Farmers Protest| ವಿಧಾನಸೌಧಕ್ಕೆ ಮುತ್ತಿಗೆ ಯತ್ನ, ಪೊಲೀಸರಿಂದ ತಡೆ; ಶೇಷಾದ್ರಿ ರಸ್ತೆಯಲ್ಲೇ ರೈತರ ಮೊಕ್ಕಾಂ

ರೈತ ವಿರೋಧಿ ಕಾನೂನುಗಳನ್ನ ವಾಪಾಸ್ ಪಡೆಯಬೇಕು ಎಂದು ಹಕ್ಕೊತ್ತಾಯವನ್ನು ಮುಂದಿಟ್ಟಿರುವ ಹೋರಾಟಗಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆದರೆ, ಹೋರಾಟಗಾರರನ್ನು ಶೇಷಾದ್ರಿ ರಸ್ತೆಯಲ್ಲೇ ಬ್ಯಾರಿಕೇಡ್ ಅಳವಡಿಸುವ ಮೂಲಕ ಪೊಲೀಸರು ತಡೆದಿದ್ದಾರೆ. 

ರೈತ ಹೋರಾಟಗಾರರು.

ರೈತ ಹೋರಾಟಗಾರರು.

 • Share this:
  ಬೆಂಗಳೂರು (ಸೆಪ್ಟೆಂಬರ್​ 13); ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾಯ್ದೆಯನ್ನು (Agriculture Bill) ಸಂಸತ್​ನಲ್ಲಿ ಮಂಡಿಸಿ ಅದಕ್ಕೆ ಒಪ್ಪಿಗೆ ಪಡೆದು ಸೆ.17ಕ್ಕೆ ಒಂದು ವರ್ಷವಾಗಲಿದೆ. ಈ ಕಾಯ್ದೆಯ ವಿರುದ್ಧ ಕಳೆದ ಒಂದು ವರ್ಷದಿಂದ ದೇಶದಾದ್ಯಂತ ರೈತರು ಹೋರಾಟ (Farmers Protest) ನಡೆಸುತ್ತಲೇ ಇದ್ದಾರೆ. ಇನ್ನೂ ಹರಿಯಾಣ-ಪಂಜಾಬ್ (Hariyana-Punjab) ರೈತರ ಹೋರಾಟ ಸದ್ಯಕ್ಕಂತೂ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಕಳೆದ ಒಂದು ವರ್ಷದಿಂದ ರಾಜ್ಯದಲ್ಲೂ ಭಾರೀ ಹೋರಾಟ ನಡೆದಿತ್ತು. ಆದರೂ ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸದೆ ಒಪ್ಪಿಕೊಂಡಿದೆ. ಹೀಗಾಗಿ ಕೇಂದ್ರದ ಕೃಷಿನೀತಿ ವಿರುದ್ಧ ರಾಜ್ಯದ ರೈತರು ಮತ್ತೆ ಹೋರಾಟಕ್ಕೆ ಮುಂದಾಗಿದ್ದಾರೆ. ಅಲ್ಲದೆ, ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆಯೂ ವರದಿಯಾಗಿದೆ.

  ವಿಧಾನಮಂಡಲ ಅಧಿವೇಶನದ ದಿನಾಂಕ ಘೋಷಣೆಯಾಗುತ್ತಿದ್ದಂತೆ, ಕೇಂದ್ರ ಕೃಷಿ ಕಾಯ್ದೆಯನ್ನು ವಿರೋಧಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಸಂಬಂಧ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಅದರಂತೆ  ಇಂದು ಬೆಳಗ್ಗೆ ಕೆಎಸ್ಆರ್ ರೈಲು ನಿಲ್ದಾಣ ಬಳಿ ಅಗಮಿಸಿದ್ದ ಕೋಡಿಹಳ್ಳಿ ಚಂದ್ರಶೇಖರ್ ಬೆನ್ನಿಗೆ ಸಾವಿರಾರು ಜನ ರೈತರೂ ಸಹ ಒಟ್ಟಾಗಿದ್ದರು.

  ರೈತ ಹೋರಾಟಗಾರರು ರೈಲ್ವೆ ನಿಲ್ದಾಣದಿಂದ ಎತ್ತಿನ ಗಾಡಿಯಲ್ಲಿ ರ‍್ಯಾಲಿ ಆರಂಭಿಸಿದ್ದರು. ಅಲ್ಲದೆ, ರ‍್ಯಾಲಿಯಲ್ಲಿ ನೂತನ ಕೃಷಿ ನೀತಿಯನ್ನ ವಾಪಸ್ ಪಡೆಯುವಂತೆ ರೈತರು ಘೋಷಣೆ ಕೂಗಿದ್ದರು. ಪ್ರಸಕ್ತ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಈ ಕೃಷಿ ನೀತಿಯ ವಿರುದ್ಧ ನಿರ್ಣಯ ಮಂಡಿಸಬೇಕು ಎಂದು ರೈತರು ಒತ್ತಾಯಿಸಿದ್ದರು. ಭಾರತ ಸರ್ಕಾರ ಸುಗ್ರಿವಾಜ್ಞೆಯನ್ನು ಹೊರಡಿಸಿ ರೈತ ವಿರೋದಿ ಕಾನೂನುಗಳನ್ನ ಜಾರಿ ಮಾಡಿದೆ ಎಂದು ಆರೋಪಿಸಿದರು.

  ಕರ್ನಾಟಕ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡಿದೆ. ಈ ರೈತ ವಿರೋಧಿ ಕಾನೂನುಗಳನ್ನ ವಾಪಾಸ್ ಪಡೆಯಬೇಕು ಎಂದು ಹಕ್ಕೊತ್ತಾಯವನ್ನು ಮುಂದಿಟ್ಟಿರುವ ಹೋರಾಟಗಾರರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರು. ಆದರೆ, ಹೋರಾಟಗಾರರನ್ನು ಶೇಷಾದ್ರಿ ರಸ್ತೆಯಲ್ಲೇ ಬ್ಯಾರಿಕೇಡ್ ಅಳವಡಿಸುವ ಮೂಲಕ ಪೊಲೀಸರು ತಡೆದಿದ್ದಾರೆ. ಬ್ಯಾರಿಕೇಡ್ ಹಾಗೂ ಬಸ್ ಗಳನ್ನ ಅಡ್ಡ ನಿಲ್ಲಿಸಿ ರಸ್ತೆ ಬಂದ್ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನೂ ನಿಯೋಜನೆ ಮಾಡಲಾಗಿದೆ.

  ಇದನ್ನೂ ಓದಿ: Farmers Protest| ಕೇಂದ್ರ ಕೃಷಿ ಕಾಯ್ದೆ ವಿರುದ್ಧ ಮತ್ತೆ ಬೀದಿಗಿಳಿದ ರಾಜ್ಯದ ರೈತರು; ಇಂದು ವಿಧಾನಸೌಧಕ್ಕೆ ಮುತ್ತಿಗೆ ಸಾಧ್ಯತೆ!

  ಹೀಗಾಗಿ ಕೆಲಕಾಲ ಪೊಲೀಸರು ಮತ್ತು ರೈತ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ಅಣತಿಯಂತೆ ಎಲ್ಲಾ ಹೋರಾಟಗಾರರು ರಸ್ತೆಯಲ್ಲೇ ಕುಳಿತು ಪ್ರತಿಭಟನೆಯನ್ನು ಮುಂದುವರೆಸಿದ್ಧಾರೆ. ನಾಯಕರು ತಮ್ಮ ಕೂಗನ್ನು ಕೇಳುವವರೆಗೆ ತಾವು ಹೋರಾಟದ ಜಾಗದಿಂದ ಕದಲುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.  ಹೀಗಾಗಿ ಆನಂದರಾವ್ ಫ್ಲೈ ಓವರ್ ಕಡೆಯಿಂದ ರೇಸ್ ಕೋರ್ಸ್ ಕಡೆಗೆ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಫ್ರೀಡಂ ಪಾರ್ಕ್ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
  Published by:MAshok Kumar
  First published: