ಥಿಯೇಟರ್​ಗಳಲ್ಲಿ ಪರಿಪೂರ್ಣ ವೀಕ್ಷಣೆಗೆ ಅನುಮತಿ: ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು

ದೊಡ್ಡ ಸ್ಟಾರ್ ನಟಟ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸಲು ಸಿದ್ಧವಾಗಿವೆ. ಕೊರೋನಾದಿಂದಾಗಿ ಚಿತ್ರರಂಗ ಸಂಕಷ್ಟದಲ್ಲಿದೆ. ಹೀಗಾಗಿಯೇ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು, ಮುಖ್ಯ ಕಲಾವಿದರು ಹಾಗೂ ನಿರ್ಮಾಪಕರು ಶೇ 100ರಷ್ಟು ಚಿತ್ರಮಂದಿರಗಳನ್ನು ತೆರೆಯುವಂತೆ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕೊರೋನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಸಿನಿಮಾ ಮಂದಿರಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿತ್ತು. ಇದರ ಜೊತೆ ಕೊರೋನಾ ಲಾಕ್​ಡೌನ್​ ಹಂತ ಹಂತವಾಗಿ ಸಡಿಲಗೊಳ್ಳುತ್ತಿದ್ದಂತೆಯೇ ಸಿನಿಮಾ ಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿತ್ತು. ಆದರೆ ಇನ್ನೂ ಕೊರೋನಾ ಸೋಂಕು ಹರಡುವ ಭೀತಿ ಇರುವ ಕಾರಣದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಇದು ಒಂದು ಕಡೆ ಚಿತ್ರಮಂದಿರಗಳು ಹಾಗೂ ಮತ್ತೊಂದೆಡೆ ಸಿನಿಮಾ ನಿರ್ಮಿಸಿರುವ ನಿರ್ಮಾಪಕರಿಗೆ ನಷ್ಟವೇ. ಈ ಕಾರಣದಿಂದಾಗಿಯೇ ಆದಷ್ಟು ಬೇಗ ಸಿನಿಮಾ ಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ನೀಡಬೇಕೆಂಬ ಒತ್ತಾಯ ಕೆಲ ಸಮಯದಿಂದ ಕೇಳಿ ಬರುತ್ತಿದೆ. ಜೊತೆಗೆ ಸಾಲು ಸಾಲು ಸಿನಿಮಾಗಳು ರಿಲೀಸ್​ ಆಗಲು ರೆಡಿಯಾಗಿವೆ. 

ದೊಡ್ಡ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿಸಲು ಸಿದ್ಧವಾಗಿವೆ. ಇವುಗಳಲ್ಲಿ ಕೆಲವರು ಸಿನಿಮಾ ಮಂದಿರಗಳು ಪೂರ್ಣ ಪ್ರಮಾಣದಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ನೀಡುವವರೆಗೂ ತಮ್ಮ ಚಿತ್ರಗಳನ್ನು ರಿಲೀಸ್​ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಇದರ ಬೆನ್ನಲ್ಲೇ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು, ಮುಖ್ಯ ಕಲಾವಿದರು ಹಾಗೂ ನಿರ್ಮಾಪಕರು ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆ ಸಭೆ ನಡೆಸಿ ಚರ್ಚಿಸಿದ್ದಾರೆ.

Coronavirus Guidelines Karnataka Government release Guidelines about Coronavirus
ಸಿನಿಮಾ ಥಿಯೇಟರ್


ಸಿನಿಮಾ ಚಿತ್ರೀಕರಣಕ್ಕೆ ಇವಾಗ ಇರುವ ನಿಯಮಗಳನ್ನು ಪರಿಷ್ಕರಿಸುವ ಸಂಬಂಧ ಹಾಗೂ ಶೇಕಡಾ 100ರಷ್ಟು ಸಿನಿಮಾ ಥಿಯೇಟರ್ ತೆರೆಯಲು ಈ ಸಭೆಯಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ: Nayanthara Engagement: ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ ನಯನತಾರಾ..!

ಕೊರೋನಾದಿಂದ ಸಿನಿಮಾ ಕ್ಷೇತ್ರ ಭಾರಿ ನಷ್ಟದಲ್ಲಿದೆ. ಈ ನಷ್ಟ ಸರಿದೂಗಬೇಕಾದ್ರೆ ಸಿನಿಮಾ ಥಿಯೇಟರ್ ತೆರೆಯಲು ಅವಕಾಶ ಮಾಡಿಕೊಡಬೇಕು. ಈಗ ಇರುವ ಶೇ 50ರಷ್ಟನ್ನು ಶೇಕಡಾ 100ರಷ್ಟು ತೆರೆಯಲು ಅವಕಾಶ ಮಾಡಿಕೊಡಬೇಕು. ದೊಡ್ಡ ಬಜೆಟ್​ನ ಸಿನಿಮಾ ಬಂದ್ರೆ ಲೋ ಬಜೆಟ್ ಸಿನಿಮಾಗಳಿಗೆ ಅನುಕೂಲ ಆಗುತ್ತೆ. ಹೀಗಾಗಿ ಸಿನಿಮಾ ಥಿಯೇಟರ್​ಗಳಲ್ಲಿ ಪೂರ್ಣ ಪ್ರಮಾಣದ ವೀಕ್ಷಣೆಗೆ  ಅವಕಾಶ ನೀಡಿ ಎಂದು ಸಿಎಂ ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖ್ಯಸ್ಥರ ಮನವಿ ಮಾಡಿದ್ದಾರೆ.

ಈಗಾಗಲೇ ಕೆಲವು ಸಿನಿಮಾಗಳು ರಿಲೀಸ್ ದಿನಾಂಕ ಪ್ರಕಟಿಸಿವೆ. ಆದರೆ ಬಿಗ್ ಬಟೆಟ್​ ಚಿತ್ರಗಳು ಇನ್ನೂ ಬಿಡುಗಡೆ ದಿನಾಂಕ ಸಹ ಪ್ರಕಟಿಸಿಲ್ಲ. ಇದರಿಂದಾಗಿ ಸಿನಿರಂಗದ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ.

ಇದನ್ನೂ ಓದಿ: Arjun Kapoor-Janhvi Kapoor: ಫೋಟೋಶೂಟ್​ನಲ್ಲಿ ಜಾಹ್ನವಿ-ಅರ್ಜುನ್ ಕಪೂರ್​: ಕ್ರೇಜಿ ಪೋಸ್​ ಕೊಟ್ಟ ಸ್ಟಾರ್ ಅಣ್ಣ-ತಂಗಿ

ಚಲನಚಿತ್ರ ವಾಣಿಜ್ಯ ಮಂಡಳಿಯ ಮುಖ್ಯಸ್ಥರ ಮನವಿಗೆ ಮುಖ್ಯಮಂತ್ರಿ  ಬೊಮ್ಮಾಯಿ ಅವರು ಸ್ಪಂದಿಸಿದ್ದಾರಂತೆ. ನಾಳೆ‌ ಮಂಗಳೂರು, ಉಡುಪಿ ಪ್ರವಾಸ ಕೈಗೊಳಿದ್ದು, ಅಲ್ಲಿ ಗಡಿ ಬಗ್ಗೆ ಪರಿಶೀಲಿಸಿ ಹಿಂತಿರುಗಿ ಬಂದ ನಂತರ ಕೊವೀಡ್ ಪರಿಣಿತರ ಜೊತೆ ಚರ್ಚಿಸಿ ತೀರ್ಮಾನ ಮಾಡೋದಾಗಿ ಹೇಳಿದ್ದಾರೆ. ಇನ್ನು ಮೂರು-ನಾಲ್ಕು ದಿನಗಳಲ್ಲಿ ಈ ಸಂಬಂಧ ರಾಜ್ಯ ಸರ್ಕಾರದ ನಿರ್ಧಾರ ತಿಳಿಯಲಿದೆ.ಇದನ್ನೂ ಓದಿ: Video: ಇಡೀ ವಿಮಾನಕ್ಕೆ ಒಬ್ಬನೇ ಪ್ರಯಾಣಿಕ: ಅನುಭವ ಹಂಚಿಕೊಂಡ ನಟ ಆರ್​. ಮಾಧವನ್​(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯ ಇನ್ನೂ ಸಂಪೂರ್ಣವಾಗಿ ತಪ್ಪಿಲ್ಲ. ಹೀಗಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಆದ್ದರಿಂದಲೇ ಪ್ರತಿಯೊಬ್ಬರು ಕೋವಿಡ್​​ ನಿಯಮಗಳನ್ನು ತಪ್ಪದೇ ಪಾಲಿಸಬೇಕಾಗಿದೆ. ನಿತ್ಯ ಹೊರಗೆ ಹೋದರೆ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಮನೆಗೆ ಬಂದ ಕೂಡಲೆ ಕೈ ತೊಳೆಯುವುದನ್ನು ಮರೆಯಬೇಡಿ. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
Published by:Anitha E
First published: