರಸಿದ್ದಾರೆ.

ಸದ್ಯ ಹೊಸದಾಗಿ ಆಯ್ಕೆಯಾಗಿರೋ ಅಧ್ಯಕ್ಷರ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಹಾಗೆ ದೊಡ್ಮನೆಯ ಸದಸ್ಯ ಈ ಸ್ಥಾನದಲ್ಲಿ ಕುಳಿತಿರುವುದರಿಂದ ಮುಂದಿನ ಯೋಜನೆಗಳ ಬಗ್ಗೆಯೂ ಕುತೂಹಲ ಮೂಡಿದೆ.
First published:June 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ